1layer
ಲೇಅರ್
ನಾಮವಾಚಕ
- ಪದರ; ಸ್ತರ; ವರಿಸೆ; ಮುಖ್ಯವಾಗಿ ಮೇಲ್ಮೈ ಮೇಲೆ ಹರಡಿರುವ ಹಲವಾರು ಪದರುಗಳಲ್ಲಿ ಒಂದು.
- (ಸಾಮಾನ್ಯವಾಗಿ ಸಮಾಸಪದಗಳಲ್ಲಿ) ಸ್ಥಾಪಕ; ಇಡುವ ವ್ಯಕ್ತಿ ಯಾ ವಸ್ತು: brick layer ಇಟ್ಟಿಗೆ ಜೋಡಿಸುವವನು.
- ಮೊಟ್ಟೆ ಕೋಳಿ; ಮೊಟ್ಟೆಯಿಡುವ ಯಾ ಮೊಟ್ಟೆಯಿಡಲು ಸಾಕುವ ಕೋಳಿ.
- (ತೋಟಗಾರಿಕೆ) ಹೂತಿಟ್ಟ ರೆಂಬೆ; ಸಸಿ ಮಾಡಲು ನೆಲದಲ್ಲಿ ಹೂತಿಟ್ಟ ಆದರೆ ಮೂಲ ಗಿಡಕ್ಕೆ ಅಂಟಿಕೊಂಡಿರುವ ರೆಂಬೆ ಯಾ ಟೊಂಗೆ.
- ಬಾಜಿಗಾರ; ಪಣ ತೊಡುವವನು; ಬಾಜಿ ಕಟ್ಟುವವನು.
- ಕಾಗದ ಬಿಡಿಸುವವ; ಒತ್ತಿದ ಮೇಲೆ ಕೈಯಿಂದ ಮಾಡಿದ ಕಾಗದದ ಹಾಳೆಗಳನ್ನು ಹೆಲ್ಟಿನಿಂದ ಯಾ ಉಣ್ಣೆಯ ಅಚ್ಚಿನಿಂದ ತೆಗೆಯುವ ಕೆಲಸಗಾರ.
- ಈಡು ಸೈನಿಕ; ಉದ್ದೇಶಿಸಿದ ದಿಕ್ಕಿಗೆ ಬಂದೂಕನ್ನು ತಿರುಗಿಸಿಡುವ ಸೈನಿಕ ತಂಡಕ್ಕೆ ಸೇರಿದವನು.
- (ಬಹುವಚನದಲ್ಲಿ) ಒರಗಿದ ಪೈರು; ಮಲಗಿದ ಪೈರು; ನೆಲಕ್ಕೊರಗಿದ ಪೈರಿನ ಪಟ್ಟೆಗಳು.
- ಸಿಂಪಿ – ಪಾತಿ, ಮಡಿ; ಚಿಪ್ಪು ಜೀವಿಗಳು ಬೆಳೆಯುವ ಯಾ ಅವನ್ನು ಬೆಳೆಸುವ ಸಮುದ್ರದ ತಳಭಾಗ.
ಪದಗುಚ್ಛ
- bad layer ಚೆನ್ನಾಗಿ ಮೊಟ್ಟೆಯಿಡದ ಕೋಳಿ.
- good layer ಚೆನ್ನಾಗಿ ಮೊಟ್ಟೆಯಿಡುವ ಕೋಳಿ.
- layers and backers (ಕುದುರೆ ಮೊದಲಾದವುಗಳ) ಪರವಾಗಿ ಮತ್ತು ವಿರೋಧವಾಗಿ ಬಾಜಿಕಟ್ಟುವವರು.