See also 2lace
1lace ಲೇಸ್‍
ನಾಮವಾಚಕ
  1. ಲೇಸು; ಕಸೂತಿ ಪಟ್ಟಿ; ಜಾಲರಿ ಪಟ್ಟಿ; ಹೆಣಿಗೆಯ ಪಟ್ಟಿ; ಕುಪ್ಪಸ, ಒಳಉಡುಪು, ಅಂಗಿ, ಮೊದಲಾದವುಗಳ ಅಲಂಕಾರಕ್ಕಾಗಿ ಬಳಸುವ, ಮುಖ್ಯವಾಗಿ ಹತ್ತಿ ಯಾ ಜರತಾರಿಯ, ಹೆಣೆದ ಪಟ್ಟಿ.
  2. (ಬೂಟ್ಸು, ಒಳಕುಪ್ಪಸ, ಮೊದಲಾದವುಗಳನ್ನು ಎಳೆದುಕಟ್ಟಲು ಬಳಸುವ) ನವಾರ; ಲಾಡಿ; ದಾರ; ಹುಡಿ; ಹುರಿ.
  3. ಲೇಸು; ಕಸೂತಿ ಬಟ್ಟೆ; ಚಿತ್ತಾರದ ಹೆಣಿಗೆ ಬಟ್ಟೆ; ಸೂಕ್ಷ್ಮರಚನೆಯ ಜರತಾರಿ, ಸರಿಗೆ, ಕಲಾಬತ್ತು, ನೀರಾಜಿ – ಬಟ್ಟೆ; ಹತ್ತಿ, ಉಣ್ಣೆ, ರೇಷ್ಮೆ, ಲೋಹ, ಮೊದಲಾದವುಗಳಿಂದ ಮಾಡಿದ ದಾರದಿಂದ ಚಿತ್ರರಚನೆಯಾಗಿ ಹೆಣೆದ ಅಲಂಕಾರದ ಬಟ್ಟೆ: gold lace ಚಿನ್ನದ ಕಲಾಬತ್ತು ಪಟ್ಟಿ. silver lace ಬೆಳ್ಳಿ ಕಲಾಬತ್ತು ಪಟ್ಟಿ.