See also 2oak
1oak ಓಕ್‍
ನಾಮವಾಚಕ
  1. ಓಕ್‍ ಮರ ಯಾ ಪೊದೆ; ಕ್ವೆರ್ಕಸ್‍ ಕುಲಕ್ಕೆ ಸೇರಿದ, ಹಾಲೆಗಳಂಥ ಎಲೆಗಳುಳ್ಳ, ಹಣ್ಣು ಬಿಡುವ ಒಂದು ಮರ ಯಾ ಪೊದೆ.
  2. ಓಕ್‍ (ಮರದ) ದಾರು; ಮುಖ್ಯವಾಗಿ ಪೀಠೋಪಕರಣ ಮತ್ತು ಕಟ್ಟಡಗಳಲ್ಲಿ ಬಳಸುವ ಗಟ್ಟಿಯಾದ, ಬೆಲೆಬಾಳುವ ಈ ಮರದ ದಾರು.
  3. (ಬ್ರಿಟಿಷ್‍ ಪ್ರಯೋಗ) (ವಿಶ್ವವಿದ್ಯಾನಿಲಯಗಳ ಕಾಲೇಜುಕೊಠಡಿಗಳ) ಹೊರಬಾಗಿಲು: sport one’s oak ಭೇಟಿಗಾರರನ್ನು ನಿಷೇಧಿಸಲು ಹೊರಬಾಗಿಲು ಹಾಕು, ಮುಚ್ಚು.
  4. (the Oaks) (ಏಕವಚನವಾಗಿ ಬಳಕೆ) ಓಕ್‍ (ಪಂದ್ಯ); ಇಂಗ್ಲೆಂಡಿನ ಎಪ್ಸಮ್‍ ನಗರದಲ್ಲಿ ನಡೆಯುವ ಮೂರು ವರ್ಷ ವಯಸ್ಸಿನ ಹೆಣ್ಣುಕುದುರೆ ಮರಿಗಳ ಜೂಜು.
  5. ಓಕ್‍ (ಮರದ) ಎಲೆಗಳು: oak is still worn on 29th May ಮೇ 29ರಂದು ಈಗಲೂ ಓಕ್‍ ಎಲೆಗಳನ್ನು ಧರಿಸಲಾಗುತ್ತದೆ.
  6. ಓಕ್‍ ಬಣ್ಣ; ಓಕ್‍ ಮರದ ಎಳೆಯೆಲೆಗಳ ಬಣ್ಣ.
ಪದಗುಚ್ಛ
  1. dwarf, ground, etc., oak ಓಕ್‍ ಮರವನ್ನು ಹೋಲುವ ಸಣ್ಣ ಗಾತ್ರದ ಗಿಡಗಳು.
  2. dyer’s holm, scarlet, etc., oak ವಿವಿಧ ಜಾತಿಯ ಓಕ್‍ ಮರಗಳು.
  3. oak-beauty, oak-egger, oak-lappet, oak-hook-tip ಓಕ್‍ ಎಲೆತಿಂದು ಬೆಳೆಯುವ ಯಾ ಓಕ್‍ ಎಲೆಗಳನ್ನು ಹೋಲುವ ಬಗೆಬಗೆಯ ಚಿಟ್ಟೆಗಳು.
  4. oak-fig, oak-plum, oak-potato, oak-spangle, oak-wart ಓಕ್‍ ಮರಗಳಲ್ಲಿ ಗಾಲ್‍ ಹ್ಲೈ ಎಂಬ ನೊಣಗಳಿಂದ ಆಗುವ ಬಗೆಬಗೆಯ ಗಂಟುಗಳು.
  5. the Oaks = 1oak(4).
See also 1oak
2oak ಓಕ್‍
ಗುಣವಾಚಕ

ಓಕಿನ; ಓಕ್‍ ಮರದ; ಓಕ್‍ ಮರದಿಂದ ಮಾಡಿದ, ತಯಾರಿಸಿದ: oak table ಓಕ್‍ (ಮರದ) ಮೇಜು.