See also 2on  3on  4on
1on ಆನ್‍
ಉಪಸರ್ಗ

( ಪದಗುಚ್ಛಗಳಲ್ಲಿ upon ಎಂಬುದರ ಬಳಕೆ ಹೆಚ್ಚು).

  1. ಮೇಲೆ; ಮೇಲ್ಗಡೆ; ಉಪರಿ; ಒಂದಕ್ಕೆ ತಗುಲಿದಂತೆ, ಅದರ ಮೇಲೆ ಯಾ ಅದರ ಆಧಾರದಿಂದ ಯಾ ಒಂದನ್ನು ಆವರಿಸಿದಂತೆ ಯಾ ಸುತ್ತುವರಿದಂತೆ: floats on the water ನೀರಿನ ಮೇಲೆ ತೇಲುತ್ತದೆ. sat on a chair ಕುರ್ಚಿಯ ಮೇಲೆ ಕುಳಿತ. stuck on the wall ಗೋಡೆಗೆ ಅಂಟಿಕೊಂಡಿತು. rings on her fingers ಅವಳ ಬೆರಳುಗಳಲ್ಲಿನ ಉಂಗುರಗಳು. leaned on his elbow ಮೊಣಕೈ ಮೇಲೆ ಊರಿಕೊಂಡ. a scholar on the foundation ಆ ಸಂಸ್ಥೆಯಿಂದ ವೇತನ ಪಡೆಯುವ ವಿದ್ಯಾರ್ಥಿ. the dog is on the chain ನಾಯಿಯನ್ನು ಸರಪಣಿಯಿಂದ ಕಟ್ಟಿದೆ.
  2. ವ್ಯಕ್ತಿಯ ಬಳಿ, ಹತ್ತಿರ; ಒಯ್ಯುತ್ತಾ: have you a pen on you? ನಿನ್ನ ಹತ್ತಿರ ಒಂದು ಪೆನ್ನ್‍ ಇದೆಯೆ?
  3. (ಕಾಲದ ವಿಷಯದಲ್ಲಿ) ಆಗ; ಆವಾಗ; ಅಂದು; ಆ–ಅವಧಿಯಲ್ಲಿ, ಕಾಲದಲ್ಲಿ, ಸಮಯದಲ್ಲಿ; ಆ ನಡುವೆ; ಅಂತರದಲ್ಲಿ; (ಕಾಲಕ್ಕೆ) ಸರಿಯಾಗಿ; ಒಂದು ಘಟನೆ ನಡೆಯುತ್ತಿದ್ದಾಗ: on 29 May ಮೇ ಇಪ್ಪತ್ತೊಂಭತ್ತರಂದು. on the hour ಆ ಘಂಟೆಯಲ್ಲಿಯೇ, ಸಮಯದಲ್ಲಿಯೇ on the instant ಆ ಕ್ಷಣದಲ್ಲೇ, on schedule ಗೊತ್ತಾದ ಕಾಲಕ್ಕೆ ಸರಿಯಾಗಿ working on Tuesday ಮಂಗಳವಾರದಂದು ಕೆಲಸಮಾಡುತ್ತ.
  4. (ಆ)ಕೂಡಲೇ; ಆದ ಕೂಡಲೇ; ಒಂದು ಘಟನೆಯ ಮೊದಲು ಯಾ ಅನಂತರ: I saw them on my return ವಾಪಸಾದ ಕೂಡಲೇ ಅವರನ್ನು ನೋಡಿದೆ.
  5. (ಒಂದರ) ಪರಿಣಾಮವಾಗಿ; ಫಲವಾಗಿ; ಫಲಿತಾಂಶವಾಗಿ: on further examination I found this ಇನ್ನಷ್ಟು ಪರಿಶೀಲಿಸಿದ ನಂತರ ನನಗೆ ಇದು ತಿಳಿಯಿತು.
  6. ಯಾವುದಾದರೂ ಸದಸ್ಯತ್ವ ಮೊದಲಾದವು ಇರುವಂತೆ, ಒಂದು ಕಡೆ ಮನೆ, ನಿವಾಸ ಇರುವಂತೆ: she is on the board of directors ಅವಳು ನಿರ್ದೇಶಕ ಮಂಡಲಿಯಲ್ಲಿ ಸದಸ್ಯಳಾಗಿದ್ದಾಳೆ. lives on the island ಆ ದ್ವೀಪದಲ್ಲಿ ವಾಸಿಸುತ್ತಾನೆ(ಳೆ).
  7. ಆರ್ಥಿಕ–ಆಧಾರದ, ಆಶ್ರಯದ, ನೆರವಿನ, ಬೆಂಬಲದ ಮೇಲೆ: lives on Rs. 250 a month ತಿಂಗಳಿಗೆ 250 ರೂ. ಗಳ ಮೇಲೆ ಜೀವಿಸುತ್ತಾನೆ. lives on his wits ತನ್ನ ಬುದ್ಧಿವಂತಿಕೆಯ ಆಧಾರದ ಮೇಲೆ ಬದುಕು ನಡೆಸುತ್ತಾನೆ.
  8. ಹತ್ತಿರ; ಸಮೀಪ; ಬಳಿ ಸನಿಹದಲ್ಲಿ: house is on the shore ಮನೆ ಕಡಲ ತೀರದಲ್ಲಿ ಇದೆ. a house on the river ಮನೆ ನದಿ ತೀರದಲ್ಲಿದೆ. lives on the main road ಪ್ರಧಾನ ರಸ್ತೆಯ ಬಳಿ ವಾಸಿಸುತ್ತಾನೆ(ಳೆ).
  9. ಆದಿಕ್ಕಿನಲ್ಲಿ; ಕಡೆ(ಗೆ); ಎದುರಾಗಿ: on the right ಬಲಗಡೆ(ಗೆ). bowling is on the wicket ಬೋಲಿಂಗನ್ನು ವಿಕೆಟ್ಟಿನ ಕಡೆಗೇ (ವಿಕೆಟ್ಟಿಗೆ ನೇರವಾಗಿ) ಮಾಡುತ್ತಿದ್ದಾನೆ.
  10. ಬೆದರಿಸುವಂತೆ; ಹೆದರಿಸುವಂತೆ; ಮುಟ್ಟುವಂತೆ ಯಾ ತಾಗುವಂತೆ: pulled a knife on me ನನ್ನನ್ನು ಬೆದರಿಸುವಂತೆ ಚಾಕುವನ್ನೆಳೆದ. punched on the nose ಮೂಗಿನ ಮೇಲೆ ಒಂದು ಗುದ್ದು ಗುದ್ದಿದ.
  11. -ರ ಮೇಲೆ; ಅಕ್ಷದಂತೆ ಯಾ ತಿರುಗಾಣಿಯಂತೆ ಇರುವ; turned on his heels ಹಿಮ್ಮಡಿಯ ಮೇಲೆ ತಿರುಗಿದ. turns on a peg ಗೂಟದ ಮೇಲೆ ಸುತ್ತುತ್ತದೆ.
  12. -ಮೇಲೆ; ಒಂದನ್ನು ಆಧಾರವಾಗಿ ಯಾ ಉದ್ದೇಶವಾಗಿ ಇಟ್ಟುಕೊಂಡು: arrested on suspicion ಗುಮಾನಿಯ ಮೇಲೆ ದಸ್ತಗಿರಿ ಮಾಡಲ್ಪಟ್ಟು.
  13. ಆಧಾರದ ಮೇಲೆ; ಪ್ರಮಾಣಕವಾಗಿ, ದೃಢೀಕೃತವಾಗಿ ಯಾ ಖಾತ್ರಿಯಾಗಿ–ಹೊಂದಿರುವುದರ ಮೇಲೆ: had it on good authority ಸರಿಯಾದ ಆಧಾರದ ಮೇಲೆ ಪಡೆದಿದ್ದ. I promise on my word ನನ್ನ ಮಾತಿನ ಪ್ರಮಾದ ಮೇಲೆ ವಾಗ್ದಾನ ಮಾಡುತ್ತೇನೆ. based on a fact ಸತ್ಯಾಂಶದ ಆಧಾರದ ಮೇಲೆ ಸ್ಥಾಪಿಸಿದ. on account of ಕಾರಣದಿಂದ; ದೆಸೆಯಿಂದ. swear on the Bible ಬೈಬಲಿನ ಮೇಲೆ ಶಪಥ ಮಾಡು; ಬೈಬಲನ್ನು ಪ್ರಮಾವಾಗಿಟ್ಟುಕೊಂಡು ಪ್ರಮಾಣ ಮಾಡು. borrowed money on his house ಅವನ ಮನೆಯ ಮೇಲೆ, ಮನೆಯನ್ನು ಆಧಾರವಾಗಿಟ್ಟು ಹಣವನ್ನು ಸಾಲ ತೆಗೆದುಕೊಂಡ.
  14. (ಒಂದರ) ಬಗೆಗೆ ಯಾ ವಿಷಯದಲ್ಲಿ; ಕುರಿತು: writes on frogs ಕಪ್ಪೆಗಳನ್ನು ಕುರಿತು, ಕಪ್ಪೆಗಳ ಮೇಲೆ ಬರೆಯುತ್ತಾನೆ.
  15. ಬಳಸಿಕೊಂಡು; ಯಾವುದೋ ಒಂದರಲ್ಲಿ ನಿರತನಾಗಿ, ಮಾಡುತ್ತಾ: is on the pill ಅವನು ಆ ಗುಳಿಗೆ ಬಳಸುತ್ತಾ ಇದ್ದಾನೆ. he is here on business ಕೆಲಸದ ಮೇಲೆ, ವ್ಯಾಪಾರಕ್ಕಾಗಿ ಇಲ್ಲಿಗೆ ಬಂದಿದ್ದಾನೆ.
  16. ಪರಿಣಾಮ, ಪ್ರಭಾವ ಬೀರುವಂತೆ: walked out on her ಅವಳನ್ನು ತೊರೆದು ಹೊರಟು ಹೋದ.
  17. ಒಬ್ಬನಿಗೆ ಸಂಬಂಧಿಸಿದಂತೆ; ಒಬ್ಬನನ್ನು ಕುರಿತಂತೆ: the joke is on him ಹಾಸ್ಯ ಅವನನ್ನು ಕುರಿತದ್ದು. the drinks are on me ಕುಡಿತದ ಖರ್ಚು–ನನ್ನದು, ನನಗೆ ಸೇರಿದ್ದು, ನನಗಿರಲಿ, ನನ್ನ ಪಾಲಿಗಿರಲಿ, ನಾನು ಕೊಡುತ್ತೇನೆ, ವಹಿಸಿಕೊಳ್ಳುತ್ತೇನೆ.
  18. ಒಂದಕ್ಕೊಂದು ಕೂಡಿ, ಸೇರಿ: ruin on ruin ವಿನಾಶದ ಮೇಲೆ ವಿನಾಶ. heaps on heaps ರಾಶಿಯ ಮೇಲೆ ರಾಶಿ. disaster on disaster ಆಪತ್ತಿನ ಮೇಲೆ ಆಪತ್ತು.
  19. (ಒಂದು ಗೊತ್ತಾದ ಯಾ ನಿರ್ದಿಷ್ಟ) ರೀತಿಯಲ್ಲಿ; ಸ್ಥಿತಿಯಲ್ಲಿ; ಕ್ರಿಯೆಯಲ್ಲಿ (ತೊಡಗಿ) (ಸಾಮಾನ್ಯವಾಗಿ the $+$ ಗುಣವಾಚಕ ಯಾ ನಾಮವಾಚಕ ದೊಡನೆ): on the cheap ಅಗ್ಗವಾಗಿ. on the run ಓಡುತ್ತಾ.
ಪದಗುಚ್ಛ
  1. be binding on (ಒಬ್ಬನನ್ನು) ಕಟ್ಟುಬೀಳಿಸು; ಬದ್ಧನನ್ನಾಗಿಸು.
  2. bent on ದೃಢಸಂಕಲ್ಪ ಹೊಂದಿ.
  3. be on one’s best behaviour ಒಳ್ಳೆಯ ನಡತೆ, ವರ್ತನೆ ತೋರು; ಅತ್ಯುತ್ತಮವಾಗಿ ನಡೆದುಕೊ.
  4. be on one’s knees ಮಂಡಿಯೂರು, ಡೊಗ್ಗಾಲುಹಾಕು; ಒಬ್ಬನ ಕಾಲಿಗೆ ಬೀಳು, ಎರಗು: he is on his knees before the king ಅವನು ರಾಜನ ಕಾಲಿಗೆ ಎರಗಿದ್ದಾನೆ.
  5. be on one’s legs ಎದ್ದುನಿಲ್ಲು; ತನ್ನ ಕಾಲ ಮೇಲೆ ನಿಲ್ಲು: he is on his legs ಅವನು ಎದ್ದು ನಿಂತಿದ್ದಾನೆ.
  6. be on the horns of a dilemma ಉಭಯ ಸಂಕಟಕ್ಕೆ, ಇಕ್ಕೋಡಿಗೆ, ಇಕ್ಕಟ್ಟಿಗೆ–ಸಿಕ್ಕಿಬಿದ್ದಿರು: he is on the horns of dilemma ಅವನು ಒಂದು ಉಭಯಸಂಕಟಕ್ಕೆ, ಇಕ್ಕೋಡಿಗೆ ಸಿಕ್ಕಿಬಿದ್ದಿದ್ದಾನೆ.
  7. condole with him on his loss ಅವನಿಗುಂಟಾಗಿದ್ದ ನಷ್ಟಕ್ಕಾಗಿ ಅವನಿಗೆ ಸಂತಾಪವನ್ನು ಸೂಚಿಸು.
  8. confer (something) on (ಯಾವುದೇ ಕೊಡುಗೆಯನ್ನು) ಒಬ್ಬನಿಗೆ ನೀಡು: title was conferred on him ಅವನಿಗೆ ಬಿರುದನ್ನು ನೀಡಲಾಯಿತು.
  9. determined on = ಪದಗುಚ್ಛ\((2)\).
  10. $^1$gone on.
  11. go on an errand ಒಂದು ಕೆಲಸದ ಮೇಲೆ, ಒಂದು ಉದ್ದೇಶಕ್ಕಾಗಿ ಹೋಗು.
  12. have something on a person ಒಬ್ಬನ ಮೇಲೆ ಏನೋ ಇರು; ಒಬ್ಬನ ವಿರುದ್ಧ ಏನೋ ಕಾರಣ ಇರು.
  13. keen on ತೀವ್ರ ಆಸಕ್ತಿ ಹೊಂದಿ.
  14. live on ಒಂದರ ಆಧಾರದಿಂದ: he lives on an annuity ಅವನು ವರ್ಷಾಶನದ ಮೇಲೆ ಜೀವಿಸಿದ್ದಾನೆ.
  15. mad on ಹುಚ್ಚು ಹುಚ್ಚು ಪ್ರೀತಿ ಯಾ ಆಶೆ ಹೊಂದಿ.
  16. on fire ಬೆಂಕಿ ಹೊತ್ತಿಕೊಂಡು.
  17. on guard
    1. ಕಾವಲಿನಲ್ಲಿ; ಕಾವಲು ಕಾಯುತ್ತ.
    2. ಜಾಗರೂಕನಾಗಿ.
  18. on loan ಸಾಲವಾಗಿ; ಕಡವಾಗಿ.
  19. on one ತನ್ನಲ್ಲಿ; ನಿನ್ನಲ್ಲಿ; ಒಬ್ಬನ–ಬಳಿ, ಹತ್ತಿರ: have you a match on you ನಿನ್ನಲ್ಲಿ ಒಂದು ಬೆಂಕಿಕಡ್ಡಿ ಇದೆಯೇ?
  20. on one’s way ತಾನು ಹೋಗುತ್ತಿರುವ ದಾರಿಯಲ್ಲಿ.
  21. on strike ಮುಷ್ಕರ ಹೂಡಿ.
  22. on the look-out
    1. ಕಾವಲಿನಲ್ಲಿ.
    2. ಜಾಗರೂಕನಾಗಿ.
  23. on the sly ಕಣ್ಣಿಗೆ ಬೀಳದಂತೆ; ಕಣ್ಣಿಗೆ ಮರೆಯಾಗಿ.
  24. on the square ನ್ಯಾಯವಾಗಿ; ಪ್ರಾಮಾಣಿಕವಾಗಿ.
  25. on the watch = ಪದಗುಚ್ಛ\((22)\).
  26. set on ತೀವ್ರವಾಗಿ ಬಯಕೆ ಹೊಂದಿ.
  27. tell on ಕೆಟ್ಟಪರಿಣಾಮ ಬೀರು, ಮಾಡು; ಹಾನಿ ಉಂಟುಮಾಡು: the work tells severely on him ಆ ಕೆಲಸ ಅವನ ಮೇಲೆ ತೀವ್ರ ದುಷ್ಪರಿಣಾಮವನ್ನುಂಟುಮಾಡುತ್ತದೆ.
  28. travel on foot ಕಾಲ್ನಡಗೆಯಲ್ಲಿ ಪ್ರಯಾಣ ಮಾಡು.
  29. travel on wheels ವಾಹನದಲ್ಲಿ ಪ್ರಯಾಣಮಾಡು.
  30. tread on air ಉಲ್ಲಾಸಭರಿತನಾಗಿರು; ಆನಂದಭರಿತನಾಗಿರು.
  31. tread on one’s toes (or corns) ಒಬ್ಬನ ಮನಸ್ಸನ್ನು ನೋಯಿಸು; ಗಾಯದ ಮೇಲೆ ಬರೆ ಎಳೆ.
See also 1on  3on  4on
2on ಆನ್‍
ಕ್ರಿಯಾವಿಶೇಷಣ
  1. (ಮುಖ್ಯವಾಗಿ ಬಟ್ಟೆಗಳ ವಿಷಯದಲ್ಲಿ) ಮೇಲೆ; ಮೇಲಕ್ಕೆ; ಮೇಲುಗಡೆ(ಯಲ್ಲಿ); (ಒಂದರ) ಆಧಾರದ ಮೇಲೆ; (ಒಂದಕ್ಕೆ ತಗುಲಿದಂತೆ ಅದರ) ಮೇಲೆ; ಆಧಾರವನ್ನು ಮುಚ್ಚಿಕೊಂಡು, ಆವರಿಸಿಕೊಂಡು ಅದರ ಮೇಲೆ: put the tablecloth on ಮೇಜಿನ ಹಾಸನ್ನು ಅದರ ಮೇಲೆ ಹರಡು. drew his boots on ತನ್ನ ಬೂಟುಗಳನ್ನು ಕಾಲಿನ ಮೇಲಕ್ಕೆ ಎಳೆದುಕೊಂಡ. on with your coat ನಿನ್ನ ಅಂಗಿಯನ್ನು ಧರಿಸು, ಹಾಕಿಕೊ.
  2. ಯಾವುದೇ ಕಡೆಗೆ; ಸರಿಯಾದ ದಿಕ್ಕಿಗೆ: look on (ಆ) ಕಡೆ ನೋಡು.
  3. ಮುಂದಕ್ಕೆ; ಇನ್ನೂ ಮುಂದಕ್ಕೆ; ಅಗ್ರಸ್ಥಾನದಲ್ಲಿ; ಮುಂದುವರಿದ ಸ್ಥಾನದಲ್ಲಿ ಯಾ ಸ್ಥಿತಿಯಲ್ಲಿ: time is getting on ಕಾಲ ಮುಂದೆ ಮುಂದೆ ಹೋಗುತ್ತಿದೆ. it happened later on ಅದು ಆಮೇಲೆ ನಡೆಯಿತು.
  4. ಎಡೆಬಿಡದೆ ನಡೆಯುತ್ತ; ಸತತವಾಗಿ ಮುಂದುವರೆಯುತ್ತಾ; ನಿರಂತರ ಚಲನೆಯಿಂದ ಯಾ ಕ್ರಿಯೆಯಿಂದ ಕೂಡಿ: getting on for two o’clock ಹತ್ತಿರ ಹತ್ತಿರ ಎರಡು ಗಂಟೆಗೆ ಬರುತ್ತಿದೆ. keeps on complaining ದೂರುತ್ತಲೇ ಇರುತ್ತಾನೆ(ಳೆ).
  5. ಕಾರ್ಯಮಾಡುತ್ತ; ಕೆಲಸ ಮಾಡುತ್ತ: the light is on ದೀಪ ಉರಿಯುತ್ತಿದೆ. the chase was on ಬೆನ್ನಟ್ಟುವಿಕೆ ಮುಂದುವರೆದಿತ್ತು.
  6. ಯೋಜಿಸಿದ ರೀತಿಯಲ್ಲಿ–ನಡೆಯುವಂತೆ, ಆಗುವಂತೆ, ಜರುಗುವಂತೆ: is the party still on? ಕೂಟ ಯೋಜಿಸಿದಂತೆ ಜರುಗುವುದೇ?
  7. (ಆಡುಮಾತು) (ವ್ಯಕ್ತಿಯ ವಿಷಯದಲ್ಲಿ) ಭಾಗವಹಿಸಲು ಯಾ ಒಪ್ಪಲು ಯಾ ಬಾಜಿ ಕಟ್ಟಲು ಯಾ ಪಂಥ ಒಡ್ಡಲು–ಇಷ್ಟವಿರುವಂತೆ, ಮನಸ್ಸಿರುವಂತೆ ಯಾ ಸಿದ್ಧವಿರುವಂತೆ: there is a show to night, are you on? ಈ ರಾತ್ರಿ ಒಂದು ಪ್ರದರ್ಶನ ಇದೆ; ಅದಕ್ಕೆ ಬರಲು ನಿನಗೆ ಮನಸ್ಸಿದೆಯೇ?
  8. (ಆಡುಮಾತು)
    1. (ಭಾವನೆ, ಪ್ರಸ್ತಾವ, ಮೊದಲಾದವುಗಳ ವಿಷಯದಲ್ಲಿ) ಸಾಧ್ಯವಾಗಿ, ಪ್ರಯೋಗಾರ್ಹವಾಗಿ: that’s just not on ಅದು ಸಾಧ್ಯವೇ ಇಲ್ಲ.
    2. ಒಪ್ಪಿಗೆಯಾಗುವಂತೆ; ಅಂಗೀಕಾರಾರ್ಹವಾಗಿ.
  9. ನಡೆಯುತ್ತಾ; ಪ್ರದರ್ಶಿತವಾಗುತ್ತಾ: ‘Macbeth’ is on ‘ಮ್ಯಾಕ್‍ಬೆತ್‍’ ನಾಟಕ ನಡೆಯುತ್ತಿದೆ. a good film is on to-night ಇಂದು ರಾತ್ರಿ ಒಳ್ಳೆಯ ಸಿನಿಮಾ ಪ್ರದರ್ಶಿತವಾಗುತ್ತದೆ.
  10. (ನಟನ ವಿಷಯದಲ್ಲಿ) ರಂಗದ ಮೇಲೆ (ಅಭಿನಯಿಸುತ್ತ).
  11. (ನೌಕರನ ವಿಷಯದಲ್ಲಿ) ಕರ್ತವ್ಯದ ಮೇಲೆ; ಕೆಲಸ ಮಾಡುತ್ತ; ಕರ್ತವ್ಯದಲ್ಲಿ ತೊಡಗಿ.;
  12. ಮುಂದೆ; ಮುಂದಕ್ಕೆ: go on ಮುಂದೆ ನಡೆ; ಮುಂದುವರಿ. come on ಮುಂದೆ ಬಾ; ಹತ್ತಿರ ಬಾ. (ಅಧ್ಯಾಹಾರ ಪ್ರಯೋಗ) on Ram on ಮುಂದೆ ನಡೆ, ರಾಮ, ನಡೆ ಮುಂದೆ. head on ಎದುರುಬದುರಾಗಿ; ನೇರ ಮುಖಾಮುಖಿಯಾಗಿ.
ಪದಗುಚ್ಛ
  1. be on (ಆಡುಮಾತು)
    1. ಭಾಗವಹಿಸಲು ಯಾ ಅಂಗೀಕರಿಸಲು ಇಷ್ಟಹೊಂದಿರು.
    2. ಪಂಥಹೂಡು; ಬಾಜಿಕಟ್ಟು.
    3. ಪ್ರಯೋಗಾರ್ಹವಾಗಿ ಯಾ ಅಂಗೀಕಾರಾರ್ಹವಾಗಿ ಇರು; ಮಾಡುವಂತಿರು ಯಾ ಒಪ್ಪಿಗೆಯಾಗುವಂತಿರು.
  2. be on about (ಆಡುಮಾತು) (ಮುಖ್ಯವಾಗಿ ಬೇಜಾರಾಗುವಂತೆ ಯಾ ಮತ್ತೆಮತ್ತೆ) ಪ್ರಸ್ತಾಪಿಸು ಯಾ ಚರ್ಚಿಸು.
  3. be on at (ಆಡುಮಾತು) ಕಾಡು ಯಾ ಗೊಣಗುಟ್ಟು.
  4. be on to
    1. ಗಮನಿಸು; ನೋಡು.
    2. ಮಹತ್ವವನ್ನು ಯಾ ಉದ್ದೇಶವನ್ನು ಮನಗಾಣು, ಅರಿ.
    3. (ಮುಖ್ಯವಾಗಿ ದೂರವಾಣಿಯ ಮೂಲಕ) ಸಂಪರ್ಕಿಸು; ಸಂಪರ್ಕ ಪಡೆದುಕೊ.
  5. be on to (person)
    1. ಒಬ್ಬನ ಉದ್ದೇಶ ಮೊದಲಾದವನ್ನು ಅರಿತುಕೊಂಡಿರು.
    2. (ಒಬ್ಬನಲ್ಲಿ) ತಪ್ಪು ಕಂಡುಹಿಡಿ; (ಒಬ್ಬನನ್ನು) ಆಕ್ಷೇಪಿಸು: he’s always on to me ಅವನು ನನ್ನನ್ನು ಸದಾ ಆಕ್ಷೇಪಿಸುತ್ತಲೇ ಇರುತ್ತಾನೆ.
  6. broadside on (ನೌಕಾಯಾನ) ಹಡಗಿನ ಪಕ್ಕವನ್ನು ಮುಂದಕ್ಕೆ ತಿರುಗಿಸಿ; ಹಡಗಿನ ಪಕ್ಕ ಮುಂದಾಗಿ.
  7. drove Jones on for four (ಕ್ರಿಕೆಟ್‍ನಲ್ಲಿ) ಜೋನ್ಸನು ಬೋಲ್‍ ಮಾಡಿದ್ದನ್ನು ‘ಆನ್‍’ ಸೈಡ್‍ಗೆ ನಾಲ್ಕು ರನ್ನು ಹೊಡೆದ.
  8. end on = ಪದಗುಚ್ಛ\((6)\).
  9. from that day on ಅಂದಿನಿಂದ ಮುಂದಕ್ಕೆ.
  10. gas is on ಅನಿಲ ಹರಿಯುತ್ತಿದೆ, ಬರುತ್ತಿದೆ.
  11. is rather on (ಅಶಿಷ್ಟ) ಅವನಿಗೆ ಸ್ವಲ್ಪ ಏರಿದೆ; ಅವನಿಗೆ ಅಮಲೇರಿದೆ.
  12. on and off ಬಿಟ್ಟು ಬಿಟ್ಟು; ಆಗಾಗ; ಮಧ್ಯೆಮಧ್ಯೆ; ನಡುನಡುವೆ.
  13. on and on ಉದ್ದಕ್ಕೂ; ನಿರಂತರವಾಗಿ; ಸತತವಾಗಿ; ಒಂದೇ ಸಮನಾಗಿ; ಬೇಜಾರಾಗುವಷ್ಟು.
  14. on time
    1. ಸಕಾಲಕ್ಕೆ; ಕಾಲಕ್ಕೆ ಸರಿಯಾಗಿ.
    2. ಸಕಾಲದಲ್ಲಿಯ; ಹೊತ್ತುಮೀರದ.
  15. on to ಒಂದು ಸ್ಥಳಕ್ಕೆ, ಪರಿಸ್ಥಿತಿಗೆ ಯಾ ಸಂಪರ್ಕಕ್ಕೆ: ran on to the road ರಸ್ತೆಗೆ, ರಸ್ತೆಯ ಮೇಲಕ್ಕೆ ಓಡಿದ.
  16. slow bowler is on ನಿಧಾನ ಬೋಲರ್‍ ಈಗ ಬಂದಿದ್ದಾನೆ, ಆಡುತ್ತಿದ್ದಾನೆ.
  17. speak on ಹೇಳು ಮುಂದೆ; ಹೇಳುವುದನ್ನು ಮುಂದುವರೆಸು.
  18. struggle on to the end ಕೊನೆಯವರೆಗೂ ಹೋರಾಡುತ್ತಾ ಹೋಗು.
  19. was well on in the day ಹಗಲು ಚೆನ್ನಾಗಿ ಏರಿತ್ತು, ಸಾಕಷ್ಟು ಸಾಗಿತ್ತು.
See also 1on  2on  4on
3on ಆನ್‍
ಗುಣವಾಚಕ

(ಕ್ರಿಕೆಟ್‍)‘ಆನ್‍’ ಕಡೆಯ; (ಬಲಗೈ) ಬ್ಯಾಟುಗಾರನ ವಿಕೆಟ್ಟಿಗೆ ಎಡಗಡೆಯ ಮೈದಾನದ, ಮೈದಾನದ ಕಡೆಯ: an on drive (ಬಲಗೈ, ಬ್ಯಾಟುಗಾರನು ಚೆಂಡನ್ನು ತನ್ನ) ವಿಕೆಟ್ಟಿನ ಎಡಗಡೆಯ ಮೈದಾನಕ್ಕೆ ಹೊಡೆದ ಹೊಡೆತ; ಆನ್‍ ಡ್ರೈವ್‍.

See also 1on  2on  3on
4on ಆನ್‍
ನಾಮವಾಚಕ

(ಕ್ರಿಕೆಟ್‍) ‘ಆನ್‍’; (ಬಲಗೈ) ಬ್ಯಾಟುಗಾರನ ವಿಕೆಟ್ಟಿನ ಎಡಭಾಗ, ಎಡಗಡೆಯ ಮೈದಾನ ಯಾ ಎಡಗೈ ಆಟಗಾರನ ಬಲಗಡೆಯ ಮೈದಾನ: a fine drive to the on ‘ಆನ್‍’ ಕಡೆಗೆ ಒಳ್ಳೆಯ ಹೊಡೆತ.