See also 2lord  3Lord
1lord ಲಾರ್ಡ್‍
ನಾಮವಾಚಕ
  1. ಯಜಮಾನ; ಧಣಿ; ಒಡೆಯ; ಸ್ವಾಮಿ; ಪ್ರಭು; ಆಳುವವನು.
  2. ನಾಯಕ; ಮುಂದಾಳು; ಮುಖಂಡ.
  3. ದೊರೆ; ರಾಜ; ಅಧಿಪತಿ: our sovereign lord, the king ಪರಮಪ್ರಭುವಾದ ನಮ್ಮ ದೊರೆ.
  4. (ಕಾವ್ಯಪ್ರಯೋಗ) ಒಡೆಯ; ಮಾಲೀಕ; ಯಜಮಾನ; ಧಣಿ: lord of few acres ಕೆಲವು ಎಕರೆಗಳ ಯಜಮಾನ.
  5. (ಯಾವುದಾದರೂ) ಭಾರಿ ಉದ್ಯಮಿ; ಯವುದಾದರೂ ವ್ಯಾಪಾರೋದ್ಯಮದ – ಒಡೆಯ, ಯಜಮಾನ, ಪ್ರಭು, ಧಣಿ: the cotton lords ಹತ್ತಿಯ ಒಡೆಯರು, ದೊರೆಗಳು, ಪ್ರಭುಗಳು.
  6. (ಊಳಿಗಮಾನ್ಯ ಪದ್ಧತಿಯಲ್ಲಿ) ಧಣಿ; ಮೇಲಿನವನು; ಒಡೆಯ.
  7. (ಕಾವ್ಯಪ್ರಯೋಗಮತ್ತು ಹಾಸ್ಯ ಪ್ರಯೋಗ) ಗಂಡ: lord (and master) ಗಂಡ, ಯಜಮಾನ.
  8. (ಜ್ಯೋತಿಷ) ಬಲಿಷ್ಠಗ್ರಹ; ಉಚ್ಚಗ್ರಹ.
  9. ದೇವರು; ಭಗವಂತ: Lord knows who, how, etc. ಯಾರು, ಹೇಗೆ, ಮೊದಲಾದ$\ldots$ ಎಂಬುದನ್ನು ದೇವರೇ ಬಲ್ಲ.
  10. ಏಸುಕ್ರಿಸ್ತ: the Lord, (ಹೆಚ್ಚಾಗಿ our Lord) ನಮ್ಮ ಕ್ರಿಸ್ತ. in the year of our Lord ಕ್ರಿಸ್ತ ಶಕೆಯಲ್ಲಿ.
  11. (ಬ್ರಿಟಿಷ್‍ ಪ್ರಯೋಗ) ಶ್ರೀಮಂತ (ವರ್ಗದವನು); ಕುಲೀನ; ದೊಡ್ಡ ಮನೆತನದವನು: live like a lord ಶ್ರೀಮಂತ ಜೀವನ ನಡೆಸು. treat like a lord ಭರ್ಜರಿಯಾಗಿ ಸತ್ಕರಿಸು; ರಾಜಮರ್ಯಾದೆ ಮಾಡು.
  12. ಶ್ರೀಮಂತ; ‘ಲಾರ್ಡ್‍’ ಎಂಬ ಬಿರುದನ್ನು ತನ್ನ ಹೆಸರಿನ ಹಿಂದೆ ಔಪಚಾರಿಕವಾಗಿ ಸೇರಿಸಿಕೊಳ್ಳುವ ಹಕ್ಕುಳ್ಳವನು.
  13. (ಬ್ರಿಟಿಷ್‍ ಪ್ರಯೋಗ) (Lords) (ಸರ್ಕಾರದಿಂದ ನಿಯುಕ್ತರಾದ) ಉಚ್ಚ ಅಧಿಕಾರ ಮಂಡಲಿಯ ಸದಸ್ಯರು.
  14. (ಬ್ರಿಟಿಷ್‍ ಪ್ರಯೋಗ) (ಅನೇಕ) ಅಧಿಕಾರ ಸೂಚಕ ಹೆಸರುಗಳ ಮೊದಲನೆಯ ಪದ, ಉದಾಹರಣೆಗೆ Lord Chief Justice ಘನತೆವೆತ್ತ ಮುಖ್ಯ ನ್ಯಾಯಾಧೀಶ.
  15. (ಬ್ರಿಟಿಷ್‍ ಪ್ರಯೋಗ)
    1. ಮಾರ್ಕ್ವಿಸ್‍ (marquis), ಅರ್ಲ್‍ (earl), ವೈಕೌಂಟ್‍ (viscount) ಯಾ ಬ್ಯಾರನ್‍ (baron) ಈ ಶ್ರೀಮಂತ ವರ್ಗದವರ ವ್ಯಕ್ತಿನಾಮಗಳಿಗೆ ಹೀಗೆ ಸೇರಿಸುವ ಒಕ್ಕಣೆ.
    2. of ಬಿಟ್ಟು ಹೇಳುವ ವಾಡಿಕೆ, ಉದಾಹರಣೆಗೆ Earl of Derby ಯಾ Lord Derby.
    3. ವಿದೇಶಿ ಬಿರುದುಗಳಲ್ಲಿ ಮಾತ್ರ ಹೆಸರಿನ ಹಿಂದೆ ಉಪಯೋಗಿಸುವ baron ಬದಲು Lord ಪ್ರಯೋಗವಾಗುವುದು.
  16. (ಕ್ರೈಸ್ತನಾಮ ಮತ್ತು ಮನೆತನದ ಹೆಸರಿನ ಮೊದಲು ಬಂದಾಗ) ಡ್ಯೂಕನ ಯಾ ಮಾರ್ಕ್ವಿಸನ ಕಿರಿಯ ಮಗ.
ಪದಗುಚ್ಛ
  1. Civil Lord (ಬ್ರಿಟಿಷ್‍ ಪ್ರಯೋಗ) ನೌಕಾ ಮಂಡಲಿಯ ಅಸೈನಿಕ ಯಾ ನಾಗರಿಕ ಸದಸ್ಯ.
  2. drunk as a lord ಅತಿಯಾಗಿ ಕುಡಿದ.
  3. First Lord (ಬ್ರಿಟಿಷ್‍ ಪ್ರಯೋಗ) ಸರ್ಕಾರದಿಂದ ನಿಯುಕ್ತವಾದ ಉಚ್ಚ ಅಧಿಕಾರವುಳ್ಳ ಮಂಡಳಿಯ ಅಧ್ಯಕ್ಷ.
  4. good Lord! ದೇವರೇ! ಭಗವಂತ! (ಆಶ್ಚರ್ಯದ ಯಾ ಭಯದ ಉದ್ಗಾರ).
  5. House of Lords
    1. ಗ್ರೇಟ್‍ ಬ್ರಿಟನ್ನಿನ ಹೌಸ್‍ ಆಹ್‍ ಲಾರ್ಡ್ಸ್‍ ಸಭೆ; ಶ್ರೀಮಂತ ಶಾಸನಸಭೆ; ಇಂಗ್ಲೆಂಡಿನ ಶಾಸನಸಭೆಗಳಲ್ಲಿ ಮೇಲ್ಮನೆ.
    2. (ಈ ಸಭೆಯ ಸದಸ್ಯರಲ್ಲಿ ವಿಶೇಷ ಯೋಗ್ಯತೆಯುಳ್ಳ ಕೆಲವರನ್ನು ಆಯ್ದು ನಿಯಮಿಸಿದ) ಅಂತಿಮ ಮನವಿಯ ನ್ಯಾಯಸಮಿತಿ; ಮೇಲ್ಮನೆಯ ನ್ಯಾಯಸಮಿತಿ.
  6. Lord(y)! = ಪದಗುಚ್ಛ \((4)\).
  7. Lord bless me(or us or my soul] or you)! ದೇವರ ದಯೆ! ದೇವರೇ ಕಾಪಾಡಬೇಕು! (ಆಶ್ಚರ್ಯ ಮೊದಲಾದವನ್ನು ಸೂಚಿಸುವ ಉದ್ಗಾರಗಳು).
  8. Lord have mercy? = ಪದಗುಚ್ಛ \((7)\).
  9. Lord in waiting (ಬ್ರಿಟಿಷ್‍ ಪ್ರಯೋಗ) (ಮಹಾರಾಣಿಯ) ಆಪ್ತಬಕ್ಷಿಯ ಬಿರುದು.
  10. Lord(Justice) of Appeal (ಬ್ರಿಟಿಷ್‍ ಪ್ರಯೋಗ) ಅಪೀಲು ನ್ಯಾಯಾಲಯದ ನ್ಯಾಯಾಧೀಶ.
  11. Lord of Misrule (ಚರಿತ್ರೆ) ಹುಚ್ಚುರಾಜ; ತಿಕ್ಕಲಪ್ರಭು; ಶ್ರೀಮಂತರ ಮನೆ ಮೊದಲಾದವುಗಳಲ್ಲಿ ಕ್ರಿಸ್‍ಮಸ್‍ನ ಮೋಜಿನ ಕೂಟಗಳಲ್ಲಿ ದರ್ಬಾರು ನಡೆಸುತ್ತಿದ್ದ, ಯಾಜಮಾನ್ಯ ವಹಿಸುತ್ತಿದ್ದ ವ್ಯಕ್ತಿ.
  12. Lord of the Bedchamber (ಬ್ರಿಟಿಷ್‍ ಪ್ರಯೋಗ) (ಚಕ್ರವರ್ತಿಯ) ಆಪ್ತಬಕ್ಷಿಯ ಬಿರುದು.
  13. Lord of the manor = manor(2).
  14. Lord (only) knows (ಆಡುಮಾತು) ದೇವರೇ ಬಲ್ಲ! ದೇವರಿಗೇ ಗೊತ್ತು!
  15. Lord President of the Council (ಬ್ರಿಟಿಷ್‍ ಪ್ರಯೋಗ) ಪ್ರಿವಿ ಕೌನ್ಸಿಲ್‍ನಲ್ಲಿ ಅಧ್ಯಕ್ಷತೆ ವಹಿಸುವ ಕ್ಯಾಬಿನೆಟ್‍ ಮಂತ್ರಿ.
  16. Lord Privy Seal (ಬ್ರಿಟಿಷ್‍ ಪ್ರಯೋಗ) ಸರ್ಕಾರಿ ಕೆಲಸವಿಲ್ಲದ ಹಿರಿಯ ಕ್ಯಾಬಿನೆಟ್‍ ಮಂತ್ರಿ.
  17. Lords Commissioners (ಬ್ರಿಟಿಷ್‍ ಪ್ರಯೋಗ) = 1lord(13).
  18. Lord’s Day ಭಾನುವಾರ.
  19. Lords of creation
    1. ಮಾನವಕುಲ; ಮಾನವರು.
    2. (ಹಾಸ್ಯ ಪ್ರಯೋಗ) ಗಂಡಸರು; ಪುರುಷರು.
  20. Lords of Session (Court of Session) ಸ್ಕಾಟ್ಲೆಂಡಿನ ಅತ್ಯುಚ್ಚ ಕೋರ್ಟಿನ ನ್ಯಾಯಾಧೀಶರು.
  21. Lord of the Admiralty, Treasury, etc. (ಇಂಗ್ಲೆಂಡ್‍) ನೌಕಾಧಿಪತ್ಯ, ರಾಜ್ಯಕೋಶ, ಮೊದಲಾದ ಮಂಡಲಿಗಳ ಸದಸ್ಯರು.
  22. Lord’s Prayer (Our Father ಎಂಬ ಪದಗಳಿಂದ ಪ್ರಾರಂಭವಾಗುವ) ಪ್ರಭು ಪ್ರಾರ್ಥನೆ.
  23. Lords spiritual (ಬ್ರಿಟಿಷ್‍ ಪ್ರಯೋಗ) ಹೌಸ್‍ ಆಹ್‍ ಲಾರ್ಡ್ಸ್‍ನ ಬಿಷಪ್‍ಗಳು.
  24. Lord’s Supper = Eucharist.
  25. Lord’s table
    1. ಚರ್ಚಿನ ಬಲಿಪೀಠ.
    2. = Eucharist.
  26. Lords temporal ಹೌಸ್‍ ಆಹ್‍ ಲಾರ್ಡ್ಸ್‍ನ ಸದಸ್ಯರು (ಬಿಷಪ್ಪರನ್ನು ಹೊರತು ಪಡಿಸಿ).
  27. My Lord (ಡ್ಯೂಕ್‍ ಅಂತಸ್ತಿನ ಕೆಳಗಿನ ಶ್ರೀಮಂತ, ಬಿಷಪ್‍, ಲಾರ್ಡ್‍ ಮೇಯರ್‍ ಯಾ ಪರಮೋಚ್ಚ ನ್ಯಾಯಸ್ಥಾನದ ನ್ಯಾಯಾಧಿಪತಿ – ಇವರನ್ನು ಸಂಬೋಧಿಸುವಾಗ ಬಳಸುವ ಗೌರವದ ಒಕ್ಕಣೆ) ಮಹಾಸ್ವಾಮಿ! ಪ್ರಭುವೇ!.
  28. oh Lord(y)! = ಪದಗುಚ್ಛ \((4)\).
  29. our Lord ನಮ್ಮ ಪ್ರಭು (ಏಸುಕ್ರಿಸ್ತನ ಹೆಸರು.)
  30. Sea Lord (ಬ್ರಿಟಿಷ್‍ ಪ್ರಯೋಗ) ನೌಕಾಬಲದ ಆಡಳಿತ ಇಲಾಖೆಯ ನೌಕಾಸದಸ್ಯ.
  31. swear like a lord ಮಿತಿಮೀರಿ ಆಣೆಯಿಡು.
  32. the Lords (ಲೌಕಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಿಗೆ ಸೇರಿದ) ಬ್ರಿಟನ್ನಿನ ಪಾರ್ಲಿಮೆಂಟಿನ ಶ್ರೀಮಂತ ಸದಸ್ಯರು.
See also 1lord  3Lord
2lord ಲಾರ್ಡ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯನ್ನು) ಶ್ರೀಮಂತ ಪದವಿಗೇರಿಸು.
  2. (ವ್ಯಕ್ತಿಗೆ) ಲಾರ್ಡ್‍ ಬಿರುದು ನೀಡು.
  3. (ಸಾಮಾನ್ಯವಾಗಿ ಕರ್ಮಣಿಪ್ರಯೋಗ) (ಇನ್ನೊಬ್ಬನ ಮೇಲೆ) ಯಜಮಾನಿಕೆ, ಯಾಜಮಾನ್ಯ – ನಡೆಸು; ಪ್ರಭುತ್ವ ಮಾಡು; ಅಧಿಕಾರ ಚಲಾಯಿಸು; ದಬ್ಬಾಳಿಕೆ ನಡೆಸು: will not be lorded over (ನನ್ನ ಮೇಲೆ) ಅಧಿಕಾರ ಚಲಾಯಿಸಲು ಎಡೆಗೊಡುವುದಿಲ್ಲ. lording it over his household ಅವನ ಮನೆಯವರ ಮೇಲೆಲ್ಲಾ ಯಜಮಾನಿಕೆ ನಡೆಸುತ್ತ.
See also 1lord  2lord
3Lord ಲಾರ್ಡ್‍
ಭಾವಸೂಚಕ ಅವ್ಯಯ

ದೇವರೇ! (ಆಶ್ಚರ್ಯ ಸೂಚಕ ಉದ್ಗಾರ).