See also 2lull
1lull ಲಲ್‍
ಸಕರ್ಮಕ ಕ್ರಿಯಾಪದ
  1. ಜೋಗುಳ ಹೇಳಿ, ಮುದ್ದಿಸಿ – ಸಂತಯಿಸು ಯಾ ನಿದ್ದೆ ಬರಿಸು.
  2. (ಸಂಶಯ ಮೊದಲಾದವನ್ನು ಸಾಮಾನ್ಯವಾಗಿ) ಮೋಸದಿಂದ ಸಮಾಧಾನಗೊಳಿಸು; ವಂಚನೆಯಿಂದ ಶಮನಗೊಳಿಸು.
  3. (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ)
    1. (ಸಮುದ್ರ, ಬಿರುಗಾಳಿ, ಮೊದಲಾದವನ್ನು) ಶಾಂತಗೊಳಿಸು; ಶಾಂತ ಮಾಡು.
    2. (ಮಿತಿಮೀರಿ ನಂಬುವಂತೆ) ಮೋಸ ಹೋಗು; ಮೋಹಕ್ಕೊಳಗಾಗು.
ಅಕರ್ಮಕ ಕ್ರಿಯಾಪದ

(ಬಿರುಗಾಳಿ, ಸದ್ದು) ಕಡಿಮೆಯಾಗು; ಅಡಗಿಹೋಗು; ಅಣಗು; ಶಾಂತನಾಗು.

See also 1lull
2lull ಲಲ್‍
ನಾಮವಾಚಕ
  1. ಬಿರುಗಾಳಿಯ ಮಧ್ಯೆ ಶಾಂತಸ್ಥಿತಿ.
  2. (ರೂಪಕವಾಗಿ) (ಕಾರ್ಯಾಚರಣೆ, ಚಟುವಟಿಕೆ, ಮೊದಲಾದವುಗಳ ನಡುವೆ ಉಂಟಾಗುವ) ನಿಲುಗಡೆ; ವಿರಾಮ: a lull in business ವ್ಯಾಪಾರದ ನಿಲುಗಡೆ.