2lost
ಲಾಸ್ಟ್
ಗುಣವಾಚಕ
- ಬಳಸದ; ಉಪಯೋಗಿಸದ; ವ್ಯರ್ಥವಾದ; ಕಳೆದುಹೋದ: lost hours ವ್ಯರ್ಥವಾದ ಗಂಟೆಗಳು(ಕಾಲ).
- ಸೋತುಹೋದ: lost battle ಸೋತ ಕದನ.
- ಹಕ್ಕು ಬಿಟ್ಟುಕೊಟ್ಟ; ಹಕ್ಕು ಕಳೆದುಕೊಂಡ, ಕೈಬಿಟ್ಟು ಹೋದ: lost annuity ನಷ್ಟ ವರ್ಷಾಶಯ; ಹಕ್ಕು ಸಾಧಿಸದೆ ಬಿಟ್ಟುಕೊಟ್ಟ ವರ್ಶಾಸನ.
- ದಾರಿ ಬಿಟ್ಟುಹೋದ; ದಾರಿ ತಪ್ಪಿದ: lost child ದಾರಿ ತಪ್ಪಿದ ಮಗು.
- ಕಣ್ಮರೆಯಾದ; ಮಾಯವಾದ; ಮರೆಯಾದ; ಕಾಣಿಸದಂತಾದ: lost in the crowd ಗುಂಪಿನಲ್ಲಿ ಕಣ್ಮರೆಯಾದ.
- ಆತ್ಮವಿಶ್ವಾಸವಿಲ್ಲದ; ಭರವಸೆ ಸಾಲದ; ದಿಕ್ಕುತೋರದ; ದಿಕ್ಕುಗಾದ: felt lost on the first day of the job ಕೆಲಸದ ಮೊದಲ ದಿನ ದಿಕ್ಕುಗಾಣದಂತಾಯಿತು.
- ಅಸಹಾಯಕ; ನಿಸ್ಸಹಾಯಕ: lost without his glasses ಅವನ ಕನ್ನಡಕವಿಲ್ಲದೆ ಅಸಹಾಯಕನಾಗಿ.
- (ಭೌತಿಕವಾಗಿ ಯಾ ಆಧ್ಯಾತ್ಮಿಕವಾಗಿ) ನಾಶಹೊಂದಿದ; ಹಾಳಾದ; ಪತಿತನಾದ; ನರಕಕ್ಕೆ ತಳ್ಳಲ್ಪಟ್ಟ: lost soul ಪತಿತಾತ್ಮ.
- ಹತಾಶನಾದ; ನಿರಾಶನಾದ; ಆಸೆತೊರೆದ: lost look ಹತಾಶ ದೃಷ್ಟಿ; ನಿರಾಶೆಯಿಂದ ಕೂಡಿದ ಕಣ್ಣು.
- ಬೇರ್ಪಟ್ಟ; ಕಳೆದುಕೊಂಡ: lost limb ಕಳೆದುಹೋದ ಅಂಗ.
- ವಶ ತಪ್ಪಿದ; ಕೈಬಿಟ್ಟ; ಸ್ವಾಧೀನ ತಪ್ಪಿದ.
- ಕೈ ಮರೆತಿಟ್ಟ: lost book ಮರೆತಿಟ್ಟ ಪುಸ್ತಕ.
- ಕಳೆದುಹೋದ; ನಷ್ಟವಾದ; ಗತವಾದ; ಕಳೆದುಕೊಂಡ: lost honour ಕಳೆದುಕೊಂಡ ಗೌರವ.
- ರೂಢಿ ತಪ್ಪಿಹೋದ; ಅಭ್ಯಾಸದಲ್ಲಿಲ್ಲದ; ರೂಢಿಯಲ್ಲಿಲ್ಲದ: lost art ಅಭ್ಯಾಸದಲ್ಲಿಲ್ಲದ ಕಲೆ.
- ಕೈತಪ್ಪಿದ; ನಿಲುಕದ; ಎಟುಕದ; ದೊರಕದೆ ಹೋದ; ಸಿಗದಾದ: his career is lost to history ಅವನ ಜೀವನ ವೃತ್ತಾಂತ ಚರಿತ್ರೆಗೆ ದೊರಕದೆ ಹೋಗಿದೆ.
- ಜಡ್ಡುಕಟ್ಟಿದ; ಕಠಿಣಗೊಂಡ; ಜಡವಾದ: lost to all sense of honour ಮರ್ಯಾದೆಯ ಎಲ್ಲ ಭಾವಕ್ಕೂ ಜಡ್ಡುಕಟ್ಟಿದ.
- ಮುಳುಗಿದ; ತಲ್ಲೀನಗೊಂಡ; ತನ್ಮಯವಾದ; ಮೈಮರೆತ: lost in admiration ಮೆಚ್ಚುಗೆಯಲ್ಲಿ ಮೈಮರೆತ.
- (ಗಾಲ್ ಚೆಂಡು) ನಷ್ಟವಾದ; ಐದು ನಿಮಿಷಗಳಲ್ಲಿ ಸಿಗದೆ ಹೋದ.