See also 2oar
1oar ಓರ್‍
ನಾಮವಾಚಕ
  1. (ದೋಣಿ ನಡೆಸುವ) ಹುಟ್ಟು; ತೊಳೆ; ಜಲ್ಲು; ಜಲ್ಲೆ.
  2. ಅಂಬಿಗ; ಹುಟ್ಟುಗಾರ; ಹುಟ್ಟುಹಾಕುವವನು; ತೊಳೆ ಒಚ್ಚುವವನು; ಜಲ್ಲು ಹಾಕುವವನು.
  3. (ರೂಪಕವಾಗಿ)
    1. ರೆಕ್ಕೆ.
    2. ಈಜು ರೆಕ್ಕೆ.
    3. (ಈಜುವಾಗ ಬೀಸುವ) ತೋಳು ಇತ್ಯಾದಿ.
ಪದಗುಚ್ಛ
  1. chained to the oar ಜಲ್ಲೆಗೆ ಕಟ್ಟಿಹಾಕಿದ; ಮೈ ಮುರಿಯುವಂತಹ ಹಾಗೂ ಬಹು ದೀರ್ಘ ಅವಧಿಯ ಕೆಲಸವನ್ನು ನಿರಂತರವಾಗಿ ಮಾಡಬೇಕಾದ ನಿರ್ಬಂಧಕ್ಕೆ ಸಿಕ್ಕಿ; ದೋಣಿಗೆ ಕಟ್ಟಿದ ಗುಲಾಮನಂತೆ ದುಡಿಯುವ ಕಟ್ಟುಪಾಡಿಗೊಳಗಾಗಿ.
  2. four-oar ನಾಲ್ಕು ಹುಟ್ಟಿನ ದೋಣಿ.
  3. have an oar in every man’s boat ಎಲ್ಲರ ವ್ಯವಹಾರದಲ್ಲೂ ತಲೆ ಹಾಕು, ಕೈಹಾಕು.
  4. lay (or lie) on one’s oars = ಪದಗುಚ್ಛ\((8)\).
  5. pair-oar ಜೋಡಿ ಹುಟ್ಟಿನ ದೋಣಿ.
  6. pulls a good oar ಒಳ್ಳೆಯ ಹುಟ್ಟುಗಾರ, ಅಂಬಿಗ.
  7. put in one’s oars ನಡುವೆ ತಲೆಹಾಕು; ಕೈಹಾಕು.
  8. rest on one’s oars ಮೈಮುರಿಯುವಂತಹ ದುಡಿಮೆಯ ಬಳಿಕೆ ತುಸು ಹೊತ್ತು ವಿಶ್ರಮಿಸು, ವಿಶ್ರಾಂತಿ ತೆಗೆದುಕೊ, ಕೆಲಸ ನಿಲ್ಲಿಸಿರು.
See also 1oar
2oar ಓರ್‍
ಸಕರ್ಮಕ ಕ್ರಿಯಾಪದ

(ಹುಟ್ಟು ಹಾಕಿ, ಜಲ್ಲು ಒಚ್ಚಿ) ದೋಣಿ ನಡೆಸು.

ಅಕರ್ಮಕ ಕ್ರಿಯಾಪದ

ಹುಟ್ಟುಹಾಕು; ತೊಳೆ ಒಚ್ಚು; ಜಲ್ಲು ಹಾಕು (ಕಾವ್ಯಪ್ರಯೋಗ).

ಪದಗುಚ್ಛ
  1. oar air (ಹುಟ್ಟುಹೊಡೆದಂತೆ) ಗಾಳಿಯನ್ನು ಸೀಳಿಕೊಂಡು ಹೋಗು.
  2. oar one’s arms(or hand) (ಹುಟ್ಟು ಹಾಕುವಂತೆ) ತೋಳುಗಳನ್ನು ಯಾ ಕೈಗಳನ್ನು ಬೀಸಿಕೊಂಡು ಹೋಗು.
  3. oar one’s way (ಹುಟ್ಟು ಹಾಕಿದಂತೆ, ಕೈಬೀಸಿ) ದಾರಿ ಮಾಡಿಕೊಂಡು ಹೋಗು.
  4. oar water
    1. ಹುಟ್ಟುಹಾಕಿ ನೀರನ್ನು ಸೀಳಿಕೊಂಡು ಹೋಗು.
    2. ಹುಟ್ಟುಹಾಕುವಂತೆ (ಕೈಕಾಲು ಹೊಡೆಯುವುದರಿಂದ ಯಾ ಬೀಸುವುದರಿಂದ) ನೀರನ್ನು ಸೀಳಿಕೊಂಡು ಹೋಗು.