See also 2late
1late ಲೇಟ್‍
ಗುಣವಾಚಕ
( ತರರೂಪ later, latter, ತಮರೂಪ latest, last).
  1. (ನಿಗದಿಯಾದ ಯಾ ವಾಡಿಕೆಯಾದ) ಹೊತ್ತು, ಕಾಲ – ಮೀರಿದ; ತಡವಾದ; ವಿಳಂಬವಾದ: was late for dinner ಊಟಕ್ಕೆ ಹೊತ್ತು ಮೀರಿ ಬಂದ. a late milk delivery ಹಾಲಿನ ವಿಳಂಬ ವಿತರಣೆ; ತಡವಾಗಿ ಮಾಡಿದ ಹಾಲಿನ ಬಟವಾಡೆ. too late to go ಹೋಗಲು ಬಹಳ ಹೊತ್ತು ಮೀರಿದ.
  2. (ಹಗಲಿನಲ್ಲೋ, ರಾತ್ರಿಯಲ್ಲೋ, ಒಂದು ನಿರ್ದಿಷ್ಟ ಕಾಲಾವಧಿಯಲ್ಲೋ) ಬಹಳ ಹೊತ್ತು ಕಳೆದ; ಬಹುಹೊತ್ತಾಗಿರುವ: late dinner ತಡವಾದ ರಾತ್ರಿಯೂಟ. late hours ತಡವಾಗಿ ಮಲಗುವುದು ಯಾ ಏಳುವುದು.
  3. (ಕಾಲಾವಧಿ, ಬೆಳವಣಿಗೆ, ಮೊದಲಾದವುಗಳಲ್ಲಿ) ತಡವಾಗಿ; ವಿಳಂಬವಾಗಿ; ಬಹಳ ಕಾಲ ಸರಿದ ಬಳಿಕ: late Latin ಅರ್ವಾಚೀನ ಲ್ಯಾಟಿನ್‍ ಭಾಷೆ; ಲ್ಯಾಟಿನ್‍ ಭಾಷೆಯ ಬೆಳವಣಿಗೆಯಲ್ಲಿ ಬಹಳ ಕಾಲ ಕಳೆದ ಬಳಿಕ ರೂಪುಗೊಂಡ ಲ್ಯಾಟಿನ್‍ ರೂಪ.
  4. (ಹೂ ಕಾಯಿ ಬಿಡುವುದು, ಮಾಗುವುದು, ಮೊದಲಾದವುಗಳಲ್ಲಿ) ತಡವಾಗುವ; ವಿಳಂಬವಾಗುವ; ನಿಧಾನವಾಗುವ: late oranges ತಡವಾಗಿ ಬಿಟ್ಟ ಕಿತ್ತಳೆ ಹಣ್ಣುಗಳು.
  5. ಮಾಜಿ:
    1. ಗತಿಸಿದ; ದಿವಂಗತ; ಮೃತ; ಸಂದ; ಈಗ ಬದುಕಿಲ್ಲದ.
    2. ಹಿಂದಿನ; ಹಿಂದೆ ಪದವಿಯಲ್ಲಿದ್ದ; ಈಗ ಆ ಸ್ಥಾನಮಾನಗಳಿಲ್ಲದ: the last Prime Minister ಮಾಜಿ ಪ್ರಧಾನಿ; ದಿವಂಗತ ಯಾ ಹಿಂದಿನ ಪ್ರಧಾನಿ.
    3. ಹಿಂದಿನ; ಈಗಿಲ್ಲದ; ಹಿಂದೆ ಇದ್ದ: my last residence ಹಿಂದಿನ ನನ್ನ ನಿವಾಸ.
  6. ಇತ್ತೀಚಿನ; ಈಚೆಗಿನ; ಇದೀಗಿನ; ಮೊನ್ನೆ ಮೊನ್ನೆಯ: the last floods ಇತ್ತೀಚಿನ ಪ್ರವಾಹಗಳು, ನೆರೆಗಳು.
ಪದಗುಚ್ಛ
  1. at (the) latest ಅದಕ್ಕೆ ಮುಂಚೆ ಅಲ್ಲದಿದ್ದರೂ ಕೊನೆಯ ಪಕ್ಷ ಆ ಕಾಲಕ್ಕೆ ಯಾ ಆ ಕಾಲವನ್ನು ಮೀರದೆ: on Monday at (the) latest (ಮುಂಚೆ ಅಲ್ಲದಿದ್ದರೂ) ಕೊನೆಯ ಪಕ್ಷ ಸೋಮವಾರದಂದು.
  2. of last years ಕಳೆದ ಕೆಲವು ವರ್ಷಗಳಲ್ಲಿ; ಇತ್ತೀಚಿನ ವರ್ಷಗಳಲ್ಲಿ.
ನುಡಿಗಟ್ಟು
  1. it’s never too last to mend (ಒಬ್ಬನ ಶೀಲ, ನಡತೆ, ಮೊದಲಾದವುಗಳನ್ನು) ಸುಧಾರಿಸಿಕೊಳ್ಳಲು, ತಿದ್ದಿಕೊಳ್ಳಲು ಕಾಲ ಎಂದಿಗೂ ಮಿಂಚಿರುವುದಿಲ್ಲ; ತಿದ್ದಿಕೊಳ್ಳಲು ಎಂದಿಗೂ ಸಾಧ್ಯ.
  2. last in the day (ಆಡುಮಾತು) ಕಾಲ ಮಿಂಚಿದ ಮೇಲೆ, ಮುಖ್ಯವಾಗಿ ಉಪಯೋಗವಾಗದಷ್ಟು ತಡವಾದ ಮೇಲೆ.
  3. the latest ಇತ್ತೀಚಿನ (ಸುದ್ದಿ, ಹ್ಯಾಷನ್ನು, ಮೊದಲಾದವು): have you heard the latest ಇತ್ತೀಚಿನ ಸುದ್ದಿ ಕೇಳಿದ್ದೀಯಾ?