See also 2open  3open
1open ಓಪನ್‍
ಗುಣವಾಚಕ
( ತರರೂಪ opener, ತಮರೂಪ openest).
  1. ತೆರೆದ; ತೆರಪಿರುವ; ಮುಕ್ತ; ಮುಚ್ಚಿಲ್ಲದ; ತಡೆಗಟ್ಟಿಲ್ಲದ; ಖುಲ್ಲಾ; ಪ್ರವೇಶಕ್ಕೆ, ಸಂಚಾರಕ್ಕೆ ಯಾ ಹಾದಿಗೆ–ಅವಕಾಶವಿರುವ: open passage ಮುಕ್ತ, ತೆರೆದ–ಮಾರ್ಗ.
  2. (ಕೊಠಡಿ, ಮೈದಾನ ಯಾ ಇತರ ಪ್ರದೇಶ) ತೆರೆದಿರುವ; ಮುಕ್ತ; ಆವರಣವಿಲ್ಲದ; ಸುತ್ತುಗಟ್ಟಿಲ್ಲದ; ತಡೆಯಿಲ್ಲದ; ಅಡ್ಡಿಯಿಲ್ಲದ: the open road ಮುಕ್ತವಾದ ರಸ್ತೆ.
  3. (ಡಬ್ಬ, ಧಾರಕ, ಮೊದಲಾದವುಗಳ ವಿಷಯದಲ್ಲಿ) ಮುಚ್ಚಿಲ್ಲದ; ತೆರೆದಿರುವ; ಮುಚ್ಚಳ ಹಾಕದ.
  4. ತೆರೆದ; ಮರೆ ತೆಗೆದಿರುವ; ಮುಚ್ಚಿಲ್ಲದ; ಅನಾವೃತ: open carriage ಚಾವಣಿಯಿಲ್ಲದ ಬಂಡಿ; ಬೋಳುಗಾಡಿ. open drain ತೆರೆದ ಚರಂಡಿ. open wound (ಪಟ್ಟಿ ಮೊದಲಾದವುಗಳಿಂದ) ಮುಚ್ಚಿಲ್ಲದ ಗಾಯ.
  5. (ಆಟ) (ಗೋಲಿನ ಬಾಯಿ ಯಾ ಇತರ ಆಕ್ರಮಣದ ವಸ್ತುವಿನ ವಿಷಯದಲ್ಲಿ) ಅರಕ್ಷಿತ; ಆಕ್ರಮಣಕ್ಕೆ ತುತ್ತಾಗುವ.
  6. ಮುಚ್ಚುಮರೆಯಿಲ್ಲದ; ಪ್ರಕಟ; ಬಹಿರಂಗ: open contempt ಬಹಿರಂಗ ತಿರಸ್ಕಾರ. open scandal ಬಹಿರಂಗ ಪುಕಾರು. open hostilities ಪ್ರಕಟ ಹೋರಾಟಗಳು, ಕದನಗಳು.
  7. ತೆರೆದ; ಬಿಚ್ಚಿದ; ಹರಡಿದ; ಹರಡಿಕೊಂಡಿರುವ; ಹರಡಿರುವ: open book ತೆರೆದ ಪುಸ್ತಕ. had the map open on the table ಮೇಜಿನ ಮೇಲೆ ಭೂಪಟವನ್ನು ತೆರೆದಿಟ್ಟಿದ್ದ, ಬಿಚ್ಚಿಟ್ಟ.
  8. (ಬಟ್ಟೆಯ ವಿಷಯದಲ್ಲಿ) ಒತ್ತಾಗಿಲ್ಲದ, ಜಾಳಾಗಿರುವ; ನಡುವೆ ಅಂತರಗಳಿರುವ.
  9. (ವ್ಯಕ್ತಿಯ ವಿಷಯದಲ್ಲಿ) ಮುಚ್ಚುಮರೆಯಿಲ್ಲದೆ; ಬಿಚ್ಚು ಮನಸ್ಸಿನ; ಸರಳ ಹೃದಯದ; ತೆರೆದ ಮನಸ್ಸಿನ; ಭಾವನೆಗಳನ್ನು ಇತರರಿಗೆ ತಿಳಿಸಬಯಸುವ.
  10. (ಮನಸ್ಸಿನ ವಿಷಯದಲ್ಲಿ) ತೆರೆದ; ಮುಕ್ತ; ಹೊಸಭಾವಗಳಿಗೆ ತೆರೆದ; ಪೂರ್ವಗ್ರಹವಿಲ್ಲದ; ಪೂರ್ವನಿರ್ಧಾರವಿಲ್ಲದ.
  11. (ಮುಖದ ವಿಷಯದಲ್ಲಿ) ಮುಗ್ಧ; ನಿಷ್ಟಪಟ; ಅಕೃತ್ರಿಮವಾಗಿ ಕಾಣುವ.
  12. (ಪ್ರದರ್ಶನ, ಅಂಗಡಿ, ಮೊದಲಾದವುಗಳ ವಿಷಯದಲ್ಲಿ) ತೆರೆದ; ಮುಕ್ತ; ಅನಿರ್ಬಂಧ; ಗ್ರಾಹಕರಿಗೆ ತೆರೆದಿರುವ; ವ್ಯಾಪಾರಕ್ಕೆ ತೆರೆದಿರುವ, ಸಿದ್ಧವಾಗಿರುವ: the exhibition is now open ಈಗ ಪ್ರದರ್ಶನ ಪ್ರೇಕ್ಷಕರಿಗೆ ತೆರೆದಿದೆ. shop is open at such hours ಇಂಥ ಗಂಟೆಗಳಲ್ಲಿ ಅಂಗಡಿ ತೆರೆದಿರುತ್ತದೆ.
  13. (ಸಭೆಯ ವಿಷಯದಲ್ಲಿ) ಮುಕ್ತ; ಸಾರ್ವಜನಿಕ; ಸರ್ವರಿಗೂ ಪ್ರವೇಶವಿರುವ; ಎಲ್ಲರಿಗೂ ಪ್ರವೇಶಾವಕಾಶವಿರುವ; ಕೇವಲ ಸದಸ್ಯರೂ ಮೊದಲಾದವರಿಗೆ ಸೀಮಿತವಾಗಿರದೆ ಎಲ್ಲರೂ ಬರಬಹುದಾದ.
    1. (ಪಂದ್ಯ, ಸ್ಪರ್ಧೆ, ವಿದ್ಯಾರ್ಥಿವೇತನ, ಮೊದಲಾದವುಗಳ ವಿಷಯದಲ್ಲಿ) ಮುಕ್ತ; ಸಾರ್ವಜನಿಕ; ಅನಿರ್ಬಂಧಿತ; ಎಲ್ಲರಿಗೂ ಅವಕಾಶವಿರುವ, ಪ್ರವೇಶವಿರುವ; ಯಾವುದೇ ನಿರ್ಬಂಧವಿಲ್ಲದ: open scholarship ಎಲ್ಲರಿಗೂ ಅವಕಾಶವಿರುವ ಸ್ಪರ್ಧೆಯಲ್ಲಿ ಗೆದ್ದು ಗಳಿಸುವ ವಿದ್ಯಾರ್ಥಿವೇತನ. race is open to all ಸ್ಪರ್ಧೆಗೆ ಎಲ್ಲರಿಗೂ ಪ್ರವೇಶವುಂಟು; ಸ್ಪರ್ಧೆ ಎಲ್ಲರಿಗೂ ತೆರೆದಿದೆ.
    2. (ಕ್ರೀಡಾಪಟು, ವಿದ್ಯಾರ್ಥಿ, ಮೊದಲಾದವರ ವಿಷಯದಲ್ಲಿ) ಮುಕ್ತ ಸ್ಪರ್ಧೆಯಲ್ಲಿ ಗೆದ್ದಿರುವ: open champion ಸರ್ವವಿಜಯಿ; ಎಲ್ಲರಿಗೂ ಅವಕಾಶವಿರುವ, ಯಾವುದೇ ನಿರ್ಬಂಧವಿಲ್ಲದ, ಸ್ಪರ್ಧೆಯಲ್ಲಿ ಗೆದ್ದವನು; ಸಾರ್ವಜನಿಕ ಸ್ಪರ್ಧೆಯಲ್ಲಿ ಜಯಪಡೆದವನು.
  14. (ಸರ್ಕಾರದ ವಿಷಯದಲ್ಲಿ) ಮುಕ್ತ; ತೆರೆದ; ಸಾರ್ವಜನಿಕ ವಿಚಾರಣೆ, ಟೀಕೆ, ಮೊದಲಾದವುಗಳಿಗೆ ಸ್ಪಂದಿಸುವ.
  15. (ಬಾಯಿಯ ವಿಷಯದಲ್ಲಿ) ತೆರೆದ; ಬಿಟ್ಟ; (ಮುಖ್ಯವಾಗಿ ಹೆಡ್ಡತನ ಯಾ ಆಶ್ಚರ್ಯ ತೋರಿಸುವಾಗ) ತೆರೆದ ಬಾಯಿಯ.
  16. (ಕಿವಿಗಳ ಯಾ ಕಣ್ಣುಗಳ ವಿಷಯದಲ್ಲಿ) ತೆರೆದ; ಆಸಕ್ತಿಯಿಂದ ಗಮನಿಸುವ: open eared ತೆರೆದ ಕಿವಿಗಳುಳ್ಳ.
  17. (ಸಂಗೀತ)
    1. (ತಂತಿಯ ವಿಷಯದಲ್ಲಿ) ಇಡೀ ಉದ್ದಕ್ಕೂ ಮಿಡಿಯಲು ಬಿಟ್ಟ.
    2. (ಊದು ವಾದ್ಯದ ವಿಷಯದಲ್ಲಿ) ಎರಡೂ ತುದಿಗಳಲ್ಲಿ ತೆರೆದ, ಮುಚ್ಚದ.
    3. (ಸ್ವರದ ವಿಷಯದಲ್ಲಿ) ಮುಕ್ತ; ಎರಡೂ ತುದಿ ತೆರೆದ ಸುಷಿರವಾದ್ಯದಲ್ಲಿ ಯಾ ತಂತಿವಾದ್ಯದಲ್ಲಿ ಬೆರಳಿನಿಂದ ಮುಟ್ಟದೆ ಯಾ ಕೊಡತಿ, ತಿರುಗು ಬಿರಟೆ, ಉಜ್ಜು ಬಿರಟೆಯನ್ನೂ ಬಳಸದೆ ಉಂಟುಮಾಡಿದ.
  18. (ವಿದ್ಯುತ್‍ ಮಂಡಲದ ವಿಷಯದಲ್ಲಿ) ಅಪೂರ್ಣ; ತೆರೆದ; ವಿಚ್ಛಿನ್ನ; ಹಾದುಹೋಗುವ ಹಾದಿಯಲ್ಲಿ ಕಡಿದಿರುವ, ತೆರೆದಿರುವ, ಸಂಪೂರ್ಣವಾಗದಿರುವ.
  19. (ಕರುಳಿನ ವಿಷಯದಲ್ಲಿ) ಹೊಟ್ಟೆಕಟ್ಟಿಲ್ಲದ; ಮಲಬದ್ಧತೆಯಿಲ್ಲದಿರುವ.
  20. (ವಾಪಸು ಪ್ರಯಾಣದ ಟಿಕೆಟ್ಟಿನ ವಿಷಯದಲ್ಲಿ) ತೆರೆದ ಟಿಕೆಟ್ಟಿನ; ಹಿಂದಿರುಗುವ ಪ್ರಯಾಣವನ್ನು ಇಂಥದೇ ದಿನ ಮಾಡಬೇಕೆಂದು ಗೊತ್ತುಮಾಡಿರದ, ನಿರ್ಬಂಧವಿಲ್ಲದ.
  21. (ಚೆಕ್ಕಿನ ವಿಷಯದಲ್ಲಿ) ಮುಕ್ತ; ತೆರೆದ; ಕ್ರಾಸ್‍ ಮಾಡಿಲ್ಲದ; ಅಡ್ಡಗೆರೆ ಹಾಕಿಲ್ಲದ; ಬ್ಯಾಂಕಿನ ಖಾತೆಯೊಂದಕ್ಕೆ ಸಲ್ಲಿಸಿ ಹಣಪಡೆಯಬೇಕೆಂಬ ನಿರ್ಬಂಧವಿಲ್ಲದ; ಬ್ಯಾಂಕಿಗೆ ಸಲ್ಲಿಸಿ ನೇರವಾಗಿ ಹಣ ಪಡೆಯಬಹುದಾದ.
  22. (ದೋಣಿಯ ವಿಷಯದಲ್ಲಿ) ದಕ್ಕೆಯಿಲ್ಲದ.
  23. (ನದಿ ಯಾ ಬಂದರಿನ ವಿಷಯದಲ್ಲಿ) ಹಿಮವಿಲ್ಲದ; ನೀರ್ಗಲ್ಲು ಮುಚ್ಚಿರದ; ನೀರ್ಗಲ್ಲು ಮುಚ್ಚಿಲ್ಲದೆ ಮುಕ್ತವಾಗಿರುವ, ತೆರಪಾಗಿರುವ.
  24. (ಹವಾಮಾನದ ಯಾ ಚಳಿಗಾಲದ ವಿಷಯದಲ್ಲಿ) ಹಿಮವಿಲ್ಲದ; ಮಂಜಿಲ್ಲದ.
  25. (ಧ್ವನಿವಿಜ್ಞಾನ)
    1. (ಸ್ವರದ ವಿಷಯದಲ್ಲಿ) ವಿವೃತ; ಸ್ವಲ್ಪ ಹೆಚ್ಚಾಗಿಯೇ ಬಾಯಿ ತೆರೆದು ಉಚ್ಚರಿಸುವ.
    2. (ಅಕ್ಷರದ ವಿಷಯದಲ್ಲಿ) ಮುಕ್ತ; ಸ್ವರಾಂತವಾದ.
  26. (ಪಟ್ಟಣ, ನಗರ, ಮೊದಲಾದವುಗಳ ವಿಷಯದಲ್ಲಿ) ಅರಕ್ಷಿತ; ದಾಳಿಯ ವಿರುದ್ಧ ರಕ್ಷಣೆಯಿಲ್ಲದ.
  27. ತೆರೆದ; ಅರಳಿದ; ವಿಕಸಿತ: open flower ಅರಳಿದ ಹೂವು.
  28. ತೂತುಗಳಿರುವ; ರಂಧ್ರಗಳುಳ್ಳ; ಸರಂಧ್ರ.
  29. ಅನಿರ್ಣೀತ; ನಿರ್ಣಯವಾಗದ; ತೀರ್ಮಾನವಾಗದ: several open questions ಅನೇಕ ನಿರ್ಣಯವಾಗದ ಪ್ರಶ್ನೆಗಳು.
  30. (ಪಶುವರ್ಧನೆ) (ಹೆಣ್ಣು ಪ್ರಾಣಿಯ ವಿಷಯದಲ್ಲಿ) ಗಬ್ಬವಾಗಿರದ; ತೆನೆಯಾಗಿರದ.
  31. (ಮುದ್ರಣ)
    1. (ಅಚ್ಚಿನ ಮೊಳೆಯ ವಿಷಯದಲ್ಲಿ) ರೇಖಾಕಾರದ.
    2. (ಅಚ್ಚಾದ ವಸ್ತುವಿನ ವಿಷಯದಲ್ಲಿ) ವಿಶಾಲ ಅಂತರವಿರುವ.
  32. (ಲೆಕ್ಕದ ವಿಷಯದಲ್ಲಿ) ಅಪೂರ್ಣ; ಇನ್ನೂ ಸರಿದೂಗಿಸದ ಯಾ ಸರಿಹೊಂದಿಸದ; ತಾಳೆ ಮಾಡದ.
ಪದಗುಚ್ಛ
  1. be open with ಮನಸ್ಸು ಬಿಚ್ಚಿ ಮಾತನಾಡು; ಮರೆಮಾಚದೆ ಹೇಳು.
  2. door flew open ಬಾಗಿಲು–ಹಾರಬಡಿಯಿತು, ಹಠಾತ್ತನೆ ತೆರೆದುಕೊಂಡಿತು.
  3. force an open door ಕೊಡಲಿಷ್ಟವುಳ್ಳವನನ್ನು ಬಲಾತ್ಕರಿಸು; ಕೊಡಲು ಮನಸ್ಸುಳ್ಳವನನ್ನು ಒತ್ತಾಯಪಡಿಸು.
  4. has an open hand ಧಾರಾಳವಾಗಿ, ಕೈಬಿಟ್ಟು, ಮುಕ್ತಹಸ್ತದಿಂದ–ಕೊಡುತ್ತಾನೆ; ಬಹು ಧಾರಾಳಿ; ಬಿಚ್ಚುಗೈಯವನು.
  5. in the open air ಬಯಲಿನಲ್ಲಿ; ಕಟ್ಟಡ ಮೊದಲಾದವುಗಳ ಒಳಗಲ್ಲದೆ.
  6. is open to conviction ಮನವರಿಕೆಗೆ ತೆರೆದ ಮನಸ್ಸಿದೆ; ಒಪ್ಪಿಗೆಯಾದರೆ ಮನಸ್ಸು ಅಂಗೀಕರಿಸಲು ಸಿದ್ಧವಿದೆ; ಮನವರಿಕೆ ಮಾಡಿದರೆ ಒಪ್ಪಿಕೊಳ್ಳಲು ಸಿದ್ಧ.
  7. keep open doors ಮನೆಗೆ ಬಂದವರಿಗೆಲ್ಲ ಸತ್ಕಾರ ಮಾಡು; ಅಭ್ಯಾಗತರನ್ನೆಲ್ಲ ಉಪಚರಿಸು; ಬಂದವರನ್ನೆಲ್ಲ ಆದರಿಸು.
  8. open to
    1. ಸ್ವೀಕರಿಸಲು ಸಿದ್ಧವಾಗಿರುವ, ಒಲವಿರುವ, ಮನಸ್ಸಿರುವ: open to offers ಕೋರಿಕೆಗಳನ್ನು ಸ್ವೀಕರಿಸಲು ಸಿದ್ಧವಾಗಿ.
    2. (ಆಯ್ಕೆ, ಕೋರಿಕೆ, ಮೊದಲಾದವುಗಳಿಗೆ) ಅವಕಾಶವಿರುವ; ತೆರೆದಿರುವ: there are three courses open to us ನಮ್ಮ ಮುಂದೆ ಮೂರು ಮಾರ್ಗಗಳಿವೆ; ನಮ್ಮ ಪಾಲಿಗೆ ಮೂರು ದಾರಿಗಳಿವೆ.
    3. ಒಳಪಟ್ಟ; ಎಡೆಕೊಡುವ; ಒಳಗಾಗುವ; ಈಡಾಗುವ; ಗುರಿಯಾಗುವ: open to retaliation ಪ್ರತೀಕಾರಕ್ಕೆ ಗುರಿಯಾಗುವ. open to attack ಆಕ್ರಮಣಕ್ಕೆ ಒಳಗಾಗುವ. open to abuse ದುರುಪಯೋಗಕ್ಕೆ ಎಡೆಕೊಡುವ.
  9. throw open
    1. ಹಠಾತ್ತಾಗಿ ಯಾ ಸಂಪೂರ್ಣವಾಗಿ ತೆರೆ ಯಾ ತೆರೆಯುವಂತೆ ಮಾಡು.
    2. (ಪಡೆಯಲು ಯಾ ಪ್ರವೇಶಿಸಲು) ಮುಕ್ತಾವಕಾಶ ಕಲ್ಪಿಸು, ನೀಡು.
  10. will be open with you ನಿನ್ನೊಡನೆ ಬಿಚ್ಚುಮನಸ್ಸಿನಿಂದ, ಮರೆಮಾಚದೆ ಮಾತನಾಡುತ್ತಾನೆ.
  11. with open eyes
    1. ತೆರೆದ ಕಣ್ಣುಗಳಿಂದ; ಬಿಚ್ಚುಗಣ್ಣಿಂದ; ಕಣ್ಣು ತೆರೆದುಕೊಂಡೇ; ತಿಳಿದೂ ತಿಳಿದೂ; ತಿಳುವಳಿಕೆಯಿಂದಲೇ.
    2. ಅತ್ಯಾಸಕ್ತಿಯಿಂದ; ಅತ್ಯಾಶ್ಚರ್ಯದಿಂದ; ಬಹಳ ಕುತೂಹಲದಿಂದ.
See also 1open  3open
2open ಓಪನ್‍
ಸಕರ್ಮಕ ಕ್ರಿಯಾಪದ
  1. ತೆರೆ; ತೆಗೆ; ಅಗಲವಾಗಿ ಬಿಚ್ಚು.
  2. (ಮುಚ್ಚಿರುವ, ಚಿಲಕ ಹಾಕಿರುವ ಬಾಗಿಲು ಮೊದಲಾದವನ್ನು) ತೆರೆ; ತೆಗೆ: opened the door ಬಾಗಿಲನ್ನು ತೆರೆದ. opened the box ಪೆಟ್ಟಿಗೆಯನ್ನು ತೆಗೆದ.
  3. (ಡಬ್ಬ ಮೊದಲಾದವುಗಳ ಒಳಗಿರುವುದನ್ನು ತೆಗೆಯಲು ಅದರ) ಮುಚ್ಚಳ, ಬಿರಡೆ, ಮೊದಲಾದವನ್ನು ತೆಗೆ.
  4. (ಉದ್ಯೋಗ, ಅಂಗಡಿ, ಖಾತೆ, ಚಳವಳಿ, ಮೊದಲಾದವನ್ನು) ಸ್ಥಾಪಿಸು; ಹೂಡು; ತೆರೆ; ಪ್ರಾರಂಭಿಸು; ಆರಂಭಿಸು.
  5. (ನ್ಯಾಯಾಲಯದಲ್ಲಿ ನ್ಯಾಯವಾದಿಯ ವಿಷಯದಲ್ಲಿ) ಮೊಕದ್ದಮೆಯನ್ನು ಪ್ರಾರಂಭಿಸು; ಸಾಕ್ಷಿಗಳ ವಿಚಾರಣೆಗೆ ಮೊದಲು ಪೀಠಿಕಾರೂಪದ ಹೇಳಿಕೆ ಕೊಡು, ಪ್ರಾಸ್ತಾವಿಕ ಹೇಳಿಕೆ ನೀಡು.
  6. (ನಕ್ಷೆ, ವೃತ್ತಪತ್ರಿಕೆ, ಮೊದಲಾದವನ್ನು) ಹರಡು; ಬಿಚ್ಚು.
  7. (ತನ್ನ ಉಪಾಯ, ಎಣಿಕೆ, ಯುಕ್ತಿ, ಹಂಚಿಕೆ, ಭಾವನೆಗಳು, ಮೊದಲಾದವನ್ನು) ಹೊರಗೆಡಹು; ತಿಳಿಸು; ಬಯಲು ಮಾಡು; ಪ್ರಕಟಿಸು; ಬಹಿರಂಗಪಡಿಸು.
  8. (ಮನಸ್ಸು, ಹೃದಯ, ಮೊದಲಾದವನ್ನು) ತೆರೆ; ವಿಶಾಲಗೊಳಿಸು; ಉದಾರಗೊಳಿಸು; ಅನುಕಂಪಯುಕ್ತವಾಗಿ ಯಾ ವಿವೇಕಯುತವಾಗಿ ಆಗುವಂತೆ ಮಾಡು.
  9. (ಕಟ್ಟಡ ಮೊದಲಾದವನ್ನು) ಉದ್ಘಾಟಿಸು; ತೆರೆ; ಪೂರ್ಣವಾಗಿದೆ ಮತ್ತು ಬಳಕೆಯಲ್ಲಿದೆ ಎಂದು ಘೋಷಿಸು, ಸಾರು.
  10. (ವ್ಯಾಪಾರ, ಅಂಗಡಿ, ಖಾತೆ, ಆಟದ ಸರದಿ, ಹರಾಜಿನಲ್ಲಿ ಬೆಲೆ, ಚರ್ಚೆ, ಪ್ರಚಾರ, ಅಧಿವೇಶನ, ದಾಳಿ, ಕಾರ್ಯಾಚರಣೆ, ಮೊದಲಾದವನ್ನು) ಪ್ರಾರಂಭಿಸು; ಶುರುಮಾಡು; ಉದ್ಘಾಟಿಸು: open the debate ಚರ್ಚೆ ಪ್ರಾರಂಭಿಸು; ಚರ್ಚೆಯಲ್ಲಿ ಮೊದಲನೆಯ ಭಾಷಣಕಾರನಾಗು. open the parliament ಸಂಸತ್ತನ್ನು ವಿಧಿವತ್ತಾಗಿ ಪ್ರಾರಂಭಿಸು, ಉದ್ಘಾಟಿಸು.
  11. (ನೇಗಿಲು ಮೊದಲಾದವುಗಳಿಂದ ನೆಲವನ್ನು) ಬಗೆ; ಉತ್ತು; ಉಳು; ಸಡಿಲಿಸು.
  12. ಹೊಟ್ಟೆ ಕಳೆಸು; ಮಲವಿಸರ್ಜನೆ ಮಾಡಿಸು.
  13. (ನೌಕಾಯಾನ) ಸ್ಥಾನ ಬದಲಾವಣೆಯಿಂದ ಕಾಣುವಂತೆ ಮಾಡಿಕೊ: take care not to open the obelisk ಮೊನಚು ಸ್ಮಾರಕ ಕಂಬ ಕಾಣಿಸದಂತೆ ನೋಡಿಕೊ.
  14. (ದೃಶ್ಯ ಮೊದಲಾದವನ್ನು) ಗೋಚರವಾಗಿಸು; ಕಾಣಿಸುವಂತೆ ಮಾಡು; ಪ್ರಕಟಗೊಳಿಸು (ರೂಪಕವಾಗಿ ಸಹ).
  15. (ಅನೇಕವೇಳೆ ಅಕರ್ಮಕ ಕ್ರಿಯಾಪದ ಸಹ) (ಪುಸ್ತಕ ಮೊದಲಾದವನ್ನು) ತೆರೆ; ತೆಗೆದು ನೋಡು: opened at page twelve ಪುಸ್ತಕದ ಹನ್ನೆರಡನೆಯ ಪುಟ ತೆರೆದ.
ಅಕರ್ಮಕ ಕ್ರಿಯಾಪದ
  1. ತೆಗೆದುಕೊ; (ಹೆಚ್ಚು) ತೆರೆದುಕೊ; ಬಿಚ್ಚಿಕೊ: the door opened slowly ಬಾಗಿಲು ನಿಧಾನವಾಗಿ ತೆರೆದುಕೊಂಡಿತು.
  2. (ಬಾಗಿಲು, ಕೋಣೆ, ಮೊದಲಾದವುಗಳ ವಿಷಯದಲ್ಲಿ) (ಗೊತ್ತಾದ ಕಡೆಗೆ) ಪ್ರವೇಶ–ಇರು, ಕೊಡು; ತೆರೆ; ಒಯ್ಯು: door opens into passage ಬಾಗಿಲು ತೆಗೆದರೆ ನಡವೆಗೆ ತೆರೆಯುತ್ತದೆ, ಪ್ರವೇಶಗೊಡುತ್ತದೆ. opened on to a garden ತೋಟಕ್ಕೆ ಒಯ್ದಿತು.
  3. ಶುರುವಾಗು; ಪ್ರಾರಂಭವಾಗು; ಆರಂಭವಾಗು: the session opens tomorrow ಅಧಿವೇಶನ ನಾಳೆ ಪ್ರಾರಂಭವಾಗುತ್ತದೆ. the story opens with a murder ಕಥೆ ಕೊಲೆಯೊಂದರಿಂದ ಆರಂಭವಾಗುತ್ತದೆ.
  4. (ವ್ಯಕ್ತಿಯ ವಿಷಯದಲ್ಲಿ) (ಮಾತು, ಬರೆಹ, ಮೊದಲಾದವನ್ನು) ಪ್ರಾರಂಭಿಸು; ಆರಂಭಿಸು: opened upon the fiscal question ಹಣಕಾಸಿನ ಪ್ರಶ್ನೆಯನ್ನು ಕುರಿತು ಮಾತನಾಡಲಾರಂಭಿಸಿದನು. he opened with a warning ಎಚ್ಚರಿಕೆ ಕೊಡುವುದರಿಂದ ಅವನು ಆರಂಭಿಸಿದನು.
  5. (ದೃಶ್ಯದ, ಜಾಗದ ವಿಷಯದಲ್ಲಿ) ಗೋಚರವಾಗು; ಕಾಣಿಸು; ಪ್ರಕಟವಾಗು; ಕಣ್ಣಿಗೆ ಬೀಳು (ರೂಪಕವಾಗಿ ಸಹ): the wonders of astronomy were opening to him ಖಗೋಳ ವಿಜ್ಞಾನದ ಅಚ್ಚರಿಗಳು ಅವನಿಗೆ ಗೋಚರವಾಗತೊಡಗಿದವು, ಗೊತ್ತಾಗಲು ಪ್ರಾರಂಭವಾದವು.
  6. (ನೌಕಾಯಾನ) ಪೂರ್ತಿ ಕಾಣು: the harbour light opened ಬಂದರಿನ ದೀಪ ಪೂರ್ತಿ ಕಂಡಿತು.
  7. (ಬೇಟೆ ನಾಯಿಗಳ ವಿಷಯದಲ್ಲಿ, ತಿರಸ್ಕಾರವಾಗಿ ಮನುಷ್ಯರ ವಿಷಯದಲ್ಲಿ) (ಬೇಟೆಯ ವಾಸನೆ ಕಂಡಾಗ) ಬಗುಳಲು, ಬೊಗಳಲು–ಆರಂಭಿಸು: the dog opened at once (ಬೇಟೆಯ ವಾಸನೆ ಕಂಡ) ಕೂಡಲೆ ನಾಯಿ ಬಗುಳಲು ಶುರು ಮಾಡಿತು.
ಪದಗುಚ್ಛ
  1. open one’s shoulders (ಕ್ರಿಕೆಟ್‍, ಬ್ಯಾಟುಗಾರನ ವಿಷಯದಲ್ಲಿ) ಚೆಂಡನ್ನು ಜೋರಾಗಿ ಹೊಡೆ; (ಬಿರುಸಾಗಿ ಹೊಡೆಯಲು) ಭುಜಗಳನ್ನು ಅಗಲಿಸಿ ನಿಲ್ಲು.
  2. not open lips (or mouth) ತುಟಿ ಬಿಚ್ಚದಿರು; ಸುಮ್ಮನಿರು; ಮೌನವಾಗಿರು; ಬಾಯಿಬಿಡದಿರು.
  3. open person’s eyes (ಮತ್ತೊಬ್ಬನ) ಕಣ್ಣು ತೆರೆ; ತಪ್ಪು ತಿಳಿವಳಿಕೆ ಪರಿಹರಿಸು; ಸರಿಯಾದ ತಿಳಿವಳಿಕೆ ಕೊಡು; ಅರಿವು ಮಾಡಿಕೊಡು.
  4. open fire ಗುಂಡು ಹಾರಿಸು; ಗುಂಡು ಹಾರಿಸಲು ಪ್ರಾರಂಭಿಸು.
  5. open one’s eyes
    1. ಕಣ್ಣು–ಬಿಡು, ತೆರೆ; ನೋಡು; ಗಮನಿಸು.
    2. ಅಚ್ಚರಿಗೊಳ್ಳು; ಆಶ್ಚರ್ಯತೋರಿಸು; ಬೆರಗಾಗಿ ನೋಡು.
  6. open out
    1. ತೆರೆ; ಬಿಚ್ಚು; ಹರಡು.
    2. ಅಗಲವಾಗು.
    3. ಬೆಳೆ; ವೃದ್ಧಿಹೊಂದು; ವಿಕಾಸಪಡೆ.
    4. (ಭಾವನೆಗಳನ್ನು, ಆಲೋಚನೆಗಳನ್ನು) ವ್ಯಕ್ತಪಡಿಸು; ಮನಬಿಚ್ಚಿ ಹೇಳು; ಹೊರಗೆಡವು.
    5. ವೇಗವಾಗು; ವೇಗ ಹೆಚ್ಚಿಸು.
    6. ವಿಸ್ತರಿಸು; ದೊಡ್ಡದಾಗು; ಹಿಗ್ಗು.
  7. open the door to (-ಕ್ಕೆ) ಅವಕಾಶ ಕಲ್ಪಿಸು, ಒದಗಿಸು, ಮಾಡಿಕೊಡು.
  8. open up
    1. (ಕಟ್ಟಡ ಮೊದಲಾದವುಗಳ) ಬಾಗಿಲು, ಬೀಗ–ತೆರೆ.
    2. (ನೋಟಕ್ಕೆ, ಸಂಚಾರಕ್ಕೆ, ಪ್ರವೇಶಕ್ಕೆ, ಉಪಯೋಗಕ್ಕೆ, ಪ್ರಯಾಣಕ್ಕೆ) ತೆರೆ; ಸಾಧ್ಯವಾಗಿ ಮಾಡು.
    3. ಹೊರಗೆಡವು; ಪ್ರಕಟಪಡಿಸು; ಬೆಳಕಿಗೆ ತರು; ಗಮನಕ್ಕೆ ತರು.
    4. (ಮುಖ್ಯವಾಗಿ ವಾಹನದ) ವೇಗ ಹೆಚ್ಚಿಸು.
    5. ಗುಂಡು ಹಾರಿಸಲು ಆರಂಭಿಸು.
    6. (ಹಿಂದೆ ಬಗೆಹರಿಸದಿದ್ದ ಸಮಸ್ಯೆ ಮೊದಲಾದವನ್ನು) ಮತ್ತೆ–ಪರೀಕ್ಷಿಸು, ಬೆಳಕಿಗೆ ತರು.
See also 1open  2open
3open ಓಪನ್‍
ನಾಮವಾಚಕ
  1. ಬಯಲು; ಆವರಣ ಹಾಕದ ಪ್ರದೇಶ; ಬಯಲು–ಜಾಗ, ಗಾಳಿ.
  2. ಬಹಿರಂಗ; ಸಾರ್ವಜನಿಕ ಗಮನ, ದೃಷ್ಟಿ; ಎಲ್ಲರಿಗೂ ಕಾಣಿಸುವ ದೃಶ್ಯ: into the open ಬಹಿರಂಗಕ್ಕೆ; ಸಾರ್ವಜನಿಕ ದೃಷ್ಟಿಗೆ.
  3. ಸಾರ್ವಜನಿಕ, ಎಲ್ಲರಿಗೂ ತೆರೆದ–ಪಂದ್ಯ, ಸ್ಪರ್ಧೆ, ವ್ಯಾಸಂಗ ವೇತನ.
ಪದಗುಚ್ಛ

the open = 3open\((1)\).