See also 2knowing
1knowing ನೋಇಂಗ್‍
ನಾಮವಾಚಕ
  1. ಅರಿಯುವಿಕೆ; ತಿಳಿದುಕೊಳ್ಳುವಿಕೆ.
  2. ಅರಿವು; ಜ್ಞಾನ; ತಿಳಿವಳಿಕೆ.
ನುಡಿಗಟ್ಟು

there is no knowing how he will react ಅವನು ಹೇಗೆ ಪ್ರತಿಕ್ರಿಯೆ ತೋರಿಸುತ್ತಾನೆಂಬುದನ್ನು ಯಾರೂ ಹೇಳಲಾರರು.

See also 1knowing
2knowing ನೋಇಂಗ್‍
ಗುಣವಾಚಕ
  1. ಬಲ್ಲ; ತಿಳಿದ; ಅರಿವಿರುವ.
  2. ಅನುಭವವುಳ್ಳ; ತಿಳಿದುಕೊಂಡಿರುವ.
  3. ಜಾಣ; ಕುಶಲ; ಚಾತುರ್ಯವುಳ್ಳ.
  4. ಚಾಣಾಕ್ಷ; ಸೂಕ್ಷ್ಮ ಪರಿಜ್ಞಾನವುಳ್ಳ; ಮರ್ಮಜ್ಞ.
  5. (ಸಾಮಾನ್ಯವಾಗಿ ತಿರಸ್ಕಾರಾರ್ಥಕವಾಗಿ)
    1. ಜಾಣ(ತನದ); (ಕು)ತಂತ್ರದ.
    2. ಎಚ್ಚರಿಕೆಯ; ಜಾಗರೂಕ; ಹುಷಾರಿನ.
  6. ಬುದ್ಧಿಪೂರ್ವಕವಾದ; ತಿಳಿದೂ, ಅರಿತೂ – ಮಾಡಿದ; ಬುದ್ಧಿಪುರಸ್ಸರವಾದ: a knowing crime ಬುದ್ಧಿಪೂರ್ವಕವಾದ, ತಿಳಿದೂ ತಿಳಿದೂ ಮಾಡಿದ – ಅಪರಾಧ.
  7. (ಆಡುಮಾತು) ಸೊಗಸಿನ; ಠೀಕಿನ; ಬೆಡಗಿನ; ಷೋಕಿಯ: a knowing hat ಷೋಕಿಯ ಹ್ಯಾಟು.