See also 2nose
1nose ನೋಸ್‍
ನಾಮವಾಚಕ
  1. ಮೂಗು; ನಾಸಿಕ; ಘ್ರಾಣೇಂದ್ರಿಯ.
  2. ಘ್ರಾಣಶಕ್ತಿ; ವಾಸನೆ ಹಿಡಿಯುವ ಶಕ್ತಿ.
  3. (ಒಣಹುಲ್ಲು, ಟೀ, ಮದ್ಯ, ಹೊಗೆಸೊಪ್ಪು, ಮೊದಲಾದವುಗಳ) ವಾಸನೆ; ಕಂಪು; ಗಂಧ.
  4. (ನಾಳ, ಕೊಳವೆ, ತಿದಿ, ಬಕಪಾತ್ರೆ, ಮೊದಲಾದವುಗಳ) ಮೂತಿ; ತೆರೆದ ತುದಿ.
  5. ಹಡಗಿನ, ದೋಣಿಯ – ಮೂತಿ, ಚಾಚುಭಾಗ.
  6. = nosing.
  7. (ಮೋಟಾರ್‍ ಕಾರು, ವಿಮಾನ, ಮೊದಲಾದವುಗಳ) ಮುಂಭಾಗ; ಮೂತಿ.
  8. (ಅಶಿಷ್ಟ) ರಹಸ್ಯ ವರದಿಗಾರ; ಅಪರಾಧಿಗಳನ್ನು ಪತ್ತೆ ಮಾಡಿ, ಪೊಲೀಸರಿಗೆ ಅವರ ಬಗ್ಗೆ ಮಾಹಿತಿ ಕೊಡುವವನು.
ಪದಗುಚ್ಛ
  1. as plain as the nose on your face ಸ್ಪಷ್ಟವಾಗಿದೆ; ಸ್ಪಷ್ಟವಾಗಿ ಕಾಣಿಸುವಂತಿದೆ.
  2. by a nose ಅತ್ಯಲ್ಪ ಅಂತರದಿಂದ; ಸ್ವಲ್ಪದರಲ್ಲಿ; won the race by a nose ಅತ್ಯಲ್ಪ ಅಂತರದಿಂದ ಪಂದ್ಯವನ್ನು ಗೆದ್ದ.
  3. count noses
    1. ಹಾಜರಿರುವವರನ್ನು, ಬೆಂಬಲ ಕೊಡುವವರನ್ನು, ಅನುಮೋದಿಸುವವರನ್ನು ಲೆಕ್ಕ ಮಾಡು; ಮೂಗೆಣಿಸು.
    2. (ಒಂದು ವಿಷಯವನ್ನು) ಕೇವಲ ಸಂಖ್ಯಾಬಲದಿಂದ ನಿರ್ಧರಿಸು.
  4. get up a (person’s) nose (ಅಶಿಷ್ಟ) (ಒಬ್ಬನನ್ನು) ಕಾಡು; ಪೀಡಿಸು; ರೇಗಿಸು.
  5. has a good nose ಚುರುಕು ಮೂಗಿದೆ:
    1. (ನಾಯಿ ಮೊದಲಾದವುಗಳ ವಿಷಯದಲ್ಲಿ) ವಾಸನೆ ಹಿಡಿಯುವ ಒಳ್ಳೆ ಶಕ್ತಿ ಇದೆ.
    2. (ರೂಪಕವಾಗಿ) (ಗುಪ್ತ ಪೊಲೀಸರು ಮೊದಲಾದವರ ವಿಷಯದಲ್ಲಿ) (ಅಪರಾಧ ಮೊದಲಾದವುಗಳ) ಸುಳಿವು ಹಿಡಿಯುವ, ಪತ್ತೆ ಹಚ್ಚುವ – ಕೌಶಲ, ಒಳ್ಳೆಯ ಶಕ್ತಿ ಇದೆ.
  6. hold one’s nose ದುರ್ನಾತ ತಪ್ಪಿಸಿಕೊಳ್ಳಲು ಮೂಗು ಮುಚ್ಚಿಕೊ, ಹೊಳ್ಳೆಗಳನ್ನು ಬೆರಳುಗಳಿಂದ ಒತ್ತಿಹಿಡಿದುಕೊ.
  7. keep one’s nose clean (ಅಶಿಷ್ಟ) ಸರಿಯಾಗಿ ನಡೆದುಕೊ; ತೊಂದರೆಗೆ ಸಿಕ್ಕಿಬೀಳದ ಹಾಗಿರು.
  8. keep one’s nose to the grindstone ಕಷ್ಟಪಟ್ಟು, ವಿಶ್ರಾಂತಿಯಿಲ್ಲದೆ, ನಿರಂತರವಾಗಿ ದುಡಿ, ಕೆಲಸ ಮಾಡು.
  9. $^1$look down one’s nose at.
  10. nose of wax ಮೇಣದಂಥವನು ಯಾ ಮೇಣದಂಥ ವಸ್ತು; ಸುಲಭವಾಗಿ ತಿದ್ದಬಹುದಾದ – ಮನುಷ್ಯ, ವಸ್ತು.
  11. on the nose
    1. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಸರಿಯಾಗಿ; ಕರಾರುವಾಕ್ಕಾಗಿ.
    2. (ಆಸ್ಟ್ರೇಲಿಯ) (ಅಶಿಷ್ಟ) ರೇಗಿಸುವಂಥ; ಪೀಡಿಸುವಂಥ.
  12. parson’s nose ಬೇಯಿಸಿದ (ಹಕ್ಕಿ ಮೊದಲಾದವುಗಳ) ಪೃಷ್ಠದ ಭಾಗ.
  13. pay through the nose ಸಲ್ಲಬೇಕಾದುದಕ್ಕಿಂತ ವಿಪರೀತ ಹೆಚ್ಚಾಗಿ ಕೊಡಬೇಕಾಗು; ದುಬಾರಿ ಬೆಲೆ ಕಕ್ಕಬೇಕಾಗು; ಹೆಚ್ಚು ಬೆಲೆ ತೆರಬೇಕಾಗು.
  14. pope’s nose = ಪದಗುಚ್ಛ\((12)\).
  15. to bite one’s nose off ರೇಗಿ, ಮುಖ ಮುರಿಯವಂತೆ ಮಾತನಾಡು.
  16. to cut off one’s nose to spite one’s face ಮುಖದ ಮೇಲಿನ ಮುನಿಸಿಗೆ ಮೂಗು ಕೊಯ್ದುಕೊ; ತನ್ನ ಮುನಿಸಿನಿಂದ ತನ್ನ ಕೆಲಸವನ್ನೇ ಕೆಡಿಸಿಕೊ;
  17. to follow one’s nose
    1. ಎದುರಿಗೆ ನೇರವಾದ ದಾರಿ ಹಿಡಿದು ನಡೆ; ಮೂಗಿನ ನೇರಕ್ಕೆ ಹೋಗು.
    2. (ತನ್ನ) ಸಹಜ ಪ್ರವೃತ್ತಿಗೆ ತಕ್ಕಂತೆ ನಡೆ.
  18. to $^1$lead by the nose.
  19. to make a long nose (ಒಬ್ಬನ ಕುರಿತು ಹೀಯಾಳಿಸಲು) ಹೆಬ್ಬೆಟ್ಟನ್ನು ಮೂಗಿನ ಮೇಲಿಟ್ಟು ಕೈಯಗಲಿಸು; ತುಚ್ಛವಾಗಿ ಕಾಣು.
  20. to poke one’s nose(ತನಗೆ ಸಂಬಂಧವಿಲ್ಲದ್ದರಲ್ಲಿ) ಮೂಗುತೂರಿಸು; ಮಧ್ಯೆ ತಲೆ ಹಾಕು.
  21. to put one’s nose out of joint
    1. ಒಬ್ಬನ ಉದ್ದೇಶ ಈಡೇರದಂತೆ ಮಾಡು; ಉದ್ದೇಶ ಭಂಗ ಮಾಡು; ಕಾರ್ಯಭಂಗ ಮಾಡು.
    2. (ಒಬ್ಬನಿಗೆ) ಮುಜುಗರ ಉಂಟುಮಾಡು. ಕಿರಿಕಿರಿ ಉಂಟುಮಾಡು.
    3. (ಒಬ್ಬನ) ಚಿತ್ತಸ್ವಾಸ್ಥ್ಯ ಕೆಡಿಸು; ಮನಸ್ಸಿಗೆ ಗಲಿಬಿಲಿ ಉಂಟು ಮಾಡು.
    4. ಒಬ್ಬನ ಅನುಗ್ರಹ ಸಂಪಾದಿಸಲು ಆತನ ಅನುಗ್ರಹಕ್ಕೆ ಪಾತ್ರನಾದ ಮತ್ತೊಬ್ಬನನ್ನು ತೊಲಗಿಸಿಬಿಡು.
  22. to rub person’s nose in it (ಒಬ್ಬನಿಗೆ) ಅವಮಾನವಾಗುವ ರೀತಿಯಲ್ಲಿ – ಅವನ ತಪ್ಪನ್ನು ಎತ್ತಿತೋರಿಸು, ಮತ್ತೆ ನೆನಪು ಮಾಡು.
  23. to see no further than one’s nose (ತನ್ನ ಕಾರ್ಯದ ಪರಿಣಾಮ ಮೊದಲಾದವುಗಳ ಬಗ್ಗೆ) ದೂರದೃಷ್ಟಿಯಿಲ್ಲದಿರು.
  24. to snap one’s nose off = ಪದಗುಚ್ಛ\((15)\).
  25. to speak through one’s nose ಮೂಗಿನಲ್ಲಿ ಮಾತನಾಡು.
  26. to thrust one’s nose = ಪದಗುಚ್ಛ\((20)\).
  27. to thumb one’s nose (at) = ಪದಗುಚ್ಛ\((19)\).
  28. to turn up one’s nose (at) ತಿರಸ್ಕಾರ ತೋರಿಸು; ಮೂಗು ಮುರಿ; ಧಿಕ್ಕರಿಸು.
  29. under person’s nose (ಪ್ರತಿಭಟನೆ ಯಾ ಕಣ್ಣಿಗೆ ಬೀಳದ ವರ್ತನೆಗಳ ವಿಷಯದಲ್ಲಿ) (ಒಬ್ಬನ) ಕಣ್ಣೆದುರಿನಲ್ಲೇ; ಎದುರಿಗೇ; ಸಮಕ್ಷಮವೇ; ಮೂಗಿನ ಕೆಳಗೇ.
  30. with one’s nose in the air ಅಹಂಕಾರದಿಂದ; ಸೊಕ್ಕಿನಿಂದ.
See also 1nose
2nose ನೋಸ್‍
ಸಕರ್ಮಕ ಕ್ರಿಯಾಪದ
  1. ಮೂಸು; (ಯಾವುದಾದರೂ ವಸ್ತು ಮೊದಲಾದವುಗಳ) ವಾಸನೆ ನೋಡು; ಆಘ್ರಾಣಿಸು.
  2. ವಾಸನೆ ಮೂಲಕ ಪತ್ತೆ ಮಾಡು.
  3. (ರೂಪಕವಾಗಿ) ಪತ್ತೆ ಹಚ್ಚು; ಕಂಡುಹಿಡಿ.
  4. ಮೂಗಿನಿಂದ ಉಜ್ಜು.
  5. ಮೂಗನ್ನು ಒತ್ತು ಯಾ ಒಳಕ್ಕೆ ತೂರಿಸು.
ಅಕರ್ಮಕ ಕ್ರಿಯಾಪದ
  1. ಮೂಗು ಹಾಕು; ಬೆದಕು; ತಲೆಹಾಕು: to nose about in someone else’s business ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸು, ಪ್ರವೇಶಿಸು.
  2. (ದಾರಿ ಮಾಡಿಕೊಂಡು) ಒಳಕ್ಕೆ ನುಗ್ಗು; ಪ್ರವೇಶಿಸು; ಜಾಗರೂಕತೆಯಿಂದ ಮುಂದಕ್ಕೆ ಹೋಗು ( ಸಕರ್ಮಕ ಕ್ರಿಯಾಪದ ಸಹ) to nose into the wind ಗಾಳಿಯೊಳಕ್ಕೆ ನುಗ್ಗು.
  3. ಹುಡುಕು.
  4. ಮೂಸು.