See also 2lobby
1lobby ಲಾಬಿ
ನಾಮವಾಚಕ
(ಬಹುವಚನ lobbies).
  1. (ಕಟ್ಟಡದ)
    1. ಪ್ರವೇಶ ಮಂಟಪ; ಮುಖಮಂಟಪ; ದ್ವಾರಮಂಟಪ.
    2. ಮುಂಗೋಣೆ; ಮುಖ್ಯ ಕೋಣೆಯನ್ನು ಪ್ರವೇಶಿಸುವುದಕ್ಕೆ ಮೊದಲು ಇರುವ, ಕಾಯುವ ಕೋಣೆ.
    3. ಪ್ರವೇಶಾಂಗಣ; ಪಡಸಾಲೆ; ಮೊಗಸಾಲೆ.
    4. ನಡವೆ; ಮುಂಬಾಗಿಲಿನಿಂದ ಒಳಕ್ಕೆ ಕರೆದೊಯ್ಯುವ ಓಣಿ.
    1. ಸಭಾಕಕ್ಷೆ; ಸಾರ್ವಜನಿಕಾಂಗಣ; (ಬ್ರಿಟನ್ನಿನ ಹೌಸ್‍ ಆಹ್‍ ಕಾಮನ್ಸ್‍ ಸಭೆ ಮೊದಲಾದವುಗಳಲ್ಲಿ) ಹೊರಗಿನವರು ಶಾಸನಸಭೆಯ ಸದಸ್ಯರನ್ನು ಭೇಟಿಮಾಡಲು ಬಳಸುವ, ಸಾರ್ವಜನಿಕರಿಗೆ ಪ್ರವೇಶವಿರುವ, ದೊಡ್ಡ ಸಭಾಂಗಣ.
    2. ಮತಾಂಗಣ; ಶಾಸನಸಭಾ ಸದಸ್ಯರು ಓಟು ಮಾಡಲು ತೆರಳುವ ಎರಡು ಮೊಗಸಾಲೆಗಳಲ್ಲೊಂದು.
  2. ಲಾಬಿ:
    1. ವಶೀಲಿ ಮಂದಿ; ವಶೀಲಿಗಾರರ – ಗುಂಪು, ತಂಡ: ನಿರ್ದಿಷ್ಟ ಹಿತಾಸಕ್ತರ ಪರವಾಗಿ ಶಾಸಕರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವ ಗುಂಪು; the anti-abortion lobby ಗರ್ಭಪಾತ ವಿರೋಧಿ ತಂಡ. the anti-prohibition lobby ಪಾನ ನಿಷೇಧ ವಿರೋಧಿ ಗುಂಪು.
    2. ಶಾಸಕರ ಮೇಲೆ ಪ್ರಭಾವ ಬೀರಲು ಸಾರ್ವಜನಿಕ ವ್ಯಕ್ತಿಗಳ ಗುಂಪೊಂದರ ವ್ಯವಸ್ಥಿತ ಪ್ರಯತ್ನ: a lobby of MPs ಪಾರ್ಲಿಮೆಂಟ್‍ ಸದಸ್ಯರ ಲಾಬಿ.
  3. (ಯುನೈಟೆಡ್‍ ಕಿಂಗ್ಡಮ್‍ನಲ್ಲಿ) ಮೂಲ ಸೂಚಿಸಲಾಗದಂತೆ ಸರ್ಕಾರದಿಂದ ಸುದ್ದಿ, ಸೂಚನೆ, ಸಲಹೆಗಳನ್ನು ಪಡೆಯುವ ಬಾತ್ಮಿದಾರರ, ಪತ್ರಿಕಾಕರ್ತರ, ಸುದ್ದಿಗಾರರ ತಂಡ: lobby correspondent ಲಾಬಿ ಬಾತ್ಮಿದಾರ.
ಪದಗುಚ್ಛ
  1. division lobby = 1lobby(2b).
  2. the lobby = 1lobby(4).