See also 2lie  3lie  4lie
1lie ಲೈ
ಅಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ lying ಲೈಇಂಗ್‍, ಭೂತರೂಪ lay ಉಚ್ಚಾರಣೆ ಲೇ, ಭೂತಕೃದಂತ lain ಉಚ್ಚಾರಣೆ ಲೇನ್‍, ಬೈಬಲ್‍ ಪ್ರಯೋಗ lien).
  1. (ಪ್ರಾಣಿಗಳ ಯಾ ಮನುಷ್ಯರ ವಿಷಯದಲ್ಲಿ) ಮಲಗು; ಮಲಗಿಕೊ; ಮಲಗಿರು.
  2. (ವಸ್ತುವಿನ ವಿಷಯದಲ್ಲಿ) (ಯಾವುದಾದರೊಂದರ) ಮೇಲ್ಮೈ ಮೇಲೆ ಮಟ್ಟಸವಾಗಿ – ಇರು, ಹಾಸಿರು, ಬಿದ್ದಿರು, ಚಾಚಿರು: snow lay on the ground ನೆಲದ ಮೇಲೆ ಹಿಮ ಬಿದ್ದಿತ್ತು, ಹಾಸಿತ್ತು.
  3. (ಗೊತ್ತಾದ ಸ್ಥಿತಿಯಲ್ಲಿ ಯಾ ದಿಕ್ಕಿನಲ್ಲಿ ಯಾ ಸ್ಥಳದಲ್ಲಿ, ಮುಖ್ಯವಾಗಿ ಗುಪ್ತವಾಗಿ) ಇರು; ನೆಲೆಸಿರು; ಉಳಿದಿರು: lie hidden ಗುಪ್ತವಾಗಿರು; ರಹಸ್ಯವಾಗಿರು; ಬಚ್ಚಿಟ್ಟುಕೊಂಡಿರು; ಮರೆಯಲ್ಲಿರು. lie barren ಬಂಜರಾಗಿರು; ಬರಡಾಗಿರು. lie in wait ಕಾಯುತ್ತಿರು. malice lay behind those words ಆ ಮಾತುಗಳ ಹಿಂದೆ ಮತ್ಸರವಿತ್ತು. they lay dying ಅವರು ಸಾಯುತ್ತ ಬಿದ್ದಿದ್ದರು. the books lay unread ಪುಸ್ತಕಗಳು ಓದದೆ ಬಿದ್ದಿದ್ದವು.
  4. (ಅಮೂರ್ತ ವಸ್ತುಗಳ ವಿಷಯದಲ್ಲಿ) ವ್ಯತ್ಯಾಸವಾಗದೆ, ಚಲಿಸದೆ, ಚರ್ಚಿಸದೆ ಮೊದಲಾಗಿ – ಇರು; ಹಾಗೆಯೇ ಯಾ ಅಂತೆಯೇ ಉಳಿದಿರು: let matters lie ವಿಷಯಗಳು ಹಾಗೆಯೇ ಇರಲಿ (ಅವನ್ನು ಚರ್ಚಿಸುವುದಾಗಲಿ ಇತ್ಯರ್ಥ ಮಾಡುವುದಾಗಲಿ ಬೇಡ).
  5. (ಅಮೂರ್ತ ವಿಷಯಗಳ ಬಗ್ಗೆ) ಇರು; ಆಗು; ಉಂಟಾಗು; ಗೊತ್ತಾದ ಸ್ಥಾನದಲ್ಲಿ ಯಾ ಸಂಬಂಧದಲ್ಲಿ ಇರು: the answer lies in education ಪರಿಹಾರ ವಿದ್ಯಾಭ್ಯಾಸದಲ್ಲಿದೆ. my sympathies lie with the family ನನ್ನ ಅನುಕಂಪೆ ಆ ಕುಟುಂಬದ ಪರವಾಗಿ ಇದೆ. the choice lies between the two people ಅವರಿಬ್ಬರಲ್ಲಿ ಒಬ್ಬನ ಆಯ್ಕೆ ಆಗಬೇಕಾಗಿದೆ. his acquaintances lay among the rich ಅವನ ಪರಿಚಿತರು ಶ್ರೀಮಂತರ ನಡುವೆ ಇದ್ದರು; ಶ್ರೀಮಂತರು ಅವನ ಪರಿಚಿತರಾಗಿದ್ದರು. he knows where his interest lies ಅವನ ಹಿತಾಸಕ್ತಿ ಎಲ್ಲಿದೆ ಎಂಬುದು ಅವನಿಗೆ ಗೊತ್ತು. how do they lie to each other? ಅವರ ಪರಸ್ಪರ ಸಂಬಂಧ ಹೇಗಿದೆ ಯಾ ಎಂಥದ್ದು? her strength lay in her weakness ಅವಳ ದೌರ್ಬಲ್ಯವೇ ಅವಳ ಶಕ್ತಿಯಾಗಿತ್ತು.
  6. ಒಂದು (ಗೊತ್ತಾದ) ಸ್ಥಿತಿಯಲ್ಲಿ – ಇರು ಯಾ ಇಡಲಾಗಿರು: the village lies to the east ಹಳ್ಳಿ ಪೂರ್ವಕ್ಕಿದೆ.
  7. (ರಸ್ತೆ, ಮಾರ್ಗ, ಮೊದಲಾದವುಗಳ ವಿಷಯದಲ್ಲಿ) (ಮೂಲಕ, ಒಳಗೆ, ಪಕ್ಕದಲ್ಲಿ, ಮಾರ್ಗವಾಗಿ) ಸಾಗಿರು; ಹೋಗು; ಹಾಯು: the road lies over mountains ರಸ್ತೆ ಪರ್ವತಗಳ ಮೂಲಕ ಹಾದು ಹೋಗುತ್ತದೆ.
  8. ಕಣ್ಣಿಗೆ ಕಾಣಿಸುವಂತೆ ಇರು; ದೃಷ್ಟಿಗೋಚರವಾಗಿರು; ಕಣ್ಣ ಮುಂದಿರು: lie on the surface ಮೇಲುಗಡೆಯೇ ಇದೆ. the desert lay before us ಮರಳುಗಾಡು ನಮ್ಮ ಕಣ್ಣ ಮುಂದೆಯೇ ಇತ್ತು. lie open ತೆರೆದಿದೆ.
  9. (ಸತ್ತವರ ವಿಷಯದಲ್ಲಿ) ಗೋರಿಯಲ್ಲಿರು; ಸಮಾಧಿಯಲ್ಲಿರು.
  10. (ಪ್ರಾಚೀನ ಪ್ರಯೋಗ) (ಒಬ್ಬನೊಡನೆ ಯಾ ಒಬ್ಬಳೊಡನೆ) ಮಲಗು; ಸಂಭೋಗ ನಡೆಸು.
  11. (ನ್ಯಾಯಶಾಸ್ತ್ರ) (ದಾವೆ) ನಿಲ್ಲುವಂತಿರು; ಹಿಡಿ; ಹಿಡಿಯುವಂತಿರು; ದಾವೆಗೆ ಅವಕಾಶವಿರು ಯಾ ಆಸ್ಪದವಿರು: appeal will not lie ಅಪೀಲಿಗೆ ಆಸ್ಪದವಿಲ್ಲ. objection will not lie ಆಕ್ಷೇಪಣೆ ನಿಲ್ಲುವಂತಿಲ್ಲ.
  12. (ಬೇಟೆ ಹಕ್ಕಿಗಳ ವಿಷಯದಲ್ಲಿ) ಏಳದಿರು; ಮೇಲಕ್ಕೆ ಏಳದೆ, ಹಾಗೆಯೇ ಇರು; ಹಾರದೆ ಕುಳಿತಿರು.
  13. (ಯಾವುದರದೇ ಮೇಲೆ) ಚಾಚಿರು; ಮಲಗಿರು; ಅಡ್ಡಡ್ಡಲಾಗಿ ಬಿದ್ದಿರು; ಮಲಗುವ ಭಂಗಿಯಲ್ಲಿರು; ಒರಗಿ, ಬಾಗಿ – ಮಲಗಿರು.
  14. (ಸೈನ್ಯದಳಗಳ ವಿಷಯದಲ್ಲಿ, ಒಂದೆಡೆ) ಬೀಡು ಬಿಟ್ಟಿರು.
  15. (ಗೊತ್ತಾದೆಡೆಯಲ್ಲಿ) ಬಿದ್ದಿರು; ಶೇಖರವಾಗಿರು; ದಾಸ್ತಾನಾಗಿರು; ಸಂಗ್ರಹವಾಗಿರು; ಕೂಡಿಡಲಾಗಿರು: money is lying at the bank ಹಣ ಬ್ಯಾಂಕಿನಲ್ಲಿ ಬಿದ್ದಿದೆ.
  16. (ಹಡಗಿನ ವಿಷಯದಲ್ಲಿ) ನಿಲ್ಲು; ಲಂಗರು ಹಾಕು: the ship is lying off the coast ಹಡಗು ತೀರದಾಚೆ ನಿಂತಿದೆ, ಲಂಗರು ಹಾಕಿದೆ.
ಪದಗುಚ್ಛ
  1. lie asleep ನಿದ್ದೆ ಮಾಡುತ್ತ ಮಲಗಿರು.
  2. lie at the mercy of (ಒಬ್ಬನ) ಅಂಕೆಯಲ್ಲಿರು; ಕೃಪೆಯಲ್ಲಿರು; ದಯೆಯಲ್ಲಿರು; ಅಧೀನದಲ್ಲಿರು.
  3. lie back ವಿಶ್ರಾಂತಿಗಾಗಿ (ಯಾವುದಾದರೂ ಒಂದರ ಮೇಲೆ) ಒರಗಿರು, ಒರಗಿಕೊಂಡಿರು.
  4. lie down ಸ್ವಲ್ಪ ಮಲಗು, ಮಲಗಿಕೊ; ಸ್ವಲ್ಪ ಕಾಲ ವಿಶ್ರಾಂತಿ ತೆಗೆದುಕೊ.
  5. lie helpless ಏನು ಮಾಡಲೂ ಶಕ್ತಿಯಿಲ್ಲದೆ ಬಿದ್ದಿರು; ನಿಸ್ಸಹಾಯಕ ಸ್ಥಿತಿಯಲ್ಲಿ, ಅಸಹಾಯಕ ಸ್ಥಿತಿಯಲ್ಲಿ – ಬಿದ್ದಿರು.
  6. lie idle (ಮಾಡಲು) ಕೆಲಸವಿಲ್ಲದೆ ಇರು; ನಿಷ್ಕ್ರಿಯವಾಗಿರು.
  7. lie in prison ಸೆರೆಯಲ್ಲಿರು.
  8. lie in wait (or ambush) ಅವಿತು ಕಾದಿರು; ಹೊಂಚುಹಾಕಿಕೊಂಡಿರು.
  9. lie off (ನೌಕಾಯಾನ) (ತೀರದಿಂದ, ಯಾ ಮತ್ತೊಂದು ಹಡಗಿನಿಂದ) ಸ್ವಲ್ಪ ದೂರದಲ್ಲಿ ನಿಂತಿರು.
  10. lie out of (one’s) money ಕೊಡದೆ ಉಳಿದಿರು; ಬಾಕಿ ನಿಂತಿರು.
  11. lie over
    1. ಹಾಗೇ ಇರು; ಉಳಿದಿರು; ಪಾವತಿಯಾಗದಿರು.
    2. ಮುಂದಕ್ಕೆ ಹೋಗಿರು; ಮುಂದೂಡಲ್ಪಟ್ಟಿರು; ಮುಂದಕ್ಕೆ ಹಾಕಲಾಗಿರು.
  12. lie perdu (ಸೈನಿಕ) (ಗಡಿಠಾಣೆಯಲ್ಲಿ) ಅಡಗಿರು; ಅವಿತುಕೊಂಡಿರು.
  13. lie sick ರೋಗದಿಂದ ಮಲಗಿರು, ಬಿದ್ದಿರು, ಹಾಸಿಗೆ ಹಿಡಿದಿರು.
  14. lie to (ನೌಕಾಯಾನ) ನಿಂತುಹೋಗು; ಹಿಂದಕ್ಕೆ ಹೋಗುವುದರಿಂದ ಯಾ ಹಾಯಿಪಟವನ್ನು ಸಂಕುಚಿಸುವುದರಿಂದ ಹಡಗಿನ ತಲೆ ಗಾಳಿಯ ದಿಕ್ಕಿಗೆ ತಿರುಗಿ (ಹಡಗು) ಬಹುಮಟ್ಟಿಗೆ ನಿಂತುಹೋಗು.
  15. lie up
    1. ವಿರಮಿಸು; ವಿಶ್ರಾಂತಿ ಪಡೆ.
    2. ವಿಶ್ರಾಂತಿಯಲ್ಲಿರು; ವಿಶ್ರಾಂತಿ ಪಡೆದಿರು.
    3. ಹಾಸಿಗೆ ಹಿಡಿದಿರು.
    4. ಕೊಠಡಿಗೆ ಅಂಟಿಕೊಂಡಿರು; ಕೊಠಡಿ ಬಿಟ್ಟು ಬರದಂತೆ ಆಗಿರು.
    5. (ಹಡಗಿನ ವಿಷಯದಲ್ಲಿ) ಕಟ್ಟೆಯಲ್ಲಿರು.
    6. (ಹಡಗಿನ ವಿಷಯದಲ್ಲಿ) ಕೆಟ್ಟುಹೋಗಿರು; ಉಪಯೋಗವಾಗದಂತಿರು.
    7. ಅವಿತಿಕೊ; ಅಡಗಿಕೊಂಡಿರು.
ನುಡಿಗಟ್ಟು
  1. as far as in me lies ನನ್ನ ಕೈಲಾದ ಮಟ್ಟಿಗೆ; ನನಗೆ ಶಕ್ತಿಯಿದ್ದಷ್ಟು.
  2. find out how the land lies
    1. ಜಾಗದ ಚಹರೆ ತಿಳಿದುಕೊ.
    2. ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊ.
  3. let lie ಹಾಗೆಯೇ ಬಿಡು; (ವಿವಾದಾಸ್ಪದ ವಿಷಯ ಮೊದಲಾದವನ್ನು) ಚರ್ಚೆಗೆ ಮೊದಲಾದವಕ್ಕೆ ಎತ್ತದಿರು.
  4. lie sleeping dogs lie ತಕರಾರಿನ ವಿಷಯಗಳನ್ನು ಅವಷ್ಟಕ್ಕೆ ಬಿಡು; ವಿವಾದಗಳನ್ನೆಬ್ಬಿಸಬೇಡ; ವಿವಾದಾಸ್ಪದ ಸಂಗತಿಗಳನ್ನು ತಮ್ಮಷ್ಟಕ್ಕೆ ಬಿಡು.
  5. let about (or around) ಬಿದ್ದು ಒದ್ದಾಡುತ್ತಿರು; ಯಾರೂ ಲಕ್ಷಿಸದೆ ಒಂದೆಡೆ ಬಿದ್ದಿರು.
  6. lie ahead ಕಾದಿರು; ಸಂಭವಿಸು; ಮುಂದೆ ಇರು.
  7. lie by
    1. ಉಪಯೋಗಿಸದೆ ಬಿದ್ದಿರು.
    2. ತೆಪ್ಪಗಿರು; ಸುಮ್ಮನಿರು; ಏನೂ ಮಾಡದಿರು; ವಿರಮಿಸಿರು; ವಿಶ್ರಮಿಸಿರು: we lie by during the heat of the day ಬಿಸಿಲಿನ ವೇಳೆಯಲ್ಲಿ ನಾವು (ಕೆಲಸ ಮಾಡದೆ) ಸುಮ್ಮನಿದ್ದೆವು. the ship was forced to lie by for many days for repair ರಿಪೇರಿಯ ಸಲುವಾಗಿ ಹಡಗು ಬಹಳ ದಿನ ಹಾಗೆಯೇ ಇರಬೇಕಾಯಿತು.
  8. lie down under (ಅವಮಾನ, ಮುಖಭಂಗ, ಮೊದಲಾದವನ್ನು) ತೆಪ್ಪಗೆ ಒಪ್ಪಿಕೊ; ಪ್ರತಿಭಟಿಸದೆ ಸಹಿಸು; ಎದುರಿಸದೆ ತಾಳಿಕೊ.
  9. lie heavy (on one’s stomach or conscience) (ಎದೆಯ ಮೇಲೆ ಯಾ ಮನಸ್ಸಿನ ಮೇಲೆ) ಭಾರವಾಗಿರು; ಭಾರವಾಗಿ – ಕುಳಿತಿರು, ಒತ್ತುತ್ತಿರು.
  10. lie in
    1. ಬೆಳಗ್ಗೆ ಇನ್ನೂ ಮಲಗಿರು.
    2. (ಪ್ರಾಚೀನ ಪ್ರಯೋಗ) ಹೆತ್ತಿರು; ಹಡೆದಿರು; ಬಾಣಂತಿಯಾಗಿರು.
  11. lie in ruins
    1. ಪಾಳು ಬಿದ್ದಿರು; ಮಣ್ಣು ಪಾಲಾಗಿರು.
    2. ಸೋತಿರು; ಕೆಳಕ್ಕೆ ಬಿದ್ದಿರು.
  12. lie in state (ಸತ್ತವರ ವಿಷಯದಲ್ಲಿ) (ಕಳೇಬರ) ಉಚಿತ ಮರ್ಯಾದೆಗಳಿಂದ ಪ್ರದರ್ಶಿತವಾಗಿರು.
  13. lie in the dust ನುಡಿಗಟ್ಟು$(11)$.
  14. lie low
    1. ಮೌನವಾಗಿ ಯಾ ಕಣ್ಣಿಗೆ ಕಾಣದಂತೆ ಇರು.
    2. ತನ್ನ ಉದ್ದೇಶವನ್ನು ಬಿಟ್ಟುಕೊಡದೆ ಸುಮ್ಮನಿರು.
  15. lie on the bed one has made ಮಾಡಿದ್ದುಣ್ಣು; ಮಾಡಿದ್ದರ ಫಲ ಅನುಭವಿಸು.
  16. lie with (ಒಬ್ಬನ) ಜವಾಬ್ದಾರಿಯಾಗಿರು; ಹೊಣೆಯಾಗಿರು: lies with you to do it ಈ ಕೆಲಸ ನಿನ್ನ ಜವಾಬ್ದಾರಿ; ಇದನ್ನು ಮಾಡುವುದು ನಿನ್ನ ಕೆಲಸ; ಈ ಕೆಲಸ ಮಾಡುವುದು ನಿನಗೆ ಸೇರಿದ್ದು.
  17. take lying down (ಸಾಮಾನ್ಯವಾಗಿ ನಿಷೇಧಾರ್ಥಕ ಪದದೊಡನೆ ಪ್ರಯೋಗ) (ಸೋಲು, ಬಯ್ಗುಳ, ಮೊದಲಾದವನ್ನು) ದೈನ್ಯದಿಂದ, ಹೀನಾಯವಾಗಿ, ಪ್ರತಿಭಟಿಸದೆ – ಸಹಿಸು; ತೆಪ್ಪಗೆ ಒಪ್ಪಿಕೊ.
See also 1lie  3lie  4lie
2lie ಲೈ
ನಾಮವಾಚಕ
  1. (ಒಂದು ವಸ್ತುವಿರುವ) ನಿಲುವು; ನೆಲೆ; ಸ್ಥಾನ; ದಿಕ್ಕು.
  2. (ಗಾಲ್‍) (ಇನ್ನೇನು ಹೊಡೆಯಬೇಕೆನ್ನುವಾಗ) ಗಾಲ್‍ ಚೆಂಡು ಇರುವ ಸ್ಥಾನ.
  3. (ಪ್ರಾಣಿ, ಪಕ್ಷಿ, ಮೀನು – ಇವುಗಳ) ಇಕ್ಕೆ; ನೆಲೆ; ರೂಢಿಯ ವಾಸಸ್ಥಾನ, ಆವಾಸ.
ಪದಗುಚ್ಛ

the lie of the land (ರೂಪಕವಾಗಿ) ಪರಿಸ್ಥಿತಿ; ಸಂದರ್ಭ; ಸ್ಥಿತಿಗತಿ.

See also 1lie  2lie  4lie
3lie ಲೈ
ನಾಮವಾಚಕ
  1. (ಉದ್ದೇಶಪೂರ್ವಕವಾದ, ತಿಳಿದೂ ಹೇಳಿದ) ಸುಳ್ಳು; ಸಟೆ; ಹುಸಿ; ಅನೃತ; ಅಸತ್ಯ; tell a lie ಸುಳ್ಳು ಹೇಳು. pack of lies ಸುಳ್ಳಿನ ಕಂತೆ.
  2. ಮೋಸ; ವಂಚನೆ; ಠಕ್ಕು.
  3. ತಪ್ಪು ಕಲ್ಪನೆ; ಮಿಥ್ಯಾಭಾವನೆ.
ಪದಗುಚ್ಛ
  1. act a lie (ಬಾಯಲ್ಲಿ ಸುಳ್ಳು ಹೇಳದೆ) ಕೆಲಸದಲ್ಲಿ ಕೈಕೊಡು; ಕಾರ್ಯದಲ್ಲಿ ವಂಚಿಸು.
  2. give one the lie (in his throat) ಸುಳ್ಳು ಹೇಳಿದನೆಂದು ಅವನ ಮುಖಕ್ಕೇ ತಿಳಿಸು, ಅವನ ಎದುರಿಗೇ ಆಪಾದಿಸು, ಅವನನ್ನೇ ಮೂದಲಿಸು.
  3. give the lie to (ಊಹೆ ಮೊದಲಾದವನ್ನು) ಸುಳ್ಳುಮಾಡು; ಸುಳ್ಳೆಂದು ಹೇಳು ಯಾ ತೋರಿಸು.
  4. live a lie ಸುಳ್ಳು ಬದುಕು ಬದುಕು; ಮೋಸದ ಬಾಳು ಸಾಗಿಸು; ಸುಳ್ಳನ್ನು ನಿಜವೆಂದು ಕಾಣಿಸುವಂತೆ ಬದುಕು ನಡೆಸು: she lived a lie for 20 years pretending to be his wife ಅವನ ಹೆಂಡತಿಯೆಂದು ಸಟಿಸುತ್ತಾ ಅವಳು 20 ವರ್ಷ ಸುಳ್ಳು ಬದುಕು ನಡೆಸಿದಳು.
  5. maintain a lie ತಪ್ಪು ಸಂಪ್ರದಾಯವನ್ನು ಯಾ ಮಿಥ್ಯಾಭಾವನೆಯನ್ನು ಮುಂದುವರಿಸು: how can a man maintain a constant lie in his appearance? ಒಬ್ಬ ವ್ಯಕ್ತಿ ಹೇಗೆ ತಾನೆ ನಿರಂತರವಾದ ಠಕ್ಕಿನ ಸೋಗನ್ನು ಉಳಿಸಿಕೊಂಡುಬರಲು ಸಾಧ್ಯ?
  6. nail a lie (ಯಾವುದನ್ನೇ) ಸುಳ್ಳೆಂದು – ತೋರಿಸು, ರುಜುವಾತು ಪಡಿಸು.
  7. white lie ಬಿಳಿಸುಳ್ಳು; (ಸದುದ್ದೇಶದಿಂದ ಹೇಳಿದ) ಕ್ಷಮಾರ್ಹ ಸುಳ್ಳು.
  8. worship a lie ತಪ್ಪು ಕಲ್ಪನೆಯನ್ನು ಅವಲಂಬಿಸಿರು, ಆದರಿಸು.
See also 1lie  2lie  3lie
4lie ಲೈ
ಕ್ರಿಯಾಪದ

(ವರ್ತಮಾನಕಾಲ ಪ್ರಥಮ ಪುರುಷ ಏಕವಚನ lies, ಭೂತರೂಪ ಮತ್ತು ಭೂತಕೃದಂತ lied, ವರ್ತಮಾನ ಕೃದಂತ lying ಉಚ್ಚಾರಣೆ ಲೈಇಂಗ್‍).

ಸಕರ್ಮಕ ಕ್ರಿಯಾಪದ
  1. (ಆತ್ಮಾರ್ಥಕ) ಸುಳ್ಳು ಹೇಳಿ (ಒಂದು ಪರಿಸ್ಥಿತಿ ಮೊದಲಾದವುಗಳಿಂದ) – ಪಾರಾಗು, ತಪ್ಪಿಸಿಕೊ, ಬಚಾಯಿಸಿಕೊ: managed to lie himself out of trouble ಅವನು ಸುಳ್ಳುಪಳ್ಳು ಹೇಳಿ ಬಚಾವಾದ.
  2. ಸುಳ್ಳು ಹೇಳಿ (ಒಬ್ಬನನ್ನು ಪರಿಸ್ಥಿತಿ ಮೊದಲಾದವುಗಳಲ್ಲಿ) ಸಿಕ್ಕಿಸು.
  3. ಸುಳ್ಳು ಹೇಳಿ (ಒಬ್ಬನನ್ನು ಪರಿಸ್ಥಿತಿ ಮೊದಲಾದವುಗಳಿಂದ) – ತಪ್ಪಿಸು, ಬಚಾಯಿಸು, ಪಾರುಮಾಡು.
  4. (ಒಬ್ಬ ವ್ಯಕ್ತಿಯ ಒಳ್ಳೆಯ ಹೆಸರು ಮೊದಲಾದವನ್ನು) ಸುಳ್ಳೆನಿಸು; (ಒಬ್ಬನ) ಹೆಸರು ಹಾಳುಮಾಡು; ಹೆಸರು ಕೆಡಿಸು; (ಒಬ್ಬನ) ಹೆಸರಿಗೆ ಮಸಿ ಬಳಿ: men have lied out of office ಹೆಸರಿಗೆ ಸುಳ್ಳಿನ ಮಸಿ ಬಳಿದು ಜನರನ್ನು ಸ್ಥಾನಗಳಿಂದ ಚ್ಯುತಿಗೊಳಿಸಿದ್ದುಂಟು.
ಅಕರ್ಮಕ ಕ್ರಿಯಾಪದ
  1. ಸುಳ್ಳು ಹೇಳು; ಸುಳ್ಳಾಡು; ಸಟೆಯಾಡು: they lied to me ಅವರು ನನಗೆ ಸುಳ್ಳು ಹೇಳಿದರು.
  2. (ವಸ್ತುವಿನ ವಿಷಯದಲ್ಲಿ) ಸುಳ್ಳು ಹೇಳು; ವಂಚಿಸು; ತಪ್ಪು ಕಲ್ಪನೆ ಹುಟ್ಟಿಸು; ತಪ್ಪು ಅಭಿಪ್ರಾಯ ಮೂಡಿಸು: that thermometer must be lying ಆ ಉಷ್ಣಮಾಪಕ ತಪ್ಪು ತೋರಿಸುತ್ತಿರಬೇಕು. the camera cannot lie ಕ್ಯಾಮರಾ ಸುಳ್ಳು ಹೇಳಲು ಸಾಧ್ಯವಿಲ್ಲ.
ನುಡಿಗಟ್ಟು

lie in one’s teeth (or throat) (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ಭರ್ಜರಿ ಸುಳ್ಳು – ಹೇಳು, ಬಿಡು; ಇತಿಮಿತಿಯಿಲ್ಲದೆ ಯಾ ನಾಚಿಕೆ ಹೇಸಿಗೆ ಇಲ್ಲದೆ ಸುಳ್ಳು ಹೇಳು.