See also 2orbit
1orbit ಆರ್ಬಿಟ್‍
ನಾಮವಾಚಕ
  1. ಕಣ್ಣುಗೂಡು; ಕಣ್ಣುಕುಳ; ನೇತ್ರಕುಹರ.
  2. (ಹಕ್ಕಿಯ ಯಾ ಕ್ರಿಮಿಕೀಟದ) ಕಣ್ಣ ಸುತ್ತಲ ಅಂಚು; ನೇತ್ರಪ್ರಾಂತ.
  3. ಕಕ್ಷೆ; (ಗ್ರಹ, ಉಪಗ್ರಹ, ಧೂಮಕೇತು, ಮೊದಲಾದವುಗಳ) ವರ್ತುಲ ಯಾ ದೀರ್ಘವೃತ್ತಾಕಾರದ ಪಥ.
  4. (ರೂಪಕವಾಗಿ) ಕಾರ್ಯಕ್ಷೇತ್ರ; ಕಾರ್ಯವ್ಯಾಪ್ತಿ.
  5. (ಅಣುಕೇಂದ್ರದ ಸುತ್ತ ಸುತ್ತುವ) ಇಲೆಕ್ಟ್ರಾನಿನ ಕಕ್ಷೆ, ಪಥ.
  6. (ಕಾಯವೊಂದರ ಸುತ್ತ) ಒಂದು ಪ್ರದಕ್ಷಿಣೆ; ಒಂದು ಸುತ್ತು.
  7. ಪಥವೊಂದರಲ್ಲಿ ಸುತ್ತುತ್ತಿರುವ ಸ್ಥಿತಿ; ಪರಿಭ್ರಮಣ (ಸ್ಥಿತಿ).
See also 1orbit
2orbit ಓ(ಅ)ರ್ಬಿಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ orbited, ವರ್ತಮಾನ ಕೃದಂತ orbiting).
ಸಕರ್ಮಕ ಕ್ರಿಯಾಪದ
  1. (ಕಾಯ ಮೊದಲಾದವುಗಳ) ಸುತ್ತ ಒಂದು ಕಕ್ಷೆಯಲ್ಲಿ ಸುತ್ತು, ಚಲಿಸು.
  2. ಒಂದು ಕಕ್ಷೆಯಲ್ಲಿ–ಇಡು, ಸೇರಿಸು.
ಅಕರ್ಮಕ ಕ್ರಿಯಾಪದ
  1. (ಗ್ರಹ ಮೊದಲಾದವುಗಳ ವಿಷಯದಲ್ಲಿ) ಕಕ್ಷೆಯಲ್ಲಿ ಸುತ್ತು; ಪಥದಲ್ಲಿ ತಿರುಗು.
  2. ವೃತ್ತಾಕಾರದಲ್ಲಿ ಹಾರು, ಹಾರಾಡು.