you ಯೂ
ಸರ್ವನಾಮ

(ದ್ವಿತೀಯಾ ವಿಭಕ್ತಿ you; ಷಷ್ಠೀವಿಭಕ್ತಿ your, yours).

  1. (ಏಕವಚನ) ನೀನು; ನೀವು; ಸಂಬೋಧಿಸುವ ವ್ಯಕ್ತಿ(ಗಳು) ಯಾ ವಸ್ತು(ಗಳು).
  2. ನಾಮಪದದೊಡನೆ ಆಶ್ಚರ್ಯಸೂಚಕವಾಗಿ: you fool(s)!, you darling! ಎಲಾ ದಡ್ಡರೇ! ಎಲಾ ಮುದ್ದೇ!
  3. (ಸಾಮಾನ್ಯ ಹೇಳಿಕೆಗಳಲ್ಲಿ) ಯಾರೋ ಒಬ್ಬರು; ಯಾರಾದರೂ ಒಬ್ಬರು; ಸಂಬಂಧಪಟ್ಟವರು ಎಲ್ಲರೂ; ಪ್ರತಿಯೊಬ್ಬರೂ: you never can tell ಯಾರೂ ನಿರ್ದಿಷ್ಟವಾಗಿ ಹೇಳಲಾರರು. what are you to do with a child like this? ಇಂಥ ಮಗುವನ್ನು (ಕಟ್ಟಿಕೊಂಡು) ಯಾರೇನು ಮಾಡಲು ಸಾಧ್ಯ?
ಪದಗುಚ್ಛ
  1. not quite you ‘ನೀನು’ ಅಂದರೆ ‘ನೀನೇ’ ಅಲ್ಲ!
  2. you and yours ನೀನು ಯಾ ನೀವು ಮತ್ತು ನಿಮ್ಮದೆಲ್ಲವೂ, ನಿಮ್ಮ ಕುಟುಂಬ, ಆಸ್ತಿಪಾಸ್ತಿ, ಮೊದಲಾದವುವೆಲ್ಲವೂ.
  3. you-know-what (or who) (ಯಾರು, ಯಾವುದು ಎಂದು ನಿಷ್ಕೃಷ್ಟವಾಗಿ ಹೇಳದೆ ಅಧ್ಯಾಹಾರವಾಗಿರುವಲ್ಲಿ) ‘ನಿನಗೆ ಗೊತ್ತಲ್ಲ, ಯಾರು (ಅಥವಾ ಯಾವುದು) ಅಂತ?’
  4. you’re another (ಆಡುಮಾತು) (ಆಪಾದನೆ ಮಾಡುವವನಿಗೆ ಹಿಂತಿರುಗಿಸಿ ಪ್ರತ್ಯುತ್ತರ ಹೇಳುವಲ್ಲಿ): ಸರಿ! ನೀನೊಬ್ಬ! ನೀನೂ ಅಂಥವನೇ! ಇತ್ಯಾದಿ.