See also 2orbit
1orbit ಆರ್ಬಿಟ್‍
ನಾಮವಾಚಕ
  1. ಕಣ್ಣುಗೂಡು; ಕಣ್ಣುಕುಳ; ನೇತ್ರಕುಹರ.
  2. (ಹಕ್ಕಿಯ ಯಾ ಕ್ರಿಮಿಕೀಟದ) ಕಣ್ಣ ಸುತ್ತಲ ಅಂಚು; ನೇತ್ರಪ್ರಾಂತ.
  3. ಕಕ್ಷೆ; (ಗ್ರಹ, ಉಪಗ್ರಹ, ಧೂಮಕೇತು, ಮೊದಲಾದವುಗಳ) ವರ್ತುಲ ಯಾ ದೀರ್ಘವೃತ್ತಾಕಾರದ ಪಥ.
  4. (ರೂಪಕವಾಗಿ) ಕಾರ್ಯಕ್ಷೇತ್ರ; ಕಾರ್ಯವ್ಯಾಪ್ತಿ.
  5. (ಅಣುಕೇಂದ್ರದ ಸುತ್ತ ಸುತ್ತುವ) ಇಲೆಕ್ಟ್ರಾನಿನ ಕಕ್ಷೆ, ಪಥ.
  6. (ಕಾಯವೊಂದರ ಸುತ್ತ) ಒಂದು ಪ್ರದಕ್ಷಿಣೆ; ಒಂದು ಸುತ್ತು.
  7. ಪಥವೊಂದರಲ್ಲಿ ಸುತ್ತುತ್ತಿರುವ ಸ್ಥಿತಿ; ಪರಿಭ್ರಮಣ (ಸ್ಥಿತಿ).