See also 2lime  3lime  4lime
1lime ಲೈಮ್‍
ನಾಮವಾಚಕ
  1. ಸುಣ್ಣ; ಸುಟ್ಟ ಸುಣ್ಣ; ಕ್ಯಾಲ್ಸಿಯಮ್‍ ಆಕ್ಸೈಡ್‍; ಸುಣ್ಣ ಕಲ್ಲಿನ ರೂಪದಲ್ಲಿ ದೊರೆಯುವ, ಕ್ಯಾಲ್ಸಿಯಮ್‍ ಕಾರ್ಬೊನೇಟನ್ನು ಕಾಯಿಸಿ ತಯಾರಿಸುವ, ಗಾರೆ, ಗೊಬ್ಬರ ಯಾ ಚೆಲುವೆಪದಾರ್ಥ ಮೊದಲಾದವನ್ನು ತಯಾರಿಸಲು ಬಳಸುವ, ಬಿಳಿಯ ಬಣ್ಣದ ಕ್ಷಾರೀಯ ಪದಾರ್ಥ.
  2. = birdlime.
ಪದಗುಚ್ಛ
  1. quick lime = 1lime(1).
  2. slaked lime ಅರಳಿದ ಸುಣ್ಣ; ಸುಟ್ಟ ಸುಣ್ಣವನ್ನು ನೀರಿಗೆ ಹಾಕಿ ತಯಾರಿಸಿದ ಕ್ಯಾಲ್ಸಿಯಮ್‍ ಹೈಡ್ರಾಕ್ಸೈಡ್‍.
See also 1lime  3lime  4lime
2lime ಲೈಮ್‍
ಸಕರ್ಮಕ ಕ್ರಿಯಾಪದ
  1. (ಮರ, ಜಮೀನು, ಮೊದಲಾದವನ್ನು) ಸುಣ್ಣದಿಂದ ಸಂಸ್ಕರಿಸು; ಸುಣ್ಣ ಬಳಿ.
  2. (ತೊಗಲನ್ನು) ಸುಣ್ಣದ ನೀರಿನಲ್ಲಿ ಅದ್ದು.
  3. (ಪ್ರಾಚೀನ ಪ್ರಯೋಗ) (ರೆಂಬೆ, ಕಡ್ಡಿ, ಮೊದಲಾದವಕ್ಕೆ) ಹಕ್ಕಿ ಅಂಟು ಬಳಿ.
  4. (ಪ್ರಾಚೀನ ಪ್ರಯೋಗ) (ರೆಂಬೆ, ಕಡ್ಡಿ, ಮೊದಲಾದವಕ್ಕೆ) ಹಕ್ಕಿಯಂಟು ಬಳಿದು (ಹಕ್ಕಿ ಮೊದಲಾದವನ್ನು) ಹಿಡಿ.
See also 1lime  2lime  4lime
3lime ಲೈಮ್‍
ನಾಮವಾಚಕ
  1. ನಿಂಬೆಹಣ್ಣು; ಲಿಕುಚ; ಜಂಬೀರ; ಲಿಂಬೆ.
  2. (ಸಿಟ್ರಸ್‍ ಮೆಡಿಕ ಕುಲಕ್ಕೆ ಸೇರಿದ) ನಿಂಬೆಮರ; ಜಂಬೀರ, ಲಿಕುಚ – ವೃಕ್ಷ.
  3. (ಪಾನೀಯವಾಗಿ, ಹಿಂದೆ ಮುಖ್ಯವಾಗಿ ಸ್ಕರ್ವಿ ರೋಗಕ್ಕೆ ಮದ್ದಾಗಿ ಬಳಸುತ್ತಿದ್ದ) ನಿಂಬೆ (ಹಣ್ಣಿನ) ರಸ.
  4. ನಿಂಬೆಹಸಿರು; ನಿಂಬೆ ಹಣ್ಣಿನಂಥ ಹಳದಿ – ಹಸಿರು ಬಣ್ಣ.
See also 1lime  2lime  3lime
4lime ಲೈಮ್‍
ನಾಮವಾಚಕ
  1. ಲೈಮ್‍; ಹೃದಯಾಕಾರದ ಎಲೆಗಳುಳ್ಳ, ಹಳದಿ ಬಣ್ಣದ ಸುವಾಸನೆಯ ಸಣ್ಣ ಹೂಗಳನ್ನು ಬಿಡುವ, ಟಿಲಿಯ, ಮುಖ್ಯವಾಗಿ ಟಿಲಿಯ ಯೂರೋಪಿಯ, ಕುಲಅಕ್ಕೆ ಸೇರಿದ ಒಂದು ಅಲಂಕಾರದ ಗಿಡ.
  2. ಇದರ – ಮರ, ದಾರು.