See also 2lightning
1lightning ಲೈಟ್‍ನಿಂಗ್‍
ನಾಮವಾಚಕ

ಮಿಂಚು; ಮೋಡಗಳ ನಡುವೆ ಯಾ ಮೋಡಕ್ಕೂ ಭೂಮಿಗೂ ನಡುವೆ ಉಂಟಾಗುವ ವಿದ್ಯುದ್ವಿಸರ್ಜನೆಯಿಂದ ಕಾಣಿಸುವ ಬೆಳಕು.

ಪದಗುಚ್ಛ
  1. ball lightning ಚೆಂಡುಮಿಂಚು; ಅಪರೂಪವಾಗಿ ಕಾಣಿಸಿಕೊಳ್ಳುವ ಗೋಳಾಕಾರದ ಮಿಂಚು; ಮಿಂಚಿನ ಉಂಡೆ.
  2. forked lightning ಕವಲು ಮಿಂಚು; ಬಳ್ಳಿಮಿಂಚು; ಅಲೆಯಾಕಾರದ ಯಾ ಕವಲು ಒಡೆದಂತೆ ಕಾಣುವ ಮಿಂಚು.
  3. heat lightning = ಪದಗುಚ್ಛ \((6)\).
  4. like (greased) lightning (ಆಡುಮಾತು) ಮಿಂಚಿನಂತೆ; ಮಿಂಚಿನ ವೇಗದಲ್ಲಿ; ಅತ್ಯಂತ ವೇಗವಾಗಿ.
  5. sheet lightning ಹಾಳೆ ಮಿಂಚು; ಹಾಸುಮಿಂಚು; ಹರಡಿದ ಪ್ರಭೆಯ ಮಿಂಚು.
  6. summer lightning ಬೇಸಿಗೆ ಮಿಂಚು; ದೂರದಲ್ಲಿ ಎಲ್ಲಿಯೋ ಆಗುತ್ತಿರುವ ಚಂಡಮಾರುತದ ಫಲವಾಗಿ, ಗುಡುಗಿನ ಶಬ್ದವಿಲ್ಲದೆ ಕಣ್ಣಿಗೆ ಮಾತ್ರ ಕಾಣಿಸುವ ಹಾಸುಮಿಂಚು.
See also 1lightning
2lightning ಲೈಟ್‍ನಿಂಗ್‍
ಗುಣವಾಚಕ

(ವಿಶೇಷಣವಾಗಿ ಪ್ರಯೋಗ) ಮಿಂಚಿನ ವೇಗದ; ಅತಿವೇಗದ: with lightning speed ಮಿಂಚಿನ ವೇಗದಿಂದ.