See also 2offer
1offer ಆಹರ್‍
ಸಕರ್ಮಕ ಕ್ರಿಯಾಪದ
  1. ಕೊಡು; ನೀಡು; ಕೈ ನೀಡಿ ಕೊಡು ಯಾ ಮಾತಿನ ಮೂಲಕ ವ್ಯಕ್ತಪಡಿಸು: he offered me his book ಅವನು ನನಗೆ ತನ್ನ ಪುಸ್ತಕ ಕೊಟ್ಟ. he offers no apology ಅವನು ಪಶ್ಚಾತ್ತಾಪ ವ್ಯಕ್ತಪಡಿಸುವುದಿಲ್ಲ.
  2. ಒದಗಿಸು; ದೊರಕಿಸು ಕೊಡು; ಅವಕಾಶ ಸಿಗುವಂತೆ ಮಾಡು.
  3. ಮಾರಾಟಕ್ಕಿಡು: offers the house for sale ಮನೆಯನ್ನು ಮಾರಾಟಕ್ಕಿಡುತ್ತಾನೆ.
  4. (ವಸ್ತುವಿನ ವಿಷಯದಲ್ಲಿ) ಮುಂದಿಡು; ಎದುರಿಗಿಡು; ದೃಷ್ಟಿಗೆ, ಗಮನಕ್ಕೆ–ತರು: each age offers its characteristic riddles ಪ್ರತಿ ಯುಗವೂ ಅದರದರ ವಿಶಿಷ್ಟ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. each day offers new opportunities ಪ್ರತಿದಿನವೂ ಹೊಸ ಅವಕಾಶಗಳನ್ನು ಮುಂದಿಡುತ್ತದೆ.
  5. (ಬಲಿ, ಮೊದಲ ಫಲ, ಪ್ರಾರ್ಥನೆ, ಮೊದಲಾದವನ್ನು, ದೇವತೆ, ಪೂಜ್ಯ ವ್ಯಕ್ತಿ, ಮೊದಲಾದವರಿಗೆ) ಒಪ್ಪಿಸು; ಅರ್ಪಿಸು; ನಿವೇದಿಸು; ಭಕ್ತಿಯಿಂದ ಕೊಡು; ಪೂಜೆಯಾಗಿ ಸಮರ್ಪಿಸು; ಆಹುತಿಯಾಗಿ ಕೊಡು.
  6. ಕಾಳಗ, ಯುದ್ಧ–ಹೂಡು; ಯುದ್ಧ ಮಾಡಲು ಶತ್ರುವಿಗೆ ಅವಕಾಶ ನೀಡು: Darius offered battle to the enemy ಡೇರಿಯಸ್‍ ಶತ್ರುವಿನ ಮೇಲೆ ಕಾಳಗ ಹೂಡಿದ.
  7. (ಬಲ ಪ್ರಯೋಗ, ಪ್ರತಿಭಟನೆ, ಮೊದಲಾದವನ್ನು) ತೋರು; ತೋರಲು ಯತ್ನಿಸು: the enemy offered serious resistance ಶತ್ರು ಪ್ರಬಲವಾದ ಪ್ರತಿಭಟನೆ ತೋರಿಸಿದ.
ಅಕರ್ಮಕ ಕ್ರಿಯಾಪದ
  1. (ಅಪೇಕ್ಷೆ ಪಟ್ಟರೆ ಮಾಡಲು) ಸಿದ್ಧನಾಗಿರುವೆನೆಂದು ಸೂಚಿಸು, ಹೇಳು: I offered to go to the king ನಾನು ರಾಜನ ಬಳಿ ಹೋಗಲು ಬೇಕಾಗಿದ್ದರೆ ಸಿದ್ಧನಿರುವೆನೆಂದು ಹೇಳಿದೆ.
  2. ಕಾಣಿಸಿಕೊ; ಕಾಣಿಸಿಕೊಳ್ಳು: there offered to our eye, first the city of Mysore ಮೊಟ್ಟ ಮೊದಲನೆಯದಾಗಿ ನಮ್ಮ ಕಣ್ಣಿಗೆ ಮೈಸೂರು ನಗರ ಕಾಣಿಸಿತು.
  3. ಒದಗು; ಸಿಕ್ಕು; ದೊರಕು: whenever an occasion offered ಸಂದರ್ಭ ಒದಗಿದಾಗಲೆಲ್ಲಾ. as opportunity offers ಅವಕಾಶ ಸಿಕ್ಕಾಗ.
  4. (ಮಾಡುವ) ಉದ್ದೇಶ ತೋರು: offered to strike me ನನ್ನನ್ನು ಹೊಡೆಯಲು ಉದ್ದೇಶಿಸಿದ.
  5. (ಪ್ರಾಚೀನ ಪ್ರಯೋಗ) ಮದುವೆಯಾಗೆಂದು ಕೇಳು; ಮದುವೆಯ ಪ್ರಸ್ತಾಪ ಮಾಡು: he never hesitated to offer to a lady after a three days’ acquaintance ಕೇವಲ ಮೂರು ದಿನಗಳ ಪರಿಚಯದ ಅನಂತರ ತನ್ನನ್ನು ಮದುವೆಯಾಗೆಂದು ಒಬ್ಬ ಮಹಿಳೆಯನ್ನು ಕೇಳಲು ಅವನೆಂದೂ ಹಿಂಜರಿಯಲಿಲ್ಲ.
ಪದಗುಚ್ಛ
  1. offer an opinion ಅಭಿಪ್ರಾಯವನ್ನು ವ್ಯಕ್ತಪಡಿಸು, ತಿಳಿಸು, ನೀಡು.
  2. taken and offered (ಸಂಕ್ಷಿಪ್ತ t. & o.) (ಬಾಜಿ ಹಣ ಮೊದಲಾದವನ್ನು ಇಡುವಾಗ, ಸ್ವೀಕರಿಸುವಾಗ ಬಳಸುವ ಪದಗುಚ್ಛ) ತೆಗೆದುಕೊಂಡು ಕೊಡಲಾಗಿದೆ; ಒಪ್ಪಿಕೊಡಲಾಗಿದೆ.
See also 1offer
2offer ಆಹರ್‍
ನಾಮವಾಚಕ
  1. ವಾಗ್ದಾನ; ಮಾತು; ಅಪೇಕ್ಷೆಪಟ್ಟಲ್ಲಿ ಕೊಡಲು ಯಾ ಮಾಡಲು, ಯಾ ಒಪ್ಪಂದ ಮಾಡಿಕೊಂಡ ಯಾ ನಿಗದಿ ಪಡಿಸಿದ ಮೊತ್ತಕ್ಕೆ ಮಾರಲು ಯಾ ಕೊಳ್ಳಲು ಸಿದ್ಧನಿರುವೆನೆಂದು ಹೇಳುವುದು.
  2. ಒಪ್ಪಿದ ಬೆಲೆ; ಕೊಡಲು ಒಪ್ಪಿ ಹೇಳಿದ ಬೆಲೆ.
  3. (ಮುಖ್ಯವಾಗಿ ಮದುವೆಯ) ಪ್ರಸ್ತಾಪ.
  4. (ಹರಾಜಿನಲ್ಲಿ) ಬಿಡ್ಡು; ಸವಾಲು; ಕೂಗಿದ ಬೆಲೆ.
  5. ಪ್ರಯತ್ನ: made an offer to catch the ball ಚೆಂಡನ್ನು ಹಿಡಿಯುವ ಪ್ರಯತ್ನ ಮಾಡಿದ.
ಪದಗುಚ್ಛ

on offer (ಒಂದು ಗೊತ್ತುಪಡಿಸಿದ, ಮುಖ್ಯವಾಗಿ ಇಳಿಸಿದ, ಬೆಲೆಗೆ) ಮಾರಾಟಕ್ಕಿದೆ.