See also 2lift
1lift ಲಿಹ್ಟ್‍
ಸಕರ್ಮಕ ಕ್ರಿಯಾಪದ
  1. ಮೇಲಕ್ಕೆತ್ತು; ಎತ್ತು; ಎತ್ತಿಕೊ; ಎತ್ತರಿಸು; ಏರಿಸು; ಮೇಲೇರಿಸು; ಉದ್ಧರಿಸು.
  2. (ಕಣ್ಣು, ಮುಖ, ಮೊದಲಾದವನ್ನು) ಮೇಲಕ್ಕೆತ್ತು; ಮೇಲೆತ್ತು; ಮೇಲ್ಮುಖ ಮಾಡು.
  3. (ಭಾವ, ಭಾವನೆ, ಮೊದಲಾದವನ್ನು) ಹೆಚ್ಚಿಸು; ಉತ್ಕರ್ಷಿಸು; ಮೇಲಕ್ಕೇರಿಸು; ಉನ್ನತಗೊಳಿಸು; ಔನ್ನತ್ಯಕ್ಕೇರಿಸು: the news lifted their spirits ಆ ಸುದ್ದಿ ಅವರ ಹುಮ್ಮಸ್ಸನ್ನು ಹೆಚ್ಚಿಸಿತು.
  4. ಬೇಸರ ಯಾ ನೀರಸತೆ – ಕಡಮೆ ಮಾಡು.
  5. (ಯಾವುದಕ್ಕೇ, ಮುಖ್ಯವಾಗಿ ಕಲಾತ್ಮಕವಾದದ್ದಕ್ಕೆ) ಸ್ವಾರಸ್ಯ – ಕೊಡು, ಒದಗಿಸು; ಸ್ವಾರಸ್ಯವಾಗಿರುವಂತೆ ಮಾಡು.
  6. ಮೇಲಕ್ಕೆತ್ತು; ಉತ್ತಮಗೊಳಿಸು: lifted their game after half-time ಅರ್ಧಕಾಲವಾದ ಮೇಲೆ ತಮ್ಮ ಆಟವನ್ನು ಉತ್ತಮಗೊಳಿಸಿಕೊಂಡರು.
  7. (ವಿಮಾನದಲ್ಲಿ) ಒಯ್ಯು; ಸಾಗಿಸು; ಎತ್ತಿಕೊಂಡುಹೋಗು: lifted the provisions to the flood-affected areas ಪ್ರವಾಹ ಪೀಡಿತ ಪ್ರದೇಶಗಳಿಗೆ ಆಹಾರ ಪದಾರ್ಥಗಳನ್ನು ವಿಮಾನದಲ್ಲಿ ಸಾಗಿಸಿದರು.
  8. (ಪ್ರತಿಬಂಧಕಾಜ್ಞೆ, ಮುತ್ತಿಗೆ, ದಿಗ್ಬಂಧನ, ಮೊದಲಾದವನ್ನು) ತೆಗೆ; ಎತ್ತು; ಕೊನೆಗೊಳಿಸು; ಮುಗಿಸು; ಅಂತ್ಯಗೊಳಿಸು.
  9. (ಆಡುಮಾತು) ಕದಿ; ಲಪಟಾಯಿಸು; ಕದ್ದು ಒಯ್ಯು; ಅಪಹರಿಸು; ಕದ್ದು ಹೊಡೆದುಕೊಂಡುಹೋಗು.
  10. (ಲೇಖನದ ಯಾ ಕೃತಿಯ ಭಾಗ, ಸುದ್ದಿ, ಮೊದಲಾದವನ್ನು) ಕದಿ; ಲಪಟಾಯಿಸು; (ಕೃತಿ) ಚೌರ್ಯಮಾಡು.
  11. (ಧ್ವನಿವಿಜ್ಞಾನ) ದನಿಯೆತ್ತು; ದನಿಯೇರಿಸು; ಗಂಟಲೇರಿಸು; ಸ್ವರವೇರಿಸು.
  12. (ಮುಖ್ಯವಾಗಿ ಆಲೂಗೆಡ್ಡೆಗಳು ಮೊದಲಾದವನ್ನು, ಸುಗ್ಗಿಯ ಸಮಯದಲ್ಲಿ ನೆಲದಿಂದ) ಅಗೆ; ಅಗೆದು ತೆಗಿ.
  13. ಎತ್ತಿ ನಿಲ್ಲು; ಎತ್ತರವಾಗಿ – ಹೊಂದಿರು; ಹೊತ್ತಿರು: the church lifts its spire ಚರ್ಚಿನ ಗೋಪುರದ ತುದಿ ಬಹು ಎತ್ತರವಾಗಿದೆ; ಚರ್ಚು ತನ್ನ ಶಿಖರವನ್ನು ಮೇಲಕ್ಕೆತ್ತಿ ನಿಂತಿದೆ.
  14. (ಕ್ರಿಕೆಟ್‍ ಚೆಂಡನ್ನು) ಮೇಲಕ್ಕೆ ಹೊಡೆ; ಆಕಾಶಕ್ಕೆ ಹೊಡೆ; ಎತ್ತರಕ್ಕೆ ಬಾರಿಸು.
  15. (ಸಾಮಾನ್ಯವಾಗಿ ಕರ್ಮಣಿಯಲ್ಲಿ) ಎತ್ತು; ಎತ್ತಿ ನಿಲ್ಲಿಸು; ಸೌಂದರ್ಯ ಚಿಕಿತ್ಸೆ ಮಾಡು; ಅಂಗ ಮೊದಲಾದವುಗಳ (ಮುಖ್ಯವಾಗಿ ಮುಖ ಯಾ ಮೊಲೆಗಳ) ರೂಪವನ್ನು, ಮಾಟವನ್ನು ಉತ್ತಮ ಪಡಿಸುವುದಕ್ಕಾಗಿ ಅವು ಜೋತು ಬೀಳುವುದನ್ನು ತಪ್ಪಿಸಲು ಶಸ್ತ್ರಚಿಕಿತ್ಸೆ ಮಾಡು.
ಅಕರ್ಮಕ ಕ್ರಿಯಾಪದ
  1. ಎತ್ತುವುದಕ್ಕೆ – ಆಗು, ಬರು; ಮೇಲೇರಿಸುವುದಕ್ಕೆ ಆಗು: window will not lift ಕಿಟಕಿಯನ್ನು ಎತ್ತಲು ಆಗುವುದಿಲ್ಲ.
  2. (ಮೋಡ, ಕಾವಳ, ಕತ್ತಲೆ, ಮೊದಲಾದವುಗಳ ವಿಷಯದಲ್ಲಿ) ಹರಿ; ಹರಿದುಹೋಗು; ಚೆದರಿಹೋಗು.
  3. (ಧ್ವನಿಯ ವಿಷಯದಲ್ಲಿ) ಏರು; ಸ್ವರವೇರು; ತಾರವಾಗು.
  4. (ನೆಲದ ವಿಷಯದಲ್ಲಿ) ಎದ್ದುಕೊಂಡಿರು; ಉಬ್ಬಿರು; ಡುಬ್ಬಾಗಿರು.
  5. (ತೇಲುತ್ತಿರುವ ಹಡಗಿನ ವಿಷಯದಲ್ಲಿ) ಅಲೆಯ ಮೇಲೆ – ಏರು. ಏಳು.
  6. (ವಿಮಾನದ ವಿಷಯದಲ್ಲಿ) ಹೊರಡು; ಮೇಲೇರು; ಮೇಲಕ್ಕೆ ಹಾರು: the airline lifts from Bombay ವಿಮಾನವು ಬೊಂಬಾಯಿಂದ ಹೊರಡುತ್ತದೆ.
  7. ಮೇಲೇಳು; ಮೇಲೆದ್ದು ಕಾಣು; ಎತ್ತರದಲ್ಲಿ ಕಾಣು: green mountains lift above the desert ಹಸುರು ಪರ್ವತಗಳು ಮರುಭೂಮಿಯಿಂದ ಮೇಲೆದ್ದು ಕಾಣುತ್ತವೆ.
  8. (ಕ್ರಿಕೆಟ್‍ ಚೆಂಡಿನ ವಿಷಯದಲ್ಲಿ) ಮೇಲಕ್ಕೆ – ಎಗರು, ಪುಟಿ(ಸು), ಚಿಮ್ಮು, ಏಳು: the ball is liable to lift sharply ಚೆಂಡು ತೀವ್ರವಾಗಿ ಮೇಲಕ್ಕೆ ಪುಟಿಸುವ ಸಂಭವವಿದೆ.
ಪದಗುಚ್ಛ
  1. lift down ಎತ್ತಿ ಕೆಳಗಿನ ಸ್ಥಾನಕ್ಕೆ ತರು; ಮೇಲೆತ್ತಿ ಇಳಿಸು.
  2. lift off (ಗಗನ ನೌಕೆ ಯಾ ರಾಕೆಟ್ಟಿನ ವಿಷಯದಲ್ಲಿ) ಉಡಾವಣೆಯಾಗು; ಉಡ್ಡಯನ ವೇದಿಕೆಯಿಂದ ಮೇಲೇಳು, ಹಾರು.
  3. lift one’s hand (ಆಣೆಯಿಡಲು, ಶಪಥ ಮಾಡಲು) ಕೈಯೆತ್ತು; ಕೈಯೆತ್ತಿ ಆಣೆ ಇಡು.
ನುಡಿಗಟ್ಟು
  1. lift a finger (or hand etc.) (ನಿಷೇಧಾರ್ಥದಲ್ಲಿ) (ಏನನ್ನಾದರೂ ಮಾಡಲು) ಕೈಯೆತ್ತು; ಕೊಂಚವಾದರೂ ಪ್ರಯತ್ನಿಸು: didn’t lift a finger to help ಸಹಾಯ ಮಾಡಲು ಒಂದು ಬೆರಳನ್ನೂ ಎತ್ತಲಿಲ್ಲ.
  2. lift (up) one’s hands (or heart) (ಪ್ರಾರ್ಥನೆ ಮೊದಲಾದವನ್ನು ಮಾಡುವಾಗ) ಕೈಯೆತ್ತು; ಕೈಯೆತ್ತಿ ಯಾ ಮನಸಾರೆ ಪ್ರಾರ್ಥಿಸು.
  3. lift up another’s head (ಬೈಬ್‍ಲ್‍) ಮತ್ತೆ ತಲೆಎತ್ತುವಂತೆ ಮಾಡು; ಒಬ್ಬನಿಗೆ ಮೊದಲಿನ ಸ್ವಾತಂತ್ರ್ಯ, ಘನತೆ, ಮೊದಲಾದವುಗಳು ಹಿಂದಿರುಗಿ ಬರುವಂತೆ ಮಾಡು.
  4. lift up one’s head
    1. (ರೋಗ ವಾಸಿಯಾಗಿ ಯಾ ಸೋತು ಹೋಗಿದ್ದು ಯಾ ಅಪಮಾನ ಪಟ್ಟಿದ್ದು) ಮೇಲೇಳು; ಮತ್ತೆ ತಲೆ ಎತ್ತು; ಚೇತರಿಸಿಕೊ.
    2. ಅಭಿಮಾನದಿಂದ ತಲೆ ಎತ್ತಿಕೊಂಡಿರು.
  5. lift up one’s heel ಒದೆ; ಲತ್ತೆಕೊಡು.
  6. lift up (one’s) horn
    1. ಹೆಬ್ಬಯಕೆಯಿಂದಿರು; ಮಹತ್ವಾಕಾಂಕ್ಷೆ ಹೊಂದಿರು.
    2. ಅಹಂಕಾರಪಡು; ಉದ್ಧತನಾಗಿರು; ತಲೆತಿರುಗಿ ಹೋಗು.
  7. never lifted a hand against me ಎಂದಿಗೂ ನನ್ನ ಮೇಲೆ ಕೈಯೆತ್ತಲಿಲ್ಲ, ಕೈಮಾಡಲಿಲ್ಲ.
  8. lift up one’s voice
    1. ಹಾಡು ಯಾ ಮಾತನಾಡು.
    2. ಗಟ್ಟಿಯಾಗಿ ಕೂಗು, ಒದರು.
See also 1lift
2lift ಲಿಹ್ಟ್‍
ನಾಮವಾಚಕ
  1. ಎತ್ತುವುದು; ಎತ್ತುವಿಕೆ; ಉದ್ಧಾರ; ಉದ್ವಹನ.
  2. ಪುಕ್ಕಟೆ ಸವಾರಿ; ದುಡ್ಡು ಕೊಡದೆ ಇನ್ನೊಬ್ಬನ ವಾಹನದಲ್ಲಿ ಪ್ರಯಾಣ ಮಾಡುವುದು: gave them a lift ಅವರನ್ನು ಗಾಡಿಯಲ್ಲಿ ಸ್ಥಳಕೊಟ್ಟು ಒಂದಷ್ಟು ದೂರ ಕೂಡಿಸಿಕೊಂಡೆವು, ಕರೆದೊಯ್ದೆವು.
  3. (ಬ್ರಿಟಿಷ್‍ ಪ್ರಯೋಗ) ಲಿಹ್ಟು; ಎತ್ತುಗ; ಎತ್ತುಯಂತ್ರ; ಜನರನ್ನೂ ವಸ್ತುಗಳನ್ನೂ ಕಟ್ಟಡದ ಒಂದು ಅಂತಸ್ತಿನಿಂದ ಬೇರೆ ಬೇರೆ ಅಂತಸ್ತುಗಳಿಗೆ ಯಾ ಗಣಿಯ ಬೇರೆ ಬೇರೆ ಸ್ತರಗಳಿಗೆ ಯಾ ಪರ್ವತದ ಮೇಲಕ್ಕೆ ಯಾ ಕೆಳಕ್ಕೆ ಏರಿಸಲು ಮತ್ತು ಇಳಿಸಲು ಬಳಸುವ ವೇದಿಕೆಯಂಥ ಯಾ ಡಬ್ಬಿ ಯಾ ಕೋಣೆಯಂಥ ಯಂತ್ರ.
    1. ವಿಮಾನ ಸಾಗಣೆ.
    2. ವಿಮಾನದಲ್ಲಿ ಸಾಗಿಸಿದ ಸರಕಿನ ಪ್ರಮಾಣ.
  4. ಉತ್ಥಾಪಕ ಬಲ; ಮೇಲ್ಮುಖ ಒತ್ತಡ; ಭೂಮಿಯ ಗುರುತ್ವಾಕರ್ಷಣ ಬಲವನ್ನು ಪ್ರತಿರೋಧಿಸಲು ವಿಮಾನದ ಎಂಜಿನ್ನಿನ ಕಾರ್ಯಾಚರಣೆಯ ಫಲವಾಗಿ ವಿಮಾನದ ಮೇಲೆ ಗಾಳಿಯು ಪ್ರಯೋಗಿಸುವ ಮೇಲ್ಮುಖ ಬಲ.
  5. ಉತ್ತೇಜಕ ಯಾ ಉನ್ನತಗೊಳಿಸುವ ಪ್ರಭಾವ.
  6. ಉಲ್ಲಾಸ (ಭಾವನೆ).
  7. (ಬೂಟ್ಸಿನ ಯಾ ಷೂನ) ಹಿಮ್ಮಡಿ ತೊಗಲಿನ ಪದರ; ಹಿಮ್ಮಡಿಯಲ್ಲಿನ ಒಂದು ಪದರ ತೊಗಲು (ಮುಖ್ಯವಾಗಿ ಕಾಲು ತುಂಡಾಗಿರುವುದನ್ನು ಸರಿಪಡಿಸಲು, ಎತ್ತರ ಹೆಚ್ಚಿಸಲು ಕೊಟ್ಟ ಪದರ).
  8. (ನೆಲದ) ಉಬ್ಬು; ಡುಬ್ಬ; ಏರು; ತಿಟ್ಟು.