See also 2livery
1livery ಲಿವರಿ
ನಾಮವಾಚಕ
(ಬಹುವಚನ liveries).
    1. ವಿಶಿಷ್ಟ ಸಮವಸ್ತ್ರ, ಪೋಷಾಕು, ಉಡುಪು, ದಿರಸು; ಒಬ್ಬ ಸೇವಕ, ಒಂದು ಸಂಸ್ಥೆಗೆ ಸೇರಿದವನು ತನ್ನ ವಿಶಿಷ್ಟ ಗುರುತಿಗಾಗಿ ಧರಿಸುವ ಉಡುಪು: in livery ವಿಶಿಷ್ಟ ಪೋಷಾಕಿನಲ್ಲಿರುವ.
    2. (ಸದಸ್ಯರು ಒಂದೊಂದು ವಿಶಿಷ್ಟ ಪೋಷಾಕನ್ನು ಧರಿಸುತ್ತಿದ್ದ) ನಗರಸಂಸ್ಥೆಯ ಯಾ ಸಿಟಿ ಲಿವರಿ ಕಂಪನಿಯ ಸದಸ್ಯತ್ವ: take up one’s livery ದಿರಸು ಧಾರಿಯಾಗು; ವಿಶಿಷ್ಟ ದಿರಸು ಧರಿಸುವ ಸದಸ್ಯರ ಸಂಸ್ಥೆಗೆ ಸೇರಿರು.
  1. ಉಡುಪು; ಪೋಷಾಕು; ವೇಷ; ಯಾವುದೇ ಸಂದರ್ಭದಲ್ಲಿ ಕಾಣುವ ನಿರ್ದಿಷ್ಟ ಹೊರನೋಟ, ದೃಶ್ಯ ಯಾ ಗುರುತು: the livery of grief ದುಃಖದ ಪೋಷಾಕಿನಲ್ಲಿ. birds in their winter livery ಚಳಿಗಾಲದ ಉಡುಪಿನಲ್ಲಿಯ ಹಕ್ಕಿಗಳು.
  2. ವಿಶಿಷ್ಟ ವರ್ಣ; ಒಂದು ನಿರ್ದಿಷ್ಟ ಸಂಸ್ಥೆಯ ಯಾ ಸಾರಿಗೆ ತಂಡದ ವಾಹನಗಳು, ವಿಮಾನಗಳು, ಮೊದಲಾದವುಗಳಿಗೆ ಬಳಿದಿರುವ ವರ್ಣಗಳ ವಿನ್ಯಾಸ.
  3. (ಅಮೆರಿಕನ್‍ ಪ್ರಯೋಗ) ಕುದುರೆ ಚೌಕ; ಕುದುರೆಗಳನ್ನು ಬಾಡಿಗೆಗೆ ತೆಗೆದುಕೊಳ್ಳಬಹುದಾದ ಸ್ಥಳ.
  4. (ಚರಿತ್ರೆ) ಅಶನವಸನ; ಅನ್ನ ಬಟ್ಟೆ ಏರ್ಪಾಡು; ಆಶ್ರಿತರು, ಊಳಿಗದವರು, ಮೊದಲಾದವರಿಗೆ ಕೊಡಲು ಮಾಡಿರುವ ಅನ್ನಬಟ್ಟೆ ಏರ್ಪಾಡು.
  5. (ನ್ಯಾಯಶಾಸ್ತ್ರ)
    1. ಸ್ವಾಧೀನ; ವಶಪಡಿಕೆ; ಸುಫರ್ದುಗೊಳಿಕೆ; (ಕಾನೂನು ಪ್ರಕಾರ ಒಬ್ಬನಿಗೆ) ಆಸ್ತಿಯನ್ನು ಸ್ವಾಧೀನಕ್ಕೆ ಕೊಡುವುದು, ಸುಫರ್ದಿಗೆ ಕೊಡುವುದು, ವಶಪಡಿಸುವುದು.
    2. ಆಸ್ತಿ ಸ್ವಾಧೀನದ ಆಜ್ಞೆ; ಆಸ್ತಿ ವಶಪಡಿಸುವ ಆಜ್ಞೆ.
ಪದಗುಚ್ಛ
  1. at livery (ಕುದುರೆಯ ವಿಷಯದಲ್ಲಿ) ಸರಿಯಾಗಿ ಇಟ್ಟಿರುವ; ಗೊತ್ತಾದ ಕೂಲಿಗೋಸ್ಕರ, ಮೇವು ತಿನ್ನಿಸಿ, ಮಾಲೀಸು ಮಾಡಿ, ಯಜಮಾನನಿಗಾಗಿ ಕಾಪಾಡಿಕೊಂಡಿರುವ.
  2. sue one’s livery (ಬ್ರಿಟಿಷ್‍ ಪ್ರಯೋಗ) ಆಸ್ತಿಯ ಸ್ವಾಧೀನಕ್ಕಾಗಿ ಯಾ ವಶಕ್ಕಾಗಿ (ಪೋಷಕರ ನ್ಯಾಯಸ್ಥಾನದಲ್ಲಿ ಉತ್ತರಾಧಿಕಾರಿಯಾಗಿ) ವ್ಯವಹಾರ ಹೂಡು.