(ಉದ್ದೇಶಪೂರ್ವಕವಾದ, ತಿಳಿದೂ ಹೇಳಿದ) ಸುಳ್ಳು; ಸಟೆ; ಹುಸಿ; ಅನೃತ; ಅಸತ್ಯ; tell a lie ಸುಳ್ಳು ಹೇಳು. pack of lies ಸುಳ್ಳಿನ ಕಂತೆ.
ಮೋಸ; ವಂಚನೆ; ಠಕ್ಕು.
ತಪ್ಪು ಕಲ್ಪನೆ; ಮಿಥ್ಯಾಭಾವನೆ.
ಪದಗುಚ್ಛ
act a lie (ಬಾಯಲ್ಲಿ ಸುಳ್ಳು ಹೇಳದೆ) ಕೆಲಸದಲ್ಲಿ ಕೈಕೊಡು; ಕಾರ್ಯದಲ್ಲಿ ವಂಚಿಸು.
give one the lie (in his throat) ಸುಳ್ಳು ಹೇಳಿದನೆಂದು ಅವನ ಮುಖಕ್ಕೇ ತಿಳಿಸು, ಅವನ ಎದುರಿಗೇ ಆಪಾದಿಸು, ಅವನನ್ನೇ ಮೂದಲಿಸು.
give the lie to (ಊಹೆ ಮೊದಲಾದವನ್ನು) ಸುಳ್ಳುಮಾಡು; ಸುಳ್ಳೆಂದು ಹೇಳು ಯಾ ತೋರಿಸು.
live a lie ಸುಳ್ಳು ಬದುಕು ಬದುಕು; ಮೋಸದ ಬಾಳು ಸಾಗಿಸು; ಸುಳ್ಳನ್ನು ನಿಜವೆಂದು ಕಾಣಿಸುವಂತೆ ಬದುಕು ನಡೆಸು: she lived a lie for 20 years pretending to be his wife ಅವನ ಹೆಂಡತಿಯೆಂದು ಸಟಿಸುತ್ತಾ ಅವಳು 20 ವರ್ಷ ಸುಳ್ಳು ಬದುಕು ನಡೆಸಿದಳು.
maintain a lie ತಪ್ಪು ಸಂಪ್ರದಾಯವನ್ನು ಯಾ ಮಿಥ್ಯಾಭಾವನೆಯನ್ನು ಮುಂದುವರಿಸು: how can a man maintain a constant lie in his appearance? ಒಬ್ಬ ವ್ಯಕ್ತಿ ಹೇಗೆ ತಾನೆ ನಿರಂತರವಾದ ಠಕ್ಕಿನ ಸೋಗನ್ನು ಉಳಿಸಿಕೊಂಡುಬರಲು ಸಾಧ್ಯ?
nail a lie (ಯಾವುದನ್ನೇ) ಸುಳ್ಳೆಂದು – ತೋರಿಸು, ರುಜುವಾತು ಪಡಿಸು.
white lie ಬಿಳಿಸುಳ್ಳು; (ಸದುದ್ದೇಶದಿಂದ ಹೇಳಿದ) ಕ್ಷಮಾರ್ಹ ಸುಳ್ಳು.
worship a lie ತಪ್ಪು ಕಲ್ಪನೆಯನ್ನು ಅವಲಂಬಿಸಿರು, ಆದರಿಸು.