See also 2otherwise
1otherwise ಅದರ್‍ವೈಸ್‍
ಕ್ರಿಯಾವಿಶೇಷಣ
  1. ಬೇರೆ ರೀತಿಯಾಗಿ; ಇಲ್ಲವಾದರೆ; ಹಾಗಿಲ್ಲದೆ ಹೋದರೆ; ಅನ್ಯಥಾ: could not have acted otherwise ಬೇರೆ ರೀತಿಯಲ್ಲಿ ವರ್ತಿಸುವುದು ಸಾಧ್ಯವಿರಲಿಲ್ಲ.
  2. ಪರಿಸ್ಥಿತಿ ಬೇರೆಯಾದರೆ, ಬೇರೆಯಾಗಿದ್ದರೆ; ಇಲ್ಲದಿದ್ದರೆ: seize the chance, otherwise you will regret it ಸಿಕ್ಕಿದ ಅವಕಾಶವನ್ನು ಪಟ್ಟಾಗಿ ಹಿಡಿದುಕೊ, ಇಲ್ಲದಿದ್ದರೆ ನೀನು ಅದಕ್ಕಾಗಿ ಪರಿತಪಿಸುತ್ತೀಯೆ.
  3. (ಪ್ರತಿಷೇಧಾರ್ಥದಲ್ಲಿ) ಉಳಿದಂತೆ; ಬೇರೆ ವಿಷಯಗಳಲ್ಲಿ: he is unruly, but not otherwise blameworthy ಅವನು ಅಂಕೆಯಿಲ್ಲದವನು, (ಅದೊಂದನ್ನು ಬಿಟ್ಟರೆ) ಬೇರೆ ವಿಷಯಗಳಲ್ಲಿ ಅವನೇನೂ ತಪ್ಪಿತಸ್ಥನಲ್ಲ.
  4. ಅಥವಾ; ಬದಲು: otherwise known as Ajay ಅಥವಾ ಅಜಯ್‍ ಎಂಬ ಹೆಸರಿನ.
See also 1otherwise
2otherwise ಅದರ್‍ವೈಸ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಉಳಿದ ವಿಷಯಗಳಲ್ಲಿನ; ಇತರ ವಿಚಾರಗಳಲ್ಲಿರುವ: his otherwise dullness ಇತರ ವಿಷಯಗಳಲ್ಲಿನ ಅವನ ಮಂಕುತನ.
  2. ಬೇರೆಯ: if conditions were otherwise ಪರಿಸ್ಥಿತಿ ಬೇರೆಯಾಗಿದ್ದರೆ.
  3. ಬೇರೆಯ ಸ್ಥಿತಿಯ; ಬೇರೆಯ ರೀತಿಯ: should not wish it otherwise ಅದು ಬೇರೆ ರೀತಿಯಲ್ಲಾಗಲೆಂದು ನಾನು ಆಳಿಸುವುದಿಲ್ಲ. the matter is quite otherwise ವಿಷಯ ಬೇರೆಯೇ ಆಗಿದೆ, ಬೇರೆ ರೀತಿಯಲ್ಲಿದೆ.
ಪದಗುಚ್ಛ

and (or) otherwise (ಒಂದು ನಿರ್ದಿಷ್ಟವಾದ ವಸ್ತುವಿಗೆ) ತದ್ವಿರುದ್ಧವಾದ: the merits or otherwise of the Bill ಮಸೂದೆಯ ಸಾಧಕ ಬಾಧಕಗಳು. experiences pleasant and otherwise ಹಿತಕರವಾದ ಮತ್ತು ಹಿತಕರವಲ್ಲದ (ಯಾ ಅಹಿತ) ಅನುಭವಗಳು.