See also 2late
1late ಲೇಟ್‍
ಗುಣವಾಚಕ
( ತರರೂಪ later, latter, ತಮರೂಪ latest, last).
  1. (ನಿಗದಿಯಾದ ಯಾ ವಾಡಿಕೆಯಾದ) ಹೊತ್ತು, ಕಾಲ – ಮೀರಿದ; ತಡವಾದ; ವಿಳಂಬವಾದ: was late for dinner ಊಟಕ್ಕೆ ಹೊತ್ತು ಮೀರಿ ಬಂದ. a late milk delivery ಹಾಲಿನ ವಿಳಂಬ ವಿತರಣೆ; ತಡವಾಗಿ ಮಾಡಿದ ಹಾಲಿನ ಬಟವಾಡೆ. too late to go ಹೋಗಲು ಬಹಳ ಹೊತ್ತು ಮೀರಿದ.
  2. (ಹಗಲಿನಲ್ಲೋ, ರಾತ್ರಿಯಲ್ಲೋ, ಒಂದು ನಿರ್ದಿಷ್ಟ ಕಾಲಾವಧಿಯಲ್ಲೋ) ಬಹಳ ಹೊತ್ತು ಕಳೆದ; ಬಹುಹೊತ್ತಾಗಿರುವ: late dinner ತಡವಾದ ರಾತ್ರಿಯೂಟ. late hours ತಡವಾಗಿ ಮಲಗುವುದು ಯಾ ಏಳುವುದು.
  3. (ಕಾಲಾವಧಿ, ಬೆಳವಣಿಗೆ, ಮೊದಲಾದವುಗಳಲ್ಲಿ) ತಡವಾಗಿ; ವಿಳಂಬವಾಗಿ; ಬಹಳ ಕಾಲ ಸರಿದ ಬಳಿಕ: late Latin ಅರ್ವಾಚೀನ ಲ್ಯಾಟಿನ್‍ ಭಾಷೆ; ಲ್ಯಾಟಿನ್‍ ಭಾಷೆಯ ಬೆಳವಣಿಗೆಯಲ್ಲಿ ಬಹಳ ಕಾಲ ಕಳೆದ ಬಳಿಕ ರೂಪುಗೊಂಡ ಲ್ಯಾಟಿನ್‍ ರೂಪ.
  4. (ಹೂ ಕಾಯಿ ಬಿಡುವುದು, ಮಾಗುವುದು, ಮೊದಲಾದವುಗಳಲ್ಲಿ) ತಡವಾಗುವ; ವಿಳಂಬವಾಗುವ; ನಿಧಾನವಾಗುವ: late oranges ತಡವಾಗಿ ಬಿಟ್ಟ ಕಿತ್ತಳೆ ಹಣ್ಣುಗಳು.
  5. ಮಾಜಿ:
    1. ಗತಿಸಿದ; ದಿವಂಗತ; ಮೃತ; ಸಂದ; ಈಗ ಬದುಕಿಲ್ಲದ.
    2. ಹಿಂದಿನ; ಹಿಂದೆ ಪದವಿಯಲ್ಲಿದ್ದ; ಈಗ ಆ ಸ್ಥಾನಮಾನಗಳಿಲ್ಲದ: the last Prime Minister ಮಾಜಿ ಪ್ರಧಾನಿ; ದಿವಂಗತ ಯಾ ಹಿಂದಿನ ಪ್ರಧಾನಿ.
    3. ಹಿಂದಿನ; ಈಗಿಲ್ಲದ; ಹಿಂದೆ ಇದ್ದ: my last residence ಹಿಂದಿನ ನನ್ನ ನಿವಾಸ.
  6. ಇತ್ತೀಚಿನ; ಈಚೆಗಿನ; ಇದೀಗಿನ; ಮೊನ್ನೆ ಮೊನ್ನೆಯ: the last floods ಇತ್ತೀಚಿನ ಪ್ರವಾಹಗಳು, ನೆರೆಗಳು.
ಪದಗುಚ್ಛ
  1. at (the) latest ಅದಕ್ಕೆ ಮುಂಚೆ ಅಲ್ಲದಿದ್ದರೂ ಕೊನೆಯ ಪಕ್ಷ ಆ ಕಾಲಕ್ಕೆ ಯಾ ಆ ಕಾಲವನ್ನು ಮೀರದೆ: on Monday at (the) latest (ಮುಂಚೆ ಅಲ್ಲದಿದ್ದರೂ) ಕೊನೆಯ ಪಕ್ಷ ಸೋಮವಾರದಂದು.
  2. of last years ಕಳೆದ ಕೆಲವು ವರ್ಷಗಳಲ್ಲಿ; ಇತ್ತೀಚಿನ ವರ್ಷಗಳಲ್ಲಿ.
ನುಡಿಗಟ್ಟು
  1. it’s never too last to mend (ಒಬ್ಬನ ಶೀಲ, ನಡತೆ, ಮೊದಲಾದವುಗಳನ್ನು) ಸುಧಾರಿಸಿಕೊಳ್ಳಲು, ತಿದ್ದಿಕೊಳ್ಳಲು ಕಾಲ ಎಂದಿಗೂ ಮಿಂಚಿರುವುದಿಲ್ಲ; ತಿದ್ದಿಕೊಳ್ಳಲು ಎಂದಿಗೂ ಸಾಧ್ಯ.
  2. last in the day (ಆಡುಮಾತು) ಕಾಲ ಮಿಂಚಿದ ಮೇಲೆ, ಮುಖ್ಯವಾಗಿ ಉಪಯೋಗವಾಗದಷ್ಟು ತಡವಾದ ಮೇಲೆ.
  3. the latest ಇತ್ತೀಚಿನ (ಸುದ್ದಿ, ಹ್ಯಾಷನ್ನು, ಮೊದಲಾದವು): have you heard the latest ಇತ್ತೀಚಿನ ಸುದ್ದಿ ಕೇಳಿದ್ದೀಯಾ?
See also 1late
2late ಲೇಟ್‍
ಕ್ರಿಯಾವಿಶೇಷಣ
( ತರರೂಪ later, ತಮರೂಪ latest, last).
  1. ಹೊತ್ತುಮೀರಿ; ಗೊತ್ತಾದ, ನಿಶ್ಚಯಿಸಿದ – ಕಾಲಮೀರಿ; ತಡವಾಗಿ; ವಿಳಂಬವಾಗಿ; arrived late ತಡವಾಗಿ ಬಂದ.
  2. ತರುವಾಯ; ಅನಂತರ; ಆಮೇಲೆ; ಬಹುಕಾಲದ ಬಳಿಕ: this happened later on ಇದು ಅನಂತರ ನಡೆಯಿತು.
  3. ಬಹುಕಾಲ; ಬಹಳ, ತುಂಬ – ಹೊತ್ತಿನವರೆಗೂ: we sat late ನಾವು (ರಾತ್ರಿ) ಬಹಳ ಹೊತ್ತಿನವರೆಗೂ ಕುಳಿತಿದ್ದೆವು.
  4. (ಕಾವ್ಯಪ್ರಯೋಗ) ಇತ್ತೀಚೆಗೆ; ಇದೀಗ; ಮೊನ್ನೆ ಮೊನ್ನೆ; ಈಗ ಸ್ವಲ್ಪ ಹಿಂದೆ: I sent thee late a rosy wreath ಇತ್ತೀಚೆಗೆ ನಾನು ನಿನಗೆ ಒಂದು ಗುಲಾಬಿ ಹಾರವನ್ನು ಕಳುಹಿಸಿದೆ.
  5. ಈಚಿನ ಘಟ್ಟದಲ್ಲಿ; ಬೆಳವಣಿಗೆ ಮೊದಲಾದವುಗಳ ಅನಂತರದ ಹಂತದಲ್ಲಿ: traces remained as late as the Vijayanagar times ವಿಜಯನಗರದ ಕಾಲದಷ್ಟು ಈಚಿನವರೆಗೂ ಆ ಕುರುಹುಗಳು ಉಳಿದಿದ್ದವು.
ಪದಗುಚ್ಛ
  1. of late ಈಚೆಗೆ; ಇತ್ತೀಚೆಗೆ.
  2. sooner or later, early or late, soon or late ಈಗಲೋ ಆಗಲೋ; ಬೇಗನೆಯೋ ನಿಧಾನವಾಗಿಯೋ; ಇಂದೋ ಮುಂದೋ ಯಾವಾಗಲಾದರೂ, ಎಂದಾದರೂ ಒಂದು ದಿನ.
ನುಡಿಗಟ್ಟು
  1. better late than never ಮಾಡದೆಯೇ ಇರುವುದಕ್ಕಿಂತಲೂ ತಡ(ವಾಗಿ ಮಾಡುವುದು) ಉತ್ತಮ.
  2. late in the day (ಆಡುಮಾತು) ಕೊನೆಕೊನೆಗೆ; ಅಂತ್ಯದಲ್ಲಿರುವಾಗ; ಎಲ್ಲವೂ ಮುಗಿಯುತ್ತಿರುವಾಗ ಯಾ ಮುಗಿಯುವ ಹೊತ್ತಿಗೆ; (ಮುಖ್ಯವಾಗಿ) ಕಾರ್ಯಕ್ರಮ ಮೊದಲಾದವು ನಿಷ್ಕಾರಣವಾಗಿ ತಡವಾದ ಘಟ್ಟದಲ್ಲಿ, ಹಂತದಲ್ಲಿ.