See also 2balance
1balance ಬ್ಯಾಲನ್ಸ್‍
ನಾಮವಾಚಕ
  1. ತಕ್ಕಡಿ; ತ್ರಾಸು; ಚಿಂತಾಲು; ತೋಲಕ; ತುಲಾಯಂತ್ರ.
  2. (ತಕ್ಕಡಿಯಂತೆ ಬಳಸುವ) ಸ್ಪ್ರಿಂಗ್‍ ತ್ರಾಸು; ಸನ್ನೆಕೋಲು ತ್ರಾಸು.
  3. (ಗಡಿಯಾರದ) ಗತಿ ನಿಯಂತ್ರಕ; ಗತಿಚಕ್ರ.
  4. (Balance) (ಖಗೋಳ ವಿಜ್ಞಾನ) ತುಲಾ(ರಾಶಿ).
  5. ತೋಲನ; ತುಲನೆ; ವಿವಿಧ ಅಭಿಪ್ರಾಯಗಳನ್ನು ಯಾ ಕಾರ್ಯವಿಧಾನಗಳನ್ನು ತೂಗಿ ನೋಡುವುದು.
  6. ಅದೃಷ್ಟದ – ಒನೆದಾಟ, ಡೋಲಾಯಮಾನ ಸ್ಥಿತಿ, ಅನಿಶ್ಚಿತತೆ, ಸಂದಿಗ್ಧತೆ.
  7. ನಿರ್ಣಯಾಧಿಕಾರ; ತೀರ್ಮಾನಿಸುವ – ಶಕ್ತಿ, ಅಧಿಕಾರ: once England held the balance among nations ಹಿಂದೊಮ್ಮೆ ನಿರ್ಣಯಾಧಿಕಾರವು ಇಂಗ್ಲಂಡಿನದೇ ಆಗಿತ್ತು; ಹಿಂದೊಮ್ಮೆ ಇಂಗ್ಲಂಡ್‍ ಹೇಳಿದ್ದೇ ಕೊನೆಯ ತೀರ್ಮಾನವಾಗಿತ್ತು.
  8. ಸಮಗಟ್ಟುವ ತೂಕ; ಪ್ರತಿತೂಕ; ಪ್ರತಿಭಾರ; ಎದುರುಭಾರ.
  9. (ತೂಕ ಯಾ ಪ್ರಮಾಣದ) ಸಮತೆ; ಸಮಸ್ಥಿತಿ.
  10. (ಕಲೆ) (ವಿನ್ಯಾಸ ಹಾಗೂ ಪ್ರಮಾಣಗಳಲ್ಲಿ) ಸಮತೆ; ಸಾಂಗತ್ಯ; ಸಾಮರಸ್ಯ.
  11. (ದೈಹಿಕ) ಸಮತೆ; ಸ್ಥಿರತೆ; ಸಮಸ್ಥಿತಿ.
  12. (ಮನಸ್ಸಿನ) ಸಮತೆ; ಸಮಸ್ಥಿತಿ; ಸಮಚಿತ್ತತೆ; ಸ್ಥಿತಪ್ರಜ್ಞತೆ.
  13. (ತೂಕ ಯಾ ಪ್ರಮಾಣದ) ಹೆಚ್ಚಳ; ಆಧಿಕ್ಯ: the balance of advantage lies with him ಅನುಕೂಲದ ಆಧಿಕ್ಯ ಅವನ ಕಡೆಗೇ ಇದೆ; ಅವನಿಗೇ ಹೆಚ್ಚು ಅನುಕೂಲವಿದೆ.
  14. (ಜಮಾಖರ್ಚು) ಆಯವ್ಯಯದ – ಸಿಲ್ಕು, ಶೇಷ, ವ್ಯತ್ಯಾಸ, ಅಂತರ.
  15. (ಜಮಾಖರ್ಚು) ಆಯವ್ಯಯಗಳ ಸಿಲ್ಕು ತೇಲಿಕೆ; ಆಯವ್ಯಯದ ಸಮಜಾಯಿಷಿ.
  16. (ಆಡುಮಾತು) (ಯಾವುದೇ ಒಂದರ) ಉಳಿಕೆ; ಸಿಲ್ಕು; ಶೇಷ.
  17. (ಜಮಾಖರ್ಚು) ಬಾಕಿ; ಉಳಿಕೆ; ತೀರಿಸದೆ ಉಳಿದದ್ದು.
  18. (ನೃತ್ಯ) ಸಮವಾದ – ಪದವಿನ್ಯಾಸ, ಹೆಜ್ಜೆಯಿಡುವುದು.
ಪದಗುಚ್ಛ
  1. balance due ಬಾಕಿ; ಕೊಡಬೇಕಾದುದು.
  2. balance in hand ಕೈಸಿಲ್ಕು; ಕೈಯಲ್ಲಿ – ಉಳಿದದ್ದು, ನಿಂತದ್ದು; ಬರಬೇಕಾದುದನ್ನೆಲ್ಲ ವಸೂಲು ಮಾಡಿ, ಕೊಡಬೇಕಾದುದನ್ನೆಲ್ಲ ಕೊಟ್ಟು ಉಳಿದ ಹಣ.
  3. balance of mind ಸಮಚಿತ್ತತೆ; ವಿವೇಕ.
  4. balance of nature ನಿಸರ್ಗದ ಸಮತೋಲ; ಜೀವಂತ ವಸ್ತುಗಳ ಪರಸ್ಪರ ಪ್ರತಿಕ್ರಿಯೆಗಳ ಪರಿಣಾಮವಾಗಿ ಒದಗುವ ಪರಿಸ್ಥಿತಿಗಳ ಸ್ಥಾಯೀ ಸ್ಥಿತಿ ಯಾ ಸಾಮ್ಯಸ್ಥಿತಿ.
  5. balance of payments ಸಲುವಳಿಯ ಶೇಷ; ಸಂದಾಯದ ಅಂತರ, ವ್ಯತ್ಯಾಸ; ಪರರಾಷ್ಟ್ರಗಳಿಂದ ಸಲ್ಲಬೇಕಾಗಿದ್ದಕ್ಕೂ, ಪರರಾಷ್ಟ್ರಗಳಿಗೆ ಸಲ್ಲಿಸಬೇಕಾದದ್ದಕ್ಕೂ ಇರುವ ವ್ಯತ್ಯಾಸ.
  6. balance of power ಬಲಸಂತುಲನ; ಶಕ್ತಿ ಸಮತೋಲ:
    1. ಯಾವುದೇ ಒಂದು ರಾಷ್ಟ್ರ ಇತರ ರಾಷ್ಟ್ರಗಳಿಗಿಂತ ಬಲಿಷ್ಠವಾಗದಂತೆ ರಾಷ್ಟ್ರಗಳು ಹೊಂದಿರುವ ಸೈನಿಕ ಮತ್ತು ಆರ್ಥಿಕ ಬಲ ಪರಸ್ಪರ ಸಮಾನವಾಗಿರುವುದು.
    2. ಬಹುಸಂಖ್ಯಾತವರ್ಗದೊಡನೆ ಸಹಕರಿಸುವ ಮೂಲಕ ಆ ವರ್ಗಕ್ಕೆ ಅಧಿಕಾರವನ್ನು ದೊರಕಿಸುವ ಅಲ್ಪಸಂಖ್ಯಾತವರ್ಗದ ಶಕ್ತಿ, ಬಲ.
  7. balance of trade ರಾಷ್ಟ್ರವೊಂದರ ಆಮದು ರಫ್ತುಗಳ ಅಂತರ, ವ್ಯತ್ಯಾಸ.
  8. on balance ಎಲ್ಲವನ್ನೂ ಗಣನೆಗೆ ತೆಗೆದುಕೊಂಡು; ಎಲ್ಲವನ್ನೂ ಪರಿಶೀಲಿಸಿ; ಒಟ್ಟಿನ ಮೇಲೆ; ಒಟ್ಟಿನಲ್ಲಿ.
ನುಡಿಗಟ್ಟು
  1. hold the balance ನಿರ್ಣಯಿಸುವ ಯಾ ನಿಯಂತ್ರಿಸುವ ಅಧಿಕಾರ, ಶಕ್ತಿ ಹೊಂದಿರು.
  2. hold the balance even ನಿಷ್ಪಕ್ಷಪಾತದಿಂದಿರು; ಸಮಾನವಾಗಿ ವರ್ತಿಸು.
  3. in the balance ತೂಗಾಡುತ್ತ; ಡೋಲಾಯಮಾನವಾಗಿ; ಅನಿಶ್ಚಿತವಾಗಿ; ಇತ್ಯರ್ಥವಾಗದೆ; ಸಂದಿಗ್ಧ ಪರಿಸ್ಥಿತಿಯಲ್ಲಿ.
  4. keep one’s balance
    1. ಬೀಳದಿರು; ಸ್ಥಿರವಾಗಿರು.
    2. (ರೂಪಕವಾಗಿ) ಸ್ಥೈರ್ಯದಿಂದಿರು; ಉದ್ವಿಗ್ನನಾಗದಿರು; ಶಾಂತವಾಗಿರು.
  5. lose one’s balance
    1. ಹವಣು ತಪ್ಪಿ ಬೀಳು; ತೋಲತಪ್ಪಿ ಬೀಳು.
    2. ಸಮಚಿತ್ತತೆಯನ್ನು ಕಳೆದುಕೊ; ಉದ್ವಿಗ್ನನಾಗು.
  6. off one’s balance
    1. ಬೀಳುವಂತೆ.
    2. (ರೂಪಕವಾಗಿ) ಸಮಚಿತ್ತತೆ ಕಳೆದುಕೊಂಡು; ಉದ್ವಿಗ್ನನಾಗಿ.
  7. strike a balance
    1. (ಜಮಾಖರ್ಚು) ಆಯವ್ಯಯಗಳ ವ್ಯತ್ಯಾಸ ನಿರ್ಧರಿಸು; ಸಿಲ್ಕುತೇಲಿಸು.
    2. (ರೂಪಕವಾಗಿ) ಎಲ್ಲರಿಗೂ ನ್ಯಾಯವೆಂದು ಕಾಣುವ ಪರಿಹಾರ ಯಾ ರಾಜಿಸೂತ್ರ ಕಂಡುಹಿಡಿ.