See also 2load
1load ಲೋಡ್‍
ನಾಮವಾಚಕ
  1. ಹೊರೆ; ಹೇರು; ಭಾರ; ತೂಕ; ವಜೆ; ವಜನು.
  2. ಹೊರುವ ಮೊತ್ತ; ಹೇರಿನ ಮೊತ್ತ: cart-load ಬಂಡಿಯ ಹೇರು; ಗಾಡಿಭರ್ತಿ; ಗಾಡಿಹೊರೆ. a bus load of tourists ಒಂದು ಬಸ್ಸು ತುಂಬುವಷ್ಟು ಪ್ರವಾಸಿಗರು.
  3. ಒಂದು – ಹೊರೆ, ಹೇರು, ಭಾರ; ಕೆಲವು ವಸ್ತುಗಳ ಗೊತ್ತಾದ ಅಳತೆಯ ಯಾ ತೂಕದ ಮಾನ: a lorry-load of bricks ಒಂದು ಲಾರಿ (ಭರ್ತಿ, ತುಂಬ) ಇಟ್ಟಿಗೆ.
  4. (ಕೆಲಸ, ಜವಾಬ್ದಾರಿ, ರಕ್ಷಣೆ, ದುಃಖ, ಮೊದಲಾದವುಗಳ) ಭಾರ; ಹೊರೆ.
  5. (ಬಹುವಚನದಲ್ಲಿ) (ಆಡುಮಾತು) ದಂಡಿ; ಹೇರಳ; ಸಮೃದ್ಧಿ; ಹೊರೆಹೊರೆ; ರಾಶಿರಾಶಿ; ಬಂಡಿಗಟ್ಟಲೆ: loads of fun ಹೊರೆಹೊರೆ ತಮಾಷೆ.
  6. (ವಿದ್ಯುದ್ವಿಜ್ಞಾನ) ಹೊರೆ; ಭಾರ; ಡೈನಮೊ ವಿದ್ಯುಜ್ಜನಕ ಕೇಂದ್ರ ಮೊದಲಾದವು ಉತ್ಪಾದಿಸುವ ಯಾ ಮೋಟಾರು, ಯಂತ್ರ, ದೀಪಗಳು, ಮೊದಲಾದವು ಉಪಯೋಗಿಸುವ ವಿದ್ಯುತ್ತಿನ ಪ್ರಮಾಣ.
  7. (ಇಲೆಕ್ಟ್ರಾನಿಕ್ಸ್‍) ಹೊರೆ; ಟ್ರಾನ್ಸಿಸ್ಟರ್‍ ಮತ್ತಾವುದೇ ಸಾಧನದ ನಿರ್ಗತವನ್ನು ಗ್ರಹಿಸುವ ಯಾ ಅಭಿವರ್ಧಿಸುವ ಇಂಪೀಡೆನ್ಸ್‍ ಯಾ ವಿದ್ಯುನ್ಮಂಡಲ.
  8. ಹೊರೆ; ಭಾರ; ಯಾವುದೇ ಯಂತ್ರ ಯಾ ಯಂತ್ರಭಾಗವು ಒಳಗಾಗಬೇಕಾಗುವ ಘರ್ಷಣೆಯ ಮೊತ್ತ.
  9. (ವಾಸ್ತುಶಿಲ್ಪ) ವಹನಭಾರ; (ಕಮಾನು ಕಂಬ ಮೊದಲಾದ ಆಧಾರ ರಚನೆಯು) ಹೊರಬೇಕಾಗುವ – ಭಾರ, ಹೊರೆ, ಮೊದಲಾದವು.
  10. ಹೊರೆ; ಭಾರ; ಹೊರೆಯಾಗಿ ಯಾ ಪ್ರಬಂಧಕವಾಗಿ ಕೆಲಸಮಾಡುವ ವಸ್ತು, ಪದಾರ್ಥ ಯಾ ಶಕ್ತಿ.
  11. ಚಲನಬಲಕ್ಕೆ ಎದುರಾಗುವ ಯಂತ್ರಗಳ ಪ್ರತಿರೋಧ, ತಡೆ, ಅಡ್ಡಿ, ನಿರೋಧ.
  12. (ಯಂತ್ರಕ್ಕೆ ಯಾ ವ್ಯಕ್ತಿಗೆ ವಹಿಸಿರುವ) ಕೆಲಸದ – ಹೊರೆ, ಭಾರ.
ನುಡಿಗಟ್ಟು
  1. get a load (ಅಶಿಷ್ಟ) ನೋಡು; ಗಮನಿಸು; ಗಮನವಿಟ್ಟು ಕೇಳು: come over here.... get a load of this script ಬಾ ಇಲ್ಲಿ.... ಈ ಹಸ್ತಪ್ರತಿಯನ್ನು ಗಮನಿಸು.
  2. take a load off (one’s mind) ಒಬ್ಬನ ಮನಸ್ಸಿನ ಭಾರ, ಆತಂಕ – ತಗ್ಗಿಸು, ಪರಿಹರಿಸು; ಮನಸ್ಸಿನ ಭಾರವಿಳಿಸು; ಮನಸ್ಸನ್ನು ಹಗುರಗೊಳಿಸು.
See also 1load
2load ಲೋಡ್‍
ಸಕರ್ಮಕ ಕ್ರಿಯಾಪದ
  1. (ಮನುಷ್ಯ, ವಾಹನ, ಹಡಗು, ಮೊದಲಾದವುಗಳ ಮೇಲೆ) ಭಾರ ಯಾ ಸಾಮಾನು – ಹೇರು, ಹಾಕು, ಹೊರಿಸು.
  2. (ಸರಕು ಮೊದಲಾದವನ್ನು ಹಡಗು ಮೊದಲಾದವಕ್ಕೆ) ತುಂಬು; ಹೇರು; ಭರ್ತಿಹಾಕು: we loaded our luggage into the boats ನಮ್ಮ ಸಾಮಾನು ಸರಂಜಾಮನ್ನು ದೋಣಿಗಳೊಳಕ್ಕೆ ತುಂಬಿದೆವು.
  3. (ವಸ್ತು ಮೊದಲಾದವನ್ನು) ಭಾರವಾಗಿಸು; ತೂಕವಾಗಿಸು; ಹೊರೆಯಾಗಿಸು; (ವಸ್ತು ಮೊದಲಾದವು) ಹೆಚ್ಚು ಭಾರವಾಗುವಂತೆ ಮಾಡು.
  4. ಭಾರವಾಗು; ಭಾರವಾಗಿ – ಒತ್ತುತ್ತಿರು, ಒತ್ತಡ ಹಾಕುತ್ತಿರು, ತೊಂದರೆ ಕೊಡುತ್ತಿರು: stomach loaded with food ಅತಿಯಾದ ಆಹಾರದಿಂದ ಹೊಟ್ಟೆ ಭಾರವಾಗಿತ್ತು.
  5. (ಯಾವುದೋ ಒಂದಕ್ಕೆ) ಹೊರೆಯಾಗು; ಭಾರವಾಗು; ಯಾವುದೇ ಒಂದರ ಹೊರುವ ಶಕ್ತಿಯನ್ನು ಯಾ ವಹನ ಸಾಮರ್ಥ್ಯವನ್ನು ಪರೀಕ್ಷಿಸುವಂತಿರು: table loaded with food ಆಹಾರ ವಸ್ತುಗಳಿಂದ ಭಾರವಾಗಿರುವ ಮೇಜು.
    1. ಅತಿಯಾಗಿ ತುಂಬು; ಮಿತಿಮೀರಿ ಹೇರು; ಹೊರಲಾಗದಷ್ಟು ಹೊರಿಸು: loaded us with work ನಮಗೆ ಮಿತಿಮೀರಿ ಕೆಲಸ ಹೇರಿದರು.
    2. (ರೂಪಕವಾಗಿ) ಅತಿಯಾಗಿ ಹೊರಿಸು; ವಿಪರೀತ ಹೇರು: loaded her with praise ಅವಳ ಮೇಲೆ ಅತಿಯಾಗಿ ಹೊಗಳಿಕೆ ಹೇರಿದರು. loaded us with abuse ವಿಪರೀತ ಬೈಗಳ ಹೊರಿಸಿದರು.
  6. (ಫಿರಂಗಿ, ಬಂದೂಕು, ಮೊದಲಾದವನ್ನು) ಬಾರು ಮಾಡು; (ಅವಕ್ಕೆ) ಮದ್ದು ಗುಂಡು ತುಂಬು: am loaded (ಬಂದೂಕು ಮೊದಲಾದವನ್ನು) ತುಂಬಿಕೊಂಡಿದ್ದೇನೆ.
  7. (ಕ್ಯಾಮರಾ ಒಳಕ್ಕೆ ಫಿಲ್ಮ್‍, ಟೇಪ್‍ ರಿಕಾರ್ಡರ್‍ ಒಳಕ್ಕೆ ಮ್ಯಾಗ್ನೆಟಿಕ್‍ ಟೇಪು, ಕಂಪ್ಯೂಟರಿನೊಳಕ್ಕೆ ಪ್ರೋಗ್ರಾಮು, ಮೊದಲಾದ ನಿರ್ದಿಷ್ಟ ಕಾರ್ಯನಿರ್ವಾಹಕ ಮಾಧ್ಯಮವನ್ನು ಉಪಕರಣದೊಳಕ್ಕೆ) ತುಂಬು; ಹಾಕು.
  8. (ಜೀವವಿಮೆಯ ವಿಷಯದಲ್ಲಿ) (ವಿಶೇಷ ಕಾರಣಗಳಿಂದ ವಿಮೆಯ) ಕಂತನ್ನು ಏರಿಸು; ಕಂತಿನ ಮೊತ್ತವನ್ನು ಹೆಚ್ಚಿಸು.
  9. (ಸೀಸ ತುಂಬಿ) ಭಾರವಾಗಿಸು: a loaded cane ಸೀಸ ತುಂಬಿಸಿದ ಬೆತ್ತ, ಕೋಲು.
  10. (ದಾಳ, ರೂಲೆಟ್‍ ಚಕ್ರ, ಮೊದಲಾದವುಗಳಿಗೆ) ಒಂದು ಕಡೆ ಭಾರ ತುಂಬಿಸು, ಭಾರಹಾಕು: loaded dice ಹೇರುದಾಳ; ಬೇಕಾದ ಮುಖವು ಮೇಲುಗಡೆ ತಿರುಗಿ ಬೀಳುವಂತೆ ಒಂದು ಕಡೆ ಭಾರ ತುಂಬಿಸಿದ ದಾಳ.
  11. (ತೂಕ ಹೆಚ್ಚಿಸಲು) ಬೇರೆ ವಸ್ತುವನ್ನು ಬೆರಸು; ಬೆರಕೆಮಾಡು; ಮಿಶ್ರಣ ಮಾಡು.
  12. (ಮುಖ್ಯವಾಗಿ ಮದ್ಯದ ಸತ್ತ್ವ ಹೆಚ್ಚಿಸಲು ಬೇರೆ ವಸ್ತುವನ್ನು) ಸೇರಿಸು; ಬೆರಸು.
  13. (ಗುಪ್ತ ಸೂಚನೆ, ಅರ್ಥ, ಮೊದಲಾದವನ್ನು) ತುಂಬು; ಸೇರಿಸು: a loaded question (ಅರ್ಥ)ಗರ್ಭಿತ ಪ್ರಶ್ನೆ.
  14. (ಸ್ಟಾಕ್‍ ಎಕ್ಸ್‍ಚೇಂಜ್‍) (ಬಂಡವಾಳ ಪತ್ರಗಳನ್ನು) ಅತಿಯಾಗಿ, ಬಹಳ ಯಾ ವಿಪರೀತ – ಕೊಳ್ಳು.
ಅಕರ್ಮಕ ಕ್ರಿಯಾಪದ

(ಹಡಗು, ವಾಹನ, ಮನುಷ್ಯ, ಮೊದಲಾದವುಗಳ ವಿಷಯದಲ್ಲಿ) ಭಾರ ಹೊತ್ತುಕೊ; ಹೊರೆತುಂಬಿಕೊ; ಹೊರೆ ಏರಿಸಿಕೊ: the bus usually loads at the side door ಸಾಮಾನ್ಯವಾಗಿ ಬಸ್ಸು ತನ್ನ ಪಕ್ಕದ ಬಾಗಿಲಿಂದ ಜನರನ್ನು ತುಂಬಿಕೊಳ್ಳುತ್ತದೆ.

ನುಡಿಗಟ್ಟು
  1. loaded up with ಕೈಯಲ್ಲಿ ಭಾರಿ ಮೊತ್ತದ ಬಂಡವಾಳ ಪತ್ರಗಳನ್ನು ಇಟ್ಟುಕೊಂಡು.
  2. load the dice
    1. (ಕೈವಾಡದಿಂದ) ಫಲಿತಾಂಶವನ್ನು ಹೆಚ್ಚುಕಡಿಮೆ ಮಾಡು.
    2. (ಒಬ್ಬನಿಗೆ) ಅನುಕೂಲ ಯಾ ಪ್ರತಿಕೂಲ ಪರಿಸ್ಥಿತಿಯುಂಟಾಗುವಂತೆ ಮಾಡು.
    3. (ಒಬ್ಬನ) ವಾದಸರಣಿ ಮೊದಲಾದವನ್ನು ತನ್ನ ಅನುಕೂಲಕ್ಕೆ ತಕ್ಕಂತೆ (ಒಮ್ಮುಖವಾಗಿ) ಮಂಡಿಸು: he has loaded the dice against himself by his previous action ತನ್ನ ಹಿಂದಿನ ನಡವಳಿಕೆಯಿಂದ ಅವನು ಪರಿಸ್ಥಿತಿಯನ್ನು ಪ್ರತಿಕೂಲಗೊಳಿಸಿಕೊಂಡಿದ್ದಾನೆ.
  3. load up = 2load(6a, b).