See also 2least  3least
1least ಲೀಸ್ಟ್‍
ಗುಣವಾಚಕ
  1. ಅತ್ಯಂತ – ಸಣ್ಣ, ಸ್ವಲ್ಪ; ಅತ್ಯಲ್ಪ; ಕನಿಷ್ಠ ಪ್ರಮಾಣದ; ಲಘುತಮ.
  2. (the ನಂತರ, ಮುಖ್ಯವಾಗಿ ನಿಷೇಧಾರ್ಥಕ ಪದದೊಂದಿಗೆ) ಸ್ವಲ್ಪವೂ; ಚೂರೂ: it does not make the least difference ಸ್ವಲ್ಪವೂ ವ್ಯತ್ಯಾಸವಿಲ್ಲ; ಅದು ಸ್ವಲ್ಪವೂ ವ್ಯತ್ಯಾಸವಾಗುವುದಿಲ್ಲ.
  3. (ಒಂದು ಜಾತಿಯ ಯಾ ಬಗೆಯ ವಿಷಯದಲ್ಲಿ) ಅತಿ ಚಿಕ್ಕ; ಅತ್ಯಂತ ಸಣ್ಣ; ಪುಟ್ಟ: least sparrow ಅತಿ ಚಿಕ್ಕ ಗುಬ್ಬಚ್ಚಿ.
ಪದಗುಚ್ಛ
  1. least common denominator
    1. ಅನೇಕ ಭಿನ್ನರಾಶಿಗಳ ಛೇದಗಳ (ಲಘುತಮ) ಸಾಮಾನ್ಯ ಅಪವರ್ತ್ಯ.
    2. (ರೂಪಕವಾಗಿ) ಸಾಮಾನ್ಯ ಗುಣ: (ವರ್ಗವೊಂದರ ಅಭಿರುಚು, ಆಭಿಪ್ರಾಯ ಗಳಲ್ಲಿನ) ಸಾಮಾನ್ಯ ಗುಣ, ವಿಷಯ, ಲಕ್ಷಣಇತ್ಯಾದಿ.
  2. least common multiple (ಸಂಕ್ಷಿಪ್ತ L.C.M.) ಲಘುತಮ ಸಾಮಾನ್ಯ ಅಪವರ್ತ್ಯ (ಲ.ಸ.ಅ.); ಎರಡು ಅಥವಾ ಹೆಚ್ಚು ಬೇರೆ ಬೇರೆ ಸಂಖ್ಯೆಗಳನ್ನು ಅಪವರ್ತನವಾಗಿ ಹೊಂದಿರುವ ವಿವಿಧ ಅಪವರ್ತ್ಯಗಳಲ್ಲಿ ಕನಿಷ್ಠತಮವಾದುದು.
ನುಡಿಗಟ್ಟು

line of least resistance ಅತ್ಯಂತ ಸುಲಭವಾದ ದಾರಿ; ಅಬಾಧಿತ ಮಾರ್ಗ; ಅಡೆತಡೆಗಳಿಲ್ಲದ, ಪ್ರತಿರೋಧವಿಲ್ಲದ ಹಾದಿ; ಅಪ್ರತಿಹತ ಪಥ.

See also 1least  3least
2least ಲೀಸ್ಟ್‍
ನಾಮವಾಚಕ

ಅತ್ಯಂತ ಸಣ್ಣದು; ಅತಿ ಸ್ವಲ್ಪದ್ದು; ಕನಿಷ್ಠ ಪ್ರಮಾಣದ್ದು.

ಪದಗುಚ್ಛ
  1. at least
    1. ಕನಿಷ್ಠ ಪಕ್ಷ; ಅಷ್ಟಾದರೂ ಯಾವ ಸಂದರ್ಭದಲ್ಲೇ ಆದರೂ; ಏನೇ ಆದರೂ.
    2. ಕನಿಷ್ಠ ಪಕ್ಷ; ಬಹಳ ಕಡಿಮೆ ಎಂದರೆ; ಎಷ್ಟು ಕೊಂಚವೆಂದರೂ.
  2. at the least = ಪದಗುಚ್ಛ \((1b)\).
  3. in the least (ಸಾಮಾನ್ಯವಾಗಿ ನಿಷೇಧಾರ್ಥಕ ಪದಗಳ ಮುಂದೆ ಬಂದಾಗ)
    1. ಅತ್ಯಲ್ಪವಾಗಿ; ಬಹಳ ಕಡಿಮೆ; ಕನಿಷ್ಠ ಪ್ರಮಾಣದಲ್ಲಿ.
    2. ಕೊಂಚವೂ; ಸ್ವಲ್ಪವೂ: not in the least offended ಕೊಂಚವೂ ಮನಸ್ಸಿಗೆ ನೋವಾಗಿಲ್ಲ, ಅಸಮಾಧಾನವಾಗಿಲ್ಲ.
  4. the least = ಪದಗುಚ್ಛ \((3)\).
ನುಡಿಗಟ್ಟು
  1. least said soonest mended ಮಾತಾಡಿದಷ್ಟೂ ಕೆಲಸ ಹಾಳು; ಮಾತು ಮೀರಿದಷ್ಟೂ ಕೆಲಸ ಕೆಡುವುದು ಹೆಚ್ಚು; ಚರ್ಚಿಸಿದಷ್ಟೂ (ಕೆಲಸ) ಇನ್ನೂ ಕೆಡುತ್ತದೆ; ಮಾತು ಎಷ್ಟು ಕಡಿಮೆ ಮಾಡಿದರೆ ಅಷ್ಟು ಬೇಗ ಕೆಲಸ ಸರಿಹೋಗುತ್ತದೆ.
  2. to say the least (or the least of it) ಸಂಕ್ಷಿಪ್ತವಾಗಿ, ಸ್ವಲ್ಪದರಲ್ಲಿ ಹೇಳುವುದಾದರೆ: that is doubtful, to say the least ಸ್ವಲ್ಪದರಲ್ಲಿ ಹೇಳುವುದಾದರೆ, ಅದು ಸಂಶಯಾಸ್ಪದವಾದದ್ದು.
See also 1least  2least
3least ಲೀಸ್ಟ್‍
ಕ್ರಿಯಾವಿಶೇಷಣ

ಅತಿ; ತೀರಾ; ಅತ್ಯಲ್ಪವಾಗಿ; ಕನಿಷ್ಠ ಪ್ರಮಾಣದಲ್ಲಿ: the least important of the reasons ಅವುಗಳಲ್ಲಿ ತೀರಾ ಅಮುಖ್ಯ ಕಾರಣವೆಂದರೆ.