1oak
ಓಕ್
ನಾಮವಾಚಕ
- ಓಕ್ ಮರ ಯಾ ಪೊದೆ; ಕ್ವೆರ್ಕಸ್ ಕುಲಕ್ಕೆ ಸೇರಿದ, ಹಾಲೆಗಳಂಥ ಎಲೆಗಳುಳ್ಳ, ಹಣ್ಣು ಬಿಡುವ ಒಂದು ಮರ ಯಾ ಪೊದೆ.
- ಓಕ್ (ಮರದ) ದಾರು; ಮುಖ್ಯವಾಗಿ ಪೀಠೋಪಕರಣ ಮತ್ತು ಕಟ್ಟಡಗಳಲ್ಲಿ ಬಳಸುವ ಗಟ್ಟಿಯಾದ, ಬೆಲೆಬಾಳುವ ಈ ಮರದ ದಾರು.
- (ಬ್ರಿಟಿಷ್ ಪ್ರಯೋಗ) (ವಿಶ್ವವಿದ್ಯಾನಿಲಯಗಳ ಕಾಲೇಜುಕೊಠಡಿಗಳ) ಹೊರಬಾಗಿಲು: sport one’s oak ಭೇಟಿಗಾರರನ್ನು ನಿಷೇಧಿಸಲು ಹೊರಬಾಗಿಲು ಹಾಕು, ಮುಚ್ಚು.
- (the Oaks) (ಏಕವಚನವಾಗಿ ಬಳಕೆ) ಓಕ್ (ಪಂದ್ಯ); ಇಂಗ್ಲೆಂಡಿನ ಎಪ್ಸಮ್ ನಗರದಲ್ಲಿ ನಡೆಯುವ ಮೂರು ವರ್ಷ ವಯಸ್ಸಿನ ಹೆಣ್ಣುಕುದುರೆ ಮರಿಗಳ ಜೂಜು.
- ಓಕ್ (ಮರದ) ಎಲೆಗಳು: oak is still worn on 29th May ಮೇ 29ರಂದು ಈಗಲೂ ಓಕ್ ಎಲೆಗಳನ್ನು ಧರಿಸಲಾಗುತ್ತದೆ.
- ಓಕ್ ಬಣ್ಣ; ಓಕ್ ಮರದ ಎಳೆಯೆಲೆಗಳ ಬಣ್ಣ.
ಪದಗುಚ್ಛ
- dwarf, ground, etc., oak ಓಕ್ ಮರವನ್ನು ಹೋಲುವ ಸಣ್ಣ ಗಾತ್ರದ ಗಿಡಗಳು.
- dyer’s holm, scarlet, etc., oak ವಿವಿಧ ಜಾತಿಯ ಓಕ್ ಮರಗಳು.
- oak-beauty, oak-egger, oak-lappet, oak-hook-tip ಓಕ್ ಎಲೆತಿಂದು ಬೆಳೆಯುವ ಯಾ ಓಕ್ ಎಲೆಗಳನ್ನು ಹೋಲುವ ಬಗೆಬಗೆಯ ಚಿಟ್ಟೆಗಳು.
- oak-fig, oak-plum, oak-potato, oak-spangle, oak-wart ಓಕ್ ಮರಗಳಲ್ಲಿ ಗಾಲ್ ಹ್ಲೈ ಎಂಬ ನೊಣಗಳಿಂದ ಆಗುವ ಬಗೆಬಗೆಯ ಗಂಟುಗಳು.
- the Oaks = 1oak(4).