See also 2mouse
1mouse ಮೌಸ್‍
ನಾಮವಾಚಕ
(ಬಹುವಚನ mice ಉಚ್ಚಾರಣೆ ಮೈಸ್‍).
  1. ಇಲಿ; ಮೂಷಕ: house mouse ಮನೆಯಿಲಿ.
  2. ಮಖೇಡಿ; ಸಿಗ್ಗಾಳಿ; ಭೀರು; ಇತರರೊಡನೆ ಬೆರೆಯದ, ಸಂಕೋಚ ಸ್ವಭಾವದ, ಅಳುಕಿನ – ವ್ಯಕ್ತಿ.
  3. ದುರ್ಬಲ ವ್ಯಕ್ತಿ; ಪರಿಣಾಮ, ಪ್ರಭಾವ ಬೀರಲಾರದ ವ್ಯಕ್ತಿ.
  4. ಜಾರು ಕಿಟಕಿಗಳನ್ನು ಏರಿಸಲು, ಇಳಿಸಲು ಬಳಸುವ (ತೂಗು) ಭಾರ ಕಟ್ಟಿರುವ ಹಗ್ಗ, ಹುರಿ.
  5. (ಅಶಿಷ್ಟ) ಪೆಟ್ಟಿನಿಂದ ಕಪ್ಪುಗಟ್ಟಿದ ಕಣ್ಣು.
  6. ಮೌಸ್‍; (ಕಂಪ್ಯೂಟರ್‍) ದೃಶ್ಯಪ್ರದರ್ಶನ ಘಟಕದ (VDU) ಪರದೆಯ ಮೇಲೆ ಕರ್ಸರ್‍ (cursor) ಅನ್ನು ನಿಯಂತ್ರಿಸುವ ಸಾಧನ.
See also 1mouse
2mouse ಮೌಸ್‍
ಸಕರ್ಮಕ ಕ್ರಿಯಾಪದ

(ನೌಕಾಯಾನ) (ಕೊಕ್ಕೆಯ ಹಿಡಿಗೆ) ನೂಲು ಹುರಿಯ ಕೆಲವು ಸುತ್ತುಗಳನ್ನು ಸುತ್ತು ಹಾಕು.

ಅಕರ್ಮಕ ಕ್ರಿಯಾಪದ
  1. (ಬೆಕ್ಕು ಯಾ ಗೂಬೆಯ ವಿಷಯದಲ್ಲಿ) ಇಲಿ ಬೇಟೆಯಾಡು; ಇಲಿ ಹಿಡಿ.
  2. ಶ್ರಮಪಟ್ಟು ಹುಡುಕು; ಅನ್ೇಷಣ ಮಾಡು.
  3. ಯಾವುದನ್ನಾದರೂ ಹುಡುಕಲು ಸದ್ದು ಮಾಡದೆ ಸುತ್ತಾಡು, ಸುಳಿದಾಡು.