See also 2livery
1livery ಲಿವರಿ
ನಾಮವಾಚಕ
(ಬಹುವಚನ liveries).
    1. ವಿಶಿಷ್ಟ ಸಮವಸ್ತ್ರ, ಪೋಷಾಕು, ಉಡುಪು, ದಿರಸು; ಒಬ್ಬ ಸೇವಕ, ಒಂದು ಸಂಸ್ಥೆಗೆ ಸೇರಿದವನು ತನ್ನ ವಿಶಿಷ್ಟ ಗುರುತಿಗಾಗಿ ಧರಿಸುವ ಉಡುಪು: in livery ವಿಶಿಷ್ಟ ಪೋಷಾಕಿನಲ್ಲಿರುವ.
    2. (ಸದಸ್ಯರು ಒಂದೊಂದು ವಿಶಿಷ್ಟ ಪೋಷಾಕನ್ನು ಧರಿಸುತ್ತಿದ್ದ) ನಗರಸಂಸ್ಥೆಯ ಯಾ ಸಿಟಿ ಲಿವರಿ ಕಂಪನಿಯ ಸದಸ್ಯತ್ವ: take up one’s livery ದಿರಸು ಧಾರಿಯಾಗು; ವಿಶಿಷ್ಟ ದಿರಸು ಧರಿಸುವ ಸದಸ್ಯರ ಸಂಸ್ಥೆಗೆ ಸೇರಿರು.
  1. ಉಡುಪು; ಪೋಷಾಕು; ವೇಷ; ಯಾವುದೇ ಸಂದರ್ಭದಲ್ಲಿ ಕಾಣುವ ನಿರ್ದಿಷ್ಟ ಹೊರನೋಟ, ದೃಶ್ಯ ಯಾ ಗುರುತು: the livery of grief ದುಃಖದ ಪೋಷಾಕಿನಲ್ಲಿ. birds in their winter livery ಚಳಿಗಾಲದ ಉಡುಪಿನಲ್ಲಿಯ ಹಕ್ಕಿಗಳು.
  2. ವಿಶಿಷ್ಟ ವರ್ಣ; ಒಂದು ನಿರ್ದಿಷ್ಟ ಸಂಸ್ಥೆಯ ಯಾ ಸಾರಿಗೆ ತಂಡದ ವಾಹನಗಳು, ವಿಮಾನಗಳು, ಮೊದಲಾದವುಗಳಿಗೆ ಬಳಿದಿರುವ ವರ್ಣಗಳ ವಿನ್ಯಾಸ.
  3. (ಅಮೆರಿಕನ್‍ ಪ್ರಯೋಗ) ಕುದುರೆ ಚೌಕ; ಕುದುರೆಗಳನ್ನು ಬಾಡಿಗೆಗೆ ತೆಗೆದುಕೊಳ್ಳಬಹುದಾದ ಸ್ಥಳ.
  4. (ಚರಿತ್ರೆ) ಅಶನವಸನ; ಅನ್ನ ಬಟ್ಟೆ ಏರ್ಪಾಡು; ಆಶ್ರಿತರು, ಊಳಿಗದವರು, ಮೊದಲಾದವರಿಗೆ ಕೊಡಲು ಮಾಡಿರುವ ಅನ್ನಬಟ್ಟೆ ಏರ್ಪಾಡು.
  5. (ನ್ಯಾಯಶಾಸ್ತ್ರ)
    1. ಸ್ವಾಧೀನ; ವಶಪಡಿಕೆ; ಸುಫರ್ದುಗೊಳಿಕೆ; (ಕಾನೂನು ಪ್ರಕಾರ ಒಬ್ಬನಿಗೆ) ಆಸ್ತಿಯನ್ನು ಸ್ವಾಧೀನಕ್ಕೆ ಕೊಡುವುದು, ಸುಫರ್ದಿಗೆ ಕೊಡುವುದು, ವಶಪಡಿಸುವುದು.
    2. ಆಸ್ತಿ ಸ್ವಾಧೀನದ ಆಜ್ಞೆ; ಆಸ್ತಿ ವಶಪಡಿಸುವ ಆಜ್ಞೆ.
ಪದಗುಚ್ಛ
  1. at livery (ಕುದುರೆಯ ವಿಷಯದಲ್ಲಿ) ಸರಿಯಾಗಿ ಇಟ್ಟಿರುವ; ಗೊತ್ತಾದ ಕೂಲಿಗೋಸ್ಕರ, ಮೇವು ತಿನ್ನಿಸಿ, ಮಾಲೀಸು ಮಾಡಿ, ಯಜಮಾನನಿಗಾಗಿ ಕಾಪಾಡಿಕೊಂಡಿರುವ.
  2. sue one’s livery (ಬ್ರಿಟಿಷ್‍ ಪ್ರಯೋಗ) ಆಸ್ತಿಯ ಸ್ವಾಧೀನಕ್ಕಾಗಿ ಯಾ ವಶಕ್ಕಾಗಿ (ಪೋಷಕರ ನ್ಯಾಯಸ್ಥಾನದಲ್ಲಿ ಉತ್ತರಾಧಿಕಾರಿಯಾಗಿ) ವ್ಯವಹಾರ ಹೂಡು.
See also 1livery
2livery ಲಿವರಿ
ಗುಣವಾಚಕ
  1. ಯಕೃತ್ತಿನಂತಿರುವ.
  2. ಯಕೃತ್ತಿನ ಬಣ್ಣದ.
  3. ಯಕೃತ್ತಿನ ಸಾಂದ್ರತೆಯುಳ್ಳ.
  4. (ಬ್ರಿಟಿಷ್‍ ಪ್ರಯೋಗ) (ಮಣ್ಣಿನ ವಿಷಯದಲ್ಲಿ) ಜಿಗುಟಾದ; ಬಿಗಿಯಾದ; ಅಂಟಿಕೊಳ್ಳುವ.
  5. ಯಕೃತ್ತು ಕೆಟ್ಟಿರುವ; ರೋಗ ಹತ್ತಿದ ಯಕೃತ್ತುಳ್ಳ.
  6. (ಆಡುಮಾತು)
    1. ಸಿಡುಕಿನ; ರೇಗುವ; ಬೇಗ ಕೆರಳುವ.
    2. ಖಿನ್ನ; ಮನಕುಗ್ಗಿದ.