See also 1otherwise
2otherwise ಅದರ್‍ವೈಸ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಉಳಿದ ವಿಷಯಗಳಲ್ಲಿನ; ಇತರ ವಿಚಾರಗಳಲ್ಲಿರುವ: his otherwise dullness ಇತರ ವಿಷಯಗಳಲ್ಲಿನ ಅವನ ಮಂಕುತನ.
  2. ಬೇರೆಯ: if conditions were otherwise ಪರಿಸ್ಥಿತಿ ಬೇರೆಯಾಗಿದ್ದರೆ.
  3. ಬೇರೆಯ ಸ್ಥಿತಿಯ; ಬೇರೆಯ ರೀತಿಯ: should not wish it otherwise ಅದು ಬೇರೆ ರೀತಿಯಲ್ಲಾಗಲೆಂದು ನಾನು ಆಳಿಸುವುದಿಲ್ಲ. the matter is quite otherwise ವಿಷಯ ಬೇರೆಯೇ ಆಗಿದೆ, ಬೇರೆ ರೀತಿಯಲ್ಲಿದೆ.
ಪದಗುಚ್ಛ

and (or) otherwise (ಒಂದು ನಿರ್ದಿಷ್ಟವಾದ ವಸ್ತುವಿಗೆ) ತದ್ವಿರುದ್ಧವಾದ: the merits or otherwise of the Bill ಮಸೂದೆಯ ಸಾಧಕ ಬಾಧಕಗಳು. experiences pleasant and otherwise ಹಿತಕರವಾದ ಮತ್ತು ಹಿತಕರವಲ್ಲದ (ಯಾ ಅಹಿತ) ಅನುಭವಗಳು.