See also 2licence
1licence ಲೈಸನ್ಸ್‍
ನಾಮವಾಚಕ
  1. (ನಾಯಿ, ಬಂದೂಕು, ದೂರದರ್ಶನ ಸೆಟ್‍ ಯಾ ವಾಹನವನ್ನು ಪಡೆದಿರಲು ಯಾ ಬಳಸಲು, ಮದುವೆಯಾಗಲು, ಯಾವುದನ್ನೇ ಮುದ್ರಿಸಲು, ಬೋಧೆ ಮಾಡಲು, ಯಾ ಸಾರ್ವಜನಿಕ ರಸ್ತೆಯಲ್ಲಿ ವಾಹನ ನಡೆಸಲು, ಮುಖ್ಯವಾಗಿ ಸಾರಾಯಿ ವ್ಯಾಪಾರ ಮಾಡಲು, ಸರ್ಕಾರ ಮೊದಲಾದವುಗಳು ಕೊಡುವ) ಲೈಸನ್ಸು; ಅಧಿಕಾರ ಪತ್ರ; ಅಪ್ಪಣೆ ಚೀಟಿ; ಸನ್ನದು; ಪರವಾನೆ; ಪರವಾನಗಿ; ಪರ್ಮಿಟ್ಟು.
  2. ಅಪ್ಪಣೆ; ಅನುಮತಿ; ಅನುಜ್ಞೆ: have I your licence to remove the fence? ಬೇಲಿಯನ್ನು ತೆಗೆದುಹಾಕಲು ನನಗೆ ನಿನ್ನ ಅನುಮತಿ ಇದೆಯಷ್ಟೆ?
  3. (ಮುಖ್ಯವಾಗಿ ಮಿತಿಮೀರಿದ) ಕಾರ್ಯ ಸ್ವಾತಂತ್ರ್ಯ.
  4. ನ್ಯಾಯೋಲ್ಲಂಘನೆ; ಕಾನೂನನ್ನು ಕಡೆಗಣಿಸುವುದು.
  5. ಸ್ವೇಚ್ಛಾವರ್ತನೆ; ಸ್ವಚ್ಛಂದ ವೃತ್ತಿ; ಸ್ವಾತಂತ್ರ್ಯದ ದುರುಪಯೋಗ.
  6. ಅತ್ಯಾಚಾರ; ಸ್ವೈರ ವೃತ್ತಿ; ಸ್ವೈರಾಚಾರ.
  7. ಅನುಚಿತ ವರ್ತನೆ; ಅಸಭ್ಯ ವರ್ತನೆ; ಅಯೋಗ್ಯ ವರ್ತನೆ; ಮರ್ಯಾದೆಯನ್ನು ಕಡೆಗಣಿಸುವ, ರೀತಿನೀತಿಗಳ ಉಲ್ಲಂಘನೆ.
  8. (ಮುಖ್ಯವಾಗಿ ಪರಿಣಾಮಕ್ಕಾಗಿ ಬರಹಗಾರನು ಮಾಡುವ ವ್ಯಾಕರಣ, ಛಂದಸ್ಸು, ಮೊದಲಾದವುಗಳಲ್ಲಿ ಯಾ ಕಲಾವಿದನು ದೃಶ್ಯರಚನೆ ಮೊದಲಾದವುಗಳಲ್ಲಿ ಮಾಡುವ) ನಿಯಮೋಲ್ಲಂಘನೆ ಯಾ ವಾಸ್ತವಾಂಶಗಳ ಬದಲಾವಣೆ: poetic licence ಕವಿ(ತಾ) ಸ್ವಾತಂತ್ರ್ಯ.
  9. (ಯಾವುದಾದರೂ ವಿದ್ಯಾವಿಭಾಗದಲ್ಲಿಯ ಪ್ರವೀಣತೆಗಾಗಿ ವಿಶ್ವವಿದ್ಯಾನಿಲಯ ನೀಡುವ) ಪ್ರಶಸ್ತಿ ಪತ್ರ; ಯೋಗ್ಯತಾ ಪತ್ರ.
See also 1licence
2licence ಲೈಸನ್ಸ್‍
ಸಕರ್ಮಕ ಕ್ರಿಯಾಪದ