See also 2lame  3lame  4lame
1lame ಲೇಮ್‍
ಗುಣವಾಚಕ
  1. (ಅವಯವದ, ಮುಖ್ಯವಾಗಿ ಪಾದದ ಯಾ ಕಾಲಿನ ವಿಷಯದಲ್ಲಿ) ಊನವಾದ; ಕುಂಟಾದ; ಕುಂಟನಾದ; ಕುಂಟುವ; ಹೆಳವನಾದ; ನಡೆಯಲಾರದ: lame in his right leg ಬಲಗಾಲು ಕುಂಟಾದ.
  2. (ವಾದ, ಕಥೆ, ನೆಪ, ಮೊದಲಾದವುಗಳ ವಿಷಯದಲ್ಲಿ) ಕುಂಟು; ಅಸಮರ್ಪಕವಾದ; ಅತೃಪ್ತಿಕರವಾದ.
  3. (ಪದ್ಯ ಮೊದಲಾದವುಗಳ ವಿಷಯದಲ್ಲಿ) ಓಟವಿಲ್ಲದ; ಕುಂಟುವ; ಸರಾಗವಾದ ಹರಿವಿಲ್ಲದ; ಎಡವುತ್ತಾ ಸಾಗುವ.
ಪದಗುಚ್ಛ

lame of (or in) a leg ಕಾಲು – ಕುಂಟಾದ, ಊನವಾದ.

See also 1lame  3lame  4lame
2lame ಲೇಮ್‍
ಸಕರ್ಮಕ ಕ್ರಿಯಾಪದ
  1. ಕುಂಟು(ವಂತೆ) ಮಾಡು; ಕುಂಟುಗೊಳಿಸು; ಕುಂಟಿಸು.
  2. ಊನಮಾಡು; ಊನಗೊಳಿಸು; ದುರ್ಬಲಗೊಳಿಸು; ಶಕ್ತಿಗುಂದಿಸು (ರೂಪಕವಾಗಿ ಸಹ).
See also 1lame  2lame  4lame
3lame ಲಾಮೇ
ನಾಮವಾಚಕ

ಜರತಾರಿ ಬಟ್ಟೆ; ಸರಿಗೆ ವಸ್ತ್ರ; ಕಲಾಬತ್ತು ಬಟ್ಟೆ; ಚಿನ್ನದ ಯಾ ಬೆಳ್ಳಿಯ ಕಲಾಬತ್ತು ಸೇರಿಸಿ ಹೆಣೆದ ಬಟ್ಟೆ.

See also 1lame  2lame  3lame
4lame ಲಾಮೇ
ಗುಣವಾಚಕ

(ಬಟ್ಟೆ, ಉಡುಪು, ಮೊದಲಾದವುಗಳ ವಿಷಯದಲ್ಲಿ) ಸರಿಗೆಯ; ಕಲಾಬತ್ತಿನ; ಜರತಾರಿಯ; ಚಿನ್ನದ ಯಾ ಬೆಳ್ಳಿಯ ಕಲಾಬತ್ತು ಸೇರಿಸಿ ಹೆಣೆದ.