life ಲೈಹ್‍
ನಾಮವಾಚಕ
(ಬಹುವಚನ lives ಲೈವ್ಸ್‍).
  1. ಪ್ರಾಣ; ಜೀವ; ಚೇತನ; ಚೈತನ್ಯ; ಜಡದ್ರವ್ಯದಿಂದ ಪ್ರತ್ಯೇಕಿಸುವ ಗುಣ.
  2. ಜೀವಿಗಳು; ಜೀವರಾಶಿ; ಜೀವಿಗಳು ಮತ್ತು ಅವುಗಳ ಚಟುವಟಿಕೆಗಳು: insect life ಕೀಟ ಜೀವರಾಶಿ. is there life on Mars? ಮಂಗಳ ಗ್ರಹದಲ್ಲಿ ಜೀವಿಗಳು ಇವೆಯೇ? animal and plant life ಪ್ರಾಣಿ ಮತ್ತು ಸಸ್ಯ ಜೀವರಾಶಿ.
  3. ಮಾನವನ ಇರವು, ಅಸ್ತಿತ್ವ ಅಥವಾ ಚಟುವಟಿಕೆ: no sign of life ಮಾನವನ (ಇರುವಿನ) ಕುರುಹೇ ಇಲ್ಲ.
  4. ಜೀವಿತ(ಕಾಲ); ಜೀವಮಾನ; ಜೀವನದ ಅವಧಿ; ಹುಟ್ಟಿನಿಂದ ಸಾಯುವವರೆಗಿನ ಕಾಲ; ಹುಟ್ಟಿನಿಂದ ಇಂದಿನವರೆಗಿನ, ಇಂದಿನಿಂದ ಸಾಯುವವರೆಗಿನ ಅವಧಿ: have done it all my life ಜೀವಮಾನವೆಲ್ಲ ಅದನ್ನೇ ಮಾಡಿದ್ದೇನೆ; ಅದರಲ್ಲೇ ಜೀವಿತ ಕಳೆದಿದ್ದೇನೆ. will regret it all my life ಅದಕ್ಕಾಗಿ ನನ್ನ ಜೀವಮಾನ ಪರ್ಯಂತ ಪಶ್ಚಾತ್ತಾಪ ಪಡುತ್ತೇನೆ.
  5. ಜೀವಮಾನ; ಆಯುಸ್ಸು; ಯಾವುದೇ ವಸ್ತುವಿನ ಅಸ್ತಿತ್ವದ ಯಾ ಅದರ ಕಾರ್ಯಸಾಮರ್ಥ್ಯದ ಅವಧಿ: the battery has a life of two years ಆ ಬ್ಯಾಟರಿಗೆ ಎರಡು ವರ್ಷ ಆಯುಸ್ಸು; ಆ ಬ್ಯಾಟರಿ ಎರಡು ವರ್ಷ ಕೆಲಸ ಮಾಡುತ್ತದೆ.
  6. (ಒಬ್ಬ ವ್ಯಕ್ತಿಯ) ಜೀವನ; ಬಾಳು; ಬದುಕು; ಜೀವಂತ ವ್ಯಕ್ತಿಯಾಗಿ ಅವನ ಅಸ್ತಿತ್ವ: sacrificed their lives ಅವರ ಜೀವಗಳನ್ನು ತೆತ್ತರು. took many lives ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿತು.
  7. ಜೀವಂತ – ವ್ಯಕ್ತಿ, ಜನ, ಜೀವಿ: many lives were lost ಅನೇಕ ಜನ ಸತ್ತರು.
  8. ಜೀವನ; ಬಾಳಾಟ; ಒಬ್ಬ ವ್ಯಕ್ತಿಯ ವೃತ್ತಿ, ಕಾರ್ಯ ಚಟುವಟಿಕೆಗಳು ಯಾ ಅದೃಷ್ಟಗಳು; ಒಬ್ಬನ ಬದುಕಿನ ಅಸ್ತಿತ್ವದ – ರೀತಿ: has led a good life ಒಳ್ಳೆಯ ಜೀವನ ನಡೆಸಿದ್ದಾನೆ, ಬಾಳು ಬಾಳಿದ್ದಾನೆ. that would make life easy ಅದು ಜೀವನವನ್ನು ಹಗುರ ಮಾಡುತ್ತದೆ, ಸುಲಭ ಮಾಡುತ್ತದೆ. start a new life ಹೊಸ ಜೀವನ ಆರಂಭಿಸು.
  9. ಜೀವನದ, ಬದುಕಿನ – ಒಂದು ಅಂಗ, ಅಂಶ, ಮುಖ: love-life ಪ್ರೇಮ ಜೀವನ. private life ಖಾಸಗಿ ಬದುಕು. sex life ಲೈಂಗಿಕ ಜೀವನ. village life ಹಳ್ಳಿಯ ಬದುಕು.
  10. ಬದುಕು; ಜೀವನ; ಲೋಕ ವ್ಯವಹಾರ; ಪ್ರಾಪಂಚಿಕ ಚಟುವಟಿಕೆಗಳು; ಜೀವಮಾನದ ಚಟುವಟಿಕೆಯ ಭಾಗ; ಪ್ರಪಂಚ ವ್ಯವಹಾರ ಮತ್ತು ಭೋಗಗಳು: travel is the best way to see life ಜೀವನವನ್ನು ನೋಡಲು ಪ್ರವಾಸ ಅತ್ಯುತ್ತಮವಾದ ಸಾಧನ.
  11. (ಮನುಷ್ಯನ) ಐಹಿಕ ಯಾ ಪಾರಲೌಕಿಕ ಜೀವನ; ಐಹಿಕ ಯಾ ಆಮುಷ್ಮಿಕ ಜೀವನ; ಈ ಲೋಕದ ಯಾ ಪರಲೋಕದ ಬದುಕು.
  12. ಶಕ್ತಿ; ಲವಲವಿಕೆ; ಚಟುವಟಿಕೆ; ಉತ್ಸಾಹ; ಉಲ್ಲಾಸ; ಗೆಲುವು; ಹುಮ್ಮಸ್ಸು; ಹುರುಪು: full of life ಉತ್ಸಾಹ ತುಂಬಿದ; ಗೆಲುವಿನ; ಉಲ್ಲಾಸಭರಿತ. put some life into it ಅದಕ್ಕೆ ಸ್ವಲ್ಪ ಹುರುಪು, ಹುಮ್ಮಸ್ಸು ತುಂಬು.
  13. ಜೀವ; ಪ್ರಾಣ; ಜೀವಕಳೆ; ಚೈತನ್ಯ: was the life of the party ಆ ಗೋಷ್ಠಿಯ ಜೀವವಾಗಿದ್ದನು.
  14. ಜೀವಂತ ಮಾದರಿ; ಜೀವಾಕೃತಿ; ಜೀವಂತ ಮೂರ್ತಿ, ವಿಗ್ರಹ, ಪ್ರತಿಮೆ; ಜೀವನದಲ್ಲಿ, ಬದುಕಿನಲ್ಲಿ ಇರುವಂಥ (ಮುಖ್ಯವಾಗಿ ನಗ್ನ) ರೂಪ ಯಾ ಆಕೃತಿ; ಜೀವಂತ ಪ್ರಮಾಣದ ಪ್ರತಿಮೆ ಮೊದಲಾದವು: taken from the life ಜೀವಂತವಾಗಿರುವಂತೆ ತೆಗೆದ, ಗ್ರಹಿಸಿದ; ನಿಜ ಜೀವನದಲ್ಲಿರುವಂತೆ ಚಿತ್ರಿಸಿದ ಯಾ ರೂಪಿಸಿದ.
  15. (ಬರೆದಿಟ್ಟ) ಬಾಳಕತೆ; ಜೀವನ ಕಥೆ; ಜೀವನ ಚರಿತ್ರೆ.
  16. (ಆಡುಮಾತು) ಆಜೀವ ಶಿಕ್ಷೆ; ಜೀವಾವಧಿ ಶಿಕ್ಷೆ: they were all serving life ಅವರೆಲ್ಲ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.
  17. (ಸಾಮಾನ್ಯವಾಗಿ ರೂಪಕವಾಗಿ) ಜೀವದಾನ; ಪುನರ್ಜನ್ಮ; ಹೊಸಹುಟ್ಟು; ವಿನಾಶದಿಂದ ಸ್ವಲ್ಪದರಲ್ಲಿ ಪಾರಾಗಿ ಪಡೆದ ಹೊಸ ಅವಕಾಶ: gave the player three lives ಆ ಆಟಗಾರನಿಗೆ ಮೂರು ಸಲ ಜೀವದಾನ ಕೊಟ್ಟ.
  18. (ದೇವತಾಶಾಸ್ತ್ರ) ಮುಕ್ತಿ; ಸದ್ಗತಿ.
  19. (ದೇವತಾಶಾಸ್ತ್ರ) ಪುನೀತ ಸ್ಥಿತಿ; ಆತ್ಮಶುದ್ಧಿ ಪಡೆದ ಸ್ಥಿತಿ; ಪರಿಶುದ್ಧಿಗೊಳಿಸಿದ ಸ್ಥಿತಿ.
ಪದಗುಚ್ಛ
  1. a bad life
    1. ಅಲ್ಪಾಯು; ಸರಾಸರಿಗಿಂತ ಕಡಿಮೆ ಕಾಲ ಬದುಕುವವನು.
    2. ಕೆಟ್ಟಬದುಕು; ದುಷ್ಟಜೀವನ.
  2. a good life
    1. ದೀರ್ಘಜೀವಿ; ದೀರ್ಘಾಯು; ಸರಾಸರಿಗಿಂತ ಹೆಚ್ಚು ಕಾಲ ಬದುಕುವವನು.
    2. ಒಳ್ಳೆಯ ಬದುಕು; ಸಜ್ಜೀವನ.
  3. batsman was given a life (ಸಂದರ್ಭವೊದಗಿದರೂ ಎದುರಾಳಿಗಳು ಅವನನ್ನು ಔಟ್‍ ಮಾಡದೆ ಹೋದದ್ದರಿಂದ) ಬ್ಯಾಟುಗಾರನಿಗೆ – ಜೀವದಾನ ಸಿಕ್ಕಿತು, ಆಟ ಮುಂದುವರಿಸುವ ಅವಕಾಶ ಸಿಕ್ಕಿತು.
  4. expectation of life ಸರಾಸರಿ ಆಯುಷ್ಯ; ನಿರೀಕ್ಷಿತ ಆಯುಸ್ಸು; ಆಯುರ್ನಿರೀಕ್ಷೆ; ಜೀವಿತ ನಿರೀಕ್ಷೆ; ಬದುಕಿನ ನಿರೀಕ್ಷೆ; ಒಂದು ನಿರ್ದಿಷ್ಟ ವಯಸ್ಸಿನ ಮನುಷ್ಯನು ಮುಂದೆ ಬದುಕಬಹುದೆಂದು ನಿರೀಕ್ಷಿಸಬಹುದಾದ ಸರಾಸರಿ ಅವಧಿ, ಕಾಲ.
  5. for one’s life (or for dear life) ಪ್ರಾಣ ಉಳಿಸಿಕೊಳ್ಳಲು; ಜೀವ ಕಾಪಾಡಿಕೊಳ್ಳಲು; ಸಾವು ತಪ್ಪಿಸಿಕೊಳ್ಳಲು; ಅತ್ಯಂತ ತುರ್ತಿನ ವಿಷಯವಾಗಿ: run for your life ಪ್ರಾಣ ಉಳಿಸಿಕೊಳ್ಳಲು ಓಡು.
  6. high life ಶಿಷ್ಟ, ಆಢ್ಯ – ಸಮಾಜ; ಸಮಾಜದ ಮೇಲು ವರ್ಗದವರ ಜೀವನ, ಸಾಮಾಜಿಕ ಪದ್ಧತಿಗಳು, ಸಂಪ್ರದಾಯಗಳು.
  7. in life ಬದುಕಿನಲ್ಲಿ; ಜೀವನದಲ್ಲಿ; ಎಲ್ಲಿ ಬೇಕಾದರೂ ಅನುಭವಕ್ಕೆ ಸಿಗುವ: nothing in life surpasses it ಬದುಕಿನಲ್ಲಿ ಯಾವುದೂ ಅದನ್ನು ಮೀರಿಸಲಾರದು.
  8. insure one’s life ಜೀವವಿಮೆ ಮಾಡು; ವಿಮೆ (ಪಾಲಿಸಿ) ತೆಗೆ.
  9. lease for three (etc.,) lives (ಬ್ರಿಟಿಷ್‍ ಪ್ರಯೋಗ) ನಮೂದಿಸಿರುವ ಮೂವರಲ್ಲಿ ಹೆಚ್ಚು ಕಾಲ ಬದುಕಿರುವವನ ಜೀವಮಾನದ ಪೂರ್ತಿ ಪಡೆಯುವ ಭೋಗ್ಯ, ಗೇಣಿ.
  10. lose one’s life ಕೊಲ್ಲಲ್ಪಡು; ಜೀವ ಕಳೆದುಕೊ; ಪ್ರಾಣ ಬಿಡು; ಜೀವ ತೆರು; ಜೀವವನ್ನೇ ಕೊಡು; ಸಾಯು.
  11. low life ಕೆಳಜೀವನ; ಕೆಳವರ್ಗದವರ – ಜೀವನ, ಸಾಮಾಜಿಕ ಪದ್ಧತಿಗಳು, ಸಂಪ್ರದಾಯಗಳು,
  12. make life easy ಬದುಕನ್ನು ಸುಲಲಿತಗೊಳಿಸು; ಸಮಸ್ಯೆಗಳನ್ನು ಸೃಷ್ಟಿಸಬೇಡ.
  13. my life! (ಸಂಬೋಧನೆಯಲ್ಲಿ, ಪ್ರೀತಿಸೂಚಕವಾಗಿ) ನನ್ನ ಪ್ರಾಣವೇ!
  14. necessaries of life ಜೀವನಾಗತ್ಯಗಳು; ಜೀವನಾವಶ್ಯಕತೆಗಳು; ಜೀವನದ ಆವಶ್ಯಕತೆಗಳು; ಜೀವನಕ್ಕೆ ಅಗತ್ಯವಾದ ವಸ್ತುಗಳು.
  15. nothing in life ಏನೂ ಇಲ್ಲ; ಸುತಾರಾಂ ಇಲ್ಲ.
  16. cat has nine lives ಬೆಕ್ಕಿಗೆ ಒಂಬತ್ತು ಜೀವ; ಬೆಕ್ಕನ್ನು ಸುಲಭವಾಗಿ ಸಾಯಿಸಲಾಗುವುದಿಲ್ಲ.
  17. portray to the life ಮೂಲಪ್ರತಿಗೆ ಸರಿಯಾಗಿ (ಇರುವಂತೆ) – ರೂಪಿಸು, ವರ್ಣಿಸು; ಮೂಲದ ತದ್ವತ್ತೆನ್ನುವಂತೆ ಚಿತ್ರಿಸು.
  18. save a person’s life
    1. (ಇನ್ನೊಬ್ಬನ) ಜೀವ ಉಳಿಸು.
    2. ಜೀವ ಉಳಿಸು; ಒಬ್ಬನನ್ನು ತೀವ್ರವಾದ ಕಷ್ಟದಿಂದ ಪಾರುಮಾಡು.
  19. staff of life ಜೀವನಾಧಾರ: bread is the staff of life ಅನ್ನವೇ ಜೀವನದ ಆಧಾರ.
  20. taken from the life ಜೀವನದಿಂದ ಎತ್ತಿತೆಗೆದ; ಬದುಕನ್ನು ಅನುಕರಿಸಿದ.
  21. the eternal (or everlasting) life ಸ್ವರ್ಗದ, ಶಾಶ್ವತ – ಬಾಳು, ಬದುಕು, ಜೀವನ.
  22. the other (or the future) life ಮರಣೋತ್ತರ ಜೀವನ; (ಸತ್ತ ಮೇಲಿನ) ಪರಲೋಕದ ಬದುಕು; ಆಮುಷ್ಮಿಕ ಜೀವನ.
  23. the simple life (ಭೋಗಾಡಂಬರಗಳಿಲ್ಲದ) ಸರಳ ಬದುಕು; ಸಾಮಾನ್ಯ ಜೀವನ.
  24. this is the life! (ತೃಪ್ತಿಸೂಚಕವಾಗಿ) ಜೀವನ, ಬದುಕು ಎಂದರೆ ಇದು!
  25. this life ಐಹಿಕ ಜೀವನ; ಈ ಲೋಕದ, ಭೂಲೋಕದ – ಬಾಳು.
  26. upon my life ನನ್ನ ಜೀವದಾಣೆಗೂ; ನನ್ನ ಪ್ರಾಣದ ಮೇಲೆ ಆಣೆ ಇಟ್ಟು.
  27. what a life! (ಅತೃಪ್ತಿಸೂಚಕವಾಗಿ) ಎಂಥ – ಜೀವನ, ಬದುಕು, ಬಾಳು!
  28. with all the pleasure in life ಅತ್ಯಂತ ಸಂತೋಷದಿಂದ; ಬಹಳ ಖುಷಿಯಾಗಿ.
ನುಡಿಗಟ್ಟು
  1. a matter of life and death ಅಳಿವು ಉಳಿವಿನ ವಿಷಯ; ಸಾವು ಬದುಕಿನ ವಿಷಯ; ಒಬ್ಬನು ಬದುಕುವುದೂ ಸಾಯುವುದೂ ಯಾವುದನ್ನು ಅವಲಂಬಿಸಿದೆಯೋ ಅಂಥ (ಮುಖ್ಯ) ವಿಷಯ.
  2. a $^1$price on his life ವ್ಯಕ್ತಿಯೊಬ್ಬನನ್ನು ಜೀವಸಹಿತ ಹಿಡಿದುಕೊಟ್ಟಲ್ಲಿ ಯಾ ಕೊಂದುಹಾಕಿದಲ್ಲಿ ನೀಡುವುದಾಗಿ ಘೋಷಿಸಿದ ಬಹುಮಾನ; ತಲೆ ಬೆಲೆ
  3. bring to life
    1. ಜೀವಂತಗೊಳಿಸು; ಬದುಕಿಸು; ಬದುಕಿರುವಂತೆ ಮಾಡು.
    2. ಮೂರ್ಛೆಯಿಂದ ಎಚ್ಚರಿಸು; ಪ್ರಜ್ಞೆ ಬರಿಸು; ಪ್ರಜ್ಞೆಗೆ ತರು.
    3. (ತೀವ್ರ ಕಾಯಿಲೆ ಮೊದಲಾದವುಗಳಿಂದ) ಚೇತರಿಸಿಕೊಳ್ಳುವಂತೆ ಮಾಡು.
    4. ಜೀವಂತಗೊಳಿಸು; ಜೀವಕಳೆ ತುಂಬು.
  4. come to life
    1. ಮೂರ್ಛೆ ತಿಳಿ; ಪ್ರಜ್ಞೆ ಬರು.
    2. (ಜೀವವಿಲ್ಲದ ವಸ್ತುವಿನ ವಿಷಯದಲ್ಲಿ) ಜೀವಂತವಾಗು; ಜೀವಕಳೆಯಿಂದ ತುಂಬು: the novel has come to life on the screen ಕಾದಂಬರಿ ತೆರೆಯ ಮೇಲೆ ಭಾವ ತುಂಬಿ ಬಂದಿದೆ, ಜೀವಕಳೆ ಪಡೆದಿದೆ.
  5. for life ಆಜೀವ ಪರ್ಯಂತ; ಜೀವಾವಧಿಯವರೆಗೆ; ಸಾಯುವವರೆಗೆ; ಬದುಕಿನ ಉಳಿದ ಭಾಗದ ಪೂರ್ತಿ.
  6. for the life of (ಉತ್ಪ್ರೇಕ್ಷೆಯಲ್ಲಿ) ಪ್ರಾಣ ಹೋಗುವುದಾದರೂ; ಜೀವ ಹೋದರೂ; ಸತ್ತರೂ: cannot for the life of me remember ಪ್ರಾಣಹೋದರೂ ಅದನ್ನು ನೆನಪಿಗೆ ತಂದುಕೊಳ್ಳಲಾರೆ.
  7. get the fright of one’s life (ಆಡುಮಾತು) ಎಂದೂ ಇಲ್ಲದಷ್ಟು – ದಿಗಿಲು ಬೀಳು, ಗಾಬರಿಪಡು, ಭಯಪಡು.
  8. great sacrifice of life ನರಮೇಧ; ಭಾರಿ ಪ್ರಾಣಿಹತ್ಯೆ ಯಾ ಪ್ರಾಣಿ ವಧೆ; ಹಲವು ಮನುಷ್ಯರ ಯಾ ಪ್ರಾಣಿಗಳ ಬಲಿ; ಹಲವರ ಕೊಲೆ ಯಾ ಸಾವು.
  9. have no regard for human life ಲಕ್ಷ್ಯವಿಲ್ಲದೆ ಮನುಷ್ಯರನ್ನು ಕೊಲ್ಲು, ಸಾಯಗೊಡು.
  10. have the time of one’s life (ಆಡುಮಾತು) ಹಿಂದೆಂದೂ ಇಲ್ಲದಷ್ಟು – ಮಜಾಮಾಡು, ಭೋಗಪಡು.
  11. large as life (ಆಡುಮಾತು) (ಮುಖ್ಯವಾಗಿ ಪ್ರಮುಖವಾಗಿ ಕಾಣುವಂತೆ) ಪ್ರತ್ಯಕ್ಷವಾಗಿ; ಎದುರಿನಲ್ಲಿ; ಸಮಕ್ಷ(ಮ)ದಲ್ಲಿ: here he is as large as life (ಹಾಸ್ಯ ಪ್ರಯೋಗ) ಇಗೋ! ಇಲ್ಲಿಯೇ ಪ್ರತ್ಯಕ್ಷವಾಗಿದ್ದಾನೆ.
  12. larger than life
    1. ಉತ್ಪ್ರೇಕ್ಷಿತ; ಉತ್ಪ್ರೇಕ್ಷಿಸಿದ; ಅತಿಶಯಿಸಿದ.
    2. (ವ್ಯಕ್ತಿಯ ವಿಷಯದಲ್ಲಿ) ಉತ್ಸಾಹಭರಿತ; ಉತ್ಸಾಹಭರಿತ ವ್ಯಕ್ತಿತ್ವದ.
  13. lay down one’s life ಜೀವತೆರು; ಬಲಿದಾನ ಮಾಡು; ಆತ್ಮಾರ್ಪಣೆ ಮಾಡು; ಪ್ರಾಣತ್ಯಾಗ ಮಾಡು.
  14. new 1lease of life.
  15. not on your life (ಆಡುಮಾತು) ಖಂಡಿತ ಇಲ್ಲ; ಇಲ್ಲವೇ ಇಲ್ಲ; ನಿನ್ನ ಜೀವದಾಣೆಗೂ ಇಲ್ಲ.
  16. save one’s life ಜೀವ ಉಳಿಸಿಕೊ; ಪ್ರಾಣ ಉಳಿಸಿಕೊ; ಸಾವಿನಿಂದ ಕಾಪಾಡಿಕೊ, ಪಾರು ಮಾಡಿಕೊ, ಪಾರಾಗು.
  17. see life
    1. ಇತರರೊಡನೆ ಯಾ ಎಲ್ಲರಲ್ಲಿಯೂ ಸರಾಗವಾಗಿ, ನಿಸ್ಸಂಕೋಚವಾಗಿ – ಬೆರೆ, ವ್ಯವಹರಿಸು.
    2. (ಮುಖ್ಯವಾಗಿ ದುಂದುಗಾರಿಕೆ, ದುರ್ವ್ಯಸನ, ಮೊದಲಾದವುಗಳ ಮೂಲಕ) ಜನಗಳ ಮತ್ತು ನಡೆನುಡಿಗಳ ಅನುಭವ, ಪರಿಜ್ಞಾನ – ಪಡೆ(ದುಕೊ), ಗಳಿಸಿಕೊ.
  18. sell one’s life dear(ly) (ಯುದ್ಧದಲ್ಲಿ) ಸಾಯುವ ಮುನ್ನ ಸಾಕಷ್ಟು ಜನರನ್ನು ಕೊಂದಿರು; ಯುದ್ಧದಲ್ಲಿ ಸಾಯುವುದಕ್ಕೆ ಮುಂಚೆ ಶತ್ರುಗಳಲ್ಲಿ ಹಲವರನ್ನು ಬಲಿ ತೆಗೆದುಕೊ.
  19. take life ಜನ(ರನ್ನು) ಯಾ ಪ್ರಾಣಿ(ಗಳನ್ನು) ಕೊಲ್ಲು; ವಧಿಸು.
  20. take one’s life in one’s hands ಜೀವ ಕೈಯಲ್ಲಿಟ್ಟು, ಹಿಡಿದು ಅಪಾಯಕ್ಕೆ – ತಲೆಗೊಡು, ಈಡು ಮಾಡಿಕೊ.
  21. to the life ಮೂಲಕ್ಕೆ ನಿಷ್ಠವಾಗಿ; ತದ್ವತ್ತಾಗಿ.
  22. with life and 1limb.