See also 2know
1know ನೋ
ಕ್ರಿಯಾಪದ

(ಭೂತರೂಪ knew ಉಚ್ಚಾರಣೆ ನ್ಯೂ; ಭೂತಕೃದಂತ known ಉಚ್ಚಾರಣೆ ನೋನ್‍).

ಸಕರ್ಮಕ ಕ್ರಿಯಾಪದ
  1. (ಯಾರೆಂಬುದನ್ನು, ಯಾವುದೆಂಬುದನ್ನು) ಅರಿ; ಕಂಡುಕೊ; ತಿಳಿದುಕೊ; ಗುರುತಿಸು: I knew him at once ಅವನು ಯಾರೆಂಬುದನ್ನು ತಕ್ಷಣ ತಿಳಿದುಕೊಂಡೆ. I knew him for an Englishman ಅವನು ಆಂಗ್ಲನೆಂಬುದನ್ನು ಕಂಡುಕೊಂಡೆ. will you know him again? ಅವನನ್ನು ಮತ್ತೊಮ್ಮೆ ಗುರುತಿಸಬಲ್ಲೆಯಾ?
  2. ವಿವೇಚನಾಶಕ್ತಿ ಹೊಂದಿರು; (ವ್ಯಕ್ತಿಯನ್ನು ವ್ಯಕ್ತಿಯಿಂದ, ವಸ್ತುವನ್ನು ವಸ್ತುವಿನಿಂದ) ಬೇರ್ಪಡಿಸಿ ಗುರುತಿಸು; (ಅವುಗಳ ಪರಸ್ಪರ) ವ್ಯತ್ಯಾಸ, ತಾರತಮ್ಯ, ಭೇದ – ತಿಳಿ, ಅರಿ: know right from wrong ಸರಿಗೂ ತಪ್ಪಿಗೂ ನಡುವಣ (ಪರಸ್ಪರ) ಭೇದ ತಿಳಿ.
  3. (ವ್ಯಕ್ತಿ, ವಸ್ತು, ಸ್ಥಳಗಳ) ಪರಿಚಯ ಹೊಂದಿರು; (ಅವುಗಳನ್ನು) ತಿಳಿದಿರು, ತಿಳಿದವನಾಗಿರು, ಬಲ್ಲವನಾಗಿರು: I know him by sight ಆತನನ್ನು ಕೇವಲ ನೋಡಿದ್ದೇನೆ ಅಷ್ಟೆ; ನನಗೆ ಅವನ ಮುಖಪರಿಚಯ ಇದೆ. I know him to speak to ಆತನನ್ನು ಮಾತನಾಡಿಸುವಷ್ಟು ಬಲ್ಲೆ.
  4. (ಭಯ, ನೋವು, ಮೊದಲಾದವನ್ನು ಸ್ವಂತ ಅನುಭವದಿಂದ) ಅರಿತಿರು; ತಿಳಿದವನಾಗಿರು; ಬಲ್ಲವನಾಗಿರು.
  5. ಒಳಪಟ್ಟಿರು; ಒಳಗಾಗಿರು; her joy knew no bounds ಅವಳ ಆನಂದಕ್ಕೆ ಪಾರವೇ ಇರಲಿಲ್ಲ.
  6. ಆತ್ಮೀಯವಾಗಿ ತಿಳಿದಿರು; ನಿಕಟ ಯಾ ಆತ್ಮೀಯ ಪರಿಚಯ ಹೊಂದಿರು: they are our neighbours, but we don’t know them ಅವರು ನಮ್ಮ ನೆರೆಯವರು, ಆದರೆ ನಮಗೆ ಅವರ ನಿಕಟ ಪರಿಚಯ ಇಲ್ಲ.
  7. (ಪ್ರಾಚೀನ ಪ್ರಯೋಗ) ಸಂಭೋಗಿಸು; ಮೈಥುನ ನಡೆಸು.
  8. ತಿಳಿದಿರು; ಅರಿತಿರು; ತಿಳಿದುಕೊಂಡಿರು; ಅನುಭವ ಯಾ ಓದು ಯಾ ಸುದ್ದಿಯ ಫಲವಾಗಿ (ಯಾವುದನ್ನೇ) ಮನಸ್ಸಿನಲ್ಲಿ ಯಾ ನೆನಪಿನಲ್ಲಿ ಇಟ್ಟುಕೊಂಡಿರು, ಹೊಂದಿರು: doesn’t know your address ನಿನ್ನ ವಿಳಾಸ ತಿಳಿದುಕೊಂಡಿಲ್ಲ, ಗೊತ್ತಿಲ್ಲ. knows a lot about cars ಕಾರುಗಳ ವಿಷಯ ಬಹಳ ಅರಿತಿದ್ದಾನೆ. know what to do ಏನು ಮಾಡಬೇಕೆಂದು ಗೊತ್ತಿರು.
  9. (ಸಂಗತಿಯೊಂದರ) ಅರಿವು – ಪಡೆದಿರು, ಹೊಂದಿರು; ಬಲ್ಲವನಾಗಿರು; ಗೊತ್ತಿರು: he konws I am waiting ನಾನು ಕಾಯುತ್ತಿರುವುದು ಅವನಿಗೆ ಅರಿವಿದೆ; ನಾನು ಕಾಯುತ್ತಿದ್ದೇನೆಂಬುದು ಅವನಿಗೆ ಗೊತ್ತಿದೆ.
  10. (ಭಾಷೆ, ವಿಷಯ, ಮೊದಲಾದವುಗಳಲ್ಲಿ) ಪಾಂಡಿತ್ಯ ಹೊಂದಿರು; ಪ್ರಭುತ್ವ ಪಡೆದಿರು; ನಿಷ್ಣಾತನಾಗಿರು; ಒಳ್ಳೆಯ ತಿಳಿವಳಿಕೆ ಹೊಂದಿರು; ಸೈದ್ಧಾಂತಿಕ ಯಾ ಪ್ರಾಯೋಗಿಕ ಜ್ಞಾನ ಹೊಂದಿರು. knows German ಜರ್ಮನ್‍ ಭಾಷೆಯನ್ನು ಚೆನ್ನಾಗಿ ತಿಳಿದುಕೊಂಡಿದ್ದಾನೆ. knows his tables ಕೋಷ್ಟಕಗಳಲ್ಲಿ ನಿಷ್ಣಾತನಾಗಿದ್ದಾನೆ.
  11. ಖಚಿತವಾಗಿ ಭಾವಿಸು; ಖಾತರಿಯಾಗಿ ಎಣಿಸು: I know it must be somewhere here ಅದು ಇಲ್ಲೇ ಎಲ್ಲೋ ಇರಬೇಕೆಂದು ನನಗೆ ಖಚಿತವಾಗಿದೆ.
ಅಕರ್ಮಕ ಕ್ರಿಯಾಪದ

ತಿಳಿದುಕೊಂಡಿರು; ಅರಿತಿರು.

ನುಡಿಗಟ್ಟು
  1. all one knows (how)
    1. ತಿಳಿದದ್ದನ್ನೆಲ್ಲ.
    2. ತಾನು ಮಾಡಬಹುದಾದ್ದನ್ನೆಲ್ಲ; ತನ್ನ ಶಕ್ತಿಪೂರ್ತಿ.
    3. ಕೈಲಾದ ಮಟ್ಟಿಗೂ; ತನ್ನ ಸರ್ವಶಕ್ತಿಯಿಂದಲೂ ಆಗುವಷ್ಟು ಮಟ್ಟಿಗೆ.
  2. before one knows where one is ದಿಗ್ಭ್ರಮೆಗೊಳಿಸುವಷ್ಟು ಶೀಘ್ರವಾಗಿ; ಕಂಗೆಡಿಸುವಷ್ಟು ಕ್ಷಿಪ್ರವಾಗಿ; ಕಕ್ಕಾಬಿಕ್ಕಿ ಮಾಡುವಷ್ಟು ಬೇಗ.
  3. be not to know
    1. ಯಾವುದೇ ರೀತಿಯಲ್ಲಿ ತಿಳಿಯಲಾಗದಂತಿರು; ತಿಳಿದುಕೊಳ್ಳುವ – ಮಾರ್ಗ, ವಿಧಾನ, ರಹಾ ಇಲ್ಲದಿರು: wasn’t to know they’d arrive late ಅವರು ತಡವಾಗಿ ಬರುತ್ತಾರೆಂದು ತಿಳಿದುಕೊಳ್ಳಲಾಗಲಿಲ್ಲ.
    2. (ಒಬ್ಬನಿಗೆ) ಹೇಳಕೂಡದಂತಿರು; ತಿಳಿಸಬಾರದಂತಿರು: she’s not to know about the party ಸಂತೋಷಕೂಟದ ವಿಷಯ ಅವಳಿಗೆ ತಿಳಿಸಬಾರದು.
  4. don’t I know it? (ಆಡುಮಾತು) (ವಿಷಾದದಿಂದ ಒಪ್ಪಿಕೊಳ್ಳುವ, ಸಮ್ಮತಿಸುವ ಮಾತಾಗಿ) ನನಗೆ ಗೊತ್ತಿಲ್ಲವೇ? ನನಗೆ ತಿಳಿಯದೇ? (ಗೊತ್ತಿದೆ, ಮನಸ್ಸಿಲ್ಲದಿದ್ದರೂ ಒಪ್ಪಿಕೊಳ್ಳಬೇಕಾಗಿದೆ ಎಂಬರ್ಥದಲ್ಲಿ).
  5. don’t you know? (ಮಾತಿನ ನಡುವೆ ಸೇರಿಸುವ ನಿರರ್ಥಕ ಪದಗುಚ್ಛವಾಗಿ) ನಿನಗೆ ಗೊತ್ತಿಲ್ಲವೇ? ನಿನಗೆ ತಿಳಿಯದೇ?: It is such a bore, don’t you know? ಅದೊಂದು ಶುದ್ಧ ಬೇಜಾರಿನ ಸಂಗತಿ, ನಿನಗೆ ಗೊತ್ತಿಲ್ಲವೇ?
  6. for all (or aught) I know ನನಗೆ ತಿಳಿದಿರುವ ಮಟ್ಟಿಗೆ; ನನ್ನ ಅರಿವಿಗೆ ಸಂಬಂಧಿಸಿರುವ ಮಟ್ಟಿಗೆ.
  7. $^1$god or $^1$god or the $^1$god
    1. (ನನ್ನ ಯಾ ಮರ್ತ್ಯಮಾನವನ ಅರಿವಿಗೆ, ಮನುಷ್ಯನ ಅರಿವಿಗೆ ಮೀರಿದ್ದು ಎಂಬುದನ್ನು ಸೂಚಿಸಲು ಹೇಳುವ ಮಾತು) ದೇವರೊಬ್ಬನಿಗೆ ಗೊತ್ತು; ಭಗವಂತ ಮಾತ್ರ ಬಲ್ಲ.
    2. ನನ್ನ ಹೇಳಿಕೆಗೆ ದೇವರೇ ಸಾಕ್ಷಿ; ದೇವರ ಸಾಕ್ಷಿಯಾಗಿ ನಾನು ಹೇಳುವುದೇನೆಂದರೆ.
  8. has been known to do ಮಾಡುತ್ತಾನೆಂದು ಗೊತ್ತಾಗಿದೆ, ಪ್ರಸಿದ್ಧವಾಗಿದೆ: he has been known to be unreliable ಅವನು ವಿಶ್ವಾಸಾರ್ಹನಲ್ಲ ಎಂಬುದು ಗೊತ್ತಾಗಿದೆ.
  9. I knew it ನನಗೆ ಅದು ಗೊತ್ತಿತ್ತು. ಅದು ಆಗಿಯೇ ಆಗುತ್ತದೆಂದು ನನಗೆ ಖಾತರಿಯಾಗಿತ್ತು, ಖಚಿತವಾಗಿ ತಿಳಿದಿತ್ತು.
  10. I know what ಏನೆಂಬುದು ನನಗೆ ಗೊತ್ತು; ಮುಂದಿಡಲು ಯಾ ಮಂಡಿಸಲು ನನ್ನಲ್ಲಿ, ನನ್ನ ಹತ್ತಿರ, ನನ್ನ ಬಳಿ ಒಂದು ಹೊಸ ಕಲ್ಪನೆ, ಅಭಿಪ್ರಾಯ ಯಾ ಸೂಚನೆ ಉಂಟು, ಇದೆ.
  11. know about (ಒಂದರ, ಒಬ್ಬನ) ವಿಷಯವನ್ನು ತಿಳಿದಿರು; ಸಮಾಚಾರ ಅರಿತಿರು.
  12. know a $^1$hawk from a handsaw ಸಾಮಾನ್ಯ ಪರಿಜ್ಞಾನ ಪಡೆದಿರು; (ಲೋಕ) ವ್ಯವಹಾರಜ್ಞಾನ ಹೊಂದಿರು; ಸಾಮಾನ್ಯ ವಿವೇಚನೆ ಇರು.
  13. know a thing or two
    1. ಅನುಭವ ಪಡೆದಿರು; ಅನುಭವಿಯಾಗಿರು.
    2. ಚುರುಕುಬುದ್ಧಿಯವನಾಗಿರು; ಸೂಕ್ಷ್ಮ ಪರಿಜ್ಞಾನ ಹೊಂದಿರು.
  14. know best ಇತರರಿಗಿಂತ ಹೆಚ್ಚು ತಿಳಿದವನು ಮೊದಲಾದವನು ಆಗಿರು ಯಾ ಹಾಗೆ ಹೇಳಿಕೊ.
  15. know better (than that) ಅದಕ್ಕಿಂತ ಹೆಚ್ಚು ಗೊತ್ತಿರು; ಅದನ್ನು ನಂಬದಿರುವಷ್ಟು, ಅಂತೆ ನಡೆದುಕೊಳ್ಳದಿರುವಷ್ಟು ತಿಳಿದುಕೊಂಡಿರು.
  16. know better than to do ಹಾಗೆ ಮಾಡುವಷ್ಟು ದಡ್ಡನಲ್ಲ ಯಾ ಅಸಂಸ್ಕೃತನಲ್ಲ, ಅಯೋಗ್ಯನಲ್ಲ.
  17. know by sight
    1. ಚಹರೆಯಿಂದ, ನೋಟದಿಂದ, ನೋಡುವುದರಿಂದ (ಮಾತ್ರ)–ಗುರುತಿಸು, ತಿಳಿ.
    2. ನೋಡಿ ಅಷ್ಟೇ ಇರು; ನೋಡಿ ಮಾತ್ರ ಪರಿಚಯವಿರು.
  18. know how (ಯಾವುದನ್ನೇ) ಮಾಡುವ ವಿಧಾನವನ್ನು ತಿಳಿದಿರು.
  19. known as ಆ ಹೆಸರಿನ; ಆ ಹೆಸರು ಉಳ್ಳ, ಪಡೆದ.
  20. know of ಗೊತ್ತಿರು; ತಿಳಿದಿರು; ಕೇಳಿರು: not that I know of ನನಗೆ ತಿಳಿದ ಮಟ್ಟಿಗೆ ಇಲ್ಲ, ಅಲ್ಲ.
  21. know (one) by name
    1. ಹೆಸರಿನಿಂದಷ್ಟೇ ಬಲ್ಲೆ; ಹೆಸರನ್ನು ಮಾತ್ರ ಕೇಳಿ ಬಲ್ಲೆ; ಹೆಸರಷ್ಟೇ ಗೊತ್ತು.
    2. (ಒಬ್ಬನ, ಒಂದರ) ಹೆಸರು ಗೊತ್ತು; ಹೆಸರು ತಿಳಿಸಬಲ್ಲೆ, ಹೇಳಬಲ್ಲೆ.
  22. know one’s own mind ಸ್ಥಿರ ಸಂಕಲ್ಪ ಉಳ್ಳವನಾಗಿರು; ದೃಢಮನಸ್ಸುಳ್ಳವನಾಗಿರು; ಸ್ಥಿರಬುದ್ಧಿಯುಳ್ಳವನಾಗಿರು; ದೃಢಚಿತ್ತನಾಗಿರು; ಚಂಚಲಚಿತ್ತನಾಗದಿರು; ಮನಸ್ಸು ಓಲಾಡದಿರು; ನಿಶ್ಚಿತಸಂಕಲ್ಪವುಳ್ಳವನಾಗಿರು.
  23. know one’s way round
    1. (ಸ್ಥಳ, ವಿಷಯ, ಕಾರ್ಯಕ್ರಮ, ಮೊದಲಾದವುಗಳ) ಪರಿಚಯ ಪಡೆದಿರು; (ಅವನ್ನು) ಸರಿಯಾಗಿ, ಚೆನ್ನಾಗಿ ತಿಳಿದುಕೊಂಡಿರು.
    2. ಚೆನ್ನಾಗಿ ತಿಳಿದುಕೊಂಡವನೂ ದಕ್ಷನೂ ಆಗಿರು.
  24. know (person or thing) to be (ವ್ಯಕ್ತಿ ಯಾ ವಸ್ತುವನ್ನು) ಹಾಗೆಂದು, ಅಂತೆಂದು – ಅರಿ, ತಿಳಿ: know him to be learned ಆತ ವಿದ್ವಾಂಸನೆಂಬುದನ್ನು ತಿಳಿದಿರು.
  25. know (person or thing) to do (ವ್ಯಕ್ತಿ ಯಾ ವಸ್ತು) ಹಾಗೆ, ಅಂತೆ – ಮಾಡುತ್ತಾನೆ ಯಾ ಮಾಡುತ್ತದೆ ಎಂಬುದನ್ನು ತಿಳಿದಿರು, ಅರಿತಿರು.
  26. know the ropes (or one’s stuff) ಯಾವುದಾದರೂ ಒಂದು ಕಾರ್ಯಕ್ಷೇತ್ರದ ಪರಿಸ್ಥಿತಿಯನ್ನು, ವಿದ್ಯಮಾನಗಳನ್ನು ತಿಳಿದಿರು; (ಕೈಕೊಂಡ ಕೆಲಸದ ಯಾ ವಿಷಯದ) ವಿವರಗಳ ಯಾ ವಿದ್ಯಮಾನಗಳ ಪೂರ್ಣ ಪರಿಚಯ ಹೊಂದಿರು; ಒಂದು ಕೆಲಸ ಮಾಡುವ ರೀತಿಯನ್ನು ತಿಳಿದಿರು.
  27. know what one is talking about (ಆಡುಮಾತು) ಏನು ಮಾತನಾಡುತ್ತಿದ್ದೇಯೆ, ಹೇಳುತ್ತಿದ್ದೀಯೆ ಎಂಬುದನ್ನು ತಿಳಿದಿರು; ಅನುಭವದಿಂದ ಯಾ ಅನುಭವವಿರುವ ವಿಷಯವನ್ನು ಮಾತ್ರ ಕುರಿತು ಮಾತನಾಡು.
  28. know what’s what ಲೋಕಾನುಭವ ಹೊಂದಿರು; ವ್ಯವಹಾರ ಜ್ಞಾನವಿರು; ಏನು, ಎತ್ತ ಎನ್ನುವುದನ್ನು ತಿಳಿದಿರು; ಪ್ರಪಂಚದ ವಸ್ತು ಮತ್ತು ವ್ಯವಹಾರಗಳ ಬಗ್ಗೆ ಸರಿಯಾದ ಯಾ ಸಾಕಷ್ಟು ಸಾಮಾನ್ಯ ಜ್ಞಾನ ಹೊಂದಿರು; ಯಾವುದು ಏನು ಎಂಬುದನ್ನು ಅರಿತಿರು.
  29. know who’s who ಪ್ರತಿಯೊಬ್ಬ ವ್ಯಕ್ತಿಯೂ ಯಾರು ಏನು ಎಂಬುದನ್ನು ಅರಿತಿರು, ತಿಳಿದಿರು.
  30. let it be known ತಿಳಿಯುವಂತಾಗಲಿ; ತಿಳಿಯಪಡಿಸಲಿ; ಪ್ರಕಟಿಸಲಿ.
  31. let me know ನನಗೆ – ತಿಳಿಸು, ತಿಳಿಯಪಡಿಸು, ತಿಳಿಯಹೇಳು, ತಿಳಿಯುವಂತೆ ಮಾಡು.
  32. make oneself known to somebody ಯಾರೋ ಒಬ್ಬರಿಗೆ ತನ್ನ ಪರಿಚಯ ಮಾಡಿಸಿಕೊ.
  33. not if I know it ನನ್ನ ಇಚ್ಛೆಗೆ, ಸಂಕಲ್ಪಕ್ಕೆ ವಿರುದ್ಧವಾಗಿ ಮಾತ್ರ.
  34. not know any better (ಸರಿಯಾದ ಶಿಕ್ಷಣ, ಅನುಭವ, ಮೊದಲಾದವು ಇಲ್ಲದ ಕಾರಣ) ಸರಿಯಾಗಿ, ಸಭ್ಯವಾಗಿ – ವರ್ತಿಸದಿರು.
  35. not know(one) from $^1$adam ನನಗೆ ಅವನ ಗುರುತೇ ಇಲ್ಲ; ಅವನು ಹೇಗಿದ್ದಾನೆಂಬುದೇ ನನಗೆ ತಿಳಿಯದು.
  36. not know that... (ಆಡುಮಾತು) ಖಚಿತವಾಗಿಲ್ಲದಿರು; ಸಾಕಷ್ಟು ದೃಢವಾಗಿಲ್ಲದಿರು: I don’t know that I want to go ಹೋಗಬೇಕೆನಿಸಿದೆ ಎಂದು ನನಗೆ ಖಚಿತವಾಗಿಲ್ಲ.
  37. not know that hit one
    1. ಇದ್ದಕ್ಕಿದ್ದಂತೆ ಹತನಾಗು; ಹಠಾತ್ತಾಗಿ ಕೊಲ್ಲಲ್ಪಡು; ಇದ್ದಕ್ಕಿದ್ದಂತೆ ಕೊಲೆಯಾಗು.
    2. ಪೂರ್ತಿ ದಿಗ್ಭ್ರಮೆಗೊಳ್ಳು; ಕಕ್ಕಾಬಿಕ್ಕಿಯಾಗು.
  38. not want to know (ಒಂದಕ್ಕೆ) ಗಮನ – ಕೊಡದಿರು, ಹರಿಸದಿರು; ತಿಳಿಯಲು ಇಚ್ಛಿಸದಿರು; ಅರಿಯಲು ಇಷ್ಟಪಡದಿರು.
  39. that’s all you know (about that) ನಿನಗೆ (ಅದರ ಬಗ್ಗೆ) ಗೊತ್ತಿರುವುದೆಲ್ಲ ಅಷ್ಟೇ; ನೀನು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚು ದಡ್ಡ, ಭಾವಿಸಿಕೊಂಡಿರುವುದಕ್ಕಿಂತಲೂ ಹೆಚ್ಚು ಅಜ್ಞ.
  40. what do you know (about that)? (ಆಡುಮಾತು ಆಶ್ಚರ್ಯಸೂಚಕವಾಗಿ) ನಿನಗೆ (ಅದರ ಬಗ್ಗೆ) ಏನು ಗೊತ್ತು, ಏನು ತಿಳಿದಿದೆ?
  41. you know (ಆಡುಮಾತು) (ಕೇಳುಗನಿಗೆ ಆ ವಿಷಯ ಗೊತ್ತು ಯಾ ಅವನು ಅದನ್ನು ತಿಳಿದುಕೊಳ್ಳಬೇಕಾಗಿತ್ತು ಎಂಬುದನ್ನು ನೆನಪು ಮಾಡಲು ಯಾ ಸಂಭಾಷಣೆಯ ನಡುವಣ ತೆರಪನ್ನು ತುಂಬುವ ಮಾತಾಗಿ ಬಳಸುವ) ನಿನಗೆ, ನಿನಗೇ ಯಾ ನಿನಗೂ – ಗೊತ್ತು, ತಿಳಿದಿದೆ.
  42. you know something (or what)? ನಾನು ನಿನಗೆ ಒಂದು ವಿಷಯ ಹೇಳಲಿದ್ದೇನೆ.
  43. you know what he or it is ಅವನು ಯಾ ಅದು ಏನು ಎನ್ನುವುದು ನಿನಗೆ ಗೊತ್ತು; ನಿನಗೆ ಅವನ ಯಾ ಅದರ ಗುಣಾವಗುಣಗಳು, ಜಟಿಲ ಸ್ವಭಾವ, ಸ್ವರೂಪ, ಮೊದಲಾದವು ಗೊತ್ತು, ಅವುಗಳ ಪರಿಚಯವಿದೆ.
  44. you know-what (or-who) (ಯಾರೂ, ಯಾವುದು ಎಂದು ನಿಷ್ಕೃಷ್ಟವಾಗಿ ಹೇಳದೆ ಅಧ್ಯಾಹಾರವಾಗಿರುವಲ್ಲಿ) ‘ನಿನಗೆ ಗೊತ್ತಲ್ಲ, ಯಾರೂ (ಯಾ ಯಾವುದು) ಅಂತ?’
  45. you never know ಮುಂದೇನು ಎನ್ನುವುದು ಖಚಿತವಾಗಿ ಗೊತ್ತಾಗದು; ಭವಿಷ್ಯ ಅನಿಶ್ಚಿತ; ನಾಳೆಯದು ಪೂರ್ತಿ ಖಾತರಿಯಾಗಿ ತಿಳಿಯುವುದಿಲ್ಲ.
See also 1know
2know ನೋ
ನಾಮವಾಚಕ

ಅರಿವು; ಜ್ಞಾನ; ತಿಳಿವಳಿಕೆ.

ನುಡಿಗಟ್ಟು

in the know (ಆಡುಮಾತು) ಪ್ರಸಕ್ತ ವಿಷಯದ ಬಗ್ಗೆ

  1. ತಿಳಿವಳಿಕೆ ಹೊಂದಿ; ತಿಳಿದುಕೊಂಡು.
  2. ಸಾಮಾನ್ಯವಾಗಿ ಇತರರಿಗೆ ಗೊತ್ತಿಲ್ಲದಿರುವುದನ್ನು, ತಿಳಿಯದಿರುವುದನ್ನು ತಿಳಿದುಕೊಂಡು.