See also 2lobby
1lobby ಲಾಬಿ
ನಾಮವಾಚಕ
(ಬಹುವಚನ lobbies).
  1. (ಕಟ್ಟಡದ)
    1. ಪ್ರವೇಶ ಮಂಟಪ; ಮುಖಮಂಟಪ; ದ್ವಾರಮಂಟಪ.
    2. ಮುಂಗೋಣೆ; ಮುಖ್ಯ ಕೋಣೆಯನ್ನು ಪ್ರವೇಶಿಸುವುದಕ್ಕೆ ಮೊದಲು ಇರುವ, ಕಾಯುವ ಕೋಣೆ.
    3. ಪ್ರವೇಶಾಂಗಣ; ಪಡಸಾಲೆ; ಮೊಗಸಾಲೆ.
    4. ನಡವೆ; ಮುಂಬಾಗಿಲಿನಿಂದ ಒಳಕ್ಕೆ ಕರೆದೊಯ್ಯುವ ಓಣಿ.
    1. ಸಭಾಕಕ್ಷೆ; ಸಾರ್ವಜನಿಕಾಂಗಣ; (ಬ್ರಿಟನ್ನಿನ ಹೌಸ್‍ ಆಹ್‍ ಕಾಮನ್ಸ್‍ ಸಭೆ ಮೊದಲಾದವುಗಳಲ್ಲಿ) ಹೊರಗಿನವರು ಶಾಸನಸಭೆಯ ಸದಸ್ಯರನ್ನು ಭೇಟಿಮಾಡಲು ಬಳಸುವ, ಸಾರ್ವಜನಿಕರಿಗೆ ಪ್ರವೇಶವಿರುವ, ದೊಡ್ಡ ಸಭಾಂಗಣ.
    2. ಮತಾಂಗಣ; ಶಾಸನಸಭಾ ಸದಸ್ಯರು ಓಟು ಮಾಡಲು ತೆರಳುವ ಎರಡು ಮೊಗಸಾಲೆಗಳಲ್ಲೊಂದು.
  2. ಲಾಬಿ:
    1. ವಶೀಲಿ ಮಂದಿ; ವಶೀಲಿಗಾರರ – ಗುಂಪು, ತಂಡ: ನಿರ್ದಿಷ್ಟ ಹಿತಾಸಕ್ತರ ಪರವಾಗಿ ಶಾಸಕರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವ ಗುಂಪು; the anti-abortion lobby ಗರ್ಭಪಾತ ವಿರೋಧಿ ತಂಡ. the anti-prohibition lobby ಪಾನ ನಿಷೇಧ ವಿರೋಧಿ ಗುಂಪು.
    2. ಶಾಸಕರ ಮೇಲೆ ಪ್ರಭಾವ ಬೀರಲು ಸಾರ್ವಜನಿಕ ವ್ಯಕ್ತಿಗಳ ಗುಂಪೊಂದರ ವ್ಯವಸ್ಥಿತ ಪ್ರಯತ್ನ: a lobby of MPs ಪಾರ್ಲಿಮೆಂಟ್‍ ಸದಸ್ಯರ ಲಾಬಿ.
  3. (ಯುನೈಟೆಡ್‍ ಕಿಂಗ್ಡಮ್‍ನಲ್ಲಿ) ಮೂಲ ಸೂಚಿಸಲಾಗದಂತೆ ಸರ್ಕಾರದಿಂದ ಸುದ್ದಿ, ಸೂಚನೆ, ಸಲಹೆಗಳನ್ನು ಪಡೆಯುವ ಬಾತ್ಮಿದಾರರ, ಪತ್ರಿಕಾಕರ್ತರ, ಸುದ್ದಿಗಾರರ ತಂಡ: lobby correspondent ಲಾಬಿ ಬಾತ್ಮಿದಾರ.
ಪದಗುಚ್ಛ
  1. division lobby = 1lobby(2b).
  2. the lobby = 1lobby(4).
See also 1lobby
2lobby ಲಾಬಿ
ಕ್ರಿಯಾಪದ

(ವರ್ತಮಾನ ಕಾಲ ಪ್ರಥಮ ಪುರುಷ ಏಕವಚನ lobbies, ಭೂತರೂಪ ಮತ್ತು ಭೂತಕೃದಂತ lobbied).

ಸಕರ್ಮಕ ಕ್ರಿಯಾಪದ
  1. (ಪ್ರಭಾವಶಾಲಿ ವ್ಯಕ್ತಿಯ) ಬೆಂಬಲ ಕೋರು.
  2. (ಸಾರ್ವಜನಿಕ ವಿಷಯದಲ್ಲಿ) (ಶಾಸಕರ ಮೇಲೆ) ವಶೀಲಿ, ಪ್ರಭಾವ ಬೀರು; ಶಾಸನಸಭಾ ಸದಸ್ಯರನ್ನು ಭೇಟಿ ಮಾಡಿ ಅವರ ಮೇಲೆ ಪ್ರಭಾವ ಬೀರು.
  3. ವಶೀಲಿಯ ಯಾ ಮೊಗಸಾಲೆಯಲ್ಲಿ ಭೇಟಿಯ ಮೂಲಕ (ಮಸೂದೆ ಮೊದಲಾದವು) ಅಂಗೀಕೃತವಾಗುವಂತೆ ಮಾಡು.
  4. (ಶಾಸನಸಭೆಯ ಸದಸ್ಯರ) ಓಟುಗಳನ್ನು – ಕೇಳು, ಕೋರು; ಓಟು ಬೇಟೆ ಮಾಡು.
ಅಕರ್ಮಕ ಕ್ರಿಯಾಪದ

ಶಾಸನ ಸಭೆಯ ಮೊಗಸಾಲೆಗೆ ಪದೇಪದೇ ಭೇಟಿಕೊಡು, ಹೋಗುತ್ತಿರು.