See also 2one  3one
1one ವನ್‍
ಗುಣವಾಚಕ
  1. (ಸೊನ್ನೆ ಯಾ ಭಿನ್ನಾಂಕ ಯಾ ಬಹುವಚನ ಅಲ್ಲದ ಪ್ರಥಮ ಪೂಣಾಂಕವೂ, a, an ಎಂಬ ಏಕಾರ್ಥವಾಚಿಗಳಿಗೆ ಸಮಾನಾರ್ಥಕವೂ ಆದ) ಒಂದು; ಒಬ್ಬ; ಏಕ: one table ಒಂದು ಮೇಜು. one egg ಒಂದು ಮೊಟ್ಟೆ. one person ಒಬ್ಬ (ವ್ಯಕ್ತಿ).
  2. (a, an ಎಂಬ ಅನಿರ್ದೇಶಕ ಗುಣವಾಚಿಗಳ ಪರ್ಯಾಯವಾಗಿ ಉಕ್ತ ವಿಶೇಷ್ಯ, ಯಾ ಅಧ್ಯಾಹಾರ ವಿಶೇಷ್ಯ ಯಾ ನಾಮಪದದೊಡನೆ ಪ್ರಯೋಗ) ಒಬ್ಬ ವ್ಯಕ್ತಿ ಯಾ ಒಂದು ವಸ್ತು: one of them lost his hat (one person ಎಂದರ್ಥ, person ಎಂಬುದು ಅಧ್ಯಾಹಾರ) ಅವರಲ್ಲಿ ಒಬ್ಬನು ತನ್ನ ಹ್ಯಾಟನ್ನು ಕಳೆದುಕೊಂಡನು. one of the best ಶ್ರೇಷ್ಠವಾದವುಗಳಲ್ಲಿ ಒಂದು.
  3. ಒಂದು; ನಿರ್ದಿಷ್ಟವಾದ, ಆದರೆ ಸ್ಪಷ್ಟವಾಗಿ ಹೇಳಿಲ್ಲದ (ಮುಖ್ಯವಾಗಿ ಇನ್ನೊಂದರೊಡನೆ ಹೋಲಿಸುವಾಗ): that is one view ಅದು ಒಂದು ಅಭಿಪ್ರಾಯ. one thing after another ಒಂದಾದ ಮೇಲೊಂದು.
  4. (ಆಡುಮಾತು) (ಒತ್ತಿ ಹೇಳುವಾಗ) ಒಂದು ಗಮನಾರ್ಹವಾದ: that is one difficult question ಅದು ಒಂದು ಕ್ಲಿಷ್ಟ ಪ್ರಶ್ನೆ.
  5. ಒಂದೇ; ಒಬ್ಬನೇ; ಏಕಮಾತ್ರ; ಏಕಮೇವ: that is the one way to win ಗೆಲ್ಲಲು ಅದೊಂದೇ ದಾರಿ. the one reality is the Supreme Spirit ಏಕಮಾತ್ರ ಸತ್ಯವೆಂದರೆ ಪರಮಾತ್ಮ. the one man who can do it ಅದನ್ನು ಮಾಡಬಲ್ಲ ಏಕಮಾತ್ರ ವ್ಯಕ್ತಿ.
  6. ಒಂದೇ ಆಗಿರುವ; ಒಟ್ಟಿನ; ಒಟ್ಟಾಗಿರುವ; ಬೇರೆಬೇರೆಯಲ್ಲದ; ಬೇರ್ಪಟ್ಟಿಲ್ಲದ; ಅವಿಭಕ್ತ: they all live in one family ಅವರೆಲ್ಲ ಒಂದೇ, ಅವಿಭಕ್ತ, ಒಟ್ಟು–ಕುಟುಂಬದಲ್ಲಿ ವಾಸಿಸುತ್ತಿದ್ದಾರೆ.
  7. ಒಂದೇ; ಅದೇ; ಏಕ: all the planes flew in one direction ಎಲ್ಲ ವಿಮಾನಗಳೂ ಒಂದೇ ದಿಕ್ಕಿನಲ್ಲಿ ಹಾರಿಹೋದವು. they all cried out with one voice ಅವರೆಲ್ಲ ಒಂದೇ ದನಿಯಿಂದ, ಏಕಕಂಠದಿಂದ, ಒಕ್ಕೊರಲಿನಿಂದ ಕೂಗಿದರು. of one opinion ಏಕಾಭಿಪ್ರಾಯದ.
  8. (ಯಾವುದೇ) ಒಂದು ಯಾ (ಯಾವನೇ) ಒಬ್ಬ: no one man is equal to the task (ಯಾವನೇ) ಒಬ್ಬ ವ್ಯಕ್ತಿ ಆ ಕೆಲಸವನ್ನು ನಿಭಾಯಿಸಲಾರ.
  9. ಅವಿಭಾಜ್ಯ; ಅಖಂಡ; ಇಡೀ; ಪೂರ್ಣ: it is one whole ಅದು ಒಂದು ಅಖಂಡ, ಪೂರ್ಣ ವಸ್ತು.
ಪದಗುಚ್ಛ
  1. become one (ಹಲವು ಯಾ ಹಲವಾರು, ಒಟ್ಟುಗೂಡಿ) ಒಂದಾಗು.
  2. for one thing (ಇತರವನ್ನು ಹೇಳದೆ ಬಿಟ್ಟರೂ) ಒಂದು ವಿಷಯಕ್ಕಾಗಿ, ಕಾರಣಕ್ಕಾಗಿ.
  3. one-and-twentieth etc ಇಪ್ಪತ್ತೊಂದನೆಯದು ಮೊದಲಾಗಿ.
  4. one-and-twenty etc., ಇಪ್ಪತ್ತೊಂದು; ಇಪ್ಪತ್ತು ಮತ್ತೊಂದು ಇತ್ಯಾದಿ.
  5. one day
    1. (ನಿರ್ದಿಷ್ಟವಾಗಿರದ ಹಿಂದಿನ) ಒಂದು ದಿನ; ಎಂದೋ ಒಂದು ದಿನ; ಒಂದಾನೊಂದು ದಿನ: one day Crusoe saw a footprint in the sand ಒಂದು ದಿನ ಕ್ರೂಸೋ ಮರಳಿನ ಮೇಲೆ ಹೆಜ್ಜೆಯ ಗುರುತೊಂದನ್ನು ಕಂಡ.
    2. (ಮುಂದೆ) ಎಂದೋ ಒಂದು ದಿನ; ಎಂದಾದರೂ ಒಂದು ದಿನ; ಯಾವತ್ತೋ ಒಂದು ದಿನ: one day I will surely call on you ಎಂದಾದರೂ ಒಂದು ದಿನ ನಾನು ನಿಮ್ಮನ್ನು ಖಂಡಿತ ಭೇಟಿ ಮಾಡುತ್ತೇನೆ.
  6. one dozen, hundred, etc., ಒಂದು ಡಸನ್‍, ಒಂದು ನೂರು, ಮೊದಲಾದ(ನಿಷ್ಕೃಷ್ಟಾರ್ಥಕ; ಒಂದಕ್ಕಿಂತ ಕಡಿಮೆಯೂ ಅಲ್ಲ, ಹೆಚ್ಚೂ ಅಲ್ಲ ಎಂಬುದನ್ನು ಸ್ಪಷ್ಟಪಡಿಸುವಲ್ಲಿ ಪ್ರಯೋಗ).
  7. one or two
    1. ಒಂದೋ ಎರಡೋ ಯಾ ಒಬ್ಬನೋ ಇಬ್ಬರೋ: one or two will do ಒಂದೋ ಎರಡೋ ಸಾಕು ಯಾ ಒಬ್ಬನೋ ಇಬ್ಬರೋ ಸಾಕು.
    2. (ರೂಪಕವಾಗಿ) ಒಂದೋ ಎರಡೋ, ಯಾ ಒಬ್ಬಿಬ್ಬರು ಅಷ್ಟೆ; ಕೆಲವು ಯಾ ಕೆಲವರು; ಕೆಲವೇ ಕೆಲವು ಯಾ ಕೆಲವರು: only one or two fruits are left ಒಂದೋ ಎರಡೋ ಹಣ್ಣುಗಳು ಮಾತ್ರ ಉಳಿದಿವೆ, ಕೆಲವೇ ಕೆಲವು ಹಣ್ಣುಗಳು ಉಳಿದಿವೆ. one or two persons were present, that was all ಒಬ್ಬಿಬ್ಬರು ಬಂದಿದ್ದರು, ಅಷ್ಟೆ.
  8. one-third etc ಮೂರನೆಯ ಮೊದಲಾದವುಗಳ ಒಂದು (ಅಂಶ).
  9. be made one ಮದುವೆಯಾಗು; ಮದುವೆಯಿಂದ ಒಂದಾಗು; ವಿವಾಹಿತನಾಗು.
  10. be one too many for (some one) ಯಾರಿಗಿಂತಲೇ ಆಗಲಿ (ದೇಹ ಶಕ್ತಿ ಯಾ ಬುದ್ಧಿಯಲ್ಲಿ) ಮೇಲುಗೈಯಾಗು ಯಾ ಮೇಲುಗೈಯಾಗಿ ಆ ವ್ಯಕ್ತಿಯನ್ನು ಸೋಲಿಸು.
  11. neither one thing nor the other (ಬೇಡದ ಬೆರಕೆಯ ವಿಷಯದಲ್ಲಿ) ಇದೂ ಅಲ್ಲ ಅದೂ ಅಲ್ಲ; (ಈ ವಸ್ತು) ಬರಿಬೆರಕೆ.
  12. one and the same ಎರಡೂ ಒಂದೇ.
  13. one man in ten, a thousand, etc., ಹತ್ತಕ್ಕೊಬ್ಬ, ಸಾವಿರಕ್ಕೊಬ್ಬ, ಇತ್ಯಾದಿ (ಇಂಥ ವ್ಯಕ್ತಿ ವಿರಳ ಎಂಬರ್ಥದಲ್ಲಿ).
  14. one man, one vote (ಅನೇಕ ಮತದಾನ ಪದ್ಧತಿಗೆ ವ್ಯತಿರೇಕವಾದ) ಒಂದಾಳಿಗೆ ಒಂದೆ ವೋಟು; ಆಳಿಗೊಂದು ಓಟು (ಎಂಬ ತತ್ತ್ವ ಉದ್ಗಾರ).
  15. one vote, one value ಪ್ರತಿ ವೋಟೂ ಒಂದೇ ವೋಟು; ಪ್ರತಿ ವೋಟಿಗೂ ಒಂದೇ ವೋಟಿನ ಎಣಿಕೆ, ಬೆಲೆ; ಯಾವ ಮತದಾರನಿಗೂ ಒಂದಕ್ಕಿಂತ ಹೆಚ್ಚು ವೋಟು ಇಲ್ಲ (ಎಂಬ ಮತದಾನ ಸಮಾನತೆಯ ತತ್ತ್ವ, ಉದ್ಗಾರ).
See also 1one  3one
2one ವನ್‍
ನಾಮವಾಚಕ

(ಹಲವೊಮ್ಮೆ ವಾಚ್ಯವಾಗಿಯೋ ಸೂಚ್ಯವಾಗಿಯೋ ಹಿಂದೆ ಬಳಸಿರುವ ನಾಮಪದದ ಪುನರುಕ್ತಿಯನ್ನು ತಪ್ಪಿಸಲು ಅದರ ಪ್ರತಿಯಾಗಿ ಬಳಸುವ ಪರ್ಯಾಯ ನಾಮ).

    1. ಒಂದು; ಏಕ (ಸಂಖ್ಯೆಯ ಹೆಸರು).
    2. ಒಂದರಿಂದ ಎಣಿಸಲ್ಪಟ್ಟ, ಸೂಚಿಸಲ್ಪಟ್ಟ ವಸ್ತು.
  1. (ಸಂಖ್ಯೆಯಾಗಿ) ಒಂದು; ಏಕ; ಒಂದು ಮಾನ: one is half of two ಒಂದು ಎರಡರ ಅರ್ಧ. write down a one ಒಂದು ಒಂದನ್ನು ಬರೆ. write down three ones ಮೂರು ಒಂದುಗಳನ್ನು ಬರೆ. they came in ones and twos ಅವರು; ಒಬ್ಬೊಬ್ಬನಾಗಿ ಇಬ್ಬಿಬ್ಬರಾಗಿ ಬಂದರು, ಯಾ ಅವು ಒಂದೊಂದು ಎರಡೆರಡಾಗಿ ಬಂದುವು.
  2. ಒಬ್ಬ ಯಾ ಒಂದು ಯಾ ಒಂದು ಉದಾಹರಣೆ (ಕೆಲವೊಮ್ಮೆ ಹಿಂದೆ ಹೇಳಿದ ಯಾ ಸೂಚಿತವಾದ ನಾಮವಾಚಕವನ್ನು ಸೂಚಿಸುತ್ತದೆ): I lose a neighbour, and you gain one ನನಗೊಬ್ಬ ನೆರೆಯುವ ನಷ್ಟ, ನಿನಗೊಬ್ಬ ನೆರೆಯುವ ಲಾಭ; ನಾನೊಬ್ಬ ನೆರೆಯವನನ್ನು ಕಳೆದುಕೊಂಡೆ, ನೀನೊಬ್ಬನನ್ನು ಪಡೆದುಕೊಂಡೆ. the big book and the little one ಆ ದೊಡ್ಡ ಪುಸ್ತಕ ಮತ್ತು ಆ ಚಿಕ್ಕ ಪುಸ್ತಕ (ಚಿಕ್ಕದು). pick me out a good one, some good ones ಒಳ್ಳೆಯ ಒಂದನ್ನು, ಒಳ್ಳೆಯ ಕೆಲವನ್ನು ನನಗಾಗಿ ಆರಿಸಿಕೊಡು. which one(or ones) do you like? ನಿನಗೆ ಯಾವುದು (ಯಾ ಯಾವುವು) ಇಷ್ಟ? what kind of a one do you like? ನಿಮಗೆ ಯಾವ ಬಗೆಯದು ಇಷ್ಟ? that one, the one in the window, will do ಆ ಒಂದು, ಕಿಟಕಿ ಮೇಲಿದೆಯಲ್ಲ ಅದು, ಅದೊಂದು ಸಾಕು.
  3. (ಆಡುಮಾತು) (ಮದ್ಯದ ವಿಷಯದಲ್ಲಿ) ಒಂದು ಗುಟುಕು; ಒಂದು ಸಲ ಕುಡಿಯುವಷ್ಟು: have a quick one ಬೇಗ ಒಂದು ಗುಟುಕು (ಮದ್ಯ) ಕುಡಿ. have one on me ನನ್ನ ಖರ್ಚಿನಲ್ಲಿ ಒಂದು ಗುಟುಕು ಕುಡಿ.
  4. (ಕಥೆ, ಹಾಸ್ಯೋಕ್ತಿ, ಸುದ್ದಿ, ಮೊದಲಾದವುಗಳ ವಿಷಯದಲ್ಲಿ) ಇದು, ಈ ಕಥೆ, ಹಾಸ್ಯೋಕ್ತಿ, ಇತ್ಯಾದಿ: have you heard the one about the dog that could play poker? ಪೋಕರ್‍ ಆಟ ಆಡಬಲ್ಲ ನಾಯಿಯ ವಿಚಾರವನ್ನು, ಕಥೆಯನ್ನು ಕೇಳಿದ್ದೀಯಾ? the one about the frog ಕಪ್ಪೆಯ ಕಥೆ.
  5. ಒಂದರ ಸಂಖ್ಯಾ ಸಂಕೇತ (I, i, l).
  6. (ಯಾವುದೇ ವಸ್ತುಗಳ ಪೈಕಿ) ಒಂದು: they now sell scores where they sold ones ಹಿಂದೆ ಒಂದೊಂದು ಮಾರುತ್ತಿದ್ದಲ್ಲಿ ಈಗ ಇಪ್ಪತ್ತಿಪ್ಪತ್ತು ಮಾರುತ್ತಾರೆ. this is the only one left ಇದೊಂದೇ ಉಳಿದಿರುವುದು.
  7. (ಬ್ರಿಟಿಷ್‍ ಪ್ರಯೋಗ) ಪೌಂಡಿನ ನೋಟು; (ಅಮೆರಿಕನ್‍ ಪ್ರಯೋಗ) ಡಾಲರಿನ ಬಿಲ್ಲು, ನೋಟು, ಇತ್ಯಾದಿ.
  8. ಒಂದು ಪೆಟ್ಟು, ಹೊಡೆತ (ರೂಪಕವಾಗಿ ಸಹ): I gave him one in the eye ಅವನಿಗೆ ಕಣ್ಣಿನ ಮೇಲೆ ಒಂದು (ಹೊಡೆತ) ಕೊಟ್ಟೆ. that was a nasty one in the eye for the liberals (ರೂಪಕವಾಗಿ) ಲಿಬರಲ್‍ ಪಕ್ಷದವರಿಗೆ ಅದೊಂದು ಭಾರಿ ಹೊಡೆತ ಬಿದ್ದಂತಾಯಿತು, ಭಾರಿ ತೇಜೋಭಂಗ ಆದಂತಾಯಿತು.
ಪದಗುಚ್ಛ
  1. all one ಎಲ್ಲಾ ಒಂದೇ; ಅಪ್ರಾಧಾನ್ಯ ವಿಷಯ; ಅಪ್ರಾಮುಖ್ಯ ವಿಷಯ: is all one to me ನನಗೆ ಅದೆಲ್ಲಾ ಒಂದೇ, ಅಂಥದೇನೂ ಮುಖ್ಯ ವಿಷಯವಲ್ಲ.
  2. all in one ಸರ್ವಧಾರಿ; ಎಲ್ಲವೂ ಒಂದರಲ್ಲೇ ಸೇರಿರುವ ವಸ್ತು.
  3. at one
    1. (ಭಿನ್ನಾಭಿಪ್ರಾಯ ಮೊದಲಾದವನ್ನು ಸರಿಪಡಿಸಿಕೊಂಡು) ಒಂದಾಗಿ; ಒಂದುಗೂಡಿ; ಒಟ್ಟಾಗಿ; ಏಕಾಭಿಪ್ರಾಯದಿಂದ; ಒಮ್ಮತದಿಂದ; ಐಕಮತ್ಯ ಸ್ಥಾಪಿಸಿಕೊಂಡು.
    2. = ಪದಗುಚ್ಛ\((4)\).
  4. at one o’clock ಒಂದು ಗಂಟೆಯಲ್ಲಿ.
  5. book, part, volume, one ಪುಸ್ತಕ, ಭಾಗ, ಸಂಪುಟ–ಒಂದು; ಮೊದಲನೆಯ, ಪ್ರಥಮ–ಪುಸ್ತಕ, ಭಾಗ, ಸಂಪುಟ.
  6. go one better ಹಿಂದಿನ ಸಲಕ್ಕಿಂತ ಯಾ ಹಿಂದಿನವನಿಗಿಂತ (ಹರಾಜಿನ ಸವಾಲಿನಲ್ಲಿ, ಸ್ವರ್ಧೆ, ಗೆಲವು, ಮೊದಲಾದವುಗಳಲ್ಲಿ) ಒಂದು ಹೆಜ್ಜೆ ಮುಂದುವರಿ, ಹಂತ ಮುಂದೆ ಹೋಗು, ಒಂದು ಕೈ ಮುಂದೆ ಹೋಗು.
  7. I for one
    1. ನಾನಂತೂ; ನನ್ನ ಮಟ್ಟಿಗೆ ಹೇಳುವುದಾದರೆ: I for one do not believe it ನಾನಂತೂ ಅದನ್ನು ನಂಬುವುದಿಲ್ಲ.
    2. ನಾನಂತೂ; ನಾನೊಬ್ಬನೇ ಆದರೂ; ಬೇರಾರಾದರೂ ನನ್ನೊಡನೆ ಸೇರಲಿ, ಬಿಡಲಿ: I for one will fight to the end ನಾನಾಂತೂ, ನಾನೊಬ್ಬನೇ ಆಗಿಬಿಟ್ಟರೂ ಕಡೆಯವರೆಗೂ ಹೋರಾಡಿಯೇ ತೀರುತ್ತೇನೆ.
  8. in one
    1. (ಆಡುಮಾತು) ಪ್ರಥಮ ಪ್ರಯತ್ನದಲ್ಲಿಯೇ; ಮೊದಲ ಸಲದಲ್ಲೇ.
    2. = ಪದಗುಚ್ಛ\((2)\).
  9. in the year one (ಬ್ರಿಟಿಷ್‍ ಪ್ರಯೋಗ) ಒಂದಾನೊಂದು ಕಾಲದಲ್ಲಿ; ಬಹು ಹಿಂದಿನ, ಪ್ರಾಚೀನ ಕಾಲದಲ್ಲಿ.
  10. like one o’clock (ಆಡುಮಾತು) ಬಿರುಸಿನಿಂದ; ರಭಸದಿಂದ.
  11. make one (ಪ್ರಾಚೀನ ಪ್ರಯೋಗ) ಸಂಘ, ಸಂಸ್ಥೆ, ಗುಂಪುಗಳ ಸದಸ್ಯನಾಗು; ಅವುಗಳಲ್ಲಿ ಒಬ್ಬನಾಗು.
  12. never a one ಯಾವನೂ ಇಲ್ಲ ಯಾ ಯಾವುದೂ ಇಲ್ಲ; ಒಬ್ಬನೂ ಇಲ್ಲ ಯಾ ಒಂದೂ ಇಲ್ಲ.
  13. number one
    1. ನಾನು; ತಾನು; ತಾನೇ: he always takes care of number one ಅವನು ತನ್ನ ಯೋಗಕ್ಷೇಮವನ್ನು ಸದಾ ನೋಡಿಕೊಳ್ಳುತ್ತಾನೆ.
    2. ಪ್ರಥಮ–ದರ್ಜೆ, ಸ್ಥಾನ; ಗುಣದಲ್ಲಿ, ಪ್ರಾಮುಖ್ಯದಲ್ಲಿ ಮೊದಲನೆಯದು.
  14. one and all ಎಲ್ಲರೂ; ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಸರ್ವರೂ: one and all voted for the salutary proposal ಆ ಹಿತಕರ ಸಲಹೆಯ ಪರವಾಗಿ ಎಲ್ಲರೂ, ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಮತ ನೀಡಿದರು.
  15. one after another
    1. ಒಂದೊಂದಾಗಿ ಯಾ ಒಬ್ಬೊಬ್ಬನಾಗಿ.
    2. ಒಂದರ ತರುವಾಯ ಒಂದು ಯಾ ಒಬ್ಬನಾದ ಮೇಲೊಬ್ಬ; ಒಬ್ಬನ ಹಿಂದೆ ಒಬ್ಬ.
  16. one and six pence ಒಂದು ಷಿಲಿಂಗ್‍ ಆರು ಪೆನ್ನಿ.
  17. one another (ಪರಸ್ಪರ) ಒಬ್ಬನನ್ನೊಬ್ಬ, ಒಂದನ್ನೊಂದು, ಒಬ್ಬನೊಡನೊಬ್ಬ, ಒಂದರೊಡನೊಂದು, ಇತ್ಯಾದಿ: they struck one another ಒಬ್ಬರನ್ನೊಬ್ಬರು ಹೊಡೆದರು. buy one another’s goods ಪರಸ್ಪರ, ಒಬ್ಬ ಇನ್ನೊಬ್ಬನ ಸರಕುಗಳನ್ನು ಕೊಂಡುಕೊ.
  18. one by one = ಪದಗುಚ್ಛ\((15)\).
  19. one for the road (ಪ್ರಯಾಣ ಹೊರಡುವ ಮುಂಚೆ ಕುಡಿವ) ಕೊನೆಯ ಗುಟುಕು.
  20. one with another ಒಂದೂ ಇನ್ನೊಂದೂ ಸೇರಿ; ಸಾರಾಸಗಟು; ಒಟ್ಟಾರೆ: taking one thing with another, they are pretty cheap ಅದನ್ನೂ ಇದನ್ನೂ ಸೇರಿಸಿ ನೋಡಿದರೆ ಅವು ತಕ್ಕಷ್ಟು ಅಗ್ಗವೆನ್ನಲೇಬೇಕು.
  21. ten to one ಒಂದಕ್ಕೆ ಹತ್ತು, ಹತ್ತುಪಾಲು; ಬಹುಪಾಲು; ಬಹುಮಟ್ಟಿಗೆ; ಬಹುಶಃ ಅಸಂಭವ; ಒಂದಾದರೆ, ಸಂಭವ ಹತ್ತು: ten to one this horse will win ಹತ್ತು ಪಾಲು ಈ ಕುದುರೆ ಗೆಲ್ಲುತ್ತದೆ.
  22. (the) one ... the other (ಇಬ್ಬರಲ್ಲಿ, ಯಾ ಎರಡು ಪ್ರಾಣಿ, ಯಾ ವಸ್ತುಗಳಲ್ಲಿ ತಾರತಮ್ಯ ಹೇಳುವಲ್ಲಿ) ಒಂದು, ಒಬ್ಬ–ಹೀಗೆ; ಇನ್ನೊಂದು, ಇನ್ನೊಬ್ಬ–ಹಾಗೆ: one is good, the other is bad ಒಬ್ಬ ಒಳ್ಳೆಯವನು, ಇನ್ನೊಬ್ಬ ಕೆಟ್ಟವನು ಯಾ ಒಂದು ಒಳ್ಳೆಯದು, ಇನ್ನೊಂದು ಕೆಟ್ಟದ್ದು. I took (the) one and left the other ನಾನು ಒಂದನ್ನು ತೆಗೆದುಕೊಂಡೆ ಇನ್ನೊಂದನ್ನು ಬಿಟ್ಟುಬಿಟ್ಟೆ.
See also 1one  2one
3one ವನ್‍
ಸರ್ವನಾಮ

(ಷಷ್ಠೀ ವಿಭಕ್ತಿ one’s; ದ್ವಿತೀಯಾ one; ಆತ್ಮಾರ್ಥಕ oneself).

  1. (ಇಂತಹ) ಒಬ್ಬ; ಒಂದು; ಹೆಸರಿಸಿದ ಯಾ ಬಣ್ಣಿಸಿದ ಬಗೆಯ (ಯಾವನೇ, ಯಾವುದೇ) ವಸ್ತು ಯಾ ವ್ಯಕ್ತಿ: little ones
    1. ಚಿಕ್ಕವರು; ಚಿಣ್ಣರು; ಸಣ್ಣವರು; ಪುಟಾಣಿಗಳು.
    2. ಚಿಕ್ಕವು; ಸಣ್ಣವು; ಪುಟ್ಟವು; ಮರಿಗಳು: dear ones ಪ್ರಿಯರಾದವರು; ಪ್ರಿಯವಾದವು. behaved like one frenzied ಆವೇಶಗೊಂಡವನಂತೆ, ಉನ್ಮತ್ತನಂತೆ ವರ್ತಿಸಿದ. what a one he is for making excuses! ಸಬೂಬು ಹೇಳುವುದರಲ್ಲಿ ಎಂಥಾ ಆಸಾಮಿ ನೆವ ಹೇಳುವುದರಲ್ಲಿ ಎಷ್ಟು ನಿಸ್ಸೀಮ! he was one who had an eye for such mysteries ಅಂತಹ ವಿಚಿತ್ರ ರಹಸ್ಯಗಳನ್ನು ಗುರುತಿಸುವವರಲ್ಲಿ ಅವನೂ ಒಬ್ಬ. I bought it from one Srinivas ಶ್ರೀನಿವಾಸ ಎಂಬ ಒಬ್ಬನಿಂದ ನಾನದನ್ನು ಕೊಂಡುಕೊಂಡೆ. like one possessed ದೆವ್ವ ಮೆಟ್ಟಿದವನಂತೆ.
  2. (ಇಂಥವನೆಂದು ಹೇಳಿಲ್ಲದ) ಒಬ್ಬ; ಯಾವನೋ ವ್ಯಕ್ತಿ: one came running ಓಡುತ್ತಾ ಬಂದ ಒಬ್ಬ. one is bound to lose in the end ಒಬ್ಬನು ಕೊನೆಯಲ್ಲಿ ಸೋಲಲೇ ಬೇಕು.
  3. (ಅನಿರ್ದೇಶಕ ಸರ್ವನಾಮ) ಕೆಲವೊಮ್ಮೆ ಯಾರೇ ಆಗಲಿ, ಒಬ್ಬ, ಒಬ್ಬಳು: if one cuts off one’s nose, one hurts only oneself ಯಾವನೇ ಆಗಲಿ ತನ್ನ ಮೂಗನ್ನು ತಾನೇ ಕತ್ತರಿಸಿಕೊಂಡರೆ, ತನ್ನನ್ನೇ ಗಾಯಗೊಳಿಸಿಕೊಳ್ಳುತ್ತಾನೆ, ಗಾಸಿಗೊಳಿಸಿಕೊಳ್ಳುತ್ತಾನೆ, ಅಷ್ಟೆ. it offends on to be told one is not wanted ತಾನು ಬೇಕಾಗಿಲ್ಲ, ತನ್ನ ಅಗತ್ಯವಿಲ್ಲ, ಎಂದು ಯಾರಾದರೂ ಹೇಳಿದರೆ ಯಾರಿಗೇ ಆಗಲಿ ನೋವಾಗುತ್ತದೆ. one would like to help ಯಾರೇ ಆಗಲಿ ಸಹಾಯ ಮಾಡಲು ಇಷ್ಟ ಪಡುತ್ತಾರೆ.
  4. (ಆಡುಮಾತು) ನಾನು: one let it pass, for one did not want to seem mean ನಾನು ಅಲ್ಪಬುದ್ಧಿಯವನೆಂದು ತೋರಲೊಲ್ಲದೆ ನಾನು ಅದನ್ನು ಹೋಗಲಿ ಎಂದು ಬಿಟ್ಟುಬಿಟ್ಟೆ [(ಬ್ರಿಟಿಷ್‍ ಪ್ರಯೋಗ) one ಶಬ್ದದ ಈ ಪ್ರಯೋಗದಲ್ಲಿ, ಅದರ ಬದಲು he, she ಶಬ್ದಗಳನ್ನು ಬಳಸಬಾರದು. (ಬ್ರಿಟಿಷ್‍ ಪ್ರಯೋಗ) ಪ್ರಾಚೀನ ಪ್ರಯೋಗದಲ್ಲಿ one ಬದಲು he, she ಗಳ ಬಳಕೆ ಇತ್ತು. (ಅಮೆರಿಕನ್‍ ಪ್ರಯೋಗ) one ಗೆ ಬದಲು he, she ಗಳನ್ನು ಬಳಸಬಹುದು].
ಪದಗುಚ್ಛ
  1. the Evil One ಸೈತಾನ.
  2. the Holy One, One above ದೇವರು; ಭಗವಂತ; ಪರಮಾತ್ಮ.
  3. many a one ಬಹುಜನರು; ಬಹುಮಂದಿ.