See also 2lace
1lace ಲೇಸ್‍
ನಾಮವಾಚಕ
  1. ಲೇಸು; ಕಸೂತಿ ಪಟ್ಟಿ; ಜಾಲರಿ ಪಟ್ಟಿ; ಹೆಣಿಗೆಯ ಪಟ್ಟಿ; ಕುಪ್ಪಸ, ಒಳಉಡುಪು, ಅಂಗಿ, ಮೊದಲಾದವುಗಳ ಅಲಂಕಾರಕ್ಕಾಗಿ ಬಳಸುವ, ಮುಖ್ಯವಾಗಿ ಹತ್ತಿ ಯಾ ಜರತಾರಿಯ, ಹೆಣೆದ ಪಟ್ಟಿ.
  2. (ಬೂಟ್ಸು, ಒಳಕುಪ್ಪಸ, ಮೊದಲಾದವುಗಳನ್ನು ಎಳೆದುಕಟ್ಟಲು ಬಳಸುವ) ನವಾರ; ಲಾಡಿ; ದಾರ; ಹುಡಿ; ಹುರಿ.
  3. ಲೇಸು; ಕಸೂತಿ ಬಟ್ಟೆ; ಚಿತ್ತಾರದ ಹೆಣಿಗೆ ಬಟ್ಟೆ; ಸೂಕ್ಷ್ಮರಚನೆಯ ಜರತಾರಿ, ಸರಿಗೆ, ಕಲಾಬತ್ತು, ನೀರಾಜಿ – ಬಟ್ಟೆ; ಹತ್ತಿ, ಉಣ್ಣೆ, ರೇಷ್ಮೆ, ಲೋಹ, ಮೊದಲಾದವುಗಳಿಂದ ಮಾಡಿದ ದಾರದಿಂದ ಚಿತ್ರರಚನೆಯಾಗಿ ಹೆಣೆದ ಅಲಂಕಾರದ ಬಟ್ಟೆ: gold lace ಚಿನ್ನದ ಕಲಾಬತ್ತು ಪಟ್ಟಿ. silver lace ಬೆಳ್ಳಿ ಕಲಾಬತ್ತು ಪಟ್ಟಿ.
See also 1lace
2lace ಲೇಸ್‍
ಸಕರ್ಮಕ ಕ್ರಿಯಾಪದ
  1. (ಬೂಟ್ಸು ಮೊದಲಾದವನ್ನು ಷೂಲೇಸು, ಹುರಿ, ನವಾರ, ತೊಗಲಿನ ದಾರ, ಮೊದಲಾದವುಗಳಿಂದ) ಕೂಡಿಸಿ – ಕಟ್ಟು, ಬಿಗಿ.
  2. (ಬಿಗಿ ಲಾಡಿ ಎಳೆದು) ಸೊಂಟ – ಬಿಗಿ, ಕಟ್ಟು.
  3. (ಹಾಲು, ಕಾಹಿ, ಬಿಯರ್‍, ಮೊದಲಾದವುಗಳಿಗೆ) ಮದ್ಯ ಬೆರಸು; ಮದ್ಯ ಬೆರಸಿ ರುಚಿಕಟ್ಟು; ಮದ್ಯ ಬೆರಸಿ ಚುರುಕಾಗಿಸು.
  4. (ಬಣ್ಣಬಣ್ಣದ ಪಟ್ಟಿಗಳಿಂದ, ರೇಖೆಗಳಿಂದ) ಚಿತ್ರಿಸು: cheek laced with blood ರಕ್ತ(ದ ರೇಖೆಗಳಿಂದ) ಚಿತ್ರಿತವಾದ ಕೆನ್ನೆ.
  5. ಕಲಾಬತ್ತು ಅಂಚುಕಟ್ಟು; ಜರತಾರಿ, ಸರಿಗೆ, ಮೊದಲಾದವುಗಳ ಪಟ್ಟಿಗಳಿಂದ ಅಲಂಕರಿಸು.
  6. (ಹುರಿ ಮೊದಲಾದವನ್ನು) ಪೋಣಿಸು; ಹೆಣೆ; ಮಧ್ಯೆ ತೂರಿಸು.
  7. (ಆಡುಮಾತು) (ಬಾರಿನಿಂದ, ಚಾವಟಿಯಿಂದ) ಬಾರಿಸು; ಹೊಡೆ; ಬಡಿ: lace into person ಒಬ್ಬನಿಗೆ ಚಾವಟಿಯಿಂದ ಬಾರಿಸು.
  8. (ಆಡುಮಾತು) ಸೋಲಿಸು.
  9. ಸರಿಗೆ ಹಾಕು; ಸರಿಗೆದಾರ ಮೊದಲಾದವನ್ನು ಒಳನೆಯ್ದು ಯಾ ಕಸೂತಿ ಹಾಕಿ (ಬಟ್ಟೆಯನ್ನು) ಅಲಂಕರಿಸು.
ಅಕರ್ಮಕ ಕ್ರಿಯಾಪದ

(ಆಡುಮಾತು)

  1. (ಬಾರಿನಿಂದ, ಚಾವಟಿಯಿಂದ) ಹೊಡೆ; ಬಡಿ.
  2. ಸೋಲಿಸು.
ಪದಗುಚ್ಛ