See also 2load
1load ಲೋಡ್‍
ನಾಮವಾಚಕ
  1. ಹೊರೆ; ಹೇರು; ಭಾರ; ತೂಕ; ವಜೆ; ವಜನು.
  2. ಹೊರುವ ಮೊತ್ತ; ಹೇರಿನ ಮೊತ್ತ: cart-load ಬಂಡಿಯ ಹೇರು; ಗಾಡಿಭರ್ತಿ; ಗಾಡಿಹೊರೆ. a bus load of tourists ಒಂದು ಬಸ್ಸು ತುಂಬುವಷ್ಟು ಪ್ರವಾಸಿಗರು.
  3. ಒಂದು – ಹೊರೆ, ಹೇರು, ಭಾರ; ಕೆಲವು ವಸ್ತುಗಳ ಗೊತ್ತಾದ ಅಳತೆಯ ಯಾ ತೂಕದ ಮಾನ: a lorry-load of bricks ಒಂದು ಲಾರಿ (ಭರ್ತಿ, ತುಂಬ) ಇಟ್ಟಿಗೆ.
  4. (ಕೆಲಸ, ಜವಾಬ್ದಾರಿ, ರಕ್ಷಣೆ, ದುಃಖ, ಮೊದಲಾದವುಗಳ) ಭಾರ; ಹೊರೆ.
  5. (ಬಹುವಚನದಲ್ಲಿ) (ಆಡುಮಾತು) ದಂಡಿ; ಹೇರಳ; ಸಮೃದ್ಧಿ; ಹೊರೆಹೊರೆ; ರಾಶಿರಾಶಿ; ಬಂಡಿಗಟ್ಟಲೆ: loads of fun ಹೊರೆಹೊರೆ ತಮಾಷೆ.
  6. (ವಿದ್ಯುದ್ವಿಜ್ಞಾನ) ಹೊರೆ; ಭಾರ; ಡೈನಮೊ ವಿದ್ಯುಜ್ಜನಕ ಕೇಂದ್ರ ಮೊದಲಾದವು ಉತ್ಪಾದಿಸುವ ಯಾ ಮೋಟಾರು, ಯಂತ್ರ, ದೀಪಗಳು, ಮೊದಲಾದವು ಉಪಯೋಗಿಸುವ ವಿದ್ಯುತ್ತಿನ ಪ್ರಮಾಣ.
  7. (ಇಲೆಕ್ಟ್ರಾನಿಕ್ಸ್‍) ಹೊರೆ; ಟ್ರಾನ್ಸಿಸ್ಟರ್‍ ಮತ್ತಾವುದೇ ಸಾಧನದ ನಿರ್ಗತವನ್ನು ಗ್ರಹಿಸುವ ಯಾ ಅಭಿವರ್ಧಿಸುವ ಇಂಪೀಡೆನ್ಸ್‍ ಯಾ ವಿದ್ಯುನ್ಮಂಡಲ.
  8. ಹೊರೆ; ಭಾರ; ಯಾವುದೇ ಯಂತ್ರ ಯಾ ಯಂತ್ರಭಾಗವು ಒಳಗಾಗಬೇಕಾಗುವ ಘರ್ಷಣೆಯ ಮೊತ್ತ.
  9. (ವಾಸ್ತುಶಿಲ್ಪ) ವಹನಭಾರ; (ಕಮಾನು ಕಂಬ ಮೊದಲಾದ ಆಧಾರ ರಚನೆಯು) ಹೊರಬೇಕಾಗುವ – ಭಾರ, ಹೊರೆ, ಮೊದಲಾದವು.
  10. ಹೊರೆ; ಭಾರ; ಹೊರೆಯಾಗಿ ಯಾ ಪ್ರಬಂಧಕವಾಗಿ ಕೆಲಸಮಾಡುವ ವಸ್ತು, ಪದಾರ್ಥ ಯಾ ಶಕ್ತಿ.
  11. ಚಲನಬಲಕ್ಕೆ ಎದುರಾಗುವ ಯಂತ್ರಗಳ ಪ್ರತಿರೋಧ, ತಡೆ, ಅಡ್ಡಿ, ನಿರೋಧ.
  12. (ಯಂತ್ರಕ್ಕೆ ಯಾ ವ್ಯಕ್ತಿಗೆ ವಹಿಸಿರುವ) ಕೆಲಸದ – ಹೊರೆ, ಭಾರ.
ನುಡಿಗಟ್ಟು
  1. get a load (ಅಶಿಷ್ಟ) ನೋಡು; ಗಮನಿಸು; ಗಮನವಿಟ್ಟು ಕೇಳು: come over here.... get a load of this script ಬಾ ಇಲ್ಲಿ.... ಈ ಹಸ್ತಪ್ರತಿಯನ್ನು ಗಮನಿಸು.
  2. take a load off (one’s mind) ಒಬ್ಬನ ಮನಸ್ಸಿನ ಭಾರ, ಆತಂಕ – ತಗ್ಗಿಸು, ಪರಿಹರಿಸು; ಮನಸ್ಸಿನ ಭಾರವಿಳಿಸು; ಮನಸ್ಸನ್ನು ಹಗುರಗೊಳಿಸು.