See also 2layer
1layer ಲೇಅರ್‍
ನಾಮವಾಚಕ
  1. ಪದರ; ಸ್ತರ; ವರಿಸೆ; ಮುಖ್ಯವಾಗಿ ಮೇಲ್ಮೈ ಮೇಲೆ ಹರಡಿರುವ ಹಲವಾರು ಪದರುಗಳಲ್ಲಿ ಒಂದು.
  2. (ಸಾಮಾನ್ಯವಾಗಿ ಸಮಾಸಪದಗಳಲ್ಲಿ) ಸ್ಥಾಪಕ; ಇಡುವ ವ್ಯಕ್ತಿ ಯಾ ವಸ್ತು: brick layer ಇಟ್ಟಿಗೆ ಜೋಡಿಸುವವನು.
  3. ಮೊಟ್ಟೆ ಕೋಳಿ; ಮೊಟ್ಟೆಯಿಡುವ ಯಾ ಮೊಟ್ಟೆಯಿಡಲು ಸಾಕುವ ಕೋಳಿ.
  4. (ತೋಟಗಾರಿಕೆ) ಹೂತಿಟ್ಟ ರೆಂಬೆ; ಸಸಿ ಮಾಡಲು ನೆಲದಲ್ಲಿ ಹೂತಿಟ್ಟ ಆದರೆ ಮೂಲ ಗಿಡಕ್ಕೆ ಅಂಟಿಕೊಂಡಿರುವ ರೆಂಬೆ ಯಾ ಟೊಂಗೆ. Figure: layer 4
  5. ಬಾಜಿಗಾರ; ಪಣ ತೊಡುವವನು; ಬಾಜಿ ಕಟ್ಟುವವನು.
  6. ಕಾಗದ ಬಿಡಿಸುವವ; ಒತ್ತಿದ ಮೇಲೆ ಕೈಯಿಂದ ಮಾಡಿದ ಕಾಗದದ ಹಾಳೆಗಳನ್ನು ಹೆಲ್ಟಿನಿಂದ ಯಾ ಉಣ್ಣೆಯ ಅಚ್ಚಿನಿಂದ ತೆಗೆಯುವ ಕೆಲಸಗಾರ.
  7. ಈಡು ಸೈನಿಕ; ಉದ್ದೇಶಿಸಿದ ದಿಕ್ಕಿಗೆ ಬಂದೂಕನ್ನು ತಿರುಗಿಸಿಡುವ ಸೈನಿಕ ತಂಡಕ್ಕೆ ಸೇರಿದವನು.
  8. (ಬಹುವಚನದಲ್ಲಿ) ಒರಗಿದ ಪೈರು; ಮಲಗಿದ ಪೈರು; ನೆಲಕ್ಕೊರಗಿದ ಪೈರಿನ ಪಟ್ಟೆಗಳು.
  9. ಸಿಂಪಿ – ಪಾತಿ, ಮಡಿ; ಚಿಪ್ಪು ಜೀವಿಗಳು ಬೆಳೆಯುವ ಯಾ ಅವನ್ನು ಬೆಳೆಸುವ ಸಮುದ್ರದ ತಳಭಾಗ.
ಪದಗುಚ್ಛ
  1. bad layer ಚೆನ್ನಾಗಿ ಮೊಟ್ಟೆಯಿಡದ ಕೋಳಿ.
  2. good layer ಚೆನ್ನಾಗಿ ಮೊಟ್ಟೆಯಿಡುವ ಕೋಳಿ.
  3. layers and backers (ಕುದುರೆ ಮೊದಲಾದವುಗಳ) ಪರವಾಗಿ ಮತ್ತು ವಿರೋಧವಾಗಿ ಬಾಜಿಕಟ್ಟುವವರು.
See also 1layer
2layer ಲೇಅರ್‍
ಸಕರ್ಮಕ ಕ್ರಿಯಾಪದ
  1. ಪದರ ಪದರವಾಗಿ ಜೋಡಿಸು; ಸ್ತರಗಳಾಗಿ ವ್ಯವಸ್ಥೆಮಾಡು, ಏರ್ಪಡಿಸು.
  2. (ಕೂದಲನ್ನು) ಮೆಟ್ಟಲು ಮೆಟ್ಟಲಾಗಿ ಕತ್ತರಿಸು.
  3. (ತೋಟಗಾರಿಕೆ) (ರೆಂಬೆಯನ್ನು ನೆಲದಲ್ಲಿ ಹೂತಿಟ್ಟು, ಗಿಡದ) ಸಸಿ – ಬೆಳೆಸು, ಮಾಡು; ಸಸ್ಯವೃದ್ಧಿ ಮಾಡು.
ಅಕರ್ಮಕ ಕ್ರಿಯಾಪದ

(ಪೈರಿನ ವಿಷಯದಲ್ಲಿ) ಮಳೆ ಯಾ ಗಾಳಿಯಿಂದ ನೆಲಕ್ಕೊರಗು; ನೆಲಕ್ಕೆ ಮಲಗು.