See also 2lost
1lost ಲಾಸ್ತ್‍
ಕ್ರಿಯಾಪದ

lose ಧಾತುವಿನ ಭೂತರೂಪ ಮತ್ತು ಭೂತಕೃದಂತ.

See also 1lost
2lost ಲಾಸ್ಟ್‍
ಗುಣವಾಚಕ
  1. ಬಳಸದ; ಉಪಯೋಗಿಸದ; ವ್ಯರ್ಥವಾದ; ಕಳೆದುಹೋದ: lost hours ವ್ಯರ್ಥವಾದ ಗಂಟೆಗಳು(ಕಾಲ).
  2. ಸೋತುಹೋದ: lost battle ಸೋತ ಕದನ.
  3. ಹಕ್ಕು ಬಿಟ್ಟುಕೊಟ್ಟ; ಹಕ್ಕು ಕಳೆದುಕೊಂಡ, ಕೈಬಿಟ್ಟು ಹೋದ: lost annuity ನಷ್ಟ ವರ್ಷಾಶಯ; ಹಕ್ಕು ಸಾಧಿಸದೆ ಬಿಟ್ಟುಕೊಟ್ಟ ವರ್ಶಾಸನ.
  4. ದಾರಿ ಬಿಟ್ಟುಹೋದ; ದಾರಿ ತಪ್ಪಿದ: lost child ದಾರಿ ತಪ್ಪಿದ ಮಗು.
  5. ಕಣ್ಮರೆಯಾದ; ಮಾಯವಾದ; ಮರೆಯಾದ; ಕಾಣಿಸದಂತಾದ: lost in the crowd ಗುಂಪಿನಲ್ಲಿ ಕಣ್ಮರೆಯಾದ.
  6. ಆತ್ಮವಿಶ್ವಾಸವಿಲ್ಲದ; ಭರವಸೆ ಸಾಲದ; ದಿಕ್ಕುತೋರದ; ದಿಕ್ಕುಗಾದ: felt lost on the first day of the job ಕೆಲಸದ ಮೊದಲ ದಿನ ದಿಕ್ಕುಗಾಣದಂತಾಯಿತು.
  7. ಅಸಹಾಯಕ; ನಿಸ್ಸಹಾಯಕ: lost without his glasses ಅವನ ಕನ್ನಡಕವಿಲ್ಲದೆ ಅಸಹಾಯಕನಾಗಿ.
  8. (ಭೌತಿಕವಾಗಿ ಯಾ ಆಧ್ಯಾತ್ಮಿಕವಾಗಿ) ನಾಶಹೊಂದಿದ; ಹಾಳಾದ; ಪತಿತನಾದ; ನರಕಕ್ಕೆ ತಳ್ಳಲ್ಪಟ್ಟ: lost soul ಪತಿತಾತ್ಮ.
  9. ಹತಾಶನಾದ; ನಿರಾಶನಾದ; ಆಸೆತೊರೆದ: lost look ಹತಾಶ ದೃಷ್ಟಿ; ನಿರಾಶೆಯಿಂದ ಕೂಡಿದ ಕಣ್ಣು.
  10. ಬೇರ್ಪಟ್ಟ; ಕಳೆದುಕೊಂಡ: lost limb ಕಳೆದುಹೋದ ಅಂಗ.
  11. ವಶ ತಪ್ಪಿದ; ಕೈಬಿಟ್ಟ; ಸ್ವಾಧೀನ ತಪ್ಪಿದ.
  12. ಕೈ ಮರೆತಿಟ್ಟ: lost book ಮರೆತಿಟ್ಟ ಪುಸ್ತಕ.
  13. ಕಳೆದುಹೋದ; ನಷ್ಟವಾದ; ಗತವಾದ; ಕಳೆದುಕೊಂಡ: lost honour ಕಳೆದುಕೊಂಡ ಗೌರವ.
  14. ರೂಢಿ ತಪ್ಪಿಹೋದ; ಅಭ್ಯಾಸದಲ್ಲಿಲ್ಲದ; ರೂಢಿಯಲ್ಲಿಲ್ಲದ: lost art ಅಭ್ಯಾಸದಲ್ಲಿಲ್ಲದ ಕಲೆ.
  15. ಕೈತಪ್ಪಿದ; ನಿಲುಕದ; ಎಟುಕದ; ದೊರಕದೆ ಹೋದ; ಸಿಗದಾದ: his career is lost to history ಅವನ ಜೀವನ ವೃತ್ತಾಂತ ಚರಿತ್ರೆಗೆ ದೊರಕದೆ ಹೋಗಿದೆ.
  16. ಜಡ್ಡುಕಟ್ಟಿದ; ಕಠಿಣಗೊಂಡ; ಜಡವಾದ: lost to all sense of honour ಮರ್ಯಾದೆಯ ಎಲ್ಲ ಭಾವಕ್ಕೂ ಜಡ್ಡುಕಟ್ಟಿದ.
  17. ಮುಳುಗಿದ; ತಲ್ಲೀನಗೊಂಡ; ತನ್ಮಯವಾದ; ಮೈಮರೆತ: lost in admiration ಮೆಚ್ಚುಗೆಯಲ್ಲಿ ಮೈಮರೆತ.
  18. (ಗಾಲ್‍ ಚೆಂಡು) ನಷ್ಟವಾದ; ಐದು ನಿಮಿಷಗಳಲ್ಲಿ ಸಿಗದೆ ಹೋದ.