See also 2lap  3lap  4lap  5lap  6lap  7lap
1lap ಲ್ಯಾಪ್‍
ನಾಮವಾಚಕ
  1. ತೊಡೆ; ಅಂಕ; ಊರು; ಕುಳಿತಿರುವ ವ್ಯಕ್ತಿಯ ಸೊಂಟದಿಂದ ಮೊಣಕಾಲಿನವರೆಗಿನ ಭಾಗ(ರೂಪಕವಾಗಿ ಸಹ): sat on her lap ಅವಳ ತೊಡೆಯ ಮೇಲೆ ಕುಳಿತ.
  2. ಮಡಿಲು; ಉಡಿ; ಸೋಗಿಲು; ಏನನ್ನಾದರೂ ಹಿಡಿದು ಇಟ್ಟುಕೊಳ್ಳಲು ಮೇಲಕ್ಕೆತ್ತಿದ ಲಂಗದ ಮುಂಭಾಗ.
  3. (ಬೆಟ್ಟ ಗುಡ್ಡಗಳ) ಮಡಿಲು; ಉಡಿ; ನಡುವಣ ತಗ್ಗು ಪ್ರದೇಶ.
  4. (ಉಡುಪು, ಕುದುರೆಯ ಜೀನು, ಮೊದಲಾದವುಗಳ) ಜೋಲುತ್ತಿರುವ ಭಾಗ.
  5. ಕಿವಿಯ ಹಾಲೆ.
ನುಡಿಗಟ್ಟು
  1. in (or on) a person’s lap ಒಬ್ಬನ ಜವಾಬ್ದಾರಿಯಾಗಿ, ಹೊಣೆಯಾಗಿ.
  2. in the lap of luxury ಸುಖಭೋಗದ ಮಡಿಲಲ್ಲಿ; ಅತ್ಯಂತ ಸುಖಸ್ಥಿತಿಯಲ್ಲಿ.
  3. in the lap of the gods (ಘಟನೆ ಮೊದಲಾದವುಗಳ ವಿಷಯದಲ್ಲಿ) ದೈವೇಚ್ಛೆಯಲ್ಲಿ; ಅದೃಷ್ಟವಶದಲ್ಲಿ; ಭಗವತ್ಸಂಕಲ್ಪದ ಪ್ರಕಾರ.