See also 2lap  3lap  4lap  5lap  6lap  7lap
1lap ಲ್ಯಾಪ್‍
ನಾಮವಾಚಕ
  1. ತೊಡೆ; ಅಂಕ; ಊರು; ಕುಳಿತಿರುವ ವ್ಯಕ್ತಿಯ ಸೊಂಟದಿಂದ ಮೊಣಕಾಲಿನವರೆಗಿನ ಭಾಗ(ರೂಪಕವಾಗಿ ಸಹ): sat on her lap ಅವಳ ತೊಡೆಯ ಮೇಲೆ ಕುಳಿತ.
  2. ಮಡಿಲು; ಉಡಿ; ಸೋಗಿಲು; ಏನನ್ನಾದರೂ ಹಿಡಿದು ಇಟ್ಟುಕೊಳ್ಳಲು ಮೇಲಕ್ಕೆತ್ತಿದ ಲಂಗದ ಮುಂಭಾಗ.
  3. (ಬೆಟ್ಟ ಗುಡ್ಡಗಳ) ಮಡಿಲು; ಉಡಿ; ನಡುವಣ ತಗ್ಗು ಪ್ರದೇಶ.
  4. (ಉಡುಪು, ಕುದುರೆಯ ಜೀನು, ಮೊದಲಾದವುಗಳ) ಜೋಲುತ್ತಿರುವ ಭಾಗ.
  5. ಕಿವಿಯ ಹಾಲೆ.
ನುಡಿಗಟ್ಟು
  1. in (or on) a person’s lap ಒಬ್ಬನ ಜವಾಬ್ದಾರಿಯಾಗಿ, ಹೊಣೆಯಾಗಿ.
  2. in the lap of luxury ಸುಖಭೋಗದ ಮಡಿಲಲ್ಲಿ; ಅತ್ಯಂತ ಸುಖಸ್ಥಿತಿಯಲ್ಲಿ.
  3. in the lap of the gods (ಘಟನೆ ಮೊದಲಾದವುಗಳ ವಿಷಯದಲ್ಲಿ) ದೈವೇಚ್ಛೆಯಲ್ಲಿ; ಅದೃಷ್ಟವಶದಲ್ಲಿ; ಭಗವತ್ಸಂಕಲ್ಪದ ಪ್ರಕಾರ.
See also 1lap  3lap  4lap  5lap  6lap  7lap
2lap ಲ್ಯಾಪ್‍
ನಾಮವಾಚಕ
  1. (ರೇಸಿನ) ಪಥದ ಒಂದು ಸುತ್ತು.
  2. (ಪ್ರವಾಸ ಮೊದಲಾದವುಗಳ) ಒಂದು – ಹಂತ, ಭಾಗ: we were on the last lap ನಾವು ಪ್ರಯಾಣದ ಕೊನೆಯ ಹಂತದಲ್ಲಿದ್ದೆವು.
  3. ಚಾಚು (ಪ್ರಮಾಣ); ಒಂದರ ಮೇಲೊಂದು ಕುಳಿತು ಚಾಚಿರುವ, ಹರಡಿರುವ ಪ್ರಮಾಣ.
  4. ಚಾಚು(ಭಾಗ); ಒಂದರ ಮೇಲೊಂದು ಕುಳಿತು ಚಾಚಿರುವ ಭಾಗ.
  5. ಹಾಸು; ಪದರ; ಹಾಳೆ; ಸುರುಳಿ:
    1. (ಹತ್ತಿಬಟ್ಟೆ ಮೊದಲಾದವುಗಳ ತಯಾರಿಕೆಯಲ್ಲಿ) ಹಾಸಿನ ಒಂದು ಸುತ್ತು; ಉರುಳೆಯ ಮೇಲೆ ಸುತ್ತಿದ ಒಂದು ಪದರ ಯಾ ಹಾಳೆ.
    2. ಕಂಡಿಕೆಯ ಯಾ ಉರುಳೆಯ ಮೇಲೆ ಸುತ್ತಿದ ಹಗ್ಗ, ರೇಷ್ಮೆ, ನೂಲು, ಮೊದಲಾದವುಗಳ ಒಂದು ಸುತ್ತು, ಸುರುಳಿ.
ಪದಗುಚ್ಛ

lap of honour ಗೌರವ ಸುತ್ತು; ಜಯಶಾಲಿಯಾದವ(ರು) ಆಟದ ಮೈದಾನ, ಓಟದ ಪಥ, ಮೊದಲಾದವುಗಳ ಮೇಲೆ ವಾಡಿಕೆಯಾಗಿ ಓಡುವ ಒಂದು ಸುತ್ತು.

See also 1lap  2lap  4lap  5lap  6lap  7lap
3lap ಲ್ಯಾಪ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ lapped, ವರ್ತಮಾನ ಕೃದಂತ lapping).
ಸಕರ್ಮಕ ಕ್ರಿಯಾಪದ
  1. (ರೇಸಿನಲ್ಲಿ) ಪ್ರತಿಸ್ಪರ್ಧಿಯನ್ನು ಒಂದೋ ಯಾ ಹೆಚ್ಚೋ ಸುತ್ತುಗಳಿಂದ – ಹಿಂದೆಹಾಕು, ಹಿಂದೆ ಬೀಳಿಸು.
  2. (ಉಡುಪು ಮೊದಲಾದವನ್ನು, ಮುಖ್ಯವಾಗಿ ವ್ಯಕ್ತಿ ಮೊದಲಾದವರ ಸುತ್ತ) ಸುತ್ತು; ಸುರುಳಿಮಾಡು; ಮಡಿಚು.
  3. (ವ್ಯಕ್ತಿಯನ್ನು ಹೊದಿಕೆಗಳು ಮೊದಲಾದವುಗಳಿಂದ) ಸುತ್ತು; ಮುಚ್ಚು; ಆವರಿಸು.
  4. (ಮುದ್ದಿನಿಂದ, ಪ್ರೀತಿಯಿಂದ, ರಕ್ಷಿಸುವಾಗ) ತಬ್ಬಿಕೊ; ಅಪ್ಪಿಕೊ; ಆಲಿಂಗಿಸು.
  5. (ಪ್ರಭಾವಗಳು ಮೊದಲಾದವುಗಳ ವಿಷಯದಲ್ಲಿ) ಸುತ್ತುವರಿ; ಬಳಸು; ಆವರಿಸು.
  6. (ಕವಾಟ, ಮೇಲ್ಚಾವಣಿಯ ಹೆಂಚು, ಮೊದಲಾದವನ್ನು) ಒಂದರ ಏಣಿನ ಮೇಲೊಂದನ್ನಾಗಿಡು; ಒಂದರ ಅಂಚಿನ ಮೇಲೆ ಮತ್ತೊಂದು ಬರುವಂತೆ – ಹೊದಿಸು, ಜೋಡಿಸು, ಕೂರಿಸು, ಪೇರಿಸು.
ಅಕರ್ಮಕ ಕ್ರಿಯಾಪದ

ಒಂದರ ಮೇಲೊಂದು – ಕೂರು, ಹಾಯು, ಚಾಚು, ಅತಿಕ್ರಮಿಸು.

See also 1lap  2lap  3lap  5lap  6lap  7lap
4lap ಲ್ಯಾಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ lapped, ವರ್ತಮಾನ ಕೃದಂತ lapping).
  1. (ಸಾಮಾನ್ಯವಾಗಿ ಪ್ರಾಣಿಯ ವಿಷಯದಲ್ಲಿ) ನೆಕ್ಕು; (ದ್ರವವನ್ನು) ನೆಕ್ಕಿ ಹೀರು; ನಾಲಗೆಯಿಂದ ಮೊಗೆದು ಕುಡಿ.
  2. (ದ್ರವವನ್ನು) ಆತುರಾತುರವಾಗಿ ಕುಡಿದುಬಿಡು.
  3. (ಗಾಳಿಮಾತು, ಹೊಗಳಿಕೆ, ಮೊದಲಾದವನ್ನು) ಆತುರದಿಂದ – ಸ್ವೀಕರಿಸು, ಹೀರು.
  4. (ನೀರಿನ ವಿಷಯದಲ್ಲಿ) ಲಪಲಪನೆ – (ತೀರದ ಮೇಲೆ) ಬಡಿ, (ದಡವನ್ನು) ತಾಗು.
ಅಕರ್ಮಕ ಕ್ರಿಯಾಪದ

(ಅಲೆಗಳು ಮೊದಲಾದವುಗಳ ವಿಷಯದಲ್ಲಿ) ಸಣ್ಣ ಅಲೆಯಲೆಯಾಗಿ, ಕಲರವವುಂಟಾಗುವಂತೆ ಚಲಿಸು.

See also 1lap  2lap  3lap  4lap  6lap  7lap
5lap ಲ್ಯಾಪ್‍
ನಾಮವಾಚಕ
  1. ಒಂದು ನೆಕ್ಕು; ಒಂದು ನೆಕ್ಕಿಗೆ ಬರುವಷ್ಟು (ದ್ರವ).
  2. (ಅಲೆಗಳು ತೀರದ ಮೇಲೆ ಅಪ್ಪಳಿಸಿದಾಗ ಆಗುವ) ಲಪಲಪ ಶಬ್ದ.
  3. (ನಾಯಿಗಳ) ಅಂಬಲಿ; ಗಂಜಿ; ದ್ರವಾಹಾರ.
  4. (ಅಶಿಷ್ಟ) ನೀರಾದ, ಸಪ್ಪೆಯಾದ – ಪಾನೀಯ, ಮದ್ಯ.
  5. (ಅಶಿಷ್ಟ) ಯಾವುದೇ ಮದ್ಯ.
See also 1lap  2lap  3lap  4lap  5lap  7lap
6lap ಲ್ಯಾಪ್‍
ನಾಮವಾಚಕ

ಸಾಣೆ – ಬಿಲ್ಲೆ, ಚಕ್ರ; ರತ್ನಕ್ಕೆ ಯಾ ಲೋಹಕ್ಕೆ ಮೆರುಗು ಕೊಡಲು, ಸಾಣೆ ಹಿಡಿಯುವ ತಿರುಗು ತಟ್ಟೆ.

See also 1lap  2lap  3lap  4lap  5lap  6lap
7lap ಲ್ಯಾಪ್‍
ಸಕರ್ಮಕ ಕ್ರಿಯಾಪದ

(ರತ್ನ, ಲೋಹಗಳಿಗೆ) ಸಾಣೆ ಚಕ್ರದಿಂದ ಮೆರುಗು ಕೊಡು; ಸಾಣೆ ಹಿಡಿ.