See also 2lift
1lift ಲಿಹ್ಟ್‍
ಸಕರ್ಮಕ ಕ್ರಿಯಾಪದ
  1. ಮೇಲಕ್ಕೆತ್ತು; ಎತ್ತು; ಎತ್ತಿಕೊ; ಎತ್ತರಿಸು; ಏರಿಸು; ಮೇಲೇರಿಸು; ಉದ್ಧರಿಸು.
  2. (ಕಣ್ಣು, ಮುಖ, ಮೊದಲಾದವನ್ನು) ಮೇಲಕ್ಕೆತ್ತು; ಮೇಲೆತ್ತು; ಮೇಲ್ಮುಖ ಮಾಡು.
  3. (ಭಾವ, ಭಾವನೆ, ಮೊದಲಾದವನ್ನು) ಹೆಚ್ಚಿಸು; ಉತ್ಕರ್ಷಿಸು; ಮೇಲಕ್ಕೇರಿಸು; ಉನ್ನತಗೊಳಿಸು; ಔನ್ನತ್ಯಕ್ಕೇರಿಸು: the news lifted their spirits ಆ ಸುದ್ದಿ ಅವರ ಹುಮ್ಮಸ್ಸನ್ನು ಹೆಚ್ಚಿಸಿತು.
  4. ಬೇಸರ ಯಾ ನೀರಸತೆ – ಕಡಮೆ ಮಾಡು.
  5. (ಯಾವುದಕ್ಕೇ, ಮುಖ್ಯವಾಗಿ ಕಲಾತ್ಮಕವಾದದ್ದಕ್ಕೆ) ಸ್ವಾರಸ್ಯ – ಕೊಡು, ಒದಗಿಸು; ಸ್ವಾರಸ್ಯವಾಗಿರುವಂತೆ ಮಾಡು.
  6. ಮೇಲಕ್ಕೆತ್ತು; ಉತ್ತಮಗೊಳಿಸು: lifted their game after half-time ಅರ್ಧಕಾಲವಾದ ಮೇಲೆ ತಮ್ಮ ಆಟವನ್ನು ಉತ್ತಮಗೊಳಿಸಿಕೊಂಡರು.
  7. (ವಿಮಾನದಲ್ಲಿ) ಒಯ್ಯು; ಸಾಗಿಸು; ಎತ್ತಿಕೊಂಡುಹೋಗು: lifted the provisions to the flood-affected areas ಪ್ರವಾಹ ಪೀಡಿತ ಪ್ರದೇಶಗಳಿಗೆ ಆಹಾರ ಪದಾರ್ಥಗಳನ್ನು ವಿಮಾನದಲ್ಲಿ ಸಾಗಿಸಿದರು.
  8. (ಪ್ರತಿಬಂಧಕಾಜ್ಞೆ, ಮುತ್ತಿಗೆ, ದಿಗ್ಬಂಧನ, ಮೊದಲಾದವನ್ನು) ತೆಗೆ; ಎತ್ತು; ಕೊನೆಗೊಳಿಸು; ಮುಗಿಸು; ಅಂತ್ಯಗೊಳಿಸು.
  9. (ಆಡುಮಾತು) ಕದಿ; ಲಪಟಾಯಿಸು; ಕದ್ದು ಒಯ್ಯು; ಅಪಹರಿಸು; ಕದ್ದು ಹೊಡೆದುಕೊಂಡುಹೋಗು.
  10. (ಲೇಖನದ ಯಾ ಕೃತಿಯ ಭಾಗ, ಸುದ್ದಿ, ಮೊದಲಾದವನ್ನು) ಕದಿ; ಲಪಟಾಯಿಸು; (ಕೃತಿ) ಚೌರ್ಯಮಾಡು.
  11. (ಧ್ವನಿವಿಜ್ಞಾನ) ದನಿಯೆತ್ತು; ದನಿಯೇರಿಸು; ಗಂಟಲೇರಿಸು; ಸ್ವರವೇರಿಸು.
  12. (ಮುಖ್ಯವಾಗಿ ಆಲೂಗೆಡ್ಡೆಗಳು ಮೊದಲಾದವನ್ನು, ಸುಗ್ಗಿಯ ಸಮಯದಲ್ಲಿ ನೆಲದಿಂದ) ಅಗೆ; ಅಗೆದು ತೆಗಿ.
  13. ಎತ್ತಿ ನಿಲ್ಲು; ಎತ್ತರವಾಗಿ – ಹೊಂದಿರು; ಹೊತ್ತಿರು: the church lifts its spire ಚರ್ಚಿನ ಗೋಪುರದ ತುದಿ ಬಹು ಎತ್ತರವಾಗಿದೆ; ಚರ್ಚು ತನ್ನ ಶಿಖರವನ್ನು ಮೇಲಕ್ಕೆತ್ತಿ ನಿಂತಿದೆ.
  14. (ಕ್ರಿಕೆಟ್‍ ಚೆಂಡನ್ನು) ಮೇಲಕ್ಕೆ ಹೊಡೆ; ಆಕಾಶಕ್ಕೆ ಹೊಡೆ; ಎತ್ತರಕ್ಕೆ ಬಾರಿಸು.
  15. (ಸಾಮಾನ್ಯವಾಗಿ ಕರ್ಮಣಿಯಲ್ಲಿ) ಎತ್ತು; ಎತ್ತಿ ನಿಲ್ಲಿಸು; ಸೌಂದರ್ಯ ಚಿಕಿತ್ಸೆ ಮಾಡು; ಅಂಗ ಮೊದಲಾದವುಗಳ (ಮುಖ್ಯವಾಗಿ ಮುಖ ಯಾ ಮೊಲೆಗಳ) ರೂಪವನ್ನು, ಮಾಟವನ್ನು ಉತ್ತಮ ಪಡಿಸುವುದಕ್ಕಾಗಿ ಅವು ಜೋತು ಬೀಳುವುದನ್ನು ತಪ್ಪಿಸಲು ಶಸ್ತ್ರಚಿಕಿತ್ಸೆ ಮಾಡು.
ಅಕರ್ಮಕ ಕ್ರಿಯಾಪದ
  1. ಎತ್ತುವುದಕ್ಕೆ – ಆಗು, ಬರು; ಮೇಲೇರಿಸುವುದಕ್ಕೆ ಆಗು: window will not lift ಕಿಟಕಿಯನ್ನು ಎತ್ತಲು ಆಗುವುದಿಲ್ಲ.
  2. (ಮೋಡ, ಕಾವಳ, ಕತ್ತಲೆ, ಮೊದಲಾದವುಗಳ ವಿಷಯದಲ್ಲಿ) ಹರಿ; ಹರಿದುಹೋಗು; ಚೆದರಿಹೋಗು.
  3. (ಧ್ವನಿಯ ವಿಷಯದಲ್ಲಿ) ಏರು; ಸ್ವರವೇರು; ತಾರವಾಗು.
  4. (ನೆಲದ ವಿಷಯದಲ್ಲಿ) ಎದ್ದುಕೊಂಡಿರು; ಉಬ್ಬಿರು; ಡುಬ್ಬಾಗಿರು.
  5. (ತೇಲುತ್ತಿರುವ ಹಡಗಿನ ವಿಷಯದಲ್ಲಿ) ಅಲೆಯ ಮೇಲೆ – ಏರು. ಏಳು.
  6. (ವಿಮಾನದ ವಿಷಯದಲ್ಲಿ) ಹೊರಡು; ಮೇಲೇರು; ಮೇಲಕ್ಕೆ ಹಾರು: the airline lifts from Bombay ವಿಮಾನವು ಬೊಂಬಾಯಿಂದ ಹೊರಡುತ್ತದೆ.
  7. ಮೇಲೇಳು; ಮೇಲೆದ್ದು ಕಾಣು; ಎತ್ತರದಲ್ಲಿ ಕಾಣು: green mountains lift above the desert ಹಸುರು ಪರ್ವತಗಳು ಮರುಭೂಮಿಯಿಂದ ಮೇಲೆದ್ದು ಕಾಣುತ್ತವೆ.
  8. (ಕ್ರಿಕೆಟ್‍ ಚೆಂಡಿನ ವಿಷಯದಲ್ಲಿ) ಮೇಲಕ್ಕೆ – ಎಗರು, ಪುಟಿ(ಸು), ಚಿಮ್ಮು, ಏಳು: the ball is liable to lift sharply ಚೆಂಡು ತೀವ್ರವಾಗಿ ಮೇಲಕ್ಕೆ ಪುಟಿಸುವ ಸಂಭವವಿದೆ.
ಪದಗುಚ್ಛ
  1. lift down ಎತ್ತಿ ಕೆಳಗಿನ ಸ್ಥಾನಕ್ಕೆ ತರು; ಮೇಲೆತ್ತಿ ಇಳಿಸು.
  2. lift off (ಗಗನ ನೌಕೆ ಯಾ ರಾಕೆಟ್ಟಿನ ವಿಷಯದಲ್ಲಿ) ಉಡಾವಣೆಯಾಗು; ಉಡ್ಡಯನ ವೇದಿಕೆಯಿಂದ ಮೇಲೇಳು, ಹಾರು.
  3. lift one’s hand (ಆಣೆಯಿಡಲು, ಶಪಥ ಮಾಡಲು) ಕೈಯೆತ್ತು; ಕೈಯೆತ್ತಿ ಆಣೆ ಇಡು.
ನುಡಿಗಟ್ಟು
  1. lift a finger (or hand etc.) (ನಿಷೇಧಾರ್ಥದಲ್ಲಿ) (ಏನನ್ನಾದರೂ ಮಾಡಲು) ಕೈಯೆತ್ತು; ಕೊಂಚವಾದರೂ ಪ್ರಯತ್ನಿಸು: didn’t lift a finger to help ಸಹಾಯ ಮಾಡಲು ಒಂದು ಬೆರಳನ್ನೂ ಎತ್ತಲಿಲ್ಲ.
  2. lift (up) one’s hands (or heart) (ಪ್ರಾರ್ಥನೆ ಮೊದಲಾದವನ್ನು ಮಾಡುವಾಗ) ಕೈಯೆತ್ತು; ಕೈಯೆತ್ತಿ ಯಾ ಮನಸಾರೆ ಪ್ರಾರ್ಥಿಸು.
  3. lift up another’s head (ಬೈಬ್‍ಲ್‍) ಮತ್ತೆ ತಲೆಎತ್ತುವಂತೆ ಮಾಡು; ಒಬ್ಬನಿಗೆ ಮೊದಲಿನ ಸ್ವಾತಂತ್ರ್ಯ, ಘನತೆ, ಮೊದಲಾದವುಗಳು ಹಿಂದಿರುಗಿ ಬರುವಂತೆ ಮಾಡು.
  4. lift up one’s head
    1. (ರೋಗ ವಾಸಿಯಾಗಿ ಯಾ ಸೋತು ಹೋಗಿದ್ದು ಯಾ ಅಪಮಾನ ಪಟ್ಟಿದ್ದು) ಮೇಲೇಳು; ಮತ್ತೆ ತಲೆ ಎತ್ತು; ಚೇತರಿಸಿಕೊ.
    2. ಅಭಿಮಾನದಿಂದ ತಲೆ ಎತ್ತಿಕೊಂಡಿರು.
  5. lift up one’s heel ಒದೆ; ಲತ್ತೆಕೊಡು.
  6. lift up (one’s) horn
    1. ಹೆಬ್ಬಯಕೆಯಿಂದಿರು; ಮಹತ್ವಾಕಾಂಕ್ಷೆ ಹೊಂದಿರು.
    2. ಅಹಂಕಾರಪಡು; ಉದ್ಧತನಾಗಿರು; ತಲೆತಿರುಗಿ ಹೋಗು.
  7. never lifted a hand against me ಎಂದಿಗೂ ನನ್ನ ಮೇಲೆ ಕೈಯೆತ್ತಲಿಲ್ಲ, ಕೈಮಾಡಲಿಲ್ಲ.
  8. lift up one’s voice
    1. ಹಾಡು ಯಾ ಮಾತನಾಡು.
    2. ಗಟ್ಟಿಯಾಗಿ ಕೂಗು, ಒದರು.