2nose
ಸಕರ್ಮಕ ಕ್ರಿಯಾಪದ
- ಮೂಸು; (ಯಾವುದಾದರೂ ವಸ್ತು ಮೊದಲಾದವುಗಳ) ವಾಸನೆ ನೋಡು; ಆಘ್ರಾಣಿಸು.
- ವಾಸನೆ ಮೂಲಕ ಪತ್ತೆ ಮಾಡು.
- (ರೂಪಕವಾಗಿ) ಪತ್ತೆ ಹಚ್ಚು; ಕಂಡುಹಿಡಿ.
- ಮೂಗಿನಿಂದ ಉಜ್ಜು.
- ಮೂಗನ್ನು ಒತ್ತು ಯಾ ಒಳಕ್ಕೆ ತೂರಿಸು.
ಅಕರ್ಮಕ ಕ್ರಿಯಾಪದ
- ಮೂಗು ಹಾಕು; ಬೆದಕು; ತಲೆಹಾಕು: to nose about in someone else’s business ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸು, ಪ್ರವೇಶಿಸು.
- (ದಾರಿ ಮಾಡಿಕೊಂಡು) ಒಳಕ್ಕೆ ನುಗ್ಗು; ಪ್ರವೇಶಿಸು; ಜಾಗರೂಕತೆಯಿಂದ ಮುಂದಕ್ಕೆ ಹೋಗು ( ಸಕರ್ಮಕ ಕ್ರಿಯಾಪದ ಸಹ) to nose into the wind ಗಾಳಿಯೊಳಕ್ಕೆ ನುಗ್ಗು.
- ಹುಡುಕು.
- ಮೂಸು.