See also 2lair  3lair  4lair
1lair ಲೆಅರ್‍
ನಾಮವಾಚಕ
  1. ಕಾಡುಮೃಗಗಳ – ಹಕ್ಕೆ, ಇಕ್ಕೆ, ವಿಶ್ರಾಂತಿ ಸ್ಥಾನ.
  2. ವ್ಯಕ್ತಿಯ ಅಡಗುದಾಣ; tracked him to his lair ಜಾಡು ಹಿಡಿದು ಅವನ ಅಡಗುದಾಣ ಪತ್ತೆ ಹಚ್ಚಿದ.
  3. (ಸಾಕು ಪ್ರಾಣಿಗಳ) ಇಕ್ಕೆ; ಹಕ್ಕೆ; ಕೊಟ್ಟಿಗೆ; ಮಲಗುದಾಣ.
  4. (ಬ್ರಿಟಿಷ್‍ ಪ್ರಯೋಗ) ತಂಗು – ದೊಡ್ಡಿ, ಕೊಟ್ಟಿಗೆ; ವ್ಯಾಪಾರಕ್ಕಾಗಿ ಹೊಡೆದುಕೊಂಡು ಹೋಗುವ ದನಗಳು ತಂಗಲು ಏರ್ಪಡಿಸಿದ ಹಂಗಾಮಿ ಕೊಟ್ಟಿಗೆ, ಆವರಣ.
See also 1lair  3lair  4lair
2lair ಲೆಅರ್‍
ಸಕರ್ಮಕ ಕ್ರಿಯಾಪದ
  1. ಕೊಟ್ಟಿಗೆಯಲ್ಲಿ ಕೂಡು; ದೊಡ್ಡಿಗೆ ಸೇರಿಸು.
  2. (ಸ್ಕಾಟ್ಲೆಂಡಿನಲ್ಲಿ) (ನೀರು, ಕೊಚ್ಚೆ, ಮೊದಲಾದವುಗಳಲ್ಲಿ) ಮುಳುಗಿಸು, ಅದ್ದು.
ಅಕರ್ಮಕ ಕ್ರಿಯಾಪದ
  1. ಹಕ್ಕೆಯಲ್ಲಿ, ಕೊಟ್ಟಿಗೆಯಲ್ಲಿ ತಂಗು.
  2. ತಂಗುದೊಡ್ಡಿಗೆ – ಹೋಗು, ಸೇರು.
  3. ಮುಳುಗು; ಮುಳುಗಿರು; ಹೊರಳಾಡು.
See also 1lair  2lair  4lair
3lair ಲೆಅರ್‍
ನಾಮವಾಚಕ

(ಆಸ್ಟ್ರೇಲಿಯ, ಅಶಿಷ್ಟ) ಸೊಗಸುಗಾರ ಪುಟ್ಟಶಾಮಿ; ಷೋಕಿಲಾಲ; ಢಾಳಾಗಿ ವೇಷಭೂಷಣ ಧರಿಸಿ ಮೆರೆಯುವ ತರುಣ ಯಾ ಗಂಡಸು.

See also 1lair  2lair  3lair
4lair ಲೆಅರ್‍
ಅಕರ್ಮಕ ಕ್ರಿಯಾಪದ

ಸೊಗಸುಗಾರ ಪುಟ್ಟಶಾಮಿಯಂತೆ ಉಡಿಗೆತೊಡಿಗೆ ತೊಡು ಯಾ ಆಡು; ಷೋಕಿಲಾಲನಂತೆ ವರ್ತಿಸು ಯಾ ವೇಷಭೂಷಣ ತೊಡು.