See also 2price
1price ಪ್ರೈಸ್‍
ನಾಮವಾಚಕ
  1. ಬೆಲೆ; ಮೂಲ್ಯ; ಕ್ರಯ; ಮೌಲ್ಯ; ಖರೀದಿ; ಕಿಮ್ಮತ್ತು; ಪದಾರ್ಥಗಳನ್ನು ಕೊಳ್ಳುವ ಯಾ ಮಾರುವ ಹಣದ ಮೊತ್ತ.
  2. (ಯಾವುದೇ ಪದಾರ್ಥ ಬಾಳುವ) ಬೆಲೆ; ಮೂಲ್ಯ: pearl of great price ಬಹಳ ಬೆಲೆಯ ಯಾ ಬೆಲೆಬಾಳುವ ಮುತ್ತು.
  3. (ಯಾವುದನ್ನೇ ಪಡೆಯಲು, ಗಳಿಸಲು) ತೆರಬೇಕಾದ ಬೆಲೆ; ಕೊಡಬೇಕಾದದ್ದು, ಮಾಡಬೇಕಾದದ್ದು, ತ್ಯಾಗಮಾಡಬೇಕಾದದ್ದು, ಮೊದಲಾದವು.
  4. (ಪಂದ್ಯ, ಬಾಜಿ ಅಸಮವಾಗಿದ್ದಾಗ ಪಣಕಟ್ಟುವವನು ತಾನು ಗೆಲ್ಲುವೆನೆಂಬ ಭರವಸೆಯಿಂದ ಪಂದ್ಯ ಒಪ್ಪಿಕೊಳ್ಳುವವನಿಗೆ ನೀಡುವ ರಿಯಾಯಿತಿಯ ಪ್ರಮಾಣ).
ಪದಗುಚ್ಛ
  1. above (or beyond or without) price ಬೆಲೆಕಟ್ಟಲಾಗದ; ಅಮೂಲ್ಯ; ಅನರ್ಘ್ಯ.
  2. at a price ಸಾಕಷ್ಟು ಹೆಚ್ಚಿನ ಬೆಲೆಗೆ; ದುಬಾರಿ ಬೆಲೆಗೆ.
  3. at any price
    1. ಯಾವುದೇ ಬೆಲೆ ತೆತ್ತು; ಯಾವುದೇ ತ್ಯಾಗಮಾಡಿ; ಏನನ್ನೇ ತೆತ್ತಾದರೂ, ಮಾಡಿಯಾದರೂ, ತ್ಯಾಗಮಾಡಬೇಕಾಗಿ ಬಂದರೂ: it must be done at any price ಏನೇ ಮಾಡಿಯಾದರೂ ಇದನ್ನು ಮಾಡಲೇ ಬೇಕು. peace at any price ಏನೇ ಬೆಲೆ ತೆತ್ತಾದರೂ ಶಾಂತಿ(ಯನ್ನು) ಸ್ಥಾಪಿಸಬೇಕು.
    2. ಏನೇ ಕೊಟ್ಟರೂ; ಯಾವುದೇ ಷರತ್ತಿನ ಮೇಲಾದರೂ: I would not do it, have it, etc., at any price ಏನೇ ಕೊಟ್ಟರೂ ನಾನದನ್ನು ಮಾಡುವುದಿಲ್ಲ, ಒಪ್ಪುವುದಿಲ್ಲ, ಮೊದಲಾದ.
  4. or (great) price ಬಹಳ ಬೆಲೆಬಾಳುವಂಥದ್ದು.
  5. a price on a person’s head (or life) ವ್ಯಕ್ತಿಯೊಬ್ಬನನ್ನು ಜೀವಸಹಿತ ಹಿಡಿದುಕೊಟ್ಟಲ್ಲಿ ಯಾ ಕೊಂದುಹಾಕಿದಲ್ಲಿ ನೀಡುವುದಾಗಿ ಘೋಷಿಸಿದ ಬಹುಮಾನ; ತಲೆಬೆಲೆ. set a price on person’s head (ವ್ಯಕ್ತಿಯ) ತಲೆಗೆ ಬೆಲೆಯಿಡು; ಅವನನ್ನು ಹಿಡಿದುಕೊಟ್ಟರೆ ಯಾ ಕೊಂದುಹಾಕಿದರೆ ನಿಗದಿತ ಬಹುಮಾನ ಕೊಡುವುದಾಗಿ ಸಾರು.
  6. every man has his price ತಕ್ಕ ಆಸೆ ತೋರಿಸಿದರೆ ಯಾವನನ್ನಾದರೂ ಕೊಳ್ಳಬಹುದಾದ, ಒಲಿಸಿಕೊಳ್ಳಬಹುದಾದ, ಬುಟ್ಟಿಗೆ ಹಾಕಿಕೊಳ್ಳಬಹುದಾದ, ಜೇಬಿಗೆ ಹಾಕಿಕೊಳ್ಳಬಹುದಾದ.
  7. set a price on ಪದಾರ್ಥವನ್ನು ಕೊಳ್ಳುವ ಯಾ ಮಾರುವ ಬೆಲೆಯನ್ನು – ಹೇಳು, ಘೋಷಿಸು, ನಿಗದಿಪಡಿಸು.
  8. what price...? (ಸಾಮಾನ್ಯವಾಗಿ ಕೃನ್ನಾಮದೊಡನೆ) (ಆಡುಮಾತು)
    1. $\ldots$ ಸಂಭವ, ಸಾಧ್ಯತೆ ಏನು? : what price your finishing the course?ಈ ಕೋರ್ಸನ್ನು ನೀನು ಮುಗಿಸುವ ಸಂಭವವಾದರೂ ಏನು?
    2. (ವ್ಯಂಗ್ಯವಾಗಿ) ನಿರೀಕ್ಷಿಸಿದ್ದು ಯಾ ಬಡಾಯಿಕೊಚ್ಚಿಕೊಂಡದ್ದು ಹುಸಿಯಾಯಿತು, ನಿರಾಶಾದಾಯಕವಾಯಿತು: what price your friendship now? ಈಗ ನಿನ್ನ ಸ್ನೇಹದ ಬೆಲೆ, ಫಲ ಏನಾಯಿತು?