lose ಲೂಸ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ lost).
ಸಕರ್ಮಕ ಕ್ರಿಯಾಪದ
  1. ಕಳೆದುಕೊ; (ಅಲಕ್ಷ್ಯ, ದುರದೃಷ್ಟ, ಅಗಲಿಕೆ, ಸಾವು, ಮೊದಲಾದವುಗಳಿಂದ ಆಸ್ತಿ, ಪ್ರಾಣ, ಯೋಗ್ಯತೆ, ಅಂಗ, ತಂದೆ, ಸ್ನೇಹಿತ, ಮೊದಲಾದವುಗಳ) ನಷ್ಟ ಹೊಂದು.
  2. (ಕರ್ಮಣಿಪ್ರಯೋಗದಲ್ಲಿ)
    1. ಮಾಯವಾಗು; ಕಾದಾಗು: letter writing is a lost art ಪತ್ರಲೇಖನ ಮಾಯವಾದ ಕಲೆ.
    2. ಅಳಿದುಹೋಗು; ನಾಶವಾಗು; ನಷ್ಟವಾಗು; ಹಾಳಾಗು: the ship and all hands were lost ಹಡಗೂ ಅದರ ಎಲ್ಲ ಕೆಲಸಗಾರರೂ ನಾಶವಾದರು (ಅಳಿದು ಹೋದರು). lost to sense of duty, shame, etc. ಕರ್ತವ್ಯಬುದ್ಧಿ, ನಾಚಿಕೆ, ಮೊದಲಾದವು ಅಳಿದ, ಹೋದ, ತಟ್ಟದ.
    3. ಸಾಯಿ; ಸತ್ತು ಹೋಗು: was lost in the war ಯುದ್ಧದಲ್ಲಿ ಸತ್ತುಹೋದ.
  3. (ದೃಷ್ಟಿ ತಪ್ಪಿ, ಗಮನ ತಪ್ಪಿ) ಕಳೆದುಕೊ: lose one’s way ದಾರಿ ಕಳೆದುಕೊ; ದಾರಿ ತಪ್ಪು. lose the thread of a discourse ಭಾಷಣದ ಸರಣಿಯನ್ನು ಕಳೆದುಕೊ (ಅನುಸರಿಸದಿರು).
  4. (ಕಾಲ, ಅವಕಾಶ, ಶ್ರಮ) ವ್ಯರ್ಥಮಾಡು; ನಿರರ್ಥಕವಾಗಿ ಕಳೆ; ಪೋಲು ಮಾಡು; ಹಾಳುಮಾಡು.
  5. (ಪಡೆಯಲು, ಹಿಡಿಯಲು, ನೋಡಲು, ಕೇಳಲು) ವಿಫಲನಾಗು; ಅಯಶಸ್ವಿಯಾಗು: lose one’s train ರೈಲು ಹಿಡಿಯಲು ವಿಫಲನಾಗು; ರೈಲು ತಪ್ಪು: lose a word or remark ಮಾತು ಯಾ ಟೀಕೆ ಕೇಳಲು ವಿಫಲನಾಗು, ಗ್ರಹಿಸದೆ ಹೋಗು; ಮಾತು ಕಿವಿಗೆ ಬೀಳದೆ ಹೋಗು.
  6. (ಪಣ, ಠೇವಣಿ, ಹಕ್ಕು) ಕಳೆದುಕೊ.
  7. (ಆಟ, ಕಾಳಗ, ಮೊಕದ್ದಮೆಗಳಲ್ಲಿ) ಸೋಲು; ಅಪಜಯಹೊಂದು; ಪರಾಜಯ ಪಡೆ; ಸೋಲು ಅನುಭವಿಸು ( ಅಕರ್ಮಕ ಕ್ರಿಯಾಪದಸಹ).
  8. (ಶಾಸನಸಭೆ ಮೊದಲಾದವುಗಳಲ್ಲಿ) ಸೂಚನೆಗೆ ಅನುಮೋದನೆ ಯಾ ಅಂಗೀಕಾರ ದೊರಕಿಸಲು ವಿಫಲನಾಗು.
  9. (ವ್ಯಕ್ತಿ) ಕಳೆದುಕೊಳ್ಳುವಂತೆ ಮಾಡು; (ವ್ಯಕ್ತಿಯ) ನಷ್ಟಕ್ಕೆ ಕಾರಣವಾಗು: will lose you your place ನಿನ್ನ ಸ್ಥಾನವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.
  10. (ಆತ್ಮಾರ್ಥಕ ಕರ್ಮಣಿಪ್ರಯೋಗ) ದಾರಿ ತಪ್ಪು; ಮಾರ್ಗ ಬಿಟ್ಟು ಹೋಗು: we lost ourselves in the woods ನಾವು ಅಡವಿಯಲ್ಲಿ ದಾರಿ ತಪ್ಪಿದೆವು.
  11. ತಲ್ಲೀನವಾಗು; ಲೀನವಾಗಿ ಹೋಗು; ಐಕ್ಯವಾಗು; ಒಂದಾಗಿ ಬಿಡು; ಮಗ್ನವಾಗು; ಮುಳುಗಿ ಬಿಡು: he had lost himself in thought ಅವನು ಆಲೋಚನೆಯಲ್ಲಿ ಮುಳುಗಿದ್ದ.
  12. ಕಾಣದಂತಾಗು; ದೃಷ್ಟಿಯಿಂದ ಮರೆಯಾಗು; ಅಗೋಚರವಾಗು; ಕಣ್ಮರೆಯಾಗು: when the setting stars are lost in day ಮುಳುಗುವ ನಕ್ಷತ್ರಗಳು ಹಗಲಿನಲ್ಲಿ ಕಣ್ಮರೆಯಾದಾಗ.
  13. ಹೆರಿಗೆಯಲ್ಲಿ (ಮಗುವನ್ನು) ಕಳೆದುಕೊ.
  14. ತಪ್ಪಿಸಿಕೊ; ಕಳದುಕೊ: lost of pursuers ನಮ್ಮ ಬೆನ್ನಟ್ಟುವವರಿಂದ ತಪ್ಪಿಸಿಕೊಂಡೆವು.
  15. (ವ್ಯಕ್ತಿಯನ್ನು, ಮುಖ್ಯವಾಗಿ ಹತ್ತಿರದ ಸಂಬಂಧಿಯನ್ನು) ಸಾವಿನ ಮೂಲಕ ಕಳೆದುಕೊ. I lost my brother ನನ್ನ ಸೋದರ ಸತ್ತುಹೋದ.
  16. (ಗಡಿಯಾರದ ವಿಷಯದಲ್ಲಿ) (ನಿರ್ದಿಷ್ಟವಾದ ಸಮಯ) ನಿಧಾನವಾಗಿ ನಡೆ; ನಿಧಾನವಾಗು; ತಡ ಹೋಗು ( ಅಕರ್ಮಕ ಕ್ರಿಯಾಪದ ಸಹ).
  17. ವಶ ಕಳೆದುಕೊ; ಹಿಡಿತ ಹಾಳು ಮಾಡಿಕೊ; ಹತೋಟಿ ತಪ್ಪಿಹೋಗುವಂತೆ ಮಾಡಿಕೊ: lose one’s chances ಅವಕಾಶಗಳನ್ನು ಕಳೆದುಕೊ.
ಅಕರ್ಮಕ ಕ್ರಿಯಾಪದ

(ಹಣ, ಸೌಕರ್ಯ, ಮೊದಲಾದ ವಿಷಯಗಳಲ್ಲಿ) ನಷ್ಟ ಅನುಭವಿಸು; ಹಾನಿ ಹೊಂದು; ಅನನುಕೂಲ ತಂದುಕೊ: the publisher lost by it ಪ್ರಕಾಶಕ ಅದರಿಂದ ಹಣ ಕಳೆದುಕೊಂಡ. the army lost heavily ಸೈನ್ಯ ತೀವ್ರ ನಷ್ಟವನ್ನು ಅನುಭವಿಸಿತು.

ಪದಗುಚ್ಛ
  1. get lost (ಅಶಿಷ್ಟ) (ಆಜ್ಞಾರ್ಥಕ) ತೊಲಗಾಚೆ! ತೊಲಗಿ ಹೋಗು! ಆಚೆ ಹೋಗು!
  2. losing battle ಸೋಲುವ ಹೋರಾಟ; ಸೋಲು ಅನಿವಾರ್ಯವಾಗಿ ಕಾಣುವ ಹೋರಾಟ ಯಾ ಪ್ರಯತ್ನ.
  3. lost cause
    1. ನಷ್ಟದ ಉದ್ಯಮ; ಏಳಿಗೆ ಯಾ ಉದ್ಧಾರ ಆಗುವ ಅವಕಾಶವೇ ಇಲ್ಲದ ಉದ್ಯಮ, ಮೊದಲಾದವು.
    2. ಪ್ರಭಾವಿತನಾಗದ ವ್ಯಕ್ತಿ; ಯಾವ ಪರಿಣಾಮಕ್ಕೂ ಒಳಪಡಿಸಲಾಗದ ವ್ಯಕ್ತಿ.
  4. lost generation ಗತ ಸಂತತಿ:
    1. ಯುದ್ಧದಲ್ಲಿ ಮುಖ್ಯವಾಗಿ 1914–18ರ ಮೊದಲ ಮಹಾಯುದ್ಧದಲ್ಲಿ, ತನ್ನ ಬಹುತೇಕ ಜನರನ್ನು ಕಳೆದುಕೊಂಡ ಪೀಳಿಗೆ.
    2. 1915–25 ರಲ್ಲಿ ಪ್ರೌಢ ಯಾ ಪಕ್ವ ಸ್ಥಿತಿಗೆ ಬಂದ ಭಾವನಾತ್ಮಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಸ್ಥಿರವಾದ ಪೀಳಿಗೆ.
ನುಡಿಗಟ್ಟು
  1. be lost (or lose oneself) in (ಒಂದರಲ್ಲಿ) ಮುಳುಗಿರು; ತಲ್ಲೀನವಾಗಿರು.
  2. be lost to (ಯಾವುದೋ ಒಂದರಿಂದ) ಪ್ರಭಾವಿತನಾಗದಿರು; (ಒಂದರ) ಪ್ರಭಾವಕ್ಕೆ ಒಳಗಾಗದಿರು; (ಒಂದರ) ಪರಿಣಾಮ ತಟ್ಟದಿರು: is lost to pity ಕರುಣೆಯಿಂದ ಪ್ರಭಾವಿತನಾಗದಿರು.
  3. be lost upon (or on) (ಕರ್ಮಣಿಪ್ರಯೋಗ)
    1. ವ್ಯರ್ಥವಾಗು; ಪರಿಣಾಮ ಮಾಡದೆ ಹೋಗು; ಪ್ರಭಾವ ಬೀರದೆ ಹೋಗು.
    2. ಆಕರ್ಷಿಸದಿರು; ಆಸಕ್ತಿ ಹುಟ್ಟಿಸದಿರು; ಗಮನ ಸೆಳೆಯದೆ ಹೋಗು.
  4. be lost without (-ಒಂದನ್ನು) ಕಳೆದುಕೊಂಡರೆ, (-ಒಂದು) ಇಲ್ಲದೆ ಹೋದರೆ – ತುಂಬ ಕಷ್ಟವಾಗು: am lost without my diary ನನ್ನ ‘ಡೈರಿ’ ಇಲ್ಲದೆ ತುಂಬಾ ಕಷ್ಟವಾಗಿದೆ.
  5. cannot play a losing game ಸೋಲುವ ಸ್ಥಿತಿಯಲ್ಲಿ (ಆಟ) ಆಡಲಾರ; ಆಟ ಸೋಲುವ ಸಂದರ್ಭದಲ್ಲಿ ಎದೆಗುಂದುತ್ತಾನೆ ಯಾ ತಾಳ್ಮೆ ಕಳೆದುಕೊಳ್ಳುತ್ತಾನೆ ಯಾ ಸಿಟ್ಟಿಗೇಳುತ್ತಾನೆ.
  6. doctor loses patient ವೈದ್ಯ ರೋಗಿಯನ್ನು ಕಳೆದುಕೊಳ್ಳುತ್ತಾನೆ:
    1. ವೈದ್ಯ ರೋಗಿಯ ಪ್ರಾಣವನ್ನು ಉಳಿಸಲಾರ; ರೋಗಿಯನ್ನು ಬದುಕಿಸಲಾರ.
    2. ವೈದ್ಯ ರೋಗಿಯನ್ನು ಇನ್ನೊಬ್ಬ ವೈದ್ಯರ ಹತ್ತಿರ ಹೋಗುವಂತೆ ಮಾಡುತ್ತಾನೆ.
  7. have lost my cold ನನ್ನ ನೆಗಡಿ ಹೋಯಿತು.
  8. lose heart ನಿರುತ್ಸಾಹ ಹೊಂದು; ಉತ್ಸಾಹ ಕಳೆದುಕೊ.
  9. losing $^1$hazard.
  10. lose interest
    1. (ವ್ಯಕ್ತಿ) ಆಸಕ್ತಿ – ಇಲ್ಲದಾಗು, ತಪ್ಪಿಹೋಗು.
    2. (ವಸ್ತು) ಆಸಕ್ತಿ ಹುಟ್ಟಿಸದಿರು.
  11. lose one’s $^1$balance.
  12. lose one’s cool ಮನಸ್ಸಮಾಧಾನ ಕಳೆದುಕೊ; ಸ್ಥೈರ್ಯ ಕಳೆದುಕೊ.
  13. lose one’s $^1$head.
  14. lose one’s heart ಪ್ರೇಮಿಸು; ಅನುರಕ್ತನಾ(ಳಾ)ಗು.
  15. lose one’s nerve ಧೃತಿಗೆಡು; ಧೈರ್ಯಗೆಡು; ಹೆದರಿಕೊ; ಅಸ್ಥಿರ ಮನಸ್ಸುಳ್ಳವನಾ(ಳಾ)ಗು.
  16. lose one’s temper = ನುಡಿಗಟ್ಟು \((19)\).
  17. lose out (ಆಡುಮಾತು)
    1. ಯಶಸ್ವಿಯಾಗದಿರು; ವಿಫಲನಾಗು.
    2. (ಗೆಲ್ಲಲು) ಸರಿಯಾದ ಅವಕಾಶ ಯಾ ಅನುಕೂಲ ಪಡೆಯದೆ ಹೋಗು.
  18. lose the (or one’s) way
    1. ದಾರಿ ತಪ್ಪು; ತಪ್ಪು ಹಾದಿ ಹಿಡಿ.
    2. ಗುರಿ ತಲುಪದಾಗು.
  19. lose patience ಸೈರಣೆ ತಪ್ಪು; ತಾಳ್ಮೆಗೆಡು; ರೇಗು; ಸಿಟ್ಟಿಗೇಳು.
  20. lose time ಕಾಲ ಕಳೆದುಕೊ, ಹಾಳು ಮಾಡಿಕೊ; ಸಮಯ ವ್ಯರ್ಥ ಮಾಡಿಕೊ; ಏನೂ ಸಾಧಿಸದೆ, ಮಾಡದೆ ಸಮಯವನ್ನು ಹಾಳುಮಾಡು, ಪೋಲು ಮಾಡು.
  21. lose $^2$touch.
  22. lose $^1$track of.
  23. lose face
    1. ಮುಖವಿಲ್ಲದಿರು; ಅವಮಾನಿತನಾಗು.
    2. ನಂಬಿಕೆ ಕಳೆದುಕೊ.
  24. lose ground
    1. ನೆಲ ಕಳೆದುಕೊ; ಸ್ಥಾನವನ್ನು ಉಳಿಸಿಕೊಳ್ಳಲು ವಿಫಲನಾಗು.
    2. ಹಿಮ್ಮೆಟ್ಟು; ಹಿಂದೆಗೆ; ಹಿಂಜರಿ; ಹಿಂದೆ ಬೀಳು.
    3. ಕುಗ್ಗು; ಅವನತಿಹೊಂದು; ಕ್ಷೀಣವಾಗು; ಕ್ಷೀಣಿಸು.
    4. ಜನಪ್ರಿಯತೆ ಕಡಿಮೆಯಾಗು, ಕುಗ್ಗು, ಇಳಿಮುಖವಾಗು: he is losing gound in industrial areas ಅವನ ಜನಪ್ರಿಯತೆ ಕೈಗಾರಿಕಾ ಪ್ರದೇಶಗಳಲ್ಲಿ ಕುಗ್ಗುತ್ತಿದೆ.
  25. lost soul ಪತಿತ; ಆತ್ಮನಾಶ ಹೊಂದಿದವನು.