See also 2mouse
1mouse ಮೌಸ್‍
ನಾಮವಾಚಕ
(ಬಹುವಚನ mice ಉಚ್ಚಾರಣೆ ಮೈಸ್‍).
  1. ಇಲಿ; ಮೂಷಕ: house mouse ಮನೆಯಿಲಿ.
  2. ಮಖೇಡಿ; ಸಿಗ್ಗಾಳಿ; ಭೀರು; ಇತರರೊಡನೆ ಬೆರೆಯದ, ಸಂಕೋಚ ಸ್ವಭಾವದ, ಅಳುಕಿನ – ವ್ಯಕ್ತಿ.
  3. ದುರ್ಬಲ ವ್ಯಕ್ತಿ; ಪರಿಣಾಮ, ಪ್ರಭಾವ ಬೀರಲಾರದ ವ್ಯಕ್ತಿ.
  4. ಜಾರು ಕಿಟಕಿಗಳನ್ನು ಏರಿಸಲು, ಇಳಿಸಲು ಬಳಸುವ (ತೂಗು) ಭಾರ ಕಟ್ಟಿರುವ ಹಗ್ಗ, ಹುರಿ.
  5. (ಅಶಿಷ್ಟ) ಪೆಟ್ಟಿನಿಂದ ಕಪ್ಪುಗಟ್ಟಿದ ಕಣ್ಣು.
  6. ಮೌಸ್‍; (ಕಂಪ್ಯೂಟರ್‍) ದೃಶ್ಯಪ್ರದರ್ಶನ ಘಟಕದ (VDU) ಪರದೆಯ ಮೇಲೆ ಕರ್ಸರ್‍ (cursor) ಅನ್ನು ನಿಯಂತ್ರಿಸುವ ಸಾಧನ.